Latest Updates
-
ಬೆಂಗಳೂರು ಮಳೆ: ಮನೆಯಲ್ಲೇ ಮಾಡಿ 15 ನಿಮಿಷದ ನೋ-ಜಂಪ್ ವರ್ಕೌಟ್, ಫಿಟ್ ಆಗಿರಿ! -
ಮಳೆಗಾಲದ ಪ್ರಯಾಣ: ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ನಡೆಯಲು 7 ನಿಮಿಷದ ಸರಳ ವ್ಯಾಯಾಮಗಳು -
ಮಳೆಗಾಲದ ಪ್ರಯಾಣ: ಟ್ರಾಫಿಕ್ ಮತ್ತು ಕ್ಯಾಬ್ ಸಮಸ್ಯೆಗಳ ನಡುವೆ ದಂಪತಿಗಳು ನೆಮ್ಮದಿ ಕಾಪಾಡಿಕೊಳ್ಳುವುದು ಹೇಗೆ? -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ಇಂದಿನ ಪರಿಷ್ಕೃತ ಪಟ್ಟಿ ಮತ್ತು ನಿಮ್ಮ ಪ್ರಕರಣದ ಸ್ಥಿತಿ ಪರಿಶೀಲಿಸಿ -
ಓಣಂ ಹಬ್ಬ: ಮಳೆಗೆ ಹಾಳಾಗದ, ₹500ರೊಳಗೆ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್! -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಜಾಗ ಉಳಿಸುವ ಸುಂದರ ಪೂಕಳಂ ಐಡಿಯಾಗಳು -
ಓಣಂ ಸದ್ಯದ ಸಂಭ್ರಮ: ಡಯಾಬಿಟಿಸ್ ಇದ್ದರೂ ಆರೋಗ್ಯಕರವಾಗಿ ಸವಿಯುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ಮೊಟ್ಟೆ ದರ ಏರಿಕೆ ಚಿಂತೆಯೇ? ಕಡಿಮೆ ಬಜೆಟ್ನಲ್ಲಿ ಪ್ರೋಟೀನ್ ಪಡೆಯಲು ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ಕುಟುಂಬದೊಂದಿಗೆ ಸಂಭ್ರಮಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಪ್ಲಾನ್! -
ವರ್ಕ್ ಫ್ರಮ್ ಹೋಮ್ ಜೊತೆ ಭಾರತ-ಶ್ರೀಲಂಕಾ ಟೆಸ್ಟ್ ಮ್ಯಾಚ್: ಲೈವ್ ಸ್ಕೋರ್ ಮತ್ತು ಸ್ಮಾರ್ಟ್ ಟಿಪ್ಸ್ ಇಲ್ಲಿದೆ!
ರುಚಿಕರ ಬಾಳೆಹೂವಿನ ಪಲ್ಯ ಮಾಡುವುದು ಹೇಗೆ..? ಇಲ್ಲಿದೆ ರೆಸಿಪಿ
ಬಾಳೆಗಿಡದ ಒಂದೊಂದು ಭಾಗವು ಸಹ ಉಪಯೋಗಕ್ಕೆ ಬರುತ್ತದೆ. ಬಾಳೆ ಕಾಂಡ, ಬಾಳೆ ಎಲೆ, ಬಾಳೆಹಣ್ಣು, ಬಾಳೆ ಹೂವು ಇವೆಲ್ಲವೂ ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಹೀಗಾಗಿಯೇ ಬಾಳೆಯನ್ನು ಬಹು ಉಪಯೋಗಿ ಸಸ್ಯ ಅಂತಲೂ ಕರೆಯುತ್ತಾರೆ. ಇನ್ನು ಬಾಳೆಹಣ್ಣಿನಿಂದ ಹಲವಾರು ರೀತಿಯ ಖಾದ್ಯಗಳ ಮಾಡಬಹುದಾಗಿದೆ.
