Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಗೋಧಿ-ರವೆಯ ರುಚಿ-ರುಚಿಯಾದ ಸಿಹಿ ಸ್ನ್ಯಾಕ್ಸ್: ಒಮ್ಮೆ ಮಾಡಿದರೆ ಎರಡು ತಿಂಗಳವರೆಗೆ ಇಟ್ಟು ಬಳಸಬಹುದು
ಮಕ್ಕಳು ಸಂಜೆ ಶಾಲೆ ಮುಗಿಸಿ ಬಂದಾಗ ಅವರಿಗೆ ಸವಿಯಲು ನೀಡಲು ಅಥವಾ ಮನೆಗೆ ಯಾರಾದರೂ ಗೆಸ್ಟ್ ಬಂದಾಗ ನೀಡಲು ಇಲ್ಲಿದೆ ರುಚಿಕರವಾದ ಸ್ನಾಕ್ಸ್ ರೆಸಿಪಿ. ಇದನ್ನು ನೀವು ತುಂಬಾ ಸುಲಭವಾಗಿ ಮಾಡಬಹುದು, ಅಲ್ಲದೆ ಇದನ್ನು ತಯಾರಿಸಿ ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟರೆ ಎರಡು ತಿಂಗಳವರೆಗೆ ಬಳಸಬಹುದು. ಇದನ್ನು ಸ್ವಲ್ಪ ಗಟ್ಟಿಯಾಗಿ ಮುರಿದು ತಿನ್ನಲು ತುಂಬಾ ರುಚಿಯಾಗಿರುತ್ತದೆ, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
ಗೋಧಿ ಹಿಟ್ಟು ಒಂದೂವರೆ ಕಪ್
ರವೆ 1/4 ಕಪ್
ಸಕ್ಕರೆ 1/4 ಕಪ್
ಬಿಳಿ ಎಳ್ಳು 2 ಚಮಚ
ನೀರು 1/4 ಕಪ್
ಎಣ್ಣೆ 1ಕಪ್
ಮಾಡುವ ವಿಧಾನ
1/4 ಕಪ್ ನೀರನ್ನು ಕುದಿಸಿ ಅದಕ್ಕೆ 1/4 ಕಪ್ ಸಕ್ಕರೆ ಹಾಕಿ, ಸಕ್ಕರೆ ಸಂ
ಪೂರ್ಣ ಕರಗಿದ ಮೇಲೆ ಉರಿಯಿಂದ ಇಳಿಸಿ ಸ್ವಲ್ಪ ತಣ್ಣಗಾಗಲು ಬಿಡಿ.
* ನಂತರ ಒಂದು ಬೌಲ್‌ಗೆ ಗೋಧಿ ಹಿಟ್ಟು, ರವೆ, ಎಳ್ಳು ಹಾಕಿ ಮಿಕ್ಸ್ ಮಾಡಿ
* ಸಕ್ಕರೆ ಪಾಕ ಹಾಕಿ ಹಿಟ್ಟನ್ನು ಕಲೆಸಿ, ನಂತರ 10-15 ನಿಮಿಷ ಇಡಿ
* ನಂತರ ಎಣ್ಣೆಯನ್ನು ಬಾಣಲೆಗೆ ಹಾಕಿ ಕಾಯಿಸಿ. ತುಪ್ಪವಾದರೆ ಇನ್ನೂ ರುಚಿ
* ನಂತರ ಹಿಟ್ಟಿನಿಂದ ಚಿಕ್ಕ ಚಿಕ್ಕ ಉಂಡೆ ಕಟ್ಟಿ, ಅದನ್ನು ಕೈಯಲ್ಲಿಯೇ ತಟ್ಟಿ
ಎಣ್ಣೆಗೆ ಬಿಡಿ.
* ಎರಡೂ ಬದಿ ಕಂದು ಬಣ್ಣಕ್ಕೆ ಬಂದಾಗ ಎಣ್ಣೆಯಿಂದ ತೆಗೆಯಿರಿ, ಹೀಗೆ ಮಾಡಿದರೆ
ರುಚಿಕರವಾದ ಸ್ವೀಟ್ ಸ್ನ್ಯಾಕ್ಸ್ ಮತ್ರಿ ರೆಡಿ.
ಸಲಹೆ:
ಹಿಟ್ಟನ್ನು ಗಟ್ಟಿಯಾಗಿ ಕಲೆಸಿ
* ಹೆಚ್ಚು ದಿನ ಇಡದಿದ್ದರೆ ಹುರಿಗಡಲೆ ಕೂಡ ಸೇರಿಸಬಹುದು
* ತುಪ್ಪದಲ್ಲಿ ಕರಿದರೆ ಮತ್ತಷ್ಟು ರುಚಿಯಾಗಿರುತ್ತದೆ.
* ಸಿಹಿ ಬೇಕೆಂದರೆ ಇನ್ನೂ ಸ್ವಲ್ಪ ಅಧಿಕ ಸಕ್ಕರೆ ಸೇರಿಸಿ ಪಾಕ ತಯಾರಿಸಿ.
* ಎಣ್ಣೆಗೆ ಹಾಕುವಾಗ ಎಣ್ಣೆ ಸಿಡಿಯದಂತೆ ಜಾಗ್ರತೆ ವಹಿಸಿ.



Click it and Unblock the Notifications
