Latest Updates
-
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು!
Recipe: ಆಹಾ ಎಂಥ ಸವಿರುಚಿ ಈ ಹಲಸಿನ ಹಣ್ಣಿನ ದೋಸೆಗೆ
ಸಂಜೆ ಸ್ನ್ಯಾಕ್ಸ್ಗೆ ಅಥವಾ ಬೆಳಗ್ಗೆ ಬ್ರೇಕ್ ಫಾಸ್ಟ್ಗೆ ನೀವು ಹಲಸಿನ ಹಿಟ್ಟು ದೋಸೆ ಮಾಡಿದರೆ ಸೂಪರ್ ಅಲ್ವಾ? ಈ ಹಲಸಿನ ಹಣ್ಣಿನ ದೋಸೆಯನ್ನು ಸುಲಭವಾಗಿ ಮಾಡಬಹುದು, ಇದನ್ನು ಹುಡುಗು ಬರಿಸದೆ ಹಾಗೇ ಮಾಡಿದರೆ ಸೂಪರ್ ಟೇಸ್ಟ್, ಒಮ್ಮೆ ಟೇಸ್ಟ್ ಮಾಡಿದರೆ ಇನ್ನೂ ಬೇಕೆನ್ನುವಷ್ಟು ರುಚಿ ಈ ದೋಸೆಯದು.
ಒಂದು ಇಡೀ ಹಲಸಿನ ಹಣ್ಣು ಸಿಕ್ಕಾಗ ಅದರಲ್ಲಿ ಸ್ವಲ್ಪ ತೆಗೆದು ಈ ರೀತಿ ದೋಸೆ, ವಡೆ, ಪಡ್ಡು ಅಂತ ಮಾಡಲು ಮರೆಯದಿರಿ.

ಹಲಸಿನ ಹಣ್ಣಿನ ದೋಸೆ ಮಾಡುವುದು ಹೇಗೆ ಎಂದು ನೋಡೋಣ:
ಬೇಕಾಗುವ ಸಾಮಗ್ರಿ
1 ಕಪ್ ಇಡ್ಲಿಗೆ ನೆನೆ ಹಾಕುವ ಅಕ್ಕಿ
1 ಕಪ್ ಹಲಸಿನ ಹಣ್ಣಿ ತೊಳೆ ಬಿಡಿಸಿರುವುದು(ಬೀಜ ತೆಗೆದು)
3/4 ಕಪ್ ಬೆಲ್ಲ
ಏಲಕ್ಕಿ
ಸ್ವಲ್ಪ ತೆಂಗಿನ ತುರಿ
ಉಪ್ಪು
ತುಪ್ಪ
ಮಾಡುವ ವಿಧಾನ
ನೀವು ಅಕ್ಕಿಯನ್ನು ನೆನೆ ಹಾಕಿರಬೇಕು
ನಂತರ ನೀರು ಸೋಸಿ
ಈಗ ಹಲಸಿನ ತೊಳೆಯನ್ನು ಚಿಕ್ಕದಾಗಿ ಕತ್ತರಿಸಿ
ನೀವು ಅಕ್ಕಿ, ಹಲಸಿನ ತೊಳೆ, ಏಲಕ್ಕಿ, ಬೆಲ್ಲ, ತೆಂಗಿನ ತುರಿ ಸ್ವಲ್ಪ ಉಪ್ಪು
ಸೇರಿಸಿ
ಚೆನ್ನಾಗಿ ರುಬ್ಬಿ
ಈಗ ದೋಸೆ ಪ್ಯಾನ್ ತುಪ್ಪ ಸವರಿ ದೋಸೆ ಹಿಟ್ಟು ಹಾಕಿ ತವಾವನ್ನು ಮುಚ್ಚಿ.