ಅದರಂತೆ ಬಾಳೆ ಹೂವಿನಿಂದಲೂ ಹಲವಾರು ರೀತಿಯ ಖಾದ್ಯ ತಯಾರಿಸಬಹುದು. ಬಾಳೆ ಹೂವನ್ನು ಬಾಳೆ ಗಿಡದ ಮೂತಿ, ಬಾಳೆ ಕಾಯಿ ಮೂತಿ ಅಂತಲೂ ಕರೆಯುತ್ತಾರೆ. ಹೌದು ಬಾಳೆ ಹೂವಿನಲ್ಲಿ ಅತ್ಯಧಿಕ ಪೋಷಕಾಂಶವಿರುತ್ತದೆ. ಈ ಬಾಳೆ ಹೂವಿನ ಪಲ್ಯ ಸವಿಯಲು ಸುಚಿಕರ ಹಾಗೂ ಆರೋಗ್ಯಕ್ಕೂ ಬಹಳ ಒಳ್ಳೆಯದು. ಹಾಗಾದರೆ ಇಂದು ನಾವು ಬಾಳೆ ಹೂವಿನ ಪಲ್ಯ ಮಾಡುವುದು ಹೇಗೆ? ಯಾವೆಲ್ಲ ಪದಾರ್ಥಗಳ ಅಗತ್ಯವಿದೆ. ಮಾಡುವ ವಿಧಾನದ ಕುರಿತು ತಿಳಿದುಕೊಳ್ಳೋಣ.

ಅಗತ್ಯವಿರುವ ವಸ್ತುಗಳು:
- ಬಾಳೆ ಹೂವು - 1
- ಕಡಲೆ - 2 ಟೇಬಲ್ಸ್ಪೂನ್
- ಬೇಳೆ- 1 ಚಮಚ
- ಉದ್ದಿನ ಬೇಳೆ- 1 ಟೀಸ್ಪೂನ್
- ದೊಡ್ಡ ಈರುಳ್ಳಿ - 1
- ಹಸಿರು ಮೆಣಸಿನಕಾಯಿ - 3 ರಿಂದ 4
- ಒಣ ಮೆಣಸಿನಕಾಯಿ - 3 ರಿಂದ 4
- ತುರಿದ ತೆಂಗಿನಕಾಯಿ - 3 ಚಮಚ
- ಮೆಣಸಿನ ಪುಡಿ - 1/4 ಚಮಚ
- ಕೊತ್ತಂಬರಿ ಪುಡಿ - 1/4 ಚಮಚ
- ಅರಿಶಿನ ಪುಡಿ - 1/4 ಚಮಚ
- ತೆಂಗಿನ ಎಣ್ಣೆ - 5 ಚಮಚ
- ಕರಿಬೇವು
- ಕೊತ್ತಂಬರಿ ಎಲೆಗಳು
- ಉಪ್ಪು - ರುಚಿಗೆ ತಕ್ಕಂತೆ
ಪಾಕವಿಧಾನ:
ಮೊದಲು ಒಂದು ಒಣ ಮೆಣಸಿನಕಾಯಿಯೊಂದಿಗೆ ಅಗತ್ಯ ಪ್ರಮಾಣದ ಬೇಳೆ ಮತ್ತು ಕಾಳುಗಳ ನೆನೆಸಿಡಿ. ನಂತರ ಬಾಳೆ ಹೂವನ್ನು ತೆಗೆದುಕೊಂಡು ಅದನ್ನು ಸಣ್ಣಗೆ ಕತ್ತರಿಸಿಕೊಳ್ಳಿ. ಕತ್ತರಿಸಿದ ಬಾಳೆ ಹೂವಿಗೆ ಅಗತ್ಯ ಪ್ರಮಾಣದ ಉಪ್ಪು, ಅರಿಶಿನ ಪುಡಿ, 1/3 ಚಮಚ ಹಸಿರು ಮೆಣಸಿನಕಾಯಿ ಪೇಸ್ಟ್ ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ.
