Latest Updates
-
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
Headline for Deeplink -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ!
ದೀಪಾವಳಿಗೆ ಬೂಂದಿ ಲಡ್ಡು ಮಾಡಬೇಕೆಂದಿದ್ದೀರಾ? ಹಿಂಜರಿಕೆ ಬೇಡ, ಸುಲಭದಲ್ಲಿ ಮಾಡಬಹುದು ನೋಡಿ
ದೀಪಾವಳಿ ಹಬ್ಬದ ಸಡಗರ ಶುರುವಾಗಿದೆ, ದೀಪಾವಳಿ ಹಬ್ಬಕ್ಕೆ ಎಷ್ಟು ಸಿಹಿ ತಿಂಡಿ ಮಾಡಿದರೂ ಸಾಲದು ಅನಿಸುತ್ತದೆ, ಅದರಲ್ಲಿಯೂ ಲಡ್ಡು ಇರದಿದ್ದರೆ ಹೇಗೆ ಅಲ್ವಾ? ಆದರೆ ಈ ಲಡ್ಡು ಮಾಡುವುದು ಕಷ್ಟ ಎಂದು ನೀವು ಭಾವಿಸಿದ್ದರೆ ನಾವಿಲ್ಲಿ ನೀಡಿದಂತೆ ಟ್ರೈ ಮಾಡಿ ನೋಡಿ ಸುಲಭವಾಗಿ ತಯಾರಿಸಬಹುದು.
ಇದಕ್ಕೆ ಬೂಂದಿ ಮಾಡಬೇಕಾಗಿಲ್ಲ, ಹಾಗೆಯೇ ತಯಾರಿಸಬಹುದು, ಬನ್ನಿ ಈ ಲಡ್ಡು ತಯಾರಿಸುವುದು ಹೇಗೆ ಎಂದು ನೋಡೋಣ ಬನ್ನಿ:

ಸೂಚನೆ: ನಾವು ಇಲ್ಲಿ ಒಂದೇ ಬಗೆಯ ಸಾಮಗ್ರಿ ಬಳಸಿ ಮಾಡುವ ಎರಡು ಬಗೆಯ ಲಡ್ಡು ನೀಡಿದ್ದೇವೆ. ಒಂದು ಲಡ್ಡು ತರಿತರಿಯಾಗಿ ಚೆನ್ನಾಗಿದ್ದರೆ ಮತ್ತೊಂದು ಲಡ್ಡು ಬೂಂದಿ ರೀತಿ ಸವಿಯಬಹುದು.
ಬೇಕಾಗುವ ಸಾಮಗ್ರಿ
2 ಕಪ್ ಕಡ್ಲೆ ಹಿಟ್ಟು
2 ಚಮಚ ರವೆ/ ಸೂಜಿ ರವೆ
1/4 ಚಮಚ ಫುಡ್ ಕಲರ್
ಒಂದೂವರೆ ಕಪ್ ನೀರು
ಎಣ್ಣೆ
ಹಿಟ್ಟು ಮಿಕ್ಸ್ ಮಾಡಲು ಸಕಕ್ರೆ ಪಾಕ
1 ಕಪ್ ನೀರು
1 ಕಪ್ ಸಕ್ಕರೆ
1/2 ಚಮಚ ಏಲಕ್ಕಿ ಪುಡಿ
1/2 ಚಮಚ ನಿಂಬೆರಸ
ಅಲಂಕಾರಕ್ಕೆ
ಸ್ವಲ್ಪ ಗೋಡಂಬಿ
ಸ್ವಲ್ಪ ಪಿಸ್ತಾ
ಮಾಡುವ ವಿಧಾನ:
ಬೂಂದಿ ಮಾಡುವ ವಿಧಾನ:
2 ಚಮಚ ತುಪ್ಪ ಅಥವಾ ಎಣ್ಣೆಹಾಕಿ ಅದರಲ್ಲಿ ರವೆ ಹಾಕಿ ಸ್ವಲ್ಪ ರೋಸ್ಟ್ ಮಾಡಿ
ಅದೇ ರೀತಿ ಕಡಲೆ ಹಿಟ್ಟು ಕೂಡ ಹಾಕಿ ಹುರಿಯಿರಿ
ಈಗ ಬಾಣಲೆಗೆ 1 ಚಮಚ ಎಣ್ಣೆ ಅಥವಾ
ಬೂಂದಿ ಲಡ್ಡು ಮಾಡುವ ಮುನ್ನ ನೀವು ಸಕ್ಕರೆ ಪಾಕ ರೆಡಿ ಮಾಡಿ
ಸಕ್ಕರೆ ಪಾಕ ಮಾಡುವಾಗ ಒಣ ದ್ರಾಕ್ಷಿ, ಫುಡ್ ಕಲರ್, ಬಾದಾಮಿ, ಗೋಡಂಬಿ, ಏಲಕ್ಕಿ
ಪುಡಿ ಇವೆಲ್ಲಾ ಸೇರಿಸಬೇಕು
ಸಕ್ಕರೆ ಪಾಕ ಕುದಿಯುವಾಗ ಅದರಲ್ಲಿ ಈ ಕಡ್ಲೆಹಿಟ್ಟು ರವೆ ಮಿಕ್ಸ್ ಮಾಡಿದ ಮಿಶ್ರಣ
ಹಾಕಿ ಕಲೆಸಿ, ಹಿಟ್ಟು ಸಕ್ಕರೆ ಪಾಕವನ್ನು ಹೀರಿಕೊಂಡು ಗಟ್ಟಿಯಾಗಲಾರಂಭಿಸಿದಾಗ
ಉರಿಯಿಂದ ಇಳಿಸಿ, ನಿಂಬೆರಸ ಸೇರಿಸಿ ಮಿಕ್ಸ್ ಮಾಡಿ.
