Latest Updates
-
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ!
ಹಲಸಿನ ತೊಳೆ ಸಾರು: ಈ ಸೀಸನ್ನಲ್ಲಿ ಟ್ರೈ ಮಾಡಿದ್ದರೆ ಇನ್ಯಾವ್ಯಾಗ ಅಲ್ವಾ?
ದಿನಾ ಒಂದೇ ತರದ್ ಸಾರು ಸಾಂಬಾರ್ ತಿಂದು ಬೇಜಾರಾಗಿದ್ಯಾ? ಏನಾದ್ರೂ ಹೊಸತನ್ ಟ್ರೈ ಮಡ್ಬೇಕು ಅಂತಿದೀರಾ? ಹಾಗೇನಾದ್ರೂ ಇದ್ರೆ ಈ ರೆಸಿಪಿ ನಿಮಗಾಗಿ. ಈಗಂತೂ ಹಲಸಿನ ಸೀಸನ್.
ಸಾಮಾನ್ಯವಾಗಿ ಹಳ್ಳಿಯಲ್ಲಿ ಬೇಕಾದಷ್ಟು ಹಲಸಿನ ಕಾಯಿ, ಹಲಸಿನ ಹಣ್ಣು ಸಿಗತ್ತೆ. ಹಾಗಂತ ಸಿಟಿಯಲ್ಲೂ ಏನ್ ಕಡಿಮೆ ಇಲ್ಲ, ದಾರಿ ಬದಿಯಲ್ಲಿ ರಾಶಿ ರಾಶಿ ಹಲಸನ್ನು ನೋಡಬಹುದು. ಸೂಪರ್ ಮಾರ್ಕೆಟ್ ನಲ್ಲೂ ಖರೀದಿಸಬಹುದು.

ಈ ಹಲಸಿನ ಕಾಯಿ ಅಥವಾ ಹಣ್ಣಿನಿಂದ ಮಾಡುವ ಅಡುಗೆ ಪದಾರ್ಥ ಅಥವಾ ಖಾದ್ಯವನ್ನು ಜನ ಚಪ್ಪರಿಸಿಕೊಂಡು ತಿನ್ನುತ್ತಾರೆ. ಈ ಸಲ ಉತ್ತರ ಕನ್ನಡದ ಸ್ಪೆಷಲ್ ಹಲಸಿನ ತೊಳೆ ಸಾರನ್ನು ಟ್ರೈ ಮಾಡಿ ನೋಡಿ. ಪಟ್ ಅಂತ ರೆಡಿ ಮಾಡ್ಬೌದು. ಟೆಸ್ಟ್ ಅಂತೂ ಅದ್ಭುತ. ಮಾಡುವ ವಿಧಾನ ಮತ್ತು ಬೇಕಾಗುವ ಸಾಮಗ್ರಿಗಳು ಹೀಗಿವೆ.

