Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ನವರಾತ್ರಿ: ದುರ್ಗಪೂಜೆಗೆ ನೈವೇದ್ಯಕ್ಕೆ 2 ಬಗೆಯ ಗೋಧಿ ಪಾಯಸ ರೆಸಿಪಿ
ದುರ್ಗಾಪೂಜೆಗೆ ದೇವರಿಗೆ ನೀವು ನೈವೇದ್ಯ ಇಡುವುದಾದರೆ ಗೋಧಿ ಪಾಯಸವನ್ನು ನೈವೇದ್ಯವಾಗಿ ಬಡಿಸಬಹುದು, ನಾವಿಲ್ಲಿ 2 ಬಗೆಯ ಗೋಧಿ ಪಾಯಸ ರೆಸಿಪಿ ನೀಡಿದ್ದೇವೆ, ನೀವು ಇದರಲ್ಲಿ ನಿಮಗಿಷ್ಟವಾದ ಪಾಯುಸ ಮಾಡಿ ನೈವೇದ್ಯವನ್ನಾಗಿ ಇಡಬಹುದು. ಬನ್ನಿ ಗೋಧಿ ಪಾಯಸ ಹಾಗೂ ಕಡ್ಲೆಬೇಳೆ ಸೇರಿಸಿ ಮಾಡುವ ಗೋಧಿ ಪಾಯಸ ನೋಡೋಣ:

ಬೇಕಾಗುವ ಸಾಮಗ್ರಿ
1/2 ಕಪ್ ಗೋಧಿ
1/2 ಕಪ್ ಬೆಲ್ಲ
ಒಂದು ಕಪ್ ಗಟ್ಟಿ ತೆಂಗಿನಹಾಲು
2-3 ಏಲಕ್ಕಿ
1 ಚಮಚ ತುಪ್ಪ
ಸ್ವಲ್ಪ ಗೋಡಂಬಿ, ದ್ರಾಕ್ಷಿ
ಮಾಡುವ ವಿಧಾನ:
- ಗೋಧಿಯನ್ನು ತೊಳೆದು ಸ್ವಲ್ಪ ಹೊತ್ತು ನೆನೆಹಾಕಿ, ನಂತರ ನೀರು ಸೋಸಿ ಪುಡಿ, ಪುಡಿ ಮಾಡಿ (ಮಿಕ್ಸಿ ಗ್ರೈಂಡರ್‌ನಲ್ಲಿ 2 ರೌಂಡ್ ತಿರುಗಿಸಿ, ಕೆಲವರು ಕಲ್ಲಿನಲ್ಲಿ ಹಾಕಿ ಕುಟ್ಟಿ ಪುಡಿ ಮಾ ನೀರು ಹಾಕಿ ನೀರು
- ಈಗ ಗೋಧಿಗೆ 3 ಕಪ್ ನೀರು ಸೇರಿಸಿ ಬೇಯಿಸಿ
- ನೀವು ಗೋಧಿಯನ್ನು ಬೇಯಿಸುವಾಗ ಆಗಾಗ ಸೌಟ್‌ನಿಂದ ತಿರುಗಿಸುತ್ತಲೇ ಇರಿ. ಏಕೆಂದರೆ ಗೋಧಿ ಬೇಗನೆ ತಳ ಹಿಡಿಯುತ್ತದೆ, ಹೀಗೆ ತಳ ಹಿಡಿದರೆ ಸೀದು ಹೋಗುತ್ತೆ, ಹಾಗಾಗಿ ನೀವು ಈ ಬಗ್ಗೆ ಜಾಗ್ರತೆವಹಿಸಿ. ಬೆಲ್ಲ ಸೇರಿಸಿ.
- ಗೋಧಿ ಬೆಂದಾಗತೆಂಗಿನ ಹಾಲು ಸೇರಿಸಿ, ಮಿಕ್ಸ್ ಮಾಡಿ. ಮಿಶ್ರಣ ಗಟ್ಟಿಯಾಗುವಾಗ ಉರಿಯಿಂದ ಇಳಿಸಿ.
- ಒಂದು ಚಿಕ್ಕ ಬಾಣಲೆಗೆ ಒಂದ ಚಮಚ ತುಪ್ಪ ಹಾಕಿ ಅದರಲ್ಲಿ ಗೋಡಂಬಿ ದ್ರಾಕ್ಷಿ ಹಾಕಿ ಸ್ವಲ್ಪ ಫ್ರೈ ಮಾಡಿ ಪಾಯಸಕ್ಕೆ ಸೇರಿಸಿ.
