Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ರೆಸಿಪಿ ಟಿಪ್ಸ್: ಜಾಮೂನು ಮಾಡುವುದು ಸುಲಭ, ಆದರೆ ಟಿಪ್ಸ್ ಗೊತ್ತಿಲ್ಲ ಅಂದ್ರೆ ಕಷ್ಟ, ರುಚಿಯೂ ಅಷ್ಟಕಷ್ಟೆ
ಮನೆಯಲ್ಲಿ ಏನಾದರೂ ವಿಶೇಷ ಸಂದರ್ಭದಲ್ಲಿ ಏನಾದರೂ ಸ್ವೀಟ್ ಮಾಡಬೇಕೆಂದಾಗ ನಮ್ಮ ತಲೆಗೆ ಫಟ್ ಅಂತ ಬರುವುದು ಒಂದು ಪಾಯಸ, ಮತ್ತೊಂದು ಗುಲಾಬ್ ಜಾಮೂನು, ಅದರಲ್ಲಿ ಗುಲಾಬ್ ಜಾಮೂನ್ ನಮ್ಮ ಫಸ್ಟ್ ಚಾಯ್ಸ್ ಆಗಿರುತ್ತದೆ. ಏಕೆಂದರೆ ಜಾಮೂನು ಮಾಡುವುದು ತುಂಬಾನೇ ಸುಲಭ.
ಆದರೆ ಅದು ತುಂಬಾ ಮೃದುವಾದರೆ ಸಕ್ಕರೆ ಪಾಕದಲ್ಲಿ ಪುಡಿ ಪುಡಿಯಾಗುವುದು, ಇನ್ನು ಕೆಲವೊಮ್ಮೆ ಹಿಟ್ಟು ಉಂಡೆ ಕಟ್ಟುವಾಗಲೇ ಪುಡಿಯಾಗುವುದು, ನಿಮಗೂ ಈ ಅನುಭವವಾಗಿದೆಯೇ? ಹಾಗಾದರೆ ಇನ್ಮುಂದೆ ಈ ಟಿಪ್ಸ್ ಪಾಲಿಸಿ:

ಎಣ್ಣೆಯಲ್ಲಿ ಕರಿಯುವಾಗ ಎಣ್ಣೆಯ ಉಷ್ಣಾಂಶ ಕಡಿಮೆ
ಗಮನಹರಿಸಿ
ಮೊದಲು ನೀವು ಎಣ್ಣೆಯನ್ನು ಕಾಯಿಸಿ ನಂತರ ಮೀಡಿಯಂ ಫ್ಲೇಮ್ನಲ್ಲಿ ಗ್ಯಾಸ್ ಉರಿ
ಇಡಿ, ನಂತರ ನಿಧಾನಕ್ಕೆ ಗ್ಯಾಸ್ ಉರಿ ಹೆಚ್ಚು ಮಾಡಿ, ಗುಲಾಬ್ ಜಾಮೂನು
ಉಂಡೆಯನ್ನು ಕುದಿಯುವ ಎಣ್ಣೆಯಲ್ಲಿ ಹಾಕಬೇಡಿ. ಎಣ್ಣೆ ಕುದಿಯುವಾಗ ಹಾಕಿದರೆ
ಮೇಲ್ಭಾಗ ಕಪ್ಪಾಗುವುದು ಒಳಗಡೆ ಚೆನ್ನಾಗಿ ಬೇಯುವುದಿಲ್ಲ.
* ಉಂಡೆಯಲ್ಲಿ ಯಾವುದೇ ಬಿರುಕು ಇರಬಾರದು, ಇದ್ದರೆ ಎಣ್ಣೆಯಲ್ಲಿ ಹಾಕಿದರೆ ಒಡೆದು ಹೋಗುವುದು, ಆದ್ದರಿಂದ ನೀವು ರೌಂಡ್ ಅಥವಾ ಓವಲ್ ಶೇಪ್ನಲ್ಲಿ ಮಾಡಿದರೆ ಗುಲಾಬ್ ಜಾಮೂನು ಫ್ರೈ ಚೆನ್ನಾಗಿ ಮಾಡಬಹುದು.
ಗುಲಾಬ್ ಜಾಮೂನು ಮಾಡುವಾಗ ಅದರ ಹಿಟ್ಟು ಕಲೆಸುವಾಗ ಈ ಟಿಪ್ಸ್
ಪಾಲಿಸಿ
* ನೀವು ಜಾಮೂನು ಹಿಟ್ಟು ಕೆಲೆಸುವಾಗ ಹಿಟ್ಟು ಅಂಟು ಅಂಟಾಗಿ ಇರಬಾರದು, ತುಂಬಾ
ಗಟ್ಟಿಯಾಗಿಯಾಗಿಯೂ ಇರಬಾರದು.