ಮುಂದೆ ಮಿಕ್ಸರ್ ಜಾರ್‌ನಲ್ಲಿ ಈಗಾಗಲೇ ಕಲಸಿದ ಬೇಳೆ, ಕಾಳು ಮತ್ತು ಒಣ ಮೆಣಸಿನಕಾಯಿಯನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ ಮತ್ತು ಅದಕ್ಕೆ ಚಿಟಿಕೆ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಪಾತ್ರೆಯನ್ನು ಒಲೆಯಲ್ಲಿ ಇಟ್ಟು ಬಾಳೆ ಎಲೆಯನ್ನು ತಟ್ಟೆಗೆ ಹಾಕಿ ಒಂದು ತಟ್ಟೆಗೆ ರುಬ್ಬಿದ ಬೇಳೆ ಮಿಶ್ರಣವನ್ನು ಇನ್ನೊಂದು ತಟ್ಟೆಯಲ್ಲಿ ಕತ್ತರಿಸಿದ ಬಾಳೆಹೂವನ್ನು ಹಾಕಿ 10 ನಿಮಿಷ ಚೆನ್ನಾಗಿ ಕಲಸಿ. ಆ ನಂತರ ಒಲೆಯ ಮೇಲೆ ಪಾತ್ರೆ ಇಟ್ಟು ತುಪ್ಪ ಸುರಿದು ಅದು ಕಾದ ನಂತರ ಸಾಸಿವೆ ಹಾಕಿ.
ಸಾಸಿವೆ ಹುರಿದ ನಂತರ ಉದ್ದಿನಬೇಳೆಯನ್ನು ಹಾಕಿ ಮಧ್ಯಮ ಉರಿಯಲ್ಲಿ ಚೆನ್ನಾಗಿ ಹುರಿಯಿರಿ. ನಂತರ ಉದ್ದಿಗೆ ಕತ್ತರಿಸಿದ ಹಸಿರು ಮೆಣಸಿನಕಾಯಿಗಳು, ಒಣ ಮೆಣಸಿನಕಾಯಿಗಳು, ಕರಿಬೇವಿನ ಎಲೆಗಳು ಮತ್ತು ಕತ್ತರಿಸಿದ ಈರುಳ್ಳಿ ಸೇರಿಸಿ ಚೆನ್ನಾಗಿ ಹುರಿಯಿರಿ. ಈರುಳ್ಳಿ ಸ್ವಲ್ಪ ಹುರಿದ ನಂತರ ಅರಿಶಿನ ಪುಡಿ, ಮೆಣಸಿನ ಪುಡಿ, ಕೊತ್ತಂಬರಿ ಪುಡಿ ಸೇರಿಸಿ ಮಿಶ್ರಣ ಮಾಡಿ. ನಂತರ ಸ್ವಲ್ಪ ತೆಂಗಿನ ತುರಿ ಮತ್ತು ಉಪ್ಪು ಹಾಕಿ ಚೆನ್ನಾಗಿ ಹುರಿಯಿರಿ.
ಈ ಮಿಶ್ರಣ ಸ್ವಲ್ಪ ಗಟ್ಟಿಯಾದ ನಂತರ ಬಾಳೆಹೂವನ್ನು ಸೇರಿಸಿ ಮತ್ತು ನಿಧಾನವಾಗಿ ಮಿಶ್ರಣ ಮಾಡಿ. ನಂತರ ನೆನೆಸಿದ ಬೇಳೆಯನ್ನು ಸೇರಿಸಿ ಚೆನ್ನಾಗಿ ಬೆರೆಸಿ ಮತ್ತು ಕೊನೆಯದಾಗಿ ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಮತ್ತು 5 ನಿಮಿಷಗಳ ಕಾಲ ಮುಚ್ಚಿ ಬೇಯಿಸಿ. ನಂತರ ಅದಕ್ಕೆ ತೆಂಗಿನ ತುರಿ ಹಾಕಿ ಮಿಕ್ಸ್ ಮಾಡಿದರೆ ರುಚಿಯಾದ 'ಬಾಳೆ ಹೂವಿನ ಪಲ್ಯ' ರೆಡಿ



Click it and Unblock the Notifications