Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಬಾಳೆಹಣ್ಣು ತುಂಬಾ ಹಣ್ಣಾದರೆ ಬಿಸಾಡಬೇಡಿ, ರುಚಿ ರುಚಿಯಾದ ಹಲ್ವಾ ಮಾಡಿ
ಮಳೆಗಾಲ ಬಾಳೆಹಣ್ಣು ತಿಂದ್ರೆ ಶೀತವಾಗುತ್ತೆ ಎಂದು ಹೆಚ್ಚಿನವರು ಮಳೆಗಾಲದಲ್ಲಿ ಬಾಳೆ ಹಣ್ಣು ಮುಟ್ಟುವುದಿಲ್ಲ.
ಅದರೆ ವೈದ್ಯರು ಬಾಳೆಹಣ್ಣು ತಿಂದರೆ ಶೀತ, ಕೆಮ್ಮು ಉಂಟಾಗುವುದಿಲ್ಲ ಎಂದು ಹೇಳುತ್ತಾರೆ, ಆದರು ಕೆಲವರಿಗೆ ತಿನ್ನಲಿಕ್ಕೆ ಭಯ, ಅದರಲ್ಲಿಯೂ ನಮ್ಮ ತೋಟದಲ್ಲಿಯೇ ಬೆಳೆದ ಬಾಳೆಹಣ್ಣು ಆದರೆ ತುಂಬಾನೇ ಇರುತ್ತದೆ, ಅಷ್ಟೊಂದು ಬಾಳೆಹಣ್ಣು ಒಮ್ಮಲೇ ಹಣ್ಣಾದರೆ ನಾವು ಸ್ವಲ್ಪ ಯಾರಿಗಾದರೂ ಕೊಟ್ಟು ನಮ್ಮ ತೋಟದಲ್ಲಿ ಬೆಳೆದಿದ್ದು ಅಲ್ವಾ ಹಾಗಾಗಿ ಸ್ವಲ್ಪ ಹೆಚ್ಚೇ ನಮ್ಮ ಬಳಿ ಇಟ್ಟುಕೊಳ್ಳುತ್ತೇವೆ, ನಾವು ಅದನ್ನು ಎಲ್ಲಾ ತಿಂದು ಮುಗಿಸುವುದು ಕಷ್ಟವಾಗುವುದು ಅಷ್ಟರಲ್ಲಿ ಉಳಿದಿರುವ ಹಣ್ಣುಗಳು ತುಂಬಾ ಹಣ್ಣಾಗಿ ಕಪ್ಪು ಬಣ್ಣಕ್ಕೆ ತಿರುಗುತ್ತದೆ, ಅದನ್ನು ಬಿಸಾಡಬೇಡಿ, ಅದರಿಂದ ಸೂಪರ್ ಅಲ್ವಾ ತಯಾರಿಸಬಹುದು.

ಬಾಳೆಹಣ್ಣಿನ ಹಲ್ವಾ ಇದೆಯಲ್ಲಾ ಅದನ್ನು ಮಾಡುವುದು ತುಂಬಾನೇ ಸುಲಭ, ಹೆಚ್ಚು ಸಾಮಗ್ರಿ ಬೇಕಾಗಿಲ್ಲ, ಪ್ರಮುಖ ನಾಲ್ಕು ಸಾಮಗ್ರಿ ಸಾಕು, ಉಳಿದ ಸಾಮಗ್ರಿ ಬೇಕಿದ್ದರೆ ರುಚಿ ಹೆಚ್ಚಿಸಲು ಬಳಸಬಹುದು.