ಮಿಶ್ರಣ ಸ್ವಲ್ಪ ತಣ್ಣಗಾದ ಮೇಲೆ ಕೈಗೆ ತುಪ್ಪ ಸವರಿ ಉಂಡೆ ಕಟ್ಟಿ ಅದರ ಮೇಲೆ
ಪಿಸ್ತಾ, ಗೋಡಂಬಿ ಚೂರು ಉದುರಿಸಿ.
ಇದನ್ನು ನೀವು ಡಬ್ಬದಲ್ಲಿ ಹಾಕಿಡಿ, ಹಬ್ಬದ ದಿನ ಸರ್ವ್ ಮಾಡಬಹುದು.
ನೀವು ಬೂಂದಿ ಮಾಡುವುದಾದರೆ
- ನೀವು ನೀರಿಗೆ ರೋಸ್ಟ್ ಮಾಡಿದ ರವೆ ಮತ್ತು ಕಡಲೆ ಹಿಟ್ಟು ಹಾಕಿ, ಸ್ವಲ್ಪ ಕರ್ ಪುಡಿ ಸೇರಿಸಿ ಮಿಕ್ಸ್ ಮಾಡಿ, ಈ ಮಿಶ್ರಣವನ್ನು ಚೆನ್ನಾಗಿ ಮಿಕ್ಸ್ ಮಾಡಿ, ದೋಸೆ ಹಿಟ್ಟಿನ ಹದವಿರಲಿ.
- ಎಣ್ಣೆ ಕಾಯಿಸಿ
- ಈಗ ದೊಡ್ಡ-ದೊಡ್ಡ ರಂಧ್ರವಿರುವ ಸೌಟು ತೆಗೆದು ಅದನ್ನು ಕಾಯುತ್ತಿರುವ ಎಣ್ಣೆಗೆ ಹಿಡಿದು ಅದರಲ್ಲಿ ಈ ಮಿಶ್ರಣ ಸುರಿದರೆ ಬೂಂದಿ ರೆಡಿಯಾಗುತ್ತದೆ. ಬೂಂದಿ ತುಂಬಾ ರೋಸ್ಟ್ ಮಾಡಬೇಡಿ. ಅದನ್ನು ಎಣ್ಣೆಯಿಂದ ತೆಗೆದು ಒಂದು ಬೌಲ್‌ನಲ್ಲಿ ಹಾಕಿ.
ಈಗ ಸಕ್ಕರೆ ಪಾಕ ರೆಡಿ ಮಾಡಿ
- ರೆಡಿ ಮಾಡಿಟ್ಟ ಬೂಂದಿಯನ್ನು ಸಕ್ಕರೆ ಪಾಕದಲ್ಲಿ ಹಾಕಿಡಿ, ಬೂಂದಿ ಸಕ್ಕರೆ ಪಾಕವನ್ನು ಹೀಡಿಕೊಂಡ ಮೇಲೆ ಅದರಿಂದ ಉಂಡೆ ಕಟ್ಟಿ.
- ಈ ಬೂಂದಿ ಲಡ್ಡು ಕೂಡ ಚೆನ್ನಾಗಿರುತ್ತದೆ. ಪಾಡುವ ವಿಧಾನದಲ್ಲಿ ವ್ಯತ್ಯಾಸ ಬೇರೆಯಷ್ಟೇ ಆದರೆ ಅದಕ್ಕೆ ಬಳಸಿರುವ ಸಾಮಗ್ರಿ ಒಂದೇ ಬಗೆಯದು, ಆದರೂ ಈ ಲಡ್ಡುಗಳ ರುಚಿ ಭಿನ್ನವಾಗಿರುತ್ತದೆ. ಸಕ್ಕರೆ ಪಾಕದಲ್ಲಿ ಹಿಟ್ಟು ಹಾಕಿ ಮಾಡುವ ಲಡ್ಡು ಭಿನ್ನವಾಗಿರುತ್ತದೆ, ಬೂಂದಿ ಮಾಡಿ ಮಾಡುವ ಲಡ್ಡು ಭಿನ್ನವಾಗಿರುತ್ತದೆ.
- ಹಾಗಾಗಿ ನಿಮಗೆ ಯಾವುದು ಇಷ್ಟವಾಗುವುದೋ ಆ ರೀತಿ ಲಡ್ಡು ಮಾಡಬಹುದು, ಇಲ್ಲದಿದ್ದರೆ ಎರಡೂ ಮಾಡಬಹುದು, ಹಬ್ಬದಲ್ಲಿ ವೆರೈಟಿ ಹೆಚ್ಚಾಗುವುದು.



Click it and Unblock the Notifications