Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
Recipe: ಬೇಕರಿಯಲ್ಲಿ ಸಿಗುವ ಮಸಾಲ ಕೋಡುಬಳೆ ಮನೆಯಲ್ಲಿ ಮಾಡಿ: ಇಲ್ಲಿದೆ ಸುಲಭದ ವಿಧಾನ
ಮನೆಯಲ್ಲಿಯೇ ತಿಂಡಿ ಮಾಡಿ ಸವಿಯುವುದು ಎಂಬ ಆಲೋಚನೆ ಇದ್ದಾಗ ಥಟ್ ಅಂತ ನೆನಪಾಗುವ ಹಲವು ತಿಂಡಿಗಳಿವೆ. ಹಾಗೆ ರುಚಿ ರುಚಿಯಾಗಿ ಎಲ್ಲರ ಬಾಯಲ್ಲೂ ನೀರು ತರಿಸುವಂತಹ ತಿಂಡಿ ಮಾಡಿ ಸವಿಯೋದು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಹಾಗೆ ಶುಭ ದಿನದಲ್ಲಿ, ಮನೆಯಲ್ಲಿ ಯಾವುದಾದರು ಕಾರ್ಯಕ್ರಮವಿದ್ದರೆ, ಪೂಜೆ ಇದ್ದಾಗ ಅಂತು ತಿಂಡಿಗಳನ್ನು ಮಾಡಿಯೇ ಮಾಡುತ್ತೀರಿ.
ಸಿಹಿ ತಿಂಡಿಯ ಜೊತೆಗೆ ಖಾರ ಖಾರವಾಗಿ ಯಾವುದಾದರು ತಿಂಡಿ ಮಾಡಿ ಸವಿಯು ನಿಮ್ಮ ಬಯಕೆಯಾಗಿದ್ದರೆ ನೀವು ಕೋಡುಬಳೆ ಮಾಡುವ ಕುರಿತು ಆಲೋಚಿಸಿ. ಏಕೆಂದರೆ ಕೋಡುಬಳೆ ಮಾಡೋದು ಬಹಳ ಸುಲಭ ಹಾಗೆ ಸವಿಯೋಕೆ ಕೂಡ ಅದ್ಭುತವಾಗಿರಲಿದೆ. ಹಾಗೆ ನಿಮ್ಮ ಅಪರೂಪದ ಶುಭ ಕಾರ್ಯಗಳಲ್ಲಿ, ಪೂಜೆಗಳಲ್ಲಿ ಈ ಕೋಡುಬಳೆ ಇದ್ದರೆ ಸಂಭ್ರಮ ದುಪ್ಪಟ್ಟಾಗಲಿದೆ.

ಇನ್ನು ಮಸಾಲೆ ಭರಿತ ಕೋಡುಬಳೆಯ ರುಚಿ ನೀವು ಕೂಡ ಸವಿದಿರಬುಹುದು. ಬೇಕರಿಗಳಲ್ಲಿ ಹಾಗೆ ಅಂಗಡಿಗಳಲ್ಲಿ ಸಿಗುವಂತಹ ರುಚಿ ರುಚಿಯ ಈ ತಿಂಡಿಯನ್ನು ಮನೆಗೆ ತಂದು ಸವಿದಿರುತ್ತೀರಿ. ಆದ್ರೆ ಮನೆಯಲ್ಲೇ ಇದನ್ನು ಮಾಡುವ ಕುರಿತು ನಾವಿಂದು ತಿಳಿದುಕೊಳ್ಳೋಣ.
ಬೇಕರಿ ರುಚಿಯ ಕೋಡುಬಳೆ ಮನೆಯಲ್ಲಿ ಮಾಡೋದು ಹೇಗೆ? ಬೇಕರಿ ರುಚಿಯ ಕೋಡುಬಳೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡಲು ಎಷ್ಟು ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಬೇಕರಿ ಸ್ಟೈಲ್ನ ಕೋಡುಬಳೆ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಅಕ್ಕಿ ಹಿಟ್ಟು
- ಮೈದಾ ಹಿಟ್ಟು
- ಅಜ್ವೈನಾ
- ಅರಶಿಣ
- ಉಪ್ಪು
- ಎಣ್ಣೆ
- ಅಡುಗೆ ಸೋಡಾ
ಬೇಕರಿ ಸ್ಟೈಲ್ನ ಕೋಡುಬಳೆ ಮಾಡುವ ವಿಧಾನವೇನು?
