Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಆಹಾ! ಸವಿರುಚಿಯ ಹಲಸಿನಕಾಯಿ ಬಜ್ಜಿ ರೆಸಿಪಿ
ಹಲಸಿನಕಾಯಿ ಸಮಯದಲ್ಲಿ ಅದರಿಂದ ತರಾವರಿ ಖಾದ್ಯ ಮಾಡಿ ಸವಿಯಬಹುದು. ಹಲಸಿನ ತೊಳೆ ಆಗುವ ಮುಂಚೆ ಕಿತ್ತು ಅದರಿಂದ ಬಜ್ಜಿ, ಗೊಜ್ಜು, ಸಾರು ಅಂತ ಮಾಡಿ ಸವಿಯಬಹುದು.
ಬಲಿತಿರದ ಹಲಸಿನಕಾಯಿಯನ್ನು ಗುಜ್ಜೆ ಎನ್ನುತ್ತಾರೆ. ಗುಜ್ಜೆಯಿಂದ ಸಾರು ಮಾಡಿದರೆ ಬಾಯಿ ಚಪ್ಪರಿಸಿಕೊಂಡು ಸವಿಯಬಹುದು, ಇನ್ನು ಪಲ್ಯ ಮಾಡಿದರೆ ರುಚಿಯಾಗಿರುತ್ತದೆ, ಇನ್ನು ಸ್ನ್ಯಾಕ್ಸ್ ಮಾಡಲಂತೂ ಸೂಪರ್.

ಗುಜ್ಜೆಯ ಸ್ನ್ಯಾಕ್ಸ್ ಸುಲಭವಾಗಿ ಮಾಡಬಹುದು, ಮನೆ ಮಂದಿಗೆಲ್ಲಾ ಇಷ್ಟವಾಗುವುದರಲ್ಲಿ ನೋ ಡೌಟ್. ಹಲಸಿನಕಾಯಿಯಿಂದ ಮಾಡು ವ ಸ್ನ್ಯಾಕ್ಸ್ ಅನ್ನು ಬೆಂಗಳೂರು ಕಡೆ ಹಲಸಿನಕಾಯಿ ಬಜ್ಜಿ ಅಂದ್ರೆ, ಮಂಗಳೂರು ಕಡೆ ಹಲಸಿನಕಾಯಿ ಪೋಡಿ ಅಂತಾರೆ. ಇದನ್ನು ಮಾಡುವ ವಿಧಾನವನ್ನು ಸ್ಟೆಪ್ ಬೈ ಸ್ಟೆಪ್ ಹೇಳಲಾಗಿದೆ ನೋಡಿ:
Recipe By: Reena TK
Recipe Type: Snacks
Serves: 4
-
ಬೇಕಾಗುವ ಸಾಮಗ್ರಿ
ಗುಜ್ಜೆ ಅಥವಾ ಬಲಿತಿರದ ಹಲಸಿನಕಾಯಿ 1
ಅರ್ಧ ಕಪ್ ಕಡಲೆ ಹಿಟ್ಟು
1 ಚಮಚ ಖಾರದ ಪುಡಿ
1/4 ಚಮಚ ಗರಂ ಮಸಾಲೆ ಪುಡಿ
1/4 ಚಮಚ ಜೀರಿಗೆ ಪುಡಿ
ರುಚಿಗೆ ತಕ್ಕ ಉಪ್ಪು
ಸ್ವಲ್ಪ ನೀರು
ಎಣ್ಣೆ
-
{video1}ಮಾಡುವ ವಿಧಾನ
* ಬಲಿತಿರದ ಹಲಸಿನಕಾಯಿ ತೆಗೆದು ಅದರ ಸಿಪ್ಪೆ ಸುಲಿಯಬೇಕು (ಗುಜ್ಜೆ ಮಾಡಲು ಹದವಾದ ಹಲಸಿನಕಾಯಿ)
* ನಂತರ ಚಿಕ್ಕದಾಗಿ , ತೆಳುವಾಗಿ ಕತ್ತರಿಸಿ
* ಒಂದು ಬೌಲ್‌ನಲ್ಲಿ ಅರ್ಧ ಕಪ್ ಕಡ್ಲೆ ಹಿಟ್ಟು, 1 ಚಮಚ ಖಾರದ ಪುಡಿ, 1/4 ಚಮಚ ಗರಂ ಪುಡಿ, 1/4 ಚಮಚ ಜೀರಿಗೆ ಪುಡಿ, ಸ್ವಲ್ಪ ಅರಿಶಿಣ ಪುಡಿ, ರುಚಿಗೆ ತಕ್ಕ ಉಪ್ಪು ಸೇರಿಸಿ, ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ಕಲೆಸಿ.
* ಅದಕ್ಕೆ ಕತ್ತರಿಸಿದ ಹಲಸಿನಕಾಯಿ ಹಾಕಿ ಮಿಕ್ಸ್ ಮಾಡಿ.
* ದಪ್ಪ ತಳವಿರುವ ಪಾತ್ರೆಗೆ ಎಣ್ಣೆ ಹಾಕಿ ಕಾಯಿಸಿ, ಎಣ್ಣೆ ಕಾದಾಗ ಮಿಕ್ಸ್ ಮಾಡಿಟ್ಟ ಹಲಸಿನಕಾಯಿ ಹಾಕಿಮ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ.
* ನಂತರ ಎಣ್ಣೆಯಿಂದ ತೆಗೆದು ತಟ್ಟೆ ಅಥವಾ ಬೌಲ್‌ಗೆ ಹಾಕಿ.
* ಬಿಸಿ- ಬಿಸಿಯಾದ ಹಲಸಿನಕಾಯಿ ಬಜ್ಜಿ ಅಥವಾ ಹಲಸಿನಕಾಯಿ ಪೋಡಿ ಸವಿಯಲು ರೆಡಿ.
- ಹಲಸಿನಕಾಯಿ ಬಜ್ಜಿ ಮಾಡುವಾಗ ಹಲಸಿನಕಾಯಿ ಬಲಿತಿರಬಾರದು, ತುಂಬಾ ಚಿಕ್ಕ ಕಾಯಿಯನ್ನು ಆಯ್ಕೆ ಮಾಡಿ.
- ಸರ್ವ್ - 4
- ಕ್ಯಾಲೋರಿ - 157
- ಕೊಬ್ಬು - 1.06 ಗ್ರಾಂ
- ಪ್ರೊಟೀನ್ - 2.84 ಗ್ರಾಂ
- ಕಾರ್ಬೋಹೈಡ್ರೇಟ್ಸ್ - 38.36ಗ್ರಾಂ
- ನಾರಿನಂಶ - 2.5 ಗ್ರಾಂ
ಮಾಡುವ ವಿಧಾನ
* ಬಲಿತಿರದ ಹಲಸಿನಕಾಯಿ ತೆಗೆದು ಅದರ ಸಿಪ್ಪೆ ಸುಲಿಯಬೇಕು (ಗುಜ್ಜೆ ಮಾಡಲು ಹದವಾದ
ಹಲಸಿನಕಾಯಿ)
* ನಂತರ ಚಿಕ್ಕದಾಗಿ , ತೆಳುವಾಗಿ ಕತ್ತರಿಸಿ









Click it and Unblock the Notifications
