Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ರವೆ ಟೋಸ್ಟ್ ರೆಸಿಪಿ
ರವೆಯಿಂದ ವಿವಿಧ ಬಗೆಯ ತಿಂಡಿ-ತಿನಿಸುಗಳನ್ನು ತಯಾರಿಸಬಹುದು. ರವೆ ಬೆಳಗಿನ ಉಪಹಾರ ಹಾಗೂ ಕುರುಕಲು ತಿಂಡಿಯನ್ನು ತಯಾರಿಸುವಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ರವೆಯಲ್ಲಿ ಸೂಜಿ ರವೆ, ದಪ್ಪ ರವೆ ಸೇರಿದಂತೆ ವಿವಿಧ ಬಗೆಯ ರವೆ ಇರುವುದನ್ನು ಕಾಣಬಹುದು. ಖಾದ್ಯಗಳ ತಯಾರಿಕೆಗೆ ಅನುಗುಣವಾಗಿ ವಿವಿಧ ಬಗೆಯ ರವೆಯ ಬಳಕೆಯನ್ನು ಮಾಡಲಾಗುವುದು. ರವೆಯೊಂದಿಗೆ ವಿವಿಧ ಬಗೆಯ ತರಕಾರಿಗಳನ್ನು ಸೇರಿಸಿ ವಿವಿಧ ಖಾದ್ಯಗಳನ್ನು ತಯಾರಿಸಬಹುದು. ಅಂತಹ ತಿಂಡಿಗಳಲ್ಲಿ ರವೆ ಟೋಸ್ಟ್ ಸಹ ಒಂದು.
ರವೆಯಲ್ಲಿ ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಸಿ, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಸೋಡಿಯಂ ಗುಣ ಗಳಿರುವುದನ್ನು ಕಾಣಬಹುದು. ಆರೋಗ್ಯಕರವಾದ ಈ ಉತ್ಪನ್ನದಿಂದ ವಿಶೇಷ ಬಗೆಯ ಟೋಸ್ಟ್ ತಯಾರಿಸಬಹುದು. ಫ್ರೆಂಚ್ ಶೈಲಿಯ ಟೋಸ್ಟ್ ಕಾಫಿ, ಟೀ, ಸೇರಿದಂತೆ ಮನಸ್ಸಿಗೆ ಹಿತವೆನಿಸಿದಾಗಲೆಲ್ಲಾ ಸೇವಿಸಬಹುದು. ರುಚಿಕರವಾದ ಹಾಗೂ ಗರಿಗರಿಯಾದ ಟೋಸ್ಟ್ ನಾಲಿಗೆ ರುಚಿಯನ್ನು ಹೆಚ್ಚಿಸುವುದು.
ಒಮ್ಮೆ ಸವಿದರೆ ಮತ್ತೆ ಮತ್ತೆ ತಿನ್ನಬೇಕು ಎನ್ನುವ ಬಯಕೆಯನ್ನು ಕೆರಳಿಸುವ ಈ ತಿಂಡಿಯನ್ನು ತಯಾರಿಸುವ ವಿಧಾನ ಬಲು ಸುಲಭ. ಬಿಡುವಿನ ಸಮಯದಲ್ಲಿ, ಸ್ನೇಹಿತರ ಆಗಮನದ ಸಂದರ್ಭದಲ್ಲಿ ಸೇರಿದಂತೆ ಇನ್ನಿತರ ಸಂದರ್ಭಗಳಲ್ಲಿ ಬಹಳ ಸರಳ ಹಾಗೂ ಸುಲಭ ವಿಧಾನದಲ್ಲಿ ತಯಾರಿಸಬಹುದು. ನಿಮಗೂ ಈ ಪಾಕವಿಧಾನದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕು ಎಂದಾದರೆ ಈ ಮುಂದೆ ವಿವರಿಸಲಾದ ವೀಡಿಯೋ ಹಾಗೂ ಹಂತ ಹಂತವಾದ ಚಿತ್ರವಿವರಣೆಯನ್ನು ಪರಿಶೀಲಿಸಿ.

