Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
Recipe: ಅಕ್ಕಿ, ಬೇಳೆ ನೆನೆಸದೆ ಥಟ್ ಅಂತ ದೋಸೆ ಮಾಡಿ.! ಇಷ್ಟು ದಿನ ನೀವಿದನ್ನ ಕಲಿತಿರೋದಿಲ್ಲ!!
Recipe: ಬೆಳಗ್ಗೆ ತಿಂಡಿ ಮಾಡಬೇಕು ಅಂದ್ರೆ ನಿಮ್ಮ ಆಲೋಚನೆಯಲ್ಲಿ ಹಲವು ಖಾದ್ಯಗಳು ನೆನಪಿಗೆ ಬರಲಿವೆ. ಅದ್ರಲ್ಲೂ ದೋಸೆ ರೆಸಿಪಿ ಅಂದ್ರೆ ಎಲ್ಲರ ಬಾಯಲ್ಲೂ ನೀರು ಬರುವುದು ಖಚಿತ. ಹಲವು ಬಗೆಯ ದೋಸೆಯನ್ನು ಸವಿಯೋಕೆ ಎಲ್ಲರು ಇಷ್ಟಪಡುತ್ತಾರೆ. ಅದ್ರಲ್ಲೂ ಬಹುತೇಕರು ಹೋಟೆಲ್ ರುಚಿಯ ದೋಸೆಗೆ ಮಾರು ಹೋಗುತ್ತಾರೆ. ಮಸಾಲೆ ದೋಸೆ, ರವೆ ದೋಸೆ, ಈರುಳ್ಳಿ ದೋಸೆ ಸೇರಿ ಬಗೆ ಬಗೆಯ ದೋಸೆಗಳ ಸವಿಯೋದು ಅಂದ್ರೆ ಕೆಲವರ ಫೇವರಿಟ್ ಕೆಲಸ.
ಆದ್ರೆ ದೋಸೆ ಮಾಡೋಕೆ ಹಿಂದಿನ ದಿನ ಅಕ್ಕಿ, ಬೇಳೆ ನೆನೆಸಿ ನಂತರ ಮಿಕ್ಸಿ ಜಾರ್ನಲ್ಲಿ ಹಿಟ್ಟು ರುಬ್ಬಿಕೊಂಡು ಒಂದು ರಾತ್ರಿ ಹುಳಿ ಬರಲು ಬಿಟ್ಟು ಮಾರನೆ ದಿನ ಬೆಳಗ್ಗೆ ಮಾಡಬೇಕಾಗುತ್ತೆ. ಈ ಪ್ರಕ್ರಿಯೆ ಬಹಳ ಶ್ರಮದಾಯಕ ಹಾಗೆ ಸಮಯ ಹೆಚ್ಚು ಹಿಡಿಯಲಿದೆ ಎಂಬ ಕಾರಣಕ್ಕೆ ದೋಸೆ, ಇಡ್ಲಿ ಮಾಡಲು ಕೆಲವರು ಹಿಂದೇಟು ಹಾಕುತ್ತಾರೆ.

ಆದ್ರೆ ನಾವಿಂದು ಹೇಳುವ ದೋಸೆಗೆ ಈ ಯಾವುದೇ ಪ್ರಕ್ರಿಯೆಯ ಅತ್ಯವೇ ಇಲ್ಲ. ಹೌದು ನೀವು ಮನೆಯಲ್ಲೇ ದೋಸೆ ಮಾಡುವಾಗ ಕೇವಲ 10 ನಿಮಿಷದಲ್ಲಿ ಹಿಟ್ಟು ಮಾಡಿ ಈ ದೋಸೆ ಸವಿಯಬಹುದು. ಇದಕ್ಕೆ ಅಕ್ಕಿ ನೆನೆಸುವುದು ಬೇಡ, ಹಾಗೆ ಬೇಳೆ ನೆನೆಸಿ ರುಬ್ಬುವ ಅಗತ್ಯವೂ ಇಲ್ಲ. ಇದೊಂದು ಬಹಳ ಸುಲಭದ ದೋಸೆ ರೆಸಿಪಿ.
ಇದರಲ್ಲಿ ಅಕ್ಕಿ ಬದಲಿಗೆ ರವೆ ಹಾಗೂ ಅವಲಕ್ಕಿಯನ್ನು ಹಾಕಿಕೊಂಡು ದೋಸೆ ಮಾಡಲಾಗುತ್ತದೆ. ಇದನ್ನು ಹಿಂದಿನ ದಿನ ತಯಾರಿ ಮಾಡುವ ಅಗತ್ಯವಿಲ್ಲ. ಹಾಗಾದ್ರೆ ಈ ದೋಸೆ ಮಾಡುವ ಕುರಿತು ನಾವಿಂದು ತಿಳಿದುಕೊಳ್ಳೋಣ. ಈ ರವೆ ಅವಲಕ್ಕಿ ದೋಸೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ರವೆ ಅವಲಕ್ಕಿ ದೋಸೆ ಮಾಡಲು ಬೇಕಾಗುವ ವಸ್ತಗಳು
ರವೆ (ಉಪ್ಪಿಟ್ಟು ರವೆ ಅಥವಾ ದಪ್ಪ ರವೆ)
ಅವಲಕ್ಕಿ (ಪೇಪರ್ ಅವಲಕ್ಕಿ)
ಉಪ್ಪು
ಸೋಡಾ ಅಥವಾ ಈನೋ ಪುಡಿ
ಎಣ್ಣೆ
ಮೊಸರು
ರವೆ ಅವಲಕ್ಕಿ ದೋಸೆ ಮಾಡುವ ಸುಲಭದ ವಿಧಾನವೇನು?
