Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ರೆಸಿಪಿ ಟಿಪ್ಸ್: ಚಳಿಗಾಲದಲ್ಲಿ ಹಿಟ್ಟು ಚೆನ್ನಾಗಿ ಹುದುಗು ಬಂದು ಇಡ್ಲಿ ಮೃದು-ಮೃದುವಾಗಿರಲು ಟಿಪ್ಸ್
ಇಡ್ಲಿಯೆಂದರೆ ಹೂವಿನಂತೆ ಮೃದುವಾಗಿರಬೇಕು ಎಂದು ಬಯಸುತ್ತೇವೆ, ಆದರೆ ದೋಸೆ ಹಿಟ್ಟು ರೆಡಿ ಮಾಡಿ ಬೆಳಗ್ಗೆ ನೋಡಿದರೆ ಸರಿಯಾಗಿ ಹುದುಗು ಬಂದಿರುವುದಿಲ್ಲ, ಇದರಿಂದಾಗಿ ಇಡ್ಲಿ ಹೂವಿನಂತೆ ಮೃದುವಾಗಿರಲ್ಲ, ಅದರಲ್ಲೂ ಚಳಿಗಾಲದಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುವುದು. ಬನ್ನಿ ಚಳಿಗಾಲದಲ್ಲಿ ಸೂರ್ಯ ಮುನಿಸಿಕೊಂಡು ಕಾಣಿಸದೇ ಹೋದರು ಕೂಡ ನಿಮ್ಮ ಇಡ್ಲಿ ಸೂಪರ್ ಆಗಿ ಬರಲು ಈ ಟಿಪ್ಸ್ ಅನುಸರಿಸಿ..

* ಉದ್ದಿನಬೇಳೆ ಹಾಗೂ ಅಕ್ಕಿ ಪ್ರತ್ಯೇಕ ನೆನೆಹಾಕಿ
ಕೆಲವರು ಉದ್ದಿನಬೇಳೆ ಹಾಗೂ ಅಕ್ಕಿ ಒಟ್ಟಿಗೆ ನೆನೆ ಹಾಕುತ್ತಾರೆ, ಹೇಗಿದ್ದರೂ
ಎರಡನ್ನೂ ರುಬ್ಬಿ ಮಿಕ್ಸ್ ಮಾಡುತ್ತೇವೆ ಅಲ್ವಾ, ಮತ್ತೆ ಒಟ್ಟಿಗೆ ಹಾಕಿದರೆ ಏನಂತೆ
ಎಂಬ ಲಾಜಿಕ್ ಅವರದ್ದು, ಆದರೆ ನಿಮಗೊಂದು ವಿಷಯ ಗೊತ್ತಾ? ನೀವು ಅಕ್ಕಿ, ಉದ್ದಿನ
ಬೇಳೆ ಪ್ರತ್ಯೇಕವಾಗಿ ನೆನೆ ಹಾಕಿದರೆ ಮಾತ್ರ ಹುದುಗು ಚೆನ್ನಾಗಿ ಬರುವುದು.
ಏಕೆಂದರೆ ಉದ್ದಿನ ಬೇಳೆ ಹಾಗೂ ಅಕ್ಕಿ ಎರಡೂ ಬೇರೆ-ಬೇರೆ ಧಾನ್ಯಗಳು, ಅಲ್ಲದೆ
ಉದ್ದಿನ ಬೇಳೆಯನ್ನು ಚೆನ್ನಾಗಿ ರುಬ್ಬಬೇಕು, ಅಕ್ಕಿಯನ್ನು ಅಷ್ಟು ನುಣ್ಣನೆ
ರುಬ್ಬಬೇಡಿ, ನೀವು ಅಕ್ಕಿ ಹಾಗೂ ಉದ್ದಿನ ಬೇಳೆ ಜೊತೆಗೆ ಹಾಕಿದರೆ ರುಬ್ಬುವಾಗ
ಇಡ್ಲಿಯ ಹದ ಅಷ್ಟು ಪರ್ಫೆಕ್ಟ್ ಬರುವುದಿಲ್ಲ.
ಈ ಟಿಪ್ಸ್ ಕೂಡ ಪಾಲಿಸಿ
* ರುಬ್ಬುವಾಗ ನೀರು ತುಂಬಾ ಹಾಕಬೇಡಿ, ಸ್ವಲ್ಪ ನೀರು ಹಾಕಿ ರುಬ್ಬಿ
* ನೀವು ದೋಸೆಗೆ ಬೇಕಾದರೆ ಅಕ್ಕಿ, ಉದ್ದಿನ ಬೇಳೆಯನ್ನು ಜೊತೆಯಲ್ಲಿ
ನೆನೆಹಾಕಬಹುದು.
* ಅಕ್ಕಿ, ಉದ್ದಿನ ಬೇಳೆಯ ಪ್ರಮಾಣ
ನೀವು ಮೂರು ಕಪ್ ಅಕ್ಕಿ ನೆನೆ ಹಾಕಿದರೆ ಒಂದು ಕಪ್ ಉದ್ದಿನ ಬೇಳೆ
ನೆನೆಹಾಕಿ.
* ಸ್ವಲ್ಪ ಮೆಂತೆ ಸೇರಿಸಿ
* ಒಂದು ಕಪ್ ಅವಲಕ್ಕಿ ಸೇರಿಸಿ
ಚಳಿಗಾಲದಲ್ಲಿ ಇಡ್ಲಿಗೆ ಈ ವಸ್ತು ಸೇರಿಸುವುದು ತುಂಬಾನೇ ಮುಖ್ಯ, ಹಿಟ್ಟು
ರುಬ್ಬುವ ಸ್ವಲ್ಪ ಮುನ್ನ ಅವಲಕ್ಕಿ ನೆನೆ ಹಾಕಿ ಅದನ್ನು ರುಬ್ಬಿ ಹಿಟ್ಟು ಜೊತೆ
ಸೇರಿಸಿ ಮಿಕ್ಸ್ ಮಾಡಿ.
ಕೈಯಿಂದಲೇ ಮಿಕ್ಸ್ ಮಾಡಿ
ಸೌಟ್ ಬಳಸಿ ಮಿಕ್ಸ್ ಮಾಡುವ ಬದಲಿಗೆ ನಿಮ್ಮ ಕೈಯಿಂದಲೇ 3-4 ನಿಮಿಷ ಮಿಕ್ಸ್
ಮಾಡಿ.
ನಂತರ ಸ್ವಲ್ಪ ಬೆಚ್ಚಗೆ ಇರುವ ಕಡೆ ಇಡಿ, ಒಲೆ ಹತ್ರ ಅಥವಾ ಒಂದು ನಿಮಿಷ
ಹಿಟ್ಟನ್ನು ಬಿಸಿ ಮಾಡಿ, ನಂತರ ಚೆನ್ನಾಗಿ ಮಿಕ್ಸ್ ಮಾಡಿ. ಹೀಗೆ ಮಾಡುವುದರಿಂದ
ಚಳಿಗಾಲದಲ್ಲಿಯೂ ಇಡ್ಲಿ ಹಿಟ್ಟು ಸೂಪರ್ ಆಗಿ ಬರುತ್ತದೆ.



Click it and Unblock the Notifications
