Latest Updates
-
ಕೇರಳದಲ್ಲಿ ಆರೆಂಜ್ ಅಲರ್ಟ್: ಮಳೆಯ ನಡುವೆ ಮನೆಯಲ್ಲೇ ಫಿಟ್ ಆಗಿರಲು ಈ 10 ನಿಮಿಷದ ವ್ಯಾಯಾಮ ಮಾಡಿ -
ಬಿಗ್ ಬಾಸ್ ನೋಡುವಾಗ ಮನೆಯಲ್ಲಿ ಜಗಳ ಬೇಡವೇ? ಶಾಂತಿ ಕಾಪಾಡಲು ಇಲ್ಲಿದೆ ಸೂಪರ್ ಪ್ಲಾನ್! -
ಶರದ್ ಪೂರ್ಣಿಮೆ: ಡಯಾಬಿಟಿಸ್ ಇದ್ದರೂ ಪಾಯಸ ಸವಿಯುವುದು ಹೇಗೆ? ಆರೋಗ್ಯಕರ ಟಿಪ್ಸ್ ಇಲ್ಲಿದೆ -
ಕೇರಳದಲ್ಲಿ ಭಾರಿ ಮಳೆ: ಹಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್, ಪ್ರಯಾಣಿಕರು ಮತ್ತು ನಿವಾಸಿಗಳಿಗೆ ತುರ್ತು ಎಚ್ಚರಿಕೆ! -
ತಮಿಳುನಾಡು ಮಳೆ: ಮನೆಯಲ್ಲೇ ಫಿಟ್ ಆಗಿರಲು 12 ನಿಮಿಷಗಳ ಸುಲಭ ವರ್ಕೌಟ್ ರೂಟೀನ್! -
IND vs NZ ಪಂದ್ಯದ ವೇಳೆ ಜಗಳ ಬೇಡ: ದಂಪತಿಗಳಿಗಾಗಿ ಇಲ್ಲಿದೆ 12 ನಿಮಿಷಗಳ ಮ್ಯಾಜಿಕ್ ಒಪ್ಪಂದ! -
ದೆಹಲಿ ಮಾಲಿನ್ಯದ ಭೀತಿ: ₹1,500 ಕ್ಕಿಂತ ಕಡಿಮೆ ವೆಚ್ಚದಲ್ಲಿ ಮನೆಯಲ್ಲೇ ಮಾಡಿ 'DIY' ಏರ್ ಪ್ಯೂರಿಫೈಯರ್! -
ಕೇವಲ 40 ರೂಪಾಯಿಯಲ್ಲಿ ಪೌಷ್ಟಿಕ ಊಟ: ಪ್ರೋಟೀನ್ ಮತ್ತು ಐರನ್ ಹೆಚ್ಚಿಸುವ ಬೆಸ್ಟ್ ಡಯಟ್ ಪ್ಲಾನ್ ಇಲ್ಲಿದೆ! -
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ರೀಲೋಡೆಡ್: ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿದ್ರೆ ಸಿಗುತ್ತೆ ಭರ್ಜರಿ ಡಿಸ್ಕೌಂಟ್! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಅಬ್ಬರ: ಆರೋಗ್ಯ ರಕ್ಷಣೆಗೆ ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
20 ನಿಮಿಷದಲ್ಲಿ ಸಿಹಿ ಬೆಲ್ಲದ ಅನ್ನ ಮಾಡೋದು ಹೇಗೆ ಗೊತ್ತಾ..?
ಹಬ್ಬದ ದಿನಗಳು ಆರಂಭವಾಗುತ್ತಿವೆ. ಹಬ್ಬ ಎಂದರೆ ಅಲ್ಲೊಂದು ಸಿಹಿ ತಿಂಡಿ ಇರಲೇಬೇಕಲ್ಲವೇ. ಹಾಗಾದರೆ ಅನ್ನದಿಂದ ಸಿಹಿಯಾದ ತಿಂಡಿ ಮಾಡಿ ಸವಿಯಿರಿ. ಹೌದು ಅನ್ನ ಮತ್ತು ಬೆಲ್ಲದಿಂದ ಅತ್ಯುತ್ತಮ ಸಿಹಿ ಮತ್ತು ಆರೋಗ್ಯಕ್ಕೂ ಉತ್ತಮವಾದ ಸಿಹಿ ತಿಂಡಿ ಮಾಡಬಹುದು.
ಬೆಲ್ಲದ ಅನ್ನ ಎಂಬ ತಿಂಡಿಯನ್ನು ಹಬ್ಬದ ದಿನಗಳಲ್ಲಿ ಹೆಚ್ಚಾಗಿ ಮಾಡುತ್ತಾರೆ. ಇದೊಂದು ರುಚಿಕರವಾದ ಸಿಹಿ ಖಾದ್ಯವಾಗಿದೆ. ಮತ್ತು ಇದು ಅನ್ನದಿಂದ ಮಾಡುವ ಸರಳವಾದ ಪಾಕವಿಧಾನವಾಗಿದೆ.
ಅಕ್ಕಿ, ಬೆಲ್ಲ, ತುಪ್ಪ ಮತ್ತು ಗೋಡಂಬಿ, ಒಣದ್ರಾಕ್ಷಿ ಬಳಸಿ ನೀವು ಬೇಯಿಸಬಹುದಾದ ಸುಲಭವಾದ ಸಿಹಿ ಖಾದ್ಯ. ಅದರ ರುಚಿಯನ್ನು ಹೆಚ್ಚಿಸಲು ನಿಮ್ಮ ಆಯ್ಕೆಯ ಕಾಳುಗಳನ್ನು ಸಹ ನೀವು ಸೇರಿಸಬಹುದು.

