Latest Updates
-
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ! -
ಸಣ್ಣ ಬಾಲ್ಕನಿಯಲ್ಲಿ ಓಣಂ ಸಂಭ್ರಮ: ಬಜೆಟ್ನಲ್ಲಿ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್ -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ಕೊನೆಯ ದಿನದ ಸಂಭ್ರಮ ಮತ್ತು ಮನೆಯನ್ನು ಸಿಂಗರಿಸುವ ಸುಲಭ ಟಿಪ್ಸ್
ಬ್ರೇಕ್ಫಾಸ್ಟ್ ರೆಸಿಪಿ: ಮಾವಿನಕಾಯಿ ಅನ್ನ, ಅಡುಗೆ ಎಕ್ಸ್ಪರ್ಟ್ ಅಲ್ಲದಿದ್ದರೂ ರುಚಿಯಾಗಿ ಮಾಡಬಹುದು
ಈ ಮಾವಿನಕಾಯಿ ಸೀಸನ್ನಲ್ಲಿ ನಿಂಬೆಹಣ್ಣು ಅಥವಾ ಹುಣಸೆಹಣ್ಣು ಹಾಕಿ ಮಾಡುವ ಚಿತ್ರಾನ್ನಕ್ಕೆ ಬ್ರೇಕ್ ನೀಡಿ ಮಾವಿನಕಾಯಿ ಚಿತ್ರಾನ್ನ ಮಾಡಿ, ನಿಂಬೆರಸ ಹಾಕಿ ಚಿತ್ರಾನ್ನ ಯಾವಾಗ ಬೇಕಾದರೂ ಮಾಡಬಹುದು, ಬನ್ನಿ ಈ ಮಾವಿನಕಾಯಿ ಅನ್ನ ಮಾಡುವುದು ಹೇಗೆ ಎಂದು ನೋಡೋಣ ಬನ್ನಿ:

ಬೇಕಾಗುವ ಸಾಮಗ್ರಿ
ಒಂದು ಮಾವಿನಕಾಯಿ 1 (ಸಿಪ್ಪೆ ಸುಲಿದು ತುರಿಯಿರಿ)
ಈರುಳ್ಳಿ 2
ಒಣ ಮೆಣಸು 3-4 ಅಥವಾ ಹಸಿ ಮೆಣಸು (ನಿಮ್ಮ ಆಯ್ಕೆಗೆ ಬಿಟ್ಟದ್ದು)
ಉಪ್ಪು 1/2 ಚಮಚ
ಸ್ವಲ್ಪ ತೆಂಗಿನತುರಿ
ಅನ್ನ 2 ಕಪ್
ಶೇಂಗಾ ಬೀಜ
ಕರಿಬೇವು
ಉದ್ದಿನ ಬೇಳೆ 1/2 ಚಮಚ
ಕಡ್ಲೆ ಬೇಳೆ 1/2 ಚಮಚ
2 ಚಮಚ ಎಣ್ಣೆ (ತೆಂಗಿನೆನೆಣ್ಣೆ ಅಥವಾ ಸೂರ್ಯಕಾಂತಿ ಎಣ್ಣೆ, ಯಾವುದೇ ಅಡುಗೆ
ಎಣ್ಣೆ ಬಳಸಬಹುದು)
ಮಾಡುವ ವಿಧಾನ
ದಪ್ಪ ತಳವಿರುವ ಕಡಾಯಿಗೆ ಎಣ್ಣೆ ಹಾಕಿ ಬಿಸಿ ಮಾಡಿ
ನಂತರ ತೊಗರಿ ಬೇಳೆ, ಉದ್ದಿನ ಬೇಳೆ ಹಾಕಿ, ಶೇಂಗಾ ಹಾಕಿ ಸ್ವಲ್ಪ ಹೊತ್ತು
ಹುರಿಯಿರಿ
ನಂತರ ಕರಿಬೇವು ಹಾಕಿ
ಈರುಳ್ಳಿ, ಹಸಿ ಮೆಣಸು ಅಥವಾ ಒಣ ಮೆಣಸು ಹಾಕಿ
ತುರಿದ ಮಾವಿನಕಾಯಿ ತುರಿ ಹಾಕಿ, ನಂತರ ಉಪ್ಪು, ಅರಿಶಿಣ ಪುಡಿ ಸೇರಿಸಿ ಮಾವಿನಕಾಯಿ
ಸ್ವಲ್ಪ ಮೆತ್ತಗಾಗುವವರೆಗೆ ಫ್ರೈ ಮಾಡಿ,
ನಂತರ ಅನ್ನ ಹಾಕಿ ಮಿಕ್ಸ್ ಮಾಡಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ, 10 ನಿಮಿಷ
ಬಿಟ್ಟು ಸರ್ವ್ ಮಾಡಿ, ಅನ್ನಕ್ಕೆ ಮಾವಿನಕಾಯಿ ಹುಳಿ ಚೆನ್ನಾಗಿ ಹಿಡಿದಿರುತ್ತದೆ,
ರುಚಿ ಸೂಪರ್.
