Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ರೆಸಿಪಿ: ಮನೆಯಲ್ಲಿ 5-6 ಜನರಿಗೆ ಸುಲಭವಾಗಿ ಮುದ್ದೆ ಮಾಡುವ ವಿಧಾನ
ರಾಗಿ ಮುದ್ದೆ ಮೊದಲೆಲ್ಲಾ ಕರ್ನಾಟಕದ ಹೊರಗಡೆ ಅಷ್ಟಾಗಿ ಗೊತ್ತಿರಲಿಲ್ಲ, ಆದರೆ ಈಗ ಅದರ ಪ್ರಯೋಜನವನ್ನು ಅರಿತುಕೊಂಡು ಹೊರ ರಾಜ್ಯದವರು ಕೂಡ ಇದನ್ನು ತಯಾರಿಸಲು ಪ್ರಯತ್ನಿಸುತ್ತಿದ್ದಾರೆ. ಏಕೆಂದರೆ ಈ ಮುದ್ದೆ ದೇಹಕ್ಕೆ ಶಕ್ತಿ, ಮಧುಮೇಹವನ್ನು ನಿಯಂತ್ರಿಸಲು ಸಹಕಾರಿ.

ರಾಗಿ ಮುದ್ದೆ ಜೊತೆಗೆ ಅರ್ಧ ಗಂಟೆ ವ್ಯಾಯಾಮ ಸಾಕು ಮಧುಮೇಹದ ಅಪಾಯ ತಡೆಗಟ್ಟಬಹುದು. ರಾಗಿ ಮುದ್ದೆ ತಿಂದ್ರೆ ಬೇಗನೆ ಹಸಿವು ಕೂಡ ಉಂಟಾಗುವುದಿಲ್ಲ. ದಿನದಲ್ಲಿ ಒಂದು ಹೊತ್ತಾದರೂ ರಾಗಿ ಮುದ್ದೆ ಸೇರಿಸಿದರೆ ತುಂಬಾನೇ ಒಳ್ಳೆಯದು.
ಬಸ್ಸಾರು ಇರಲಿ, ಮಟನ್, ಚಿಕನ್ ಸಾರು ಇರಲಿ ಎಲ್ಲದಕ್ಕೂ ಸೈ ಈ ರಾಗಿ ಮುದ್ದೆ.
ಈ ರಾಗಿ ಮುದ್ದೆಯನ್ನು ಅನ್ನ ಹಾಕಿ ಕೆಲವರು ಮಾಡಿದರೆ ಬರೀ ರಾಗಿ ಹಿಟ್ಟು ಹಾಕಿ ತಯಾರಿಸುತ್ತಾರೆ, ಬನ್ನಿ ಈ ಎರಡೂ ವಿಧಾನ ನೋಡೋಣ
- 2 ಕಪ್ ನೀರು ಹಾಕಿ ಕುದಿಸಿ
- ನೀರು ಕುದಿ ಬರುವಾಗ ಸ್ವಲ್ಪ ಉಪ್ಪು ಮತ್ತು ತುಪ್ಪ ಹಾಕಿ
- ನೀರು ಕುದಿ ಬರುವಾಗ 1 ಕಪ್ ರಾಗಿ ಹಿಟ್ಟನ್ನು ಮೆಲ್ಲನೆ ಸುರಿಯಿರಿ, ಹೀಗೆ ಸುರಿಯುವಾಗ ಗಂಟು ಕಟ್ಟದಿರಲು ಸೌಟ್ನಿಂದ ಆಡಿಸುತ್ತಲೇ ಇರಿ, ನಂತರ ಮಿಶ್ರಣ ಗಟ್ಟಿಯಾಗುವವರೆಗೆ ಬೇಯಿಸಿ, ಬಳಿಕ ಉರಿಯಿಂದ ಇಳಿಸಿ
- ಈಗ ಒಂದು ಕಪ್ನಲ್ಲಿ ನೀರು ಇಟ್ಟುಕೊಳ್ಳಿ, ಎರಡು ತಟ್ಟೆ ಇಡಿ, ಒಂದು ಸ್ವಲ್ಪ ದೊಡ್ಡ ತಟ್ಟೆ ಆಗಿರಲಿ, ಈಗ ತಟ್ಟೆಗೆ ತುಪ್ಪ ಸವರಿ, ಬೇಯಿಸಿದ ರಾಗಿ ಹಿಟ್ಟು ಹಾಕಿ, ಕೈಯನ್ನು ನೀರಿನಲ್ಲಿ ಮೆಲ್ಲನೆ ಅದ್ದಿ ಉಂಡೆ ರೀತಿಯಲ್ಲಿ ಮತ್ತೊಂದು ತಟ್ಟೆಗೆ ಹಾಕಿ.
