Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ನವರಾತ್ರಿ ಸ್ಪೆಷಲ್: ರಸಮಲೈ ರೆಸಿಪಿ
ನವರಾತ್ರಿಗೆ ಸ್ಪೆಷಲ್ ರೆಸಿಪಿ ಇಲ್ಲಿದೆ ನೋಡಿ...
ಸಿಹಿಯಾದ ಹಾಲಿನಲ್ಲಿ ಮುಳುಗಿ, ಕುಳಿತುಕೊಳ್ಳುವ ಸಿಹಿ ತಿಂಡಿಯೆಂದರೆ ರಸಮಲೈ. ಮಕ್ಕಳಿಂದ ಹಿಡಿದು ವಯಸ್ಕರು ಸಹ ಈ ಸಿಹಿಯನ್ನು ಸವಿಯಲು ಹಾತೊರೆಯುತ್ತಾರೆ. ನಾಲಿಗೆಗೆ ಹೆಚ್ಚು ಆಹ್ಲಾದ ನೀಡುವ ರಸಮಲೈ ಬಂಗಾಳಿಯ ವಿಶೇಷ ಸಿಹಿ ತಿಸಿಸು. ಇದನ್ನು ಹಬ್ಬ, ಉತ್ಸವ ಹಾಗೂ ಮನೆಯ ವಿಶೇಷ ಕಾರ್ಯಕ್ರಮದಲ್ಲಿ ತಯಾರಿಸುತ್ತಾರೆ.
ಹಾಲು, ಸಕ್ಕರೆ, ರಸಗುಲ್ಲಾಗಳ ಮಿಶ್ರಣದಲ್ಲಿ ತಯಾರಿಸಲಾಗುವ ರಸಮಲೈ ಆರೋಗ್ಯದ ದೃಷ್ಟಿಯಿಂದಲೂ ಉತ್ತಮವಾದದ್ದು. ಹಾಲಿನಲ್ಲಿ ನೆನೆದಿರುವ ಸ್ಪಂಜಿನ ಉಂಡೆಯಂತಿರುವ ರಸಮಲೈ ಅನ್ನು ಸವಿಯಲು ಹೆಚ್ಚು ಖುಷಿಯನ್ನು ನೀಡುತ್ತದೆ. ಊಟದ ಜೊತೆ ಇದನ್ನು ನೀಡುವುದರಿಂದ ಭಕ್ಷ್ಯದ ಸ್ವಾದ ಹೆಚ್ಚಿಸಬಹುದು.
ಭಾರತದಾದ್ಯಂತ ಹೆಚ್ಚು ಪ್ರಸಿದ್ಧಿ ಪಡೆದ ಈ ಸಿಹಿ ತಿಂಡಿಯನ್ನು ತಯಾರಿಸಲು ದೀರ್ಘಕಾಲ ತಗುಲುವುದು. ಮೊದಲು ರಸಗುಲ್ಲವನ್ನು ತಯಾರಿಸಿಕೊಂಡು ನಂತರ ರಸಮಲೈ ತಯಾರಿಸಬೇಕಾಗುವುದು. ಈ ಪಾಕವಿಧಾನ ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳುವುದಾದರೂ ಫಲಿತಾಂಶ ಹೆಚ್ಚು ಖುಷಿಯನ್ನು ನೀಡುವುದು. ಈ ತಿಂಡಿಯನ್ನು ನೀವು ಮನೆಯಲ್ಲಿ ಮಾಡಲು ಬಯಸುವುದಾದರೆ ಈ ಕೆಳಗೆ ನೀಡಿರುವ ವೀಡಿಯೋ ಹಾಗೂ ಹಂತ ಹಂತವಾದ ಚಿತ್ರವಿವರಣೆಯನ್ನು ಪರಿಶೀಲಿಸಬಹುದು.