* ಹಾಲು ಹಾಕಿ ಮಿಕ್ಸ್ ಮಾಡಿದರೆ ಹಿಟ್ಟು ಮೃದುವಾಗಿರುತ್ತದೆ.
* ಹಿಟ್ಟು ಕಲೆಸುವಾಗ ಗಂಟು-ಗಂಟು ಇರಬಾರದು
* ಹಿಟ್ಟನ್ನು ತುಂಬಾ ಹೊತ್ತು ಕೆಲಸಬೇಡಿ.
* ಹಿಟ್ಟು ಕಲೆಸಿದ ತಕ್ಷಣವೇ ಉಂಡೆಕಟ್ಟಲು ಪ್ರಾರಂಭಿಸಿ.
* ಹಿಟ್ಟಿನಿಂದ ಉಂಡೆಕಟ್ಟುವಾಗ ನೀವು ಕೈಗೆ ತುಪ್ಪ ಸವರಿ ನಂತರ ಉಂಡೆ ಕಟ್ಟಿ.
* ನಂತರ ಎಣ್ಣೆಯಲ್ಲಿ ಕರಿದು ಶುಗರ್ ಸಿರಪ್ಗೆ ಹಾಕಿ.
ಗುಲಾಬ್ ಜಾಮೂನು ಮಾಡುವಾಗ ಅದರ ಸಿರಪ್ ಕೂಡ ತುಂಬಾ ಮುಖ್ಯ
ಶುಗರ್ ಸಿರಪ್ ಕೂಡ ಸರಿಯಾದ ರೀತಿಯಲ್ಲಿ ಇದ್ದರೆ ಮಾತ್ರ ಜಾಮೂನ್ ಪರ್ಫೆಕ್ಟ್
ಆಗುವುದು, ಆದ್ದರಿಂದ ಸಕ್ಕರೆ ಸಿರಪ್ ತುಂಬ ಗಟ್ಟಿಯಾಗಬಾರದು, ನೀರು, ನೀರಾಗಿ
ಇರಬಾರದು, ಆದ್ದರಿಂದ ನೀವು 2 ಕಪ್ ಸಕ್ಕರೆಗೆ ಒಂದು ಕಪ್ ನೀರು ಹಾಕಿ ಪಾಕ
ತಯಾರಿಸಿ.
* ಪಾಕವನ್ನು ಮೊದಲೇ ತಯಾರಿಸಿಟ್ಟು ನಂತರ ಜಾಮೂನ್ ಮಾಡಿ.
ಜಾಮೂನ ಮಾಡಲು ಬೇಕಾಗುವ ಸಾಮಗ್ರಿ
ರೆಡಿಮೇಡ್ ಪುಡಿಗಿಂತ ಹೀಗೆ ಮಾಡಿದರೆ ಜಾಮೂನ್ ವಾವ್ ಸೂಪರ್!
300ಗ್ರಾಂ ಕೋವಾ
200 ಗ್ರಾಂ ಪನ್ನೀರ್(ತುರಿದ)
4 ಚಮಚ ಹಾಲಿನ ಪುಡಿ
3/4 ಕಪ್ ಮೈದಾ
1/4 ಚಮಚ ಏಲಕ್ಕಿ
1 ಚಮಚ ಸಕ್ಕರೆ ಪುಡಿ
ಸಕ್ಕರೆ ಪಾಕ
ತುರಿದ ತೆಂಗಿನ ತುರಿ
2 ಕಪ್ ತುಪ್ಪ
* ಮೇಲೆ ಹೇಳಿದ ಎಲ್ಲಾ ಸಾಮಗ್ರಿ ಹಾಕಿ ಮಿಕ್ಸ್ ಮಾಡಿ.
* ನಂತರ ಉಂಡೆ ಕಟ್ಟಿ ಎಣ್ಣೆಯಲ್ಲಿ ಹಾಕಿ ಸಕ್ಕರೆ ಪಾಕದಲ್ಲಿ ಹಾಕಿ.
ಡ್ರೈ ಜಾಮೂನು ಬೇಕೆಂದರೆ
ಸಕ್ಕರೆ ಪಾಕದಲ್ಲಿ ಹಾಕಿ ತೆಗೆದು ತೆಂಗಿನತುರಿಯಲ್ಲಿ ಹೊರಳಾಡಿಸಿದರೆ ಡ್ರೈ
ಜಾಮೂನು ರೆಡಿ.



Click it and Unblock the Notifications