ಬಾಳೆಹಣ್ಣಿನ ಹಲ್ವಾಗೆ ಬೇಕಾಗುವ ಪ್ರಮುಖ 3 ಸಾಮಗ್ರಿ
ತುಂಬಾ ಹಣ್ಣಾದ ಬಾಳೆಹಣ್ಣು (6, ಹೂ ಬಾಳೆಯಾದರೆ 20-25)
1/4 ಕಪ್ ಜೋಳದ ಹಿಟ್ಟು
1/2 ಕಪ್ ಸಕ್ಕರೆ
2 ಚಮಚ ತುಪ್ಪ
ಈ ಸಾಮಗ್ರಿ ಸೇರಿಸಿಬಹುದು ಕೊಬ್ಬರಿ ಚೂರುಗಳು
ಸ್ವಲ್ಪ ಹುರಿಗಡಲೆ ಅಥವಾ ನಟ್ಸ್
ಬಾಳೆಹಣ್ಣಿನ ಹಲ್ವಾ ಮಾಡುವುದು ಹೇಗೆ?
- ಬಾಳೆಹಣ್ಣು ಸಿಪ್ಪೆ ಸುಲಿದು ಚಿಕ್ಕದಾಗಿ ಕತ್ತರಿಸಿ ಹಾಕಿ, ನಂತರ ಗ್ರೈಂಡರ್ ಹಾಕಿ ನೀರು ಸೇರಿಸದೆ ರುಬ್ಬಿ
- ಬಳಿಕ ಆ ಪೇಸ್ಟ್ಗೆ ಸಕ್ಕರೆ, ಜೋಳದ ಹಿಟ್ಟು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ
- ಈಗ ತಪ್ಪ ತಳವಿರುವ ಪಾತ್ರೆಯನ್ನು ಬಿಸಿ ಮಾಡಿ ತುಪ್ಪ ಹಾಕಿ, ನಂತರ ಬಾಳೆಹಣ್ಣು ಮಿಶ್ರಣ ಹಾಕಿ
- ಸೌಟ್ನಿಂದ ಆಡಿಸುತ್ತಾ ಬೇಯಿಸಿ, ಆಗಾಗ ಸೌಟ್ ಆಡಿಸುತ್ತಾ ಇರಬೇಕು.
- ಹಲ್ವಾ ತಳ ಹಿಡಿಯಲು ಬಿಡಬಾರದು
- ಹಲ್ವಾ ಮಿಶ್ರಣ ಗಟ್ಟಿಯಾಗುವವರೆಗೆ ಸೌಟ್ನಿಂದ ಆಡಿಸಿ
- ಬಳಿಕ ತಟ್ಟೆಗೆ ತುಪ್ಪ ಸವರಿ ಮಿಶ್ರಣ ಹಾಕಿ ಮೆಲ್ಲನೆ ತಟ್ಟಿ 15-20 ನಿಮಿಷ ಬಿಟ್ಟರೆ ಸಾಕು ಹಲ್ವಾ ರೆಡಿ.
ಈ ಹಲ್ವಾ ಮತ್ತಷ್ಟು ರುಚಿಯಾಗಿಸಲು
ನೀವು ತುಪ್ಪ ಕಾಯಿಸುವಾಗ ಎರಡು ಏಲಕ್ಕಿ ಹಾಕಿ, ನಂತರ ಹಲ್ವಾ ಮಿಶ್ರಣ ರೆಡಿಯಾದ ಮೇಲೆ ತಟ್ಟೆಗೆ ಸುರಿದ ಮೇಲೆ ಮೇಲೆ ನಟ್ಸ್ ಉದುರಿಸಿ, ಕೊಬ್ಬರಿ ಬಳಸುವುದಾದರೆ ಹಲ್ವಾ ಮಿಶ್ರಣ ಮಾಡುವಾಗಲೇ ಹಾಕಿ, ಹೀಗೆ ಮಾಡಿದರೆ ಹಲ್ವಾ ಮತ್ತಷ್ಟು ರುಚಿಯಾಗಿರುತ್ತದೆ.
ಈ ಹಲ್ವಾ ಕತ್ತರಿಸಿ ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟರೆ 15 ದಿನವಾದರೂ ಕೆಡುವುದಿಲ್ಲ.



Click it and Unblock the Notifications