Recipe By: ಮೀನಾ ಭಂಡಾರಿ
Recipe Type: ಸಿಹಿ ತಿಂಡಿ
Serves: 7-8 ರಸಮಲೈ
-
ಹಾಲು - 1, 3/4 ಲೀಟರ್
ಕೇಸರಿ ಎಳೆ - 4-5
ಸಕ್ಕರೆ - 6 ಟೇಬಲ್ ಚಮಚ + 1/2 ಕಪ್
ಬಾದಾಮಿ - 4
ಪಿಸ್ತಾ - 1 ಟೀ ಚಮಚ
ಸಿಟ್ರಿಕ್ ಆಮ್ಲದ ಹರಳು(ಸಿಟ್ರಿಕ್ ಆಸಿಡ್ ಕ್ರಿಸ್ಟಾಲ್) - 1/4 ಟೀ ಚಮಚ
ಐಸ್ ಹರಳು (ಐಸ್ ಕ್ಯೂಬ್ಸ್) - 1 ಕಪ್
ಕಾರ್ನ್ ಹಿಟ್ಟು - 1/4 ಟೀ ಚಮಚ
ನೀರು - 1 ಲೀಟರ್
ಗುಲಾಬಿ ನೀರು (ರೋಸ್ ವಾಟರ್) - 1 ಟೀ ಚಮಚ.
-
1. ಒಂದು ಪಾತ್ರೆಯಲ್ಲಿ ಒಂದು ಲೀಟರ್ ಹಾಲನ್ನು ಹಾಕಿ ಬಿಸಿ ಮಾಡಿ.
2. ಹಾಲು ಕುದಿಯುತ್ತಲೇ ಅರ್ಧದಷ್ಟು ಪ್ರಮಾಣಕ್ಕೆ ಕುಗ್ಗಲು ಮುಚ್ಚಳವನ್ನು ಮುಚ್ಚಿ, 7-10 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಬತ್ತಲು ಬಿಡಿ.
3. ಮುಚ್ಚಳವನ್ನು ತೆಗೆದು, ಮಲೈ ತಳ ಹಿಡಿಯದಂತೆ ಚೆನ್ನಾಗಿ ಕಲುಕಿ.
4. ಕೇಸರಿ ಎಳೆಯಯನ್ನು ಹಾಕಿ ಪುನಃ ಕಲುಕಿ.
5. 6 ಟೇಬಲ್ ಚಮಚ ಸಕ್ಕರೆಯನ್ನು ಸೇರಿಸಿ. ಸಕ್ಕರೆ ಕರಗುವವರೆಗೂ ಚೆನ್ನಾಗಿ ಕದಡುತ್ತಿರಿ.
6. ಪುನಃ ಮುಚ್ಚಳವನ್ನು ಮುಚ್ಚಿ, 5 ನಿಮಿಷ ಕುದಿಯಲು ಬಿಡಿ.
7. ಈ ಮಧ್ಯೆ, ಬಾದಾಮಿಯನ್ನು ತೆಳುವಾದ ಸ್ಲೈಸ್ನಂತೆ ಹೆಚ್ಚಿಕೊಳ್ಳಿ.
8. ಮುಚ್ಚಳವನ್ನು ತೆಗೆದು ಚೆನ್ನಾಗಿ ಕಲುಕಿ. ಹೀಗೆ ಮಾಡುವುದರಿಂದ ಮಲೈ ಪಾತ್ರೆಯ ಸುತ್ತ ಮತ್ತು ತಳ ಹಿಡಿಯದು.
9. 1,1/2 ಟೇಬಲ್ ಚಮಚ ಹೆಚ್ಚಿದ ಬಾದಾಮಿ ಸ್ಲೈಸ್ಗಳನ್ನು ಸೇರಿಸಿ.
10. ಹೆಚ್ಚಿಕೊಂಡ ಪಿಸ್ತವನ್ನು ಸೇರಿಸಿ.
11. ಚೆನ್ನಾಗಿ ಬೆರೆಸಿ ಒಂದೆಡೆ ಇಡಿ.
12. 3/4 ಲೀಟರ್ ಹಾಲನ್ನು ಒಂದು ಪಾತ್ರೆಗೆ ಹಾಕಿ ಬಿಸಿ ಮಾಡಿ.