Recipe By: ಬೋಲ್ಡ್ ಸ್ಕೈ ಟೀಮ್
Recipe Type: ಉಪಹಾರ/ಕುರುಕಲು ತಿನಿಸು
Serves: 2
-
* ಬ್ರೆಡ್ ಸ್ಲೈಸ್ - 8-10
* ಸೂಜಿ ರವೆ - 150 ಗ್ರಾಂ.
* ಮೊಸರು - 100 ಗ್ರಾಂ.
* ನೀರು - ಅಗತ್ಯಕ್ಕೆ ತಕ್ಕಷ್ಟು
* ಕಪ್ಪು ಕಾಳಮೆಣಸು- 1/2 ಟೇಬಲ್ ಚಮಚ
* ಉಪ್ಪು - ರುಚಿಗೆ ತಕ್ಕಷ್ಟು.
* ಸಕ್ಕರೆ - 1 ಟೇಬಲ್ ಚಮಚ.
* ದೊಡ್ಡ ಗಾತ್ರದ ಈರುಳ್ಳಿ- 1 ಹೆಚ್ಚಿರುವುದು.
* ದೊಡ್ಡ ಗಾತ್ರದ ಟೊಮ್ಯಾಟೋ - 1 ಹೆಚ್ಚಿರುವುದು.
* ಹಸಿಮೆಣಸು- ಸ್ವಲ್ಪ
* ಕ್ಯಾಪ್ಸಿಕಮ್ - 1/2 ಕಪ್
* ಕೊತ್ತಂಬರಿ ಸೊಪ್ಪು -ಅಗತ್ಯಕ್ಕೆ ತಕ್ಕಷ್ಟು.
* ಬೆಣ್ಣೆ/ತುಪ್ಪಾ - ಅಗತ್ಯಕ್ಕೆ ತಕ್ಕಷ್ಟು.
-
1. ಒಂದು ಬೌಲ್‍ಅಲ್ಲಿ ಮೊಸರು, ಕರಿಮೆಣಸಿನ ಕಾಳು, ಸೂಜಿ ರವೆ, ಉಪ್ಪು ಮತ್ತು ಸಕ್ಕರೆ ಸೇರಿಸಿ.
2. ಎಲ್ಲವನ್ನೂ ಸೇರಿಸಿ ಮಿಶ್ರಗೊಳಿಸಿ ಹತ್ತು ನಿಮಿಷಗಳ ಕಾಲ ವಿಶ್ರಮಿಸಲು ಬಿಡಿ.
3. ಹೆಚ್ಚಿಕೊಂಡ ಈರುಳ್ಳಿ, ಟೊಮ್ಯಾಟೋ, ಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು ಎಲ್ಲವನ್ನೂ ಸೇರಿಸಿ ಮಿಶ್ರಗೊಳಿಸಿ.
4. ಮಿಶ್ರಣವನ್ನು ಬ್ರೆಡ್‍ನ ಸ್ಲೈಸ್ ಮೇಲೆ ಹರಡಿ.
5. ದಪ್ಪ ತಳದ ಪಾತ್ರೆಯಲ್ಲಿ ತುಪ್ಪ ಅಥವಾ ಬೆಣ್ಣೆಯನ್ನು ಸೇರಿಸಿ.
6. ಬ್ರೆಡ್ ಸ್ಲೈಸ್ ಅನ್ನು ಎರಡು ಬದಿಯಲ್ಲೂ ಹೊಂಬಣ್ಣ ಬರುವವರೆಗೆ ಹುರಿಯಬೇಕು.
7. ತ್ರಿಭುಜಾಕೃತಿಯಲ್ಲಿ ಕತ್ತರಿಸಿ, ಬಿಸಿ ಇರುವಾಗಲೇ ಸವಿಯಲು ನೀಡಿ.
- ತಿಂಡಿಯಲ್ಲಿ ಹೆಚ್ಚಿನ ಪೋಷಕಾಂಶವನ್ನು ಪಡೆಯಲು ಹೆಚ್ಚಿನ ತರಕಾರಿಯನ್ನು ಸೇರಿಸಬಹುದು.
- ಬ್ರೆಡ್‍ನ ಎರಡೂ ಬದಿಯಲ್ಲಿ ಅತಿಯಾಗಿ ಮಿಶ್ರಣವನ್ನು ಸೇರಿಸದಿರಿ. ಜೊತೆಗೆ ಎರಡೂ ಬದಿಯಲ್ಲೂ ಚೆನ್ನಾಗಿ ಬೇಯಿಸಿ.
- ಕ್ಯಾಲೋರಿ - 72 ಕ್ಯಾಲ್
- ಕೊಬ್ಬು - 3.1 ಗ್ರಾಂ.
- ಪ್ರೋಟೀನ್ - 1.6 ಗ್ರಾಂ.
- ಕಾರ್ಬೋಹೈಡ್ರೇಟ್ - 8.9 ಗ್ರಾಂ.
- ಫೈಬರ್ - 0.4 ಗ್ರಾಂ.
ಹಂತ ಹಂತವಾದ ಚಿತ್ರ ವಿವರಣೆ:
1. ಒಂದು ಬೌಲ್‍ಅಲ್ಲಿ ಮೊಸರು, ಕರಿಮೆಣಸಿನ ಕಾಳು, ಸೂಜಿ ರವೆ, ಉಪ್ಪು ಮತ್ತು ಸಕ್ಕರೆ ಸೇರಿಸಿ.



2. ಎಲ್ಲವನ್ನೂ ಸೇರಿಸಿ ಮಿಶ್ರಗೊಳಿಸಿ ಹತ್ತು ನಿಮಿಷಗಳ ಕಾಲ ವಿಶ್ರಮಿಸಲು ಬಿಡಿ.



3. ಹೆಚ್ಚಿಕೊಂಡ ಈರುಳ್ಳಿ, ಟೊಮ್ಯಾಟೋ, ಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು ಎಲ್ಲವನ್ನೂ ಸೇರಿಸಿ ಮಿಶ್ರಗೊಳಿಸಿ.



4. ಮಿಶ್ರಣವನ್ನು ಬ್ರೆಡ್‍ನ ಸ್ಲೈಸ್ ಮೇಲೆ ಹರಡಿ.




5. ದಪ್ಪ ತಳದ ಪಾತ್ರೆಯಲ್ಲಿ ತುಪ್ಪ ಅಥವಾ ಬೆಣ್ಣೆಯನ್ನು ಸೇರಿಸಿ.



6. ಬ್ರೆಡ್ ಸ್ಲೈಸ್ ಅನ್ನು ಎರಡು ಬದಿಯಲ್ಲೂ ಹೊಂಬಣ್ಣ ಬರುವವರೆಗೆ ಹುರಿಯಬೇಕು.




7. ತ್ರಿಭುಜಾಕೃತಿಯಲ್ಲಿ ಕತ್ತರಿಸಿ, ಬಿಸಿ ಇರುವಾಗಲೇ ಸವಿಯಲು ನೀಡಿ.









Click it and Unblock the Notifications