ಇತರ ಸಲಹೆ
ನೀವು ತೆಂಗಿನ ಹಾಲು ಮಾತ್ರವಲ್ಲ ಹಾಲು ಕೂಡ ಸೇರಿಸಬಹುದು
ನುಚ್ಚು ಗೋಧಿ ಸಿಗುತ್ತೆ ಅದನ್ನು ಕೂಡ ಬಳಸಬಹುದು.
ಬೆಲ್ಲದ ಪುಡಿಯಾದರೆ ಹಾಗೇ ಹಾಕಬಹುದು, ಬೆಲ್ಲದ ಅಚ್ಚು ಹಾಗೇ ಹಾಕಬೇಡಿ, ಬೆಲ್ಲದ
ಪಾಕ ಮಾಡಿ ಸೇರಿಸಿ.
ಗೋಧಿ ಪಾಯಸಕ್ಕೆ ಕಡ್ಲೆಬೇಳೆ ಹಾಕಿ ಮಾಡುವುದಾದರೆ:
ನುಚ್ಚು ಗೋಧಿ 1 ಕಪ್
ಅರ್ಧ ಕಪ್ ಕಡ್ಲೆಬೇಳೆ
ಬೆಲ್ಲದ ಪುಡಿ 1 ಕಪ್
ತೆಂಗಿನಕಾಯಿ ಹಾಲು
ಎಲಕ್ಕೆ 2-3
ಮಾಡುವ ವಿಧಾನ
ನೀವು ನುಚ್ಚು ಗೋಧಿ ಹಾಗೂ ಕಡ್ಲೆ ಬೇಳೆ ಹಾಕಿ 2-3 ಕಪ್ ನೀರು ಸೇರಿಸಿ
ಬೇಯಿಸಿ.
ನಂತರ ಬೆಲ್ಲ ಹಾಕಿ ಮಿಕ್ಸ್ ಮಾಡಿ, ಬಳಿಕ ಗಟ್ಟಿ ಹಾಲನ್ನು ಹಾಕಿ ಕುದಿಸಿ. ಏಲಕ್ಕಿ
ಸೇರಿಸಿ.
ನಂತರ ತುಪ್ಪದಲ್ಲಿ ಗೋಡಂಬಿ, ದ್ರಾಕ್ಷಿ ಹುರಿದು ಸೇರಿಸಿ, ಕಡ್ಲೆಬೇಳೆ-ಗೋಧಿ ಪಾಯಸ
ರೆಡಿ.
ಇತರ ಸಲಹೆ
ಗೋಧಿ ಪಾಯಸ ಮಾಡುವಾಗ ಈ ಟಪ್ಸ್ ಪಾಯಸದ ರುಚಿ ಹೆಚ್ಚಿಸುತ್ತೆ
- ನುಚ್ಚು ಗೋಧಿ ಚೆನ್ನಾಗಿ ಬೇಯಬೇಕು, ನಂತರ ನೀವು ಕುಕ್ಕರ್‌ನಲ್ಲಿ ಬೇಯಿಸುವುದಾದರೆ 4-5 ವಿಶಲ್ ಬರುವವರೆಗೆ ಬೇಯಿಸಿ
- ಕಡ್ಲೆಬೇಳೆ ಮತ್ತು ಗೋಧಿ ಜೊತೆಗೆ ಬೇಯಿಸಬೇಡಿ, ಕಡ್ಲೆಬೇಳೆ ತುಂಬಾ ಬೆಂದು ಹೋದರೆ ತಿನ್ನಲು ಸಿಗುವುದಿಲ್ಲ, ಕಡ್ಲೆಬೇಳೆ ತಿನ್ನುವಾಗ ಸಿಗಬೇಕು, ಹಾಗಾಗಿ ಪ್ರತ್ಯೇಕ ಬೇಯಿಸಿ ಸೇರಿಸುವುದು ಒಳ್ಳೆಯ ಐಡಿಯಾ. ನೀವು ನೇರವಾಗಿ ಗೋಧಿ ಬೇಯಿಸುವುದಾದರೆ ಗೋಧಿ ಅರ್ಧ ಬೆಂದ ಮೇಲೆ ಕಡ್ಲೆಬೇಳೆ ಸೇರಿಸಬಹುದು.



Click it and Unblock the Notifications