13. 2-3 ನಿಮಿಷಗಳ ಕಾಲ ಕುದಿಸಿ, ನಂತರ ಉರಿಯನ್ನು ಆರಿಸಿ.
14. ಸಿಟ್ರಿಕ್ ಆಮ್ಲದ ಹರಳನ್ನು ಸೇರಿಸಿ.
15. 2-3 ನಿಮಿಷಗಳ ಕಾಲ ನಿರಂತರವಾಗಿ ಕಲುಕಿರಿ. ಇದರಿಂದ ಹಾಲು ಹೊಸರು ಒಡೆದಂತಾಗುವುದು.
16. ಹಾಲು ಮೊಸರೊಡೆದಂತಾದ ನಂತರ ಐಸ್ ಕ್ಯೂಬ್ಸ್ ಗಳನ್ನು ಸೇರಿಸಿ, ಅವು ಕರಗಲು ಬಿಡಿ.
17. ಒಂದು ಬೌಲ್ಅನ್ನು ತೆಗೆದುಕೊಂಡು ಅದರ ಮೇಲೆ ಅಡುಗೆ ಬಟ್ಟೆ/ಟವೆಲ್ಅನ್ನು ಇರಿಸಿ.
18. ಮೊಸರೊಡೆದ ಹಾಲನ್ನು ಟವೆಲ್ನ ಮೇಲೆ ಸುರಿಯಿರಿ.
19. ಟವೆಲ್ನ ಸುತ್ತಲ ತುದಿಯನ್ನು ಹಿಡಿದು ಮೇಲೆತ್ತಿ, ನೀರು ಬಸಿದು ಹೋಗುವಂತೆ ಮಾಡಿ.
20. ನಂತರ ಟವೆಲ್ಅನ್ನು ಮೇಲೆ 10 ನಿಮಿಷ ತೂಗಲು ಹಾಕಿ. ಹೀಗೆ ಮಾಡುವುದರಿಂದ ನೀರನ್ನು ಸಂಪೂರ್ಣವಾಗಿ ಬಸಿಯಬಹುದು.
21. ಟವೆಲ್ಅನ್ನು ಬಿಚ್ಚಿ ನೀರಿನಿಂದ ಬೇರ್ಪಟ್ಟ ಹೂರಣವನ್ನು ತೆಗೆಯಿರಿ.
22. ಅದನ್ನು ಮಿಕ್ಸರ್ ಪಾತ್ರೆಗೆ ವರ್ಗಾಯಿಸಿ.
23. ಕಾರ್ನ್ ಹಿಟ್ಟನ್ನು ಸೇರಿಸಿ ರುಬ್ಬಿ. ಅದು ಕಾಳುಕಾಳಾದ ಮಿಶ್ರಣದಂತೆ ಆಗುವುದು.
24. ಇದನ್ನು ಒಂದು ಪ್ಲೇಟಿಗೆ ವರ್ಗಾಯಿಸಿ.
25. ಅಂಗೈನಲ್ಲಿ ನಾದುವುದರ ಮೂಲಕ ಗಂಟು ಗಂಟಾಗುವುದನ್ನು ತಡೆಯಿರಿ.
26. ಒಂದು ಮೃದುವಾದ ಹಿಟ್ಟಿನ ಮಿಶ್ರಣವಾಗುವಂತೆ ನಾದಿ/ಕಲಸಿ.
27. ಸಮ ಪ್ರಮಾಣದಲ್ಲಿ ಹಿಟ್ಟನ್ನು ತೆಗೆದುಕೊಳ್ಳಿ.
28. ಅದನ್ನು ಚಿಕ್ಕ ಚಿಕ್ಕ ಉಂಡೆಯನ್ನಾಗಿ ಮಾಡಿ.
29. ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಕುದಿಯಲು ಇಡಿ.
30. 1/2 ಕಪ್ ಸಕ್ಕರೆಯನ್ನು ಸೇರಿಸಿ.
31. ಮುಚ್ಚಳವನ್ನು ಮುಚ್ಚಿ, ಸಕ್ಕರೆಯು ಕರಗಿ ಪಾಕಬರಲು 4-5 ನಿಮಿಷಗಳಕಾಲ ಕುದಿಯಲು ಬಿಡಿ.
32. ಪಾಕಕ್ಕೆ ಉಂಡೆಯನ್ನು ಸೇರಿಸಿ, ಪುನಃ ಮುಚ್ಚಳವನ್ನು ಮುಚ್ಚಿ.