ಬೇಕಾಗುವ ಸಾಮಗ್ರಿಗಳು
ಹಲಸಿನ ತೊಳೆ - ಒಂದು ಚಿಕ್ಕ ಬೌಲ್
ಹಲಸಿನ ಬೀಜ - 10-12
ಕಾಯಿತುರಿ - ಸ್ವಲ್ಪ
ಕೊತ್ತಂಬರಿ ಸೊಪ್ಪು - ಒಂದು ಹಿಡಿಯಷ್ಟು
ಸಣ್ಣ ಮೆಣಸು ಅಥವಾ ಸಾಮಾನ್ಯ ಹಸಿರು ಮೆನಸಿನ ಕಾಯಿ - ಖಾರಕ್ಕೆ ತಕ್ಕಷ್ಟು
ಬೆಳ್ಳುಳ್ಳಿ ಎಸಳು - 5-10
ಅರಿಶಿಣ ಹುಡಿ - ಚಿಟಿಕೆ
ಉದ್ದಿನ ಬೇಳೆ - ಒಂದು ಚಮಚ
ಜೀರಿಗೆ - ಅರ್ಧ ಚಮಚ
ಸಾಸಿವೆ - ಅರ್ಧ ಚಮಚ
ಕರಿಬೇವು - ಸ್ವಲ್ಪ
ಕೊಬ್ಬರಿ ಎಣ್ಣೆ ಒಗ್ಗರಣ್ಗೆ
ನಿಂಬೆ ಹಣ್ಣಿನ ರಸ - ಒಂದು ಚಮಚ
ಮಾಡುವ ವಿಧಾನ
ಮೊದಲು ಹಲಸಿನ ತೊಳೆ ಮತ್ತು ಹಲಸಿನ ಬೀಜವನ್ನು ಬಿಡಿಸಿ ಇಟ್ಟುಕೊಳ್ಳಿ. ಹಲಸಿನ ಬೀಜವನ್ನು ಸ್ವಲ್ಪ ಜಜ್ಜಿ ಇಟ್ಟುಕೊಳ್ಳಿ. ಬೇಯಿಸಲು ಸುಲಭವಾಗುತ್ತದೆ. ಈಗ ಒಂದು ಪಾತ್ರೆ ಯಲ್ಲಿ ಎಣ್ಣೆ ಹಾಕಿ. ಅದು ಬಿಸಿ ಆದಾಗ ಒಂದು ಟೀ ಸ್ಪೂನ್ ಉದ್ದಿನ ಬೆಳೆ ಸ್ವಲ್ಪ ಜೀರಿಗೆ , ಸ್ವಲ್ಪ ಸಾಸಿವೆ ಹಾಕಬೇಕು. ಸಾಸಿವೆ ಸಿಡಿದಾಗ ಸ್ವಲ್ಪ ಕರಿಬೇವಿನ ಎಲೆ ಹಾಕಿ. ನಂತರ ಜಜ್ಜಿಟ್ಟುಕೊಂಡ ಹಲಸಿನ ಬೀಜವನ್ನು ಹಾಕಿ ಸ್ವಲ್ಪ ಹುರಿಯಬೇಕು.
ಈಗ ಬಿಡಿಸಿಟ್ಟ ಹಲಸಿನ ತೊಳೆಗಳನ್ನು ಹಾಕಿ ಸ್ವಲ್ಪ ನೀರನ್ನು ಹಾಕಿ ಕುದಿಯಲು ಬಿಡಿ. ನೀರು ಕುದಿಯುತ್ತಿರುವಾಗ ಒಂದು ಚಿಟಿಕೆ ಅರಿಶಿಣ ಸೇರಿಸಿ. ಜೊತೆಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಈಗ ಒಂದು ಮಿಕ್ಸಿ ಜಾರಿಗೆ ಕಾಯಿತುರಿ, ಬೆಳ್ಳುಳ್ಳಿ ಎಸಳು, ಕೊತ್ತೊಂಬರಿ ಸೊಪ್ಪು, ಮೆಣಸನ್ನು ಹಾಕಿ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿದ ಮಿಶ್ರಣವನ್ನು ಕುದಿಯುತ್ತಿರುವ ಹಲಸಿನ ತೊಳೆ ಮತ್ತು ಬೀಜ ಮಿಶ್ರಣಕ್ಕೆ ಸೇರಿಸಿ. ಮಿಶ್ರಣ ತುಂಬಾ ಗಟ್ಟಿಯಾಗಿ ಇರಬಾರದು . ಸ್ವಲ್ಪ ತೆಳ್ಳಗೆ ಇರುವಂತೆ ನೋಡಿಕೊಳ್ಳಿ. ಚೆನ್ನಾಗಿ ಕುದಿದ ನಂತರ ಇದಕ್ಕೆ ನಿಂಬೆ ಹಣ್ಣಿನ ರಸವನ್ನು ಸೇರಿಸಿ. ತಕ್ಷಣ ಗ್ಯಾಸ್ ಆಫ್ ಮಾಡಿ. ಸ್ವಲ್ಪ ಹುಳಿ ಜಾಸ್ತಿ ಇದ್ದರೆ ಈ ಸಾರು ತುಂಬಾ ಚೆನ್ನಾಗಿ ಇರುತ್ತದೆ. ಇದನ್ನು ಹಾಗೆ ಬಿಸಿ ಬಿಸಿಯಾಗಿ ಕುಡಿಯಲುಬಹುದು. ಅಥವಾ ಅನ್ನದ ಜೊತೆ ಊಟ ಮಾಡಲು ಬಳಸಬಹುದು.



Click it and Unblock the Notifications