ಮೊದಲು ಒಂದು ಕಪ್ ರವೆಯನ್ನು ಮಿಕ್ಸಿ ಹಾರ್ಗೆ ಹಾಕಿಕೊಂಡು ಬಳಿಕ 1 ಕಪ್ ಪೇಪರ್ ಅವಲಕ್ಕಿ ಹಾಕಿ ನುಣ್ಣಗೆ ಹಿಟ್ಟು ಮಾಡಿಕೊಳ್ಳಿ. ನುಣ್ಣಗಾದ ಬಳಿಕ 1 ಸ್ಪೂನ್ ಸಕ್ಕರೆ ಕೂಡ ಹಾಕಿಕೊಳ್ಳಿ, ಹಾಗೆ 1 ಕಪ್ ಮೊಸರು ಸಹ ಹಾಕಿ ಸ್ವಲ್ಪ ನೀರು ಸಹ ಹಾಕಿ ಮತ್ತೆ ರುಬ್ಬಿಕೊಳ್ಳಿ. ನುಣ್ಣಗೆ ಹಿಟ್ಟನ್ನು ರುಬ್ಬಿ ಆದ್ರೆ ನೀರಾಗಿರಬಾರದು, ಸ್ವಲ್ಪ ಗಟ್ಟಿಯಾಗಿರಲಿ.
ಈಗ ಇದನ್ನು ಒಂದು ಪಾತ್ರೆಗೆ ಹಾಕಿ ಹಿಟ್ಟನ್ನು ಮಿಕ್ಸ್ ಮಾಡಿಕೊಳ್ಳಿ. ಉದ್ದಿನ ಬೇಳೆ ಹಿಟ್ಟಿನಂತೆ ಗಟ್ಟಿಯಾಗಿರಲಿ. ನಂತರ ಮುಚ್ಚಳ ಮುಚ್ಚಿ 5 ನಿಮಿಷಗಳ ಕಾಲ ಹಾಗೆಯೆ ಬಿಡಿ. 5 ನಿಮಿಷದ ಬಳಿಕ ಇದಕ್ಕೆ ಉಪ್ಪು ಹಾಗೂ ಈನೋ ಪುಡಿ ಅಥವಾ ಸೋಡಾ ಪುಡಿ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ, ಹಿಟ್ಟು ಗಟ್ಟಿ ಎನಿಸಿದರೆ ಸ್ವಲ್ಪ ನೀರು ಹಾಕಿಕೊಳ್ಳಿ.
ಇಷ್ಟಾದರೆ ದೋಸೆ ಹಿಟ್ಟು ರೆಡಿಯಾಗುತ್ತದೆ. ಈಗ ಕಾವಲಿ ಒಲೆ ಮೇಲೆ ಇಟ್ಟು ಸಾಮಾನ್ಯ ದೋಸೆ ಮಾಡಿಕೊಂಡಂತೆಯೆ ಮಾಡಿಕೊಳ್ಳಿ. ಎಣ್ಣ, ಬೆಣ್ಣೆ, ಹಚ್ಚಿಕೊಂಡು ಮಾಡಿಕೊಳ್ಳಿ. ದಪ್ಪವಾಗಿ ಮಧ್ಯದಲ್ಲಿ ಹಿಟ್ಟು ಹಾಕಿ ಹಾಗೆಯ ಬಿಡಬೇಕು. ಹಿಟ್ಟನ್ನು ಉಜ್ಜಬೇಡಿ. ಇನ್ನು ಒಂದು ಬದಿ ಮಾತ್ರವೇ ರೋಸ್ಟ್ ಆಗುವಂತೆ ಕಾಯಿಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ದೋಸೆ ರೆಡಿಯಾಗುತ್ತೆ. ನೀವು ಕೂಡ ಮನೆಯಲ್ಲಿ ಇದನ್ನು ಟ್ರೈ ಮಾಡಿ ನೋಡಿ. ಇದಕ್ಕೆ ಅಕ್ಕಿ ನೆನೆಸುವುದು, ಬೆಳೆ ನೆನೆಸುವುದು ಯಾವುದೂ ಬೇಡ. ಬಹಳ ರುಚಿಯಾಗಿ ಇದನ್ನು ಥಟ್ ಎಂದು ಬೆಳಗ್ಗೆ ಮಾಡಿ ಮುಗಿಸಬಹುದು.



Click it and Unblock the Notifications