33. 15 ನಿಮಿಷಗಳ ಕಾಲ ಬೇಯಲು ಬಿಡಿ.
34. ಗುಲಾಬಿ ನೀರನ್ನು ಸೇರಿಸಿ, 10 ನಿಮಿಷ ಆರಲು ಬಿಡಿ.
35. ಮಾಡಿಕೊಂಡ ಮಲೈ/ಹಾಲನ್ನು ಪುನಃ ಬಿಸಿಮಾಡಲು ಇಡಿ.
36. ರಸಗುಲ್ಲವನ್ನು ಮಲೈ/ಹಾಲಿನಲ್ಲಿ ಹಾಕಿ.
37. ದೊಡ್ಡ ಉರಿಯಲ್ಲಿ 2-3 ನಿಮಿಷ ಕುದಿಯಲು ಬಿಡಿ.
38. ಇದನ್ನು ಒಂದು ಬೌಲ್ಗೆ ವರ್ಗಾಯಿಸಿ.
39. 10 ನಿಮಿಷಗಳ ಕಾಲ ಆರಲು ಬಿಡಿ.
40. ಕಡಿಮೆ ಎಂದರೂ 2 ಗಂಟೆಗಳ ಕಾಲ ಫ್ರಿಜ್ನಲ್ಲಿ ಇಡಿ.
41. ತಂಪು ತಂಪಾಗಿರುವಾಗಲೇ ಸವಿಯಲು ನೀಡಿ.
- 1. ಮೊಸರು, ನಿಂಬೆ ರಸ ಅಥವಾ ವೆನೆಗರ್ ಬಳಸಿ ಹಾಲನ್ನು ಮೊಸರುಗೊಳಿಸಬಹುದು. ವಿನೆಗರ್ ಬಹಳ ಪ್ರಬಲವಾಗಿರುವುದರಿಂದ ಅದಕ್ಕೆ ಸ್ವಲ್ಪ ನೀರನ್ನು ಸೇರಿಸಿ ಪ್ರಬಲತೆಯನ್ನು ಕಡಿಮೆ ಮಾಡಿಕೊಳ್ಳಬೇಕು.
- 2. ರಸಗುಲ್ಲಾ ಉಂಡೆಗಳು ಒಡೆಯುವ ಸಾಧ್ಯತೆ ಇರುತ್ತವೆ. ಹಾಗಾಗಿ ಯಾವುದೇ ಬಿರುಕುಗಳಾಗದಂತೆ ಉಂಡೆ ಕಟ್ಟಿಕೊಳ್ಳಬೇಕು.
- 3. ಸಕ್ಕರೆ ಪಾಕವನ್ನು ದೊಡ್ಡ/ವಿಶಾಲವಾದ ಪಾತ್ರೆಯಲ್ಲಿ ಮಾಡಿ. ಇದರಿಂದ ರಸಗುಲ್ಲಾ ಉಂಡೆಯನ್ನು ಬೇಯಿಸಲು ಸುಲಭವಾಗುವುದು.
- 4. ಮಲೈ/ಹಾಲನ್ನು ದೊಡ್ಡ/ವಿಶಾಲವಾದ ಪಾತ್ರೆಯಲ್ಲಿ ಬಿಸಿ ಮಾಡಿ. ಇದರಿಂದ ರಸಗುಲ್ಲಾ ಮಲೈಅನ್ನು ಸರಿಯಾಗಿ ಹೀರಿಕೊಳ್ಳಲು ಸಹಾಯವಾಗುವುದು.
- ಸರ್ವಿಂಗ್ ಸೈಜ್ - 1 ಮಲೈ
- ಕ್ಯಾಲೋರಿ - 188 ಕ್ಯಾಲ್
- ಫ್ಯಾಟ್ - 2.9 ಗ್ರಾಂ.
- ಪ್ರೋಟೀನ್ - 2.5 ಗ್ರಾಂ.
- ಕಾರ್ಬೋಹೈಡ್ರೇಟ್ - 39.4 ಗ್ರಾಂ.
- ಸಕ್ಕರೆ - 39 ಗ್ರಾಂ.
- ಫೈಬರ್ - 0.2 ಗ್ರಾಂ.
ಹಂತ ಹಂತವಾದ ಚಿತ್ರವಿವರಣೆ
1. ಒಂದು ಪಾತ್ರೆಯಲ್ಲಿ ಒಂದು ಲೀಟರ್ ಹಾಲನ್ನು ಹಾಕಿ ಬಿಸಿ ಮಾಡಿ.