ಅಗತ್ಯವಿರುವ ವಸ್ತುಗಳು:
- ಬಾಸ್ಮತಿ ಅಕ್ಕಿ - 400 ಗ್ರಾಂ
- ಬೆಲ್ಲದ ಪುಡಿ - 250 ಗ್ರಾಂ
- ತುಪ್ಪ - 100 ಗ್ರಾಂ
- ಬಾದಾಮಿ - 1/4 ಕಪ್
- ಹಸಿರು ಏಲಕ್ಕಿ ಪುಡಿ - 1 ಟೀಸ್ಪೂನ್
- ಒಣದ್ರಾಕ್ಷಿ-1/4 ಕಪ್
ಪಾಕವಿಧಾನ:
ಮೊದಲು ಅಗತ್ಯವಿರುವಷ್ಟು ಅಕ್ಕಿಯನ್ನು ತೆಗೆದುಕೊಂಡು ಅದನ್ನು 4-5 ಬಾರಿ ತೊಳೆದು ಸುಮಾರು 15-20 ನಿಮಿಷಗಳ ಕಾಲ ನೆನೆಸಿಡಿ. ಗ್ಯಾಸ್ ಮೇಲೆ ಬಾಣಲೆ ಇಟ್ಟು ಮದ್ಯಮ ಶಾಖದಲ್ಲಿ ಚೆನ್ನಾಗಿ ನೀರನ್ನು ಬಿಸಿ ಮಾಡಿ. ನೀರು ಕುದಿಯುವಾಗ ಲವಂಗ ಮತ್ತು ನೆನೆಸಿದ ಅಕ್ಕಿಯನ್ನು ಅದಕ್ಕೆ ಹಾಕಿ.
ಅಕ್ಕಿ ಮೃದು ಮತ್ತು ಗಟ್ಟಿಯಾಗುವವರೆಗೆ ಬೇಯಿಸಿ. ಅಕ್ಕಿ ಬೆಂದ ನಂತರ, ಎಲ್ಲಾ ನೀರನ್ನು ಸೋಸಿ ಪಕ್ಕಕ್ಕೆ ಇರಿಸಿ. ನಂತರ ಮಧ್ಯಮ ಉರಿಯಲ್ಲಿ ಬಾಣಲೆಯಲ್ಲಿ ಹಾಕಿ ಅದರಲ್ಲಿ ತುಪ್ಪವನ್ನು ಹಾಕಿ ಬಿಸಿಯಾಗುವವರೆಗೂ ಕುದಿಸಿ. ತುಪ್ಪ ಸಾಕಷ್ಟು ಬಿಸಿಯಾದಾಗ ಅದಕ್ಕೆ ಪುಡಿ ಮಾಡಿದ ಬೆಲ್ಲವನ್ನು ಹಾಕಿ.
ಗಮನಿಸಿ: ಬೆಲ್ಲದ ಪುಡಿ ಲಭ್ಯವಿಲ್ಲದಿದ್ದರೆ, ಬೆಲ್ಲವನ್ನು ತುಂಡುಗಳಾಗಿ ಕತ್ತರಿಸಿ ಬಾಣಲೆಗೆ ಸೇರಿಸಬಹುದು. ಬೆಲ್ಲವು ಕರಗಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಆದರೆ ನಿಮಗೆ ಅದೇ ರುಚಿಯನ್ನು ನೀಡುತ್ತದೆ. ಬೆಲ್ಲವು ಸಂಪೂರ್ಣವಾಗಿ ಕರಗಿದ ನಂತರ, ಬೇಯಿಸಿದ ಲವಂಗ ಅಕ್ಕಿ ಮತ್ತು ಹಸಿರು ಏಲಕ್ಕಿ ಪುಡಿಯನ್ನು ಸೇರಿಸಿ. ಕರಗಿದ ಬೆಲ್ಲದೊಂದಿಗೆ ಅಕ್ಕಿಯನ್ನು ಚೆನ್ನಾಗಿ ಮಿಶ್ರಣ ಮಾಡಿ. ಇದು ಅಕ್ಕಿಯ ಬಣ್ಣವನ್ನು ಸ್ವಲ್ಪ ಕಂದು ಬಣ್ಣಕ್ಕೆ ತಿರುಗಿಸುತ್ತದೆ.
ನಂತರ ಬೆಂಕಿಯನ್ನು ಮಧ್ಯಮವಾಗಿ ಇರಿಸಿ ಮತ್ತು ಪ್ಯಾನ್ ಅನ್ನು ಮುಚ್ಚಳದಿಂದ ಮುಚ್ಚಿ ಮತ್ತು ಅಕ್ಕಿಯನ್ನು ಸುಮಾರು 5-8 ನಿಮಿಷಗಳ ಕಾಲ ಬೇಯಿಸಿ. ಬಳಿಕ ಅನ್ನವನ್ನು ನಿಮ್ಮ ಆಯ್ಕೆಯ ಬಾದಾಮಿ ಮತ್ತು ಒಣದ್ರಾಕ್ಷಿಯಿಂದ ಅಲಂಕರಿಸಿ. ಇಷ್ಟಾದರೆ ನಿಮ್ಮ ಸಿಹಿ ಬೆಲ್ಲದ ಅನ್ನ ಸವಿಯಲು ರೆಡಿಯಾಗಿರುತ್ತದೆ.



Click it and Unblock the Notifications