ನಂತರ ದೋಸೆಯನ್ನು ಮಗುಚಿ ಹಾಕಿ, ದೋಸೆ ಮೇಲ್ಭಾಗದಲ್ಲಿ ಸ್ವಲ್ಪ ತುಪ್ಪ ಹಾಕಿದರೆ
ಇನ್ನೂ ರುಚಿಯಾಗಿರುತ್ತದೆ.
ಇನ್ನು ನೀವು ದೋಸೆ ಮಾಡುವಾಗ ಅಕ್ಕಿ ಕಡಿಮೆಯಾಗಿ ಹಲಸಿನ ತೊಳೆ ಹೆಚ್ಚಾದರೂ ದೋಸೆ ಚೆನ್ನಾಗಿ ಬರುವುದಿಲ್ಲ, ಹಾಗಾಗಿ ಈ ಬಗ್ಗೆ ಜಾಗ್ರತೆವಹಿಸಿ.
ಸ್ವಲ್ಪ ಅಕ್ಕಿ ಅಧಿಕವೇ ನೆನೆಹಾಕಿ ಪ್ರತ್ಯೇಕ ರುಬ್ಬಿ, ಹಲಸಿನ ತೊಳೆ, ತೆಂಗಿನಕಾಯಿ ಬೆಲ್ಲ ಇವುಗಳನ್ನು ಪ್ರತ್ಯೇಕವಾಗಿ ರುಬ್ಬಿ, ಹೀಗೆ ಮಾಡಿದಾಗ ಅಕ್ಕಿ ಹಿಟ್ಟು ಸಾಕಾಗದೆ ತವಾದಿಂದ ಮೇಲೆಕ್ಕೆ ಏಳುತ್ತಿಲ್ಲ ಎಂದಾದರೆ ನೀವು ಇನ್ನೂ ಸ್ವಲ್ಪ ಅಕ್ಕಿ ಹಿಟ್ಟು ಸೇರಿಸಿದರೆ ಸಾಕು.
ಹಲಸಿನ ಹಣ್ಣಿನ ಸೆಟ್ ದೋಸೆ
ಅಕ್ಕಿ 1 ಕಪ್
ಉದ್ದು 1/2 ಕಪ್
ಸ್ವಲ್ಪ ಉಪ್ಪು
ಹಲಸಿನ ತೊಳೆ, ಸ್ವಲ್ಪ ತೆಂಗಿನ ತುರಿ, ಸೋಪು 1 ಚಮಚ
ಈಗ ನೀವು ಅಕ್ಕಿ ಮತ್ತು ಉದ್ದಿನ ಬೇಳೆಯನ್ನು 8 ಗಂಟೆಗಳ ನೆನೆಹಾಕಿ, ನಂತರ ಉದ್ದು
ಹಾಗೂ ಅಕ್ಕಿಯನ್ನು ಉಪ್ಪು ಸೇರಿಸಿ ರುಬ್ಬಿ ಹುದುಗು ಬರಲು ಇಡಿ
ಈಗ ನೀವು ದೋಸೆಗೆ ರೆಡಿ ಮಾಡುವಾಗ ದೋಸೆ, ತೆಂಗಿನ ತುರಿ, ಸೋಂಪು ಹಾಕಿ ರುಬ್ಬಿ
ಮಿಕ್ಸ್ ಮಾಡಿ, ಇಲ್ಲಿಯೂ ಅಷ್ಟೇ ಅಕ್ಕಿ ಹಾಗೂ ಉದ್ದು ಹಿಟ್ಟು ಅಧಿಕವಿರಬೇಕು,
ತೊಳೆ ಸ್ವಲ್ಪ ಸಾಕು. ನಿಮಗೆ ಸಿಹಿ ಬೇಕೆಂದರೆ ಬೆಲ್ಲ ಸೇರಿಸಬಹುದು. ಬೆಲ್ಲ
ಸೇರಿಸುವುದಾದರೆ ಸೋಂಪು ಬದಲಿಗೆ 2 ಏಲಕ್ಕಿ ಬಳಸಿ.



Click it and Unblock the Notifications