2. ಹಾಲು ಕುದಿಯುತ್ತಲೇ ಅರ್ಧದಷ್ಟು ಪ್ರಮಾಣಕ್ಕೆ ಕುಗ್ಗಲು ಮುಚ್ಚಳವನ್ನು ಮುಚ್ಚಿ, 7-10 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಬತ್ತಲು ಬಿಡಿ.

3. ಮುಚ್ಚಳವನ್ನು ತೆಗೆದು, ಮಲೈ ತಳ ಹಿಡಿಯದಂತೆ ಚೆನ್ನಾಗಿ ಕಲುಕಿ.

4. ಕೇಸರಿ ಎಳೆಯಯನ್ನು ಹಾಕಿ ಪುನಃ ಕಲುಕಿ.

5. 6 ಟೇಬಲ್ ಚಮಚ ಸಕ್ಕರೆಯನ್ನು ಸೇರಿಸಿ. ಸಕ್ಕರೆ ಕರಗುವವರೆಗೂ ಚೆನ್ನಾಗಿ ಕದಡುತ್ತಿರಿ.

6. ಪುನಃ ಮುಚ್ಚಳವನ್ನು ಮುಚ್ಚಿ, 5 ನಿಮಿಷ ಕುದಿಯಲು ಬಿಡಿ.

7. ಈ ಮಧ್ಯೆ, ಬಾದಾಮಿಯನ್ನು ತೆಳುವಾದ ಸ್ಲೈಸ್ನಂತೆ ಹೆಚ್ಚಿಕೊಳ್ಳಿ.

8. ಮುಚ್ಚಳವನ್ನು ತೆಗೆದು ಚೆನ್ನಾಗಿ ಕಲುಕಿ. ಹೀಗೆ ಮಾಡುವುದರಿಂದ ಮಲೈ ಪಾತ್ರೆಯ ಸುತ್ತ ಮತ್ತು ತಳ ಹಿಡಿಯದು.

9. 1,1/2 ಟೇಬಲ್ ಚಮಚ ಹೆಚ್ಚಿದ ಬಾದಾಮಿ ಸ್ಲೈಸ್ಗಳನ್ನು ಸೇರಿಸಿ.

10. ಹೆಚ್ಚಿಕೊಂಡ ಪಿಸ್ತವನ್ನು ಸೇರಿಸಿ.

11. ಚೆನ್ನಾಗಿ ಬೆರೆಸಿ ಒಂದೆಡೆ ಇಡಿ.

12. 3/4 ಲೀಟರ್ ಹಾಲನ್ನು ಒಂದು ಪಾತ್ರೆಗೆ ಹಾಕಿ ಬಿಸಿ ಮಾಡಿ.

13. 2-3 ನಿಮಿಷಗಳ ಕಾಲ ಕುದಿಸಿ, ನಂತರ ಉರಿಯನ್ನು ಆರಿಸಿ.

14. ಸಿಟ್ರಿಕ್ ಆಮ್ಲದ ಹರಳನ್ನು ಸೇರಿಸಿ.

15. 2-3 ನಿಮಿಷಗಳ ಕಾಲ ನಿರಂತರವಾಗಿ ಕಲುಕಿರಿ. ಇದರಿಂದ ಹಾಲು ಹೊಸರು ಒಡೆದಂತಾಗುವುದು.

16. ಹಾಲು ಮೊಸರೊಡೆದಂತಾದ ನಂತರ ಐಸ್ ಕ್ಯೂಬ್ಸ್ ಗಳನ್ನು ಸೇರಿಸಿ, ಅವು ಕರಗಲು ಬಿಡಿ.

17. ಒಂದು ಬೌಲ್ಅನ್ನು ತೆಗೆದುಕೊಂಡು ಅದರ ಮೇಲೆ ಅಡುಗೆ ಬಟ್ಟೆ/ಟವೆಲ್ಅನ್ನು ಇರಿಸಿ.