ಮೊದಲು ಒಂದು ಬೌಲ್ಗೆ 2 ಕಪ್ ಅಕ್ಕಿ ಹಿಟ್ಟು ಹಾಕಿಕೊಳ್ಳಿ. ಹಾಗೆ ಅರ್ಧ ಕಪ್ ಮೈದಾ ಹಿಟ್ಟು ಹಾಕಿ ಡ್ರೈ ಮಿಕ್ಸ್ ಮಾಡಿಕೊಳ್ಳಿ. ನಂತರ ಈಗ ಒಂದು ಬಾಣಲೆಯಲ್ಲಿ 2 ಕಪ್ ನೀರು ಹಾಕಿಕೊಂಡು ಖಾರದ ಪುಡಿ, ಉಪ್ಪು, ಅರಶಿಣ, ಅರ್ಧ ಸ್ಪೂನ್ ಅಜ್ನೈನಾ, ಸ್ವಲ್ಪ ಅಡುಗೆ ಸೋಡಾ ಹಾಕಿಕೊಂಡು ಮಿಕ್ಸ್ ಮಾಡಿ. ನಂತರ ಇದನ್ನು ಒಲೆ ಮೇಲೆ ಇಟ್ಟು ಕುದಿಯಲು ಬಿಡಿ.
ಈ ನೀರು ಕುದಿಬರಲು ಆರಂಭಿಸಿದಾಗ ಅದಕ್ಕೆ ಮೊದಲು ಮಿಕ್ಸ್ ಮಾಡಿಕೊಂಡಿದ್ದ ಹಿಟ್ಟನ್ನು ಹಾಕಿಕೊಂಡು ನಿಧಾನವಾಗಿ ಮಿಕ್ಸ್ ಮಾಡುತ್ತಾ ಇರಿ. ಉರಿ ಸಣ್ಣ ಉರಿಯಲ್ಲಿ ಇಟ್ಟು ಮಿಕ್ಸ್ ಮಾಡುತ್ತಾ ಇರಿ, ತೆಳುವಾದರೆ ಅಕ್ಕಿ ಹಿಟ್ಟು ಹಾಕಿ, ಗಟ್ಟಿಯಾದರೆ ಬಿಸಿ ನೀರು ಹಾಕಿಕೊಳ್ಳಿ. ಇದು ಬೆಲ್ಲದಂತೆ ಕಾಣಿಸಬೇಕು.
ಈಗ ಹಿಟ್ಟನ್ನು ಒಂದು ಬೌಲ್ಗೆ ಹಾಕಿಕೊಂಡು ಚೆನ್ನಾಗಿ ನಾದುಕೊಳ್ಳಬೇಕು. ಕೈಗೆ ಎಣ್ಣೆ ಹಚ್ಚಿಕೊಂಡು ನಾದುಕೊಳ್ಳಬೇಕು. ಬೇಳೆ ಹೋಳಿಗೆಯ ಹೂರ್ಣದಂತೆ ಇದು ಬರಬೇಕು. ಚೆನ್ನಾಗಿ ಕಲಸಿಕೊಂಡ ಬಳಿಕ ಒಂದು ಉಂಡೆ ತೆಗೆದುಕೊಳ್ಳಿ. ನಂತರ ಅದನ್ನು ಉದ್ದವಾಗಿ ಲಟ್ಟಿಸಿಕೊಳ್ಳಬೇಕು. ಕೋಲಿನ ರಚನೆಯಲ್ಲಿ ಲಟ್ಟಿಸಬೇಕು ಅನಂತರ ಎರಡು ತುದಿಯನ್ನು ಸೇರಿಸಿ ಕೋಡುಬಳೆ ಮಾಡಿ. ನಿಮಗೆ ಯಾವ ಗಾತ್ರಕ್ಕೆ ಬೇಕೋ ಆ ಗಾತ್ರದಲ್ಲಿ ಇದನ್ನು ಮಾಡಿಕೊಳ್ಳಿ.
ಎಲ್ಲಾ ಹಿಟ್ಟನ್ನು ಈ ರೀತಿ ಇಟ್ಟುಕೊಳ್ಳಿ. ಈಗ ಬಾಣಲೆಯಲ್ಲಿ ಎಣ್ಣೆ ಹಾಕಿ ಒಲೆ ಮೇಲೆ ಇಟ್ಟು ಕಾಯಲು ಬಿಡಿ. ಕೊಡುಬಳೆ ಹಾಕಿದ ಬಳಿಕ 5 ನಿಮಿಷಕ್ಕಿಂತ ಹೆಚ್ಚು ಸಮಯ ಕಾಯಿಸಬೇಕು. ಎರಡೂ ಕಡೆ ಬ್ರೌನ್ ಕಲರ್ಗೆ ಬರಬೇಕು. ಗುಳ್ಳೆಗಳು ಕಡಿಮೆಯಾದರೆ ಕೋಡುಬಳೆ ಬೆಂದಿದೆ ಎಂದರ್ಥ. ಇಷ್ಟಾದರೆ ನಿಮ್ಮ ಮುಂದೆ ಬೇಕರಿ ರುಚಿಯ ಕೋಡುಬಳೆ ಸಿದ್ದವಾಗುತ್ತೆ. ನೀವು ಕೂಡ ಟ್ರೈ ಮಾಡಿ ನೋಡಿ.



Click it and Unblock the Notifications
