Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ವ್ರತದ ಉಪವಾಸ ಮಾಡುವವರು ಸವಿಯಬಹುದು ಈ ಬಾಳೆಕಾಯಿ ಸ್ನ್ಯಾಕ್ಸ್
ನೀವು ಬಾಳೆಕಾಯಿಯಿಂದ ಆರೋಗ್ಯಕರ ಹಾಗೂ ರುಚಿಕರವಾದ ಸ್ನ್ಯಾಕ್ಸ್ ಮಾಡಬಹುದು, ಇದನ್ನು ನೀವು ವ್ರತ ಸಮಯದಲ್ಲಿ ಕೂಡ ಮಾಡಿ ಸೇವಿಸಬಹುದು. ಇದರ ರುಚಿ ತುಂಬಾ ಚೆನ್ನಾಗಿರಲಿದೆ, ಅಲ್ಲದೆ ವ್ರತದ ಸಮಯದಲ್ಲಿ ಈ ಬಗೆಯ ಸ್ನ್ಯಾಕ್ಸ್ ಹಸಿವು ನಿಯಂತ್ರಿಸಲು ಸಹಾಯ ಮಾಡುತ್ತದೆ. ಈಗ ನವರಾತ್ರಿ ವ್ರತ. ಏಕಾದಶಿ ವ್ರತ, ವಾರದ ವ್ರತ ಮಾಡುವಾಗಲೂ ಇದನ್ನು ಸವಿಯಬಹುದು. ವ್ರತದ ಸಮಯದಲ್ಲಿ ಈ ಸ್ನ್ಯಾಕ್ಸ್ ಮಾಡಿದರೆ ಹಾಗೆಯೇ ಸವಿಯರಿ, ಇಲ್ಲದಿದ್ದರೆ ಮಯೋನೈಸ್ ಜೊತೆ ಡಿಪ್ ಮಾಡಿ ಸೇವಿಸಬಹುದು.
ಬಾಳೆಕಾಯಿ ಸ್ನ್ಯಾಕ್ಸ್ ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
ಬಾಳೆಕಾಯಿ 2
ಎಣ್ಣೆ 2 ಚಮಚ
ರೋಸ್ಟ್ ಮಾಡಿದ ಬಾದಾಮಿ 5-6
ಸ್ವಲ್ಪ ಕೊತ್ತಂಬರಿ ಸೊಪ್ಪು
ಜೀರಿಗೆ ಪುಡಿ 1 ಚಮಚ
ಸ್ವಲ್ಪ ಆಮ್‌ಚೂರ್ ಅಥವಾ ನಿಂಬೆರಸ
ಹಸಿ ಮೆಣಸು 2-3
ಬೇಯಿಸಿದ ಆಲೂಗಡ್ಡೆ 2
ಕಲ್ಲುಪ್ಪು
ಮಾಡುವ ವಿಧಾನ
ಬಾಳೆಕಾಯಿ ಎರಡು ಭಾಗ ಮಾಡಿ, ಆಲೂಗಡ್ಡೆ ಕೂಡ ಹಾಕಿ ಬೇಯಿಸಿ. ಎರಡು ವಿಶಲ್
ಬರುವರೆಗೆ ಬೇಯಿಸಿದರೆ ಸಾಕು.
ಆಲೂಗಡ್ಡೆಯ ಸಿಪ್ಪೆ ಸುಲಿಯಿರಿ
ಅದರಂತೆ ಬಾಳೆಕಾಯಿ ಸಿಪ್ಪೆ ಸುಲಿಯಿರಿ
ಬಳಿಕ ಆಲೂಗಡ್ಡೆ ಮತ್ತು ಬಾಳೆಕಾಯಿ ತುರಿಯಿರಿ
ಅದಕ್ಕೆ ಬಾದಾಮಿ ಪುಡಿ, ಹಸಿ ಮೆಣಸಿನ ಕಾಯಿ, ಕಲ್ಲುಪ್ಪು, ಜೀರಿಗೆ ಪುಡಿ, ನಿಂಬೆರಸ ಅಥವಾ ಆಮ್‌ಚೂರ್, ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ.
ನಂತರ ಅದರಿಂದ ಚಿಕ್ಕ-ಚಿಕ್ಕ ಉಂಡೆ ಕಟ್ಟಿ
ನಂತರ ಅದರಿಂದ ರೋಲ್ ರೀತಿ ಮಾಡಿ
ತವಾಗೆ ಎಣ್ಣೆ ಹಾಕಿ ಬಿಸಿ ಮಾಡಿ ಅದರಲ್ಲಿ ರೋಲ್ ಹಾಕಿ ರೋಸ್ಟ್ ಮಾಡಿ.
ನಂತರ ಪ್ಲೇಟ್‌ಗೆ ಹಾಕಿ ಟೊಮೆಟೊ ಸಾಸ್, ಮಯೋನೈಸ್ ಅಥವಾ ಚಟ್ನಿ ಜೊತೆ ಸರ್ವ್
ಮಾಡಿ.

ಸಲಹೆ
ನೀವು ಈ ಸ್ನ್ಯಾಕ್ಸ್ ತಯಾರಿಸಲು ಸಾರು ಬಾಳೆಕಾಯಿ ಬಳಸಿ
ಬಾಳೆಕಾಯಿ ತುಂಬಾ ಬಲಿತಿರಬಾರದು, ಮೀಡಿಯಂವಾಗಿರಬೇಕು, ತುಂಬಾ ಎಳೆಬಾಳೆಕಾಯಿ ಕೂಡ
ಅಷ್ಟೊಂದು ರುಚಿಸಲ್ಲ.
ಇದನ್ನು ತವಾ ಫ್ರೈ ಮಾಡಿ ತೆಗೆಯಬಹುದು.
ಎಣ್ಣೆಯಲ್ಲಿ ಡೀಪ್ ಫ್ರೈ ಮಾಡುವುದಾದರೆ ಕಡ್ಲೆಹಿಟ್ಟಿನಲ್ಲಿ ಅದ್ದಿ ನಂತರ
ಹಾಕಿ.



Click it and Unblock the Notifications
