Latest Updates
-
ಕೋಲ್ಕತ್ತಾದಲ್ಲಿ ಕಳಪೆ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಸುರಕ್ಷಿತ ಸಮಯ ಮತ್ತು ಮಾರ್ಗಗಳನ್ನು ತಪ್ಪದೇ ತಿಳಿಯಿರಿ -
ಎಆರ್ ರಹಮಾನ್ ಬೆಂಗಳೂರು ಕಾನ್ಸರ್ಟ್: ಮೆಟ್ರೋ ಟೈಮಿಂಗ್ಸ್ ಮತ್ತು ಸುರಕ್ಷಿತವಾಗಿ ಮನೆ ಸೇರಲು ಇಲ್ಲಿದೆ ಪಕ್ಕಾ ಪ್ಲಾನ್! -
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ!
ರೆಸಿಪಿ: ಮುರು ಮೀನಿನ ಫ್ರೈ 3 ರೀತಿಯಲ್ಲಿ ಮಾಡಬಹುದು ನೋಡಿ
ಮೀನಿನ ಫ್ರೈ ಮಾಡುವುದು ಬಲು ಸುಲಭ, ಮಸಾಲೆ ಹದ ಕರೆಕ್ಟ್ ಆಗಿದ್ದರೆ ಸಾಕು ತುಂಬಾ ರುಚಿಯಾದ ಮೀನಿನ ಫ್ರೈ ರೆಡಿ ಮಾಡಬಹುದು. ಇಲ್ಲಿ ಮುರು ಮೀನಿನ ಫ್ರೈ ರೆಸಿಪಿ ನೀಡಿದ್ದೇವೆ, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ ಬನ್ನಿ:

ಬೇಕಾಗುವ ಸಾಮಗ್ರಿ
ಮುರು ಮೀನು ( ನೀವು ಈ ಮೀನು ಸಿಗದಿದ್ದರೆ ಬೂತಾಯಿ, ಬಂಗುಡೆ ಕೂಡ
ಬಳಸಬಹುದು)
ಮಸಾಲೆ
ಒಣ ಮೆಣಸು 6-7
ಹುಣಸೆಹಣ್ಣು
ಸ್ವಲ್ಪ ಅರಿಶಿಣ
ಶುಂಠಿ-ಬೆಳ್ಳುಳ್ಳಿ ಪೇಸ್ಟ್ 1 ಚಮಚ( ಎಸಳು, ಶುಂಠಿ ಬೇಕಿದ್ದರೆ ಹಾಕಬಹುದು)
1 ಈರುಳ್ಳಿ
ಉಪ್ಪು
ಮಾಡುವ ವಿಧಾನ
ನೀವು ಒಣಮೆಣಸು ರೋಸ್ಟ್ ಮಾಡಿ
ನಂತರ ರೋಸ್ಟ್ ಮಾಡಿದ ಮೆಣಸು, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಅಥವಾ
ಶುಂಠಿ-ಬೆಳ್ಳುಳ್ಳಿ ಹಾಕಿ, ಹುಣಸೆ ಹಣ್ಣು, ಈರುಳ್ಳಿ, ಉಪ್ಪು ಹಾಕಿ ಪೇಸ್ಟ್
ಮಾಡಿ
ಈಗ ಈ ಪೇಸ್ಟ್ ಹಚ್ಚಿ ಅರ್ಧ ಗಂಟೆ ಇಡಿ
ನಂತರ ತವಾ ಎಣ್ಣೆಗೆ ಸಾಧಾರಣ ಉರಿಯಲ್ಲಿ ( ಹೈ ಫ್ಲೇಮ್ ಬೇಡ, ಲೋ ಫ್ಲೇಮ್‌ಗಿಂತ
ಸ್ವಲ್ಪ ಹೆಚ್ಚು) 6-7 ನಿಮಿಷ ಬೇಯಿಸಿ, ನಂತರ ಮಗುಚಿ ಹಾಕಿ ಮತ್ತೆ 5-7 ನಿಮಿಷ
ಬೇಯಿಸಿದರೆ ಮುರು ಮೀನಿನ ಫ್ರೈ ರೆಡಿ.
ಇದೇ ಮಸಾಲೆ ಬಳಸಿ ನೀವು ಮತ್ತೊಂದು ರೀತಿಯಲ್ಲಿಯೂ ಮೀನು ಫ್ರೈ
ಮಾಡಬಹುದು
ನೀವು ಮೀನಿಗೆ ಮಸಾಲೆ ಹಾಕಿ ಒಂದು ಬಾಳೆಯಲ್ಲಿಡಿ, ನಂತರ ಮುಚ್ಚಿ, ಅದೇ ರೀತಿ
ಪ್ರತಿ ಮೀನಿಗೆ ಇಟ್ಟು, ನಂತರ ತವಾದಲ್ಲಿ ಎಣ್ಣೆ ಹಾಕಿ ಫ್ರೈ ಮಾಡಬಹುದು, ಈ ಮೀನಿನ
ಫ್ರೈ ನಿಮಗೆ ವಿಭಿನ್ನ ರುಚಿ ನೀಡುತ್ತದೆ, ಈ ರುಚಿಯಂತೂ ತುಂಬಾನೇ
ಇಷ್ಟವಾಗುವುದು.
ಎಣ್ಣೆ ಬಳಸಲ್ಲ ಎನ್ನುವುದಾದರೆ
ನೀವು ಮೀನಿಗೆ ಮಸಾಲೆ ಹಾಕಿ ಅದನ್ನು ಬಾಳೆಯಲ್ಲಿ ಇಟ್ಟು ನಂತರ ಸ್ಟೀಮ್‌ನಲ್ಲಿ
ಬೇಯಿಸಿ ನಂತರ ಅದರ ಮೇಲೆ ಸ್ವಲ್ಪ ಆಲೀವ್ ಎಣ್ಣೆ ಅಥವಾ ತೆಂಗಿನೆಣ್ಣೆ ಹಾಕಿ
ಸವಿಯಬಹುದು.



Click it and Unblock the Notifications
