Latest Updates
-
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ! -
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು
ರೆಸಿಪಿ: ಮೂರೇ ಮೂರು ಸಾಮಗ್ರಿ ಸಾಕು ಮೃದುವಾದ, ರುಚಿಯಾದ ಮೈಸೂರು ಪಾಕ್ ರೆಡಿ
ಮೈಸೂರು ದಸರಾ ಎಷ್ಟೊಂದು ಸುಂದರ, ಮೈಸೂರ ಪಾಕ ಎಷ್ಟೊಂದು ಮಧುರ.... ಮೈಸೂರ್ ಪಾಕ್ ಯಾರಿಗೆ ತಾನೆ ಇಷ್ಟವಾಗಲ್ಲ, ನೀವು ಹೊರ ರಾಜ್ಯದವರಿಗೆ, ಹೊರ ದೇಶದವರಿಗೆ ಯಾರಿಗೇ ನೀಡಿ ನೀಡಿ.
ಈ ಮೈಸೂರ್ ಪಾಕ್ ರುಚಿಗೆ ಮನಸೋಲದವರೇ ಇಲ್ಲ, ಅಷ್ಟೊಂದು ರುಚಿಯ ಮೈಸೂರ್ ಪಾಕ್ ಖರೀದಿ ಮಾಡುವಾಗ ದುಬಾರಿ ಅನಿಸುತ್ತೆ, ನೀವು ಮೈಸೂರು ಪಾಕ್ ಮನೆಯಲ್ಲಿಯೇ ಮಾಡಿದರೆ ದುಬಾರಿ ಅನಿಸಲ್ಲ, ಹೊರಗಡೆ ಖರೀದಿ ಮಾಡುವ ಅರ್ಧದಷ್ಟು ಹಣ ಸಾಕು, ಸೂಪರ್ ರುಚಿಯ ಮೈಸೂರ್ ಪಾಕ್ ತಯಾರಿಸಬಹುದು.
ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
1 ಕಪ್ ಕಡ್ಲೆಹಿಟ್ಟು
2 ಕಪ್ ಸಕ್ಕರೆ
1 ಕಪ್ ತುಪ್ಪ
1 ಕಪ್ ನೀರು
1/4 ಕಪ್ ಅಡುಗೆ ಎಣ್ಣೆ
ಮಾಡುವ ವಿಧಾನ
ಸ್ಟೆಪ್ 1
ನೀವು ಕಡ್ಲೆಹಿಟ್ಟನ್ನು ಒಂದು ಬೌಲ್‌ಗೆ ಹಾಕಿ ಕೈಯಿಂದ ಪುಡಿ ಕಲೆಸಿ, ಏಕೆಂದರೆ
ಯಾವ ಗಂಟುಗಳಿರಬಾರದು
ಸ್ಟೆಪ್ 2
ಸಕ್ಕರೆ ಪಾಕ ತಯಾರಿಸಿ
ನೀವು ಒಂದು ಕಪ್ ನೀರು ಹಾಕಿ ಕುದಿಸಿ
ನಂತರ ಸಕ್ಕರೆ ಹಾಕಿ ಕಲೆಸಿ ಕುದಿಸಿ, ಸಕ್ಕರೆ ಪಾಕ ರೆಡಿ.
ನೀವು ಸಕ್ಕರೆ ಪಾಕ ರೆಡಿಯಾಗುವಾಗಲೇ ತುಪ್ಪ ಹಾಗೂ ಎಣ್ಣೆ ಬಿಸಿ ಮಾಡಿಡಿ.
ಸ್ಟೆಪ್ 3
ಈಗ ಸಕ್ಕರೆ ಪಾಕಕ್ಕೆ ನನೀವು ನಿಧಾನಕ್ಕೆ ಕಡ್ಲೆಹಿಟ್ಟು ಹಾಕಿ, ಹೀಗೆ ಹಾಕುವಾಗ
ಗಂಟು ಕಟ್ಟದಿರಲು ಸೌಟ್‌ನಿಂದ ತಿರುಗಿಸುತ್ತಾ ಇರಿ. ಹೀಗೆ ಹಿಟ್ಟು ಕಲೆಸುವಾಗ
ಕಡಿಮೆ ಉರಿಯಲ್ಲಿ ಇಡಿ. ಈಗ ಬಿಸಿ ತುಪ್ಪವನ್ನು ಸೇರಿಸುತ್ತಾ ಕಲೆಸಿ, ಎಣ್ಣೆಯನ್ನೂ
ಸೇರಿಸಿ.
ತುಪ್ಪವನ್ನು ಮಿಶ್ರಣ ಹೀರಿಕೊಳ್ಳುವಷ್ಟು ಹೊತ್ತು ತಿರುಗಿಸುತ್ತಾ ಇರಿ.
(ತುಪ್ಪ ಒಂದೇ ಬಾರಿಗೆ ಸುರಿಯಬೇಡಿ, ಸ್ವಲ್ಪ ಹಾಕಿ ತಿರುಗಿಸುವುದು, ಮತ್ತೆ ಸ್ವಲ್ಪ ಹಾಕುವುದು ಈ ರೀತಿ ಒಂದು ಕಪ್ ತುಪ್ಪ ಸೇರಿಸಿ.)