ಅನ್ನ ಹಾಕಿ ಮಾಡುವ ರಾಗಿ ಮುದ್ದೆ
ಇನ್ನು ಕೆಲವರು ಅನ್ನ ಹಾಕಿ ರಾಗಿ ಮುದ್ದೆ ಮಾಡುತ್ತಾರೆ, ಕೆಲವರು ಹಿಟ್ಟು ರೆಡಿ
ಮಾಡಿ ಅನ್ನ ಸೇರಿಸಿದರೆ ಕುದಿಯುತ್ತಿರುವ ನೀರಿಗೆ ಅನ್ನ ಹಾಕಿ, ನಂತರ ರಾಗಿ
ಹಿಟ್ಟು ಸೇರಿಸಿ ಮಿಕ್ಸ್ ಮಾಡುತ್ತಾರೆ, ಮಧುಮೇಹಿಗಳಿಗೆ ಅನ್ನ ಸೇರಿಸಿ ಮುದ್ದೆ
ಮಾಡಬೇಡಿ.
ಮುದ್ದೆ ಕಟ್ಟುವ ವಿಧಾನ ಮಾತ್ರ ಮೇಲಿನಂತೆಯೇ ಮಾಡಬಹುದು.
ನಾವಿಲ್ಲ ತುಂಬಾ ಸರಳವಾಗಿ ಮಾಡಬಹುದಾದ ರೆಸಿಪಿ ನೀಡಿದ್ದೇವೆ. ಮನೆಯಲ್ಲಿ 5-6 ಜನರಿಗಾದರೆ ಈ ರೀತಿ ಮುದ್ದೆ ರೆಡಿ ಮಾಡಬಹುದು, ಹೆಚ್ಚಿನ ಪರಿಶ್ರಮ ಆಗಲ್ಲ, ಅರ್ಧ ಗಂಟೆಗೆ ಮುದ್ದೆ ರೆಡಿಯಾಗಿರುತ್ತದೆ. ಇದನ್ನು ನಿಮಗಿಷ್ಟವಾದ ಸಾರು ಜೊತೆಗೆ ಆಂದವಾಗಿ ಸವಿಯಿರಿ.
ಯಾವಾಗಲೂ ಮುದ್ದೆ ಕಟ್ಟುವಾಗ ತುಪ್ಪ ಸೇರಿಸಿ ರುಚಿ ಸೂಪರ್ ಅನಿಸುವುದು.
ರಾಗಿ ಮುದ್ದೆ ಗಂಟು ಗಂಟಾಗಿ ಇರಬಾರದು
ಹೌದು ಮುದ್ದೆ ಗಂಟ ಗಂಟಾಗಿ ಇರಲೇಬಾರದು, ಹಾಗಾಗಿ ನೀವು ರಾಗಿ ಇಟ್ಟು ಹಾಕುವಾಗ ಈ ಬಗ್ಗೆ ಜಾಗ್ರತೆವಹಿಸಿ. ನಿಮಗೆ ಕುದಿಯುವ ನೀರಿಗೆ ರಾಗಿ ಹಿಟ್ಟು ಹಾಕುವಾಗ ಗಂಟು ಕಟ್ಟುವ ಭಯ ಇದ್ದರೆ ನೀವು 2 ಕಪ್ ನೀರಿಗೆ 1 ಕಪ್ ರಾಗಿ ಇಟ್ಟು ಚೆನ್ನಾಗಿ ಮಿಕ್ಸ್ ಮಾಡಿ ನಂತರ ಕುದಿಸಿ ಇಟ್ಟು ತಯಾರಿಸಬಹುದು.
ಇನ್ನು ನೀವು ನೀರಿಗೆ ಉಪ್ಪು, ರಾಗಿ ಮಾತ್ರ ಹಾಕಿ ರಾಗಿ ಮುದ್ದೆ ಮಾಡುವುದಕ್ಕಿಂತ ತುಪ್ಪ ಸೇರಿಸಿ ತುಂಬಾ ರುಚಿಯಾಗಿರುತ್ತೆ, ಮುದ್ದೆ ಮೃದುವಾಗಿರುತ್ತದೆ.
ರಾಗಿ ಎಷ್ಟು ಬಳಸುತ್ತೀರೋ ಅದರ ಎರಡು ಪಟ್ಟು ಅಂದರೆ 1 ಗ್ಲಾಸ್ಗೆ 2 ಗ್ಲಾಸ್ ನೀರು ಹಾಕಿದರೆ ಹದ ಸರಿಯಾಗಿರುತ್ತದೆ.
ಇನ್ನು ರಾಗಿ ಮುದ್ದೆ ರುಚಿ ಅನಿಸುವುದು ಅದಕ್ಕೆ ಸೂಕ್ತವಾದ ಸಾರು ಇರಬೇಕು.



Click it and Unblock the Notifications