ಹಸಿ ಮಾವಿನಕಾಯಿ ಆರೋಗ್ಯಕರ ಪ್ರಯೋಜನಗಳು
ಮೈ ಉಷ್ಣತೆ ಕಡಿಮೆ ಮಾಡುತ್ತದೆ: ಈ ಬೇಸಿಗೆಯನ್ನು ಮಾವಿನಕಾಯಿ ತಿಂದರೆ ಮೈ ಉಷ್ಣಾಂಶ ಕಡಿಮೆಯಾಗುವುದು. ಇದು ದೇಹದಲ್ಲಿ ನೀರಿನಂಶ ಕಡಿಮೆಯಾಗುವುದನ್ನು ತಡೆಗಟ್ಟುತ್ತದೆ, ಬೇಸಿಗೆಯಲ್ಲಿ ದೇಹದಲ್ಲಿ ಸೋಡಿಯಂ ಬ್ಯಾಲೆನ್ಸ್ ಮಾಡಲು ಸಹಕಾರಿ.
ಜೀರ್ಣಕ್ರಿಯೆಗೆ ಒಳ್ಳೆಯದು
ಮಾವಿನಕಾಯಿ ತಿಂದರೆ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು, ಮಲಬದ್ಧತೆ, ಅಜೀರ್ಣ,
ಅಸಿಡಿಟಿ, ಎದೆಯುರಿ ಈ ಬಗೆಯ ಸಮಸ್ಯೆ ತಡೆಗಟ್ಟಲು ಸಹಕಾರಿ.
ಹೃದಯದ ಆರೋಗ್ಯಕ್ಕೆ ಒಳ್ಳೆಯದು
ಮಾವಿನಕಾಯಿಯಲ್ಲಿ ವಿಟಮಿನ್ ಬಿ ಇದ್ದು ಹೃದಯದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು,
ಇದು ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಡುತ್ತದೆ, ರಕ್ತ ಸಂಚಾರಕ್ಕೆ ಸಹಕಾರಿ,
ರಕ್ತದೊತ್ತಡ ನಿಯಂತ್ರಣದಲ್ಲಿಡಲು ಸಹಕಾರಿ.
ಲಿವರ್ನ ಆರೋಗ್ಯಕ್ಕೆ ಒಳ್ಳೆಯದು
ಮಾವಿನಕಾಯಿ ಲಿವರ್ನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು, ಇದು ಲಿವರ್ನ
ಡಿಟಾಕ್ಸ್ ಮಾಡುವುದು, ಇದರಿಂದ ಲಿವರ್ನ ಆರೋಗ್ಯ ಹೆಚ್ಚಾಗುವುದು.
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಮಾವಿನಕಾಯಿಯಲ್ಲಿ ವಿಟಮಿನ್ ಸಿ ಇರುವುದರಿಂದ ಹೃದಯದ ಆರೋಗ್ಯಕ್ಕೆ ತುಂಬಾನೇ
ಒಳ್ಳೆಯದು, ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು, ಪ್ರೋಸ್ಟೇಟ್ ಕ್ಯಾನ್ಸರ್
ತಡೆಗಟ್ಟಲು ಸಹಕಾರಿ. ಅಲ್ಲದೆ ಸ್ನಾಯು ಸೆಳೆತ ತಡೆಗಟ್ಟಲು ಸಹಕಾರಿ.
ಯಾವ ಮಾವಿನಕಾಯಿ ಬಳಸುವುದು ಒಳ್ಳೆಯದು
ಮಾವಿನಕಾಯಿ ಅನ್ನ ಮಾಡಲು ನೀವು ಸ್ವಲ್ಪ ಹುಳಿ ಇರುವ ಮಾವಿನಕಾಯಿ ಬಳಸಬೇಕು, ತುಂಬಾ
ಬಲಿತಿರಬಾರದು, ಮಿಡಿಯೂ ಆಗಿಬಾರದು, ಆವಾಗ ಮಾತ್ರ ರುಚಿ ಸೂಪರ್ ಆಗಿರುತ್ತದೆ,
ಹುಳಿ ಹದವಾಗಿರುತ್ತದೆ, ತುಂಬಾ ಬಲಿತಿದ್ದರೆ ಹುಳಿ ಕಡಿಮೆಯಾಗುವುದು.
ಈ ಮಾವಿನಕಾಯಿ ಚಿತ್ರಾನ್ನವನ್ನು ನೀವು ಮಾಡಿದ ಸ್ವಲ್ಪ ಹೊತ್ತಿನಲ್ಲಿಯೇ ಸೇವಿಸಿ, ಟಿಫನ್ಗೆ ತಗೊಂಡು ಹೋಗುವುದಾದರೆ ಹುಳಿ ಹೆಚ್ಚಾಗುವ ಸಾಧ್ಯತೆ ಇದೆ, ಇದನ್ನು ಫ್ರೆಷ್ ಆಗಿ ಸ್ವಲ್ಪ ಬಿಸಿ ಬಿಸಿ ಇರುವಾಗಲೇ ಸೇವಿಸಿದರೆ ರುಚಿ.
ನೀವು ಕಾಡು ಮಾವಿನಕಾಯಿ ಸಿಕ್ಕರೆ ಅದನ್ನು ಬಳಸಬಹುದು, ರುಚಿ ಭಿನ್ನವಾಗಿರುತ್ತದೆ, ಒಂದೊಂದು ಬಗೆಯ ಮಾವಿನಕಾಯಿ ಒಂದೊಂದು ರೀತಿಯ ರುಚಿ ನೀಡುವುದರಿಂದ ಈ ರೆಸಿಪಿ ನಿಮಗೆ ಬೋರಾಗುವುದೇ ಇಲ್ಲ.



Click it and Unblock the Notifications