Latest Updates
-
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ!
ಶ್ರೀ ಕೃಷ್ಣನಿಗೆ ನೈವೇದ್ಯಕ್ಕೆ ರವೆ ಉಂಡೆ ರೆಸಿಪಿ
ಕೃಷ್ಣ ಜನ್ಮಾಷ್ಟಮಿ ಎಂದರೆ ಸಡಗರದ ಹಬ್ಬ, ಈ ಹಬ್ಬದಂದು ಮುದ್ದು ಕೃಷ್ಣನಿಗೆ ಅಲಂಕಾರ ಮಾಡಿ ತೊಟ್ಟಿಲಿನಲ್ಲಿಟ್ಟು ಪೂಜಿಸಿ ನಂತರ 5 ಅಥವಾ ಅದಕ್ಕಿಂತ ಹೆಚ್ಚಿನ ಬಗೆಯ ಸಿಹಿ ತಿನಿಸುಗಳನ್ನು ಮಾಡಿ ನೈವೇದ್ಯವಾಗಿ ಇಡಲಾಗುವುದು.

ಕೃಷ್ಣಾಷ್ಟಮಿಗೆ ಸಾಮಾನ್ಯವಾಗಿ ರವೆ ಲಡ್ಡು, ಡ್ರೈ ಫ್ರೂಟ್ಸ್ ಲಡ್ಡು, ಚಕ್ಕುಲಿ, ಕಡಲೆಕಾಳಿನ ಲಡ್ಡು ಹೀಗೆ ವಿವಿಧ ಬಗೆಯ ತಿನಿಸುಗಳನ್ನು ಮಾಡಲಾಗುವುದು. ಇಲ್ಲಿ ನಾವು ಸುಲಭವಾಗಿ ಮಾಡಬಹುದಾದ ರವೆ ಲಡ್ಡು ರೆಸಿಪಿ ನೀಡಿದ್ದೇವೆ ನೋಡಿ:
Recipe By: Reena TK
Recipe Type: Sweet
Serves: 4
-
ಬೇಕಾಗುವ ಸಾಮಗ್ರಿ
ತುಪ್ಪ ಅರ್ಧ ಕಪ್
ಒಣ ದ್ರಾಕ್ಷಿ 1/4 ಕಪ್
ಗೋಡಂಬಿ 1/4 ಕಪ್
ಸಣ್ಣ ರವೆ ಅಥವಾ ಸೂಜಿ ರವೆ 1/2 ಬೌಲ್
ಸಕ್ಕರೆ 1 ಕಪ್
ಒಣಕೊಬ್ಬರಿ 3/4 ಕಪ್
ಏಲಕ್ಕಿ 1-2
ಹಾಲು 3 ಚಮಚ
-
ಮಾಡುವ ವಿಧಾನ:
1. ಪ್ಯಾನ್‌ಗೆ ತುಪ್ಪ ಹಾಕಿ ಬಿಸಿ ಮಾಡಿ.
2. ಅದಕ್ಕೆ ದ್ರಾಕ್ಷಿ ಹಾಗೂ ಗೋಡಂಬಿ ಹಾಕಿ ಹುರಿದು ಒಂದು ಬೌಲ್‌ನಲ್ಲಿ ಹಾಕಿಡಿ.
3. ಉಳಿದ ತುಪ್ಪದಲ್ಲಿ ರವೆ ಹುರಿದು ಇಡಿ. ರವೆಯ ಹಸಿ ವಾಸನೆ ಹೋಗುವಷ್ಟು ಹೊತ್ತು ಹುರಿದು ಇಡಿ.
4.ಈಗ ಅರ್ಧ ಕಪ್ ತುಪ್ಪ ಹಾಕಿ ಅದರಲ್ಲಿ ಹುರಿದ ರವೆ ಮತ್ತೆ 2-3 ನಿಮಿಷ ಹುರಿಯಿರಿ, ನಂತರ ಸ್ಟೌವ್ ಆಫ್ ಮಾಡಿ ಇಡಿ.
5. ಇದೇ ಸಮಯದಲ್ಲಿ ಒಣ ಕೊಬ್ಬರಿಗೆ ಏಲಕ್ಕಿ, ಸಕ್ಕರೆ ಹಾಕಿ ಒಂದು ರೌಂಡ್ ರುಬ್ಬಿ, ಅದು ಸ್ವಲ್ಪ ಹುಡಿ-ಹುಡಿಯಾಗಿರಲಿ.
6. ರೋಸ್ಟ್ ಮಾಡಿದ ಸೂಜಿ ರವೆಯನ್ನು ದೊಡ್ಡ ಬೌಲ್ ಹಾಕಿ, ಅದರಲ್ಲಿ ಉಳಿದ ಸಾಮಗ್ರಿ ಹಾಕಿ, ಕೆನೆ ತೆಗೆದ ಹಾಲು ಹಾಕಿ ಮಿಶ್ರ ಮಾಡಿ.
7. ಈಗ ಅವುಗಳಿಂದ ಚಿಕ್ಕ-ಚಿಕ್ಕ ಉಂಡೆ ಕಟ್ಟಿದರೆ ರುಚಿಕರವಾದ ರವೆ ಲಡ್ಡು ರೆಡಿ.
- ಸೂಚನೆ: * ಕೊಬ್ಬರಿ ಹಾಗೇ ಹಾಕಬಹುದು, ಆದರೆ ಮಿಕ್ಸಿಯಲ್ಲಿ ರುಬ್ಬಿ ಹಾಕಿದರೆ ಲಡ್ಡು ಇನ್ನೂ ರುಚಿ ಅನಿಸುವುದು. * ರವೆ ಉಂಡೆಯನ್ನು ಮಿಶ್ರಣ ಬಿಸಿ-ಬಿಸಿ ಇರುವಾಗಲೇ ಕಟ್ಟಿ. * ಒಂದು ವೇಳೆ ಉಂಡೆ ಒಡೆದರೆ ಸ್ವಲ್ಪ ಹಾಲು ಕೂಡ ಸೇರಿಸಿ ಉಂಡೆ ಕಟ್ಟಿ.
- ಸರ್ವ್ : - 1 ಲಡ್ಡು
- ಕ್ಯಾಲೋರಿ: - 303 ಕ್ಯಾ
- ಕೊಬ್ಬಿನಂಶ: - 12 ಗ್ರಾಂ
- ಪ್ರೊಟೀನ್ - 3 ಗ್ರಾಂ
- ಕಾರ್ಬೋಹೈಡ್ರೇಟ್ಸ್: - 46 ಗ್ರಾಂ
- ಸಕ್ಕರೆ: - 29 ಗ್ರಾಂ
- ನಾರಿನಂಶ: - 1 ಗ್ರಾಂ



Click it and Unblock the Notifications