ಹೀಗೆ ತಿರುಗಿಸುತ್ತಾ ರುವಾಗ ಮಿಶ್ರಣದ ಬಣ್ಣ ಬದಲಾಗುತ್ತದೆ, ಕಡ್ಲೆಹಿಟ್ಟು ಬೆಂದು ತುಂಬಾ ಸುವಾಸನೆ ಬೀರುವುದು. ಈಗ 2 ಚಮಚ ಸಕ್ಕರೆ ಸೇರಿಸಿ ಪಟ್ ಅಂತ ತಿರುಗಿಸಿ.
ಸ್ಟೆಪ್ 4
ನೀವು ತುಪ್ಪ ಸವರಿದ ತಟ್ಟೆಗೆ ಮಿಶ್ರಣ ಸುರಿಯಿರಿ, ಆದರೆ ಅದರ ಮೇಲ್ಭಾಗ ಪ್ರೆಸ್
ಮಾಡಬೇಡಿ. ನಂತರ 30 ನಿಮಿಷ ಬಿಡಿ.
ಬಳಿಕ ನಿಮಗೆ ಬೇಕಾದ ರೀತಿಯಲ್ಲಿ ಕತ್ತರಿಸಿ.
ಟಿಪ್ಸ್
- ನೀವು ಮೈಸೂರು ಪಾಕ ಮಾಡುವಾಗ ಗ್ಯಾಸ್ ಉರಿ ಹೆಚ್ಚಿಡಲೇಬಾರದು
- ಎಣ್ಣೆ ಬೇಡ, ತುಪ್ಪ ಮಾತ್ರ ಸೇರಿಸಿ ಮಾಡುತ್ತೇನೆ ಎಂದರೆ ಮಾಡಬಹುದು.
- ಸಕ್ಕರೆ ಪಾಕಕ್ಕೆ ಸ್ವಲ್ಪ ಏಲಕ್ಕಿ ಪುಡಿ ಸೇರಿಸಬಹುದು.
- ಶುದ್ಧ ತುಪ್ಪವನ್ನೇ ಬಳಸಿ.
- ಇನ್ನು ತಟ್ಟೆಗೆ ಸುರಿಯುವಾಗ ಆಯ್ಕೆ ಮಾಡುವ ತಟ್ಟೆ ಕೂಡ ಸರಿಯಾಗಿರಬೇಕು, ಹಿಟ್ಟು ಹೊರ ಚೆಲ್ಲುವಂತಿರಬಾರದು, ಅಲ್ಲದೆ ಮಿಶ್ರಣ ಸುರಿದಾಗ ತುಂಬ ಬೇಕು, ಆ ರೀತಿಯ ತಟ್ಟೆಯನ್ನೇ ಬಳಸಿ.
ಮೈಸೂರ್ ಪಾಕ್ ಕುರಿತ ಕೆಲ ಆಸಕ್ತಿಕರ ಸಂಗತಿಗಳು
ಮೈಸೂರು ಪಾಕ್ ಮೈಸೂರಿನ ಸಾಂಪ್ರದಾಯಕ ಸಿಹಿತಿಂಡಿ ಎಂದು ಗುರುತಿಸಿಕೊಂಡಿದೆ,ಈ
ಮೈಸೂರು ಪಾಕ್ ಮೊದಲಿಗೆ ಕರಷ್ಣ ರಾಜ ಒಡೆಯರ್ ಕಾಲದಲ್ಲಿ ಅಡುಗೆ ಭಟ್ಟ ಕಾಕಾಸುರ
ಮಾದಪ್ಪ ಎಂಬವವರು ತಯಾರಿಸಿದರು. ಅವರು ಮಾಡಿದ ಹೊಸ ಸಿಹಿತಿಂಡಿ ಎಲ್ಲರಿಗೂ
ಇಷ್ಟವಾಯ್ತು, ಇದರ ಹೆಸರೇನು ಎಂದು ಕೇಳಿದಾಗ ಮೈಸೂರು ಪಾಕ ಅಂತಾರೆ. ಈಗ ಎಲ್ಲರೂ
ಮೈಸೂರ್ ಪಾಕ್ ಅಂತಾರೆ.
ಮೈಸೂರ್ ಪಾಕ್ ಗಟ್ಟಿಯಾಗಿ ಮಾಡಬಹುದೇ?
ನೀವು ಎರಡು ಬಗೆಯ ಮೈಸೂರು ಪಾಕ ಮಾಡಬಹುದು. ಒಂದು ತುಂಬಾ ಮೃದುವಾಗಿರುತ್ತೆ,
ಮತ್ತೊಂದು ಗಟ್ಟಿಯಾಗಿರುತ್ತೆ. ತುಪ್ಪ ಕಡಿಮೆಯಾದರೆ ಪಾಕ ಗಟ್ಟಿಯಾಗುವುದು.
ಮೈಸೂರು ಪಾಕ ಗಟ್ಟಿ ಮಾಡಿದರೆ ತಿಂಗಳಗಟ್ಟಲೆ ಇಡಬಹುದು.



Click it and Unblock the Notifications