18. ಮೊಸರೊಡೆದ ಹಾಲನ್ನು ಟವೆಲ್ನ ಮೇಲೆ ಸುರಿಯಿರಿ.

19. ಟವೆಲ್ನ ಸುತ್ತಲ ತುದಿಯನ್ನು ಹಿಡಿದು ಮೇಲೆತ್ತಿ, ನೀರು ಬಸಿದು ಹೋಗುವಂತೆ ಮಾಡಿ.

20. ನಂತರ ಟವೆಲ್ಅನ್ನು ಮೇಲೆ 10 ನಿಮಿಷ ತೂಗಲು ಹಾಕಿ. ಹೀಗೆ ಮಾಡುವುದರಿಂದ ನೀರನ್ನು ಸಂಪೂರ್ಣವಾಗಿ ಬಸಿಯಬಹುದು.

21. ಟವೆಲ್ಅನ್ನು ಬಿಚ್ಚಿ ನೀರಿನಿಂದ ಬೇರ್ಪಟ್ಟ ಹೂರಣವನ್ನು ತೆಗೆಯಿರಿ.

22. ಅದನ್ನು ಮಿಕ್ಸರ್ ಪಾತ್ರೆಗೆ ವರ್ಗಾಯಿಸಿ.

23. ಕಾರ್ನ್ ಹಿಟ್ಟನ್ನು ಸೇರಿಸಿ ರುಬ್ಬಿ. ಅದು ಕಾಳುಕಾಳಾದ ಮಿಶ್ರಣದಂತೆ ಆಗುವುದು.

24. ಇದನ್ನು ಒಂದು ಪ್ಲೇಟಿಗೆ ವರ್ಗಾಯಿಸಿ.

25. ಅಂಗೈನಲ್ಲಿ ನಾದುವುದರ ಮೂಲಕ ಗಂಟು ಗಂಟಾಗುವುದನ್ನು ತಡೆಯಿರಿ.

26. ಒಂದು ಮೃದುವಾದ ಹಿಟ್ಟಿನ ಮಿಶ್ರಣವಾಗುವಂತೆ ನಾದಿ/ಕಲಸಿ.

27. ಸಮ ಪ್ರಮಾಣದಲ್ಲಿ ಹಿಟ್ಟನ್ನು ತೆಗೆದುಕೊಳ್ಳಿ.

28. ಅದನ್ನು ಚಿಕ್ಕ ಚಿಕ್ಕ ಉಂಡೆಯನ್ನಾಗಿ ಮಾಡಿ.

29. ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಕುದಿಯಲು ಇಡಿ.

30. 1/2 ಕಪ್ ಸಕ್ಕರೆಯನ್ನು ಸೇರಿಸಿ.

31. ಮುಚ್ಚಳವನ್ನು ಮುಚ್ಚಿ, ಸಕ್ಕರೆಯು ಕರಗಿ ಪಾಕಬರಲು 4-5 ನಿಮಿಷಗಳಕಾಲ ಕುದಿಯಲು ಬಿಡಿ.

32. ಪಾಕಕ್ಕೆ ಉಂಡೆಯನ್ನು ಸೇರಿಸಿ, ಪುನಃ ಮುಚ್ಚಳವನ್ನು ಮುಚ್ಚಿ.

33. 15 ನಿಮಿಷಗಳ ಕಾಲ ಬೇಯಲು ಬಿಡಿ.

34. ಗುಲಾಬಿ ನೀರನ್ನು ಸೇರಿಸಿ, 10 ನಿಮಿಷ ಆರಲು ಬಿಡಿ.

35. ಮಾಡಿಕೊಂಡ ಮಲೈ/ಹಾಲನ್ನು ಪುನಃ ಬಿಸಿಮಾಡಲು ಇಡಿ.

36. ರಸಗುಲ್ಲವನ್ನು ಮಲೈ/ಹಾಲಿನಲ್ಲಿ ಹಾಕಿ.

37. ದೊಡ್ಡ ಉರಿಯಲ್ಲಿ 2-3 ನಿಮಿಷ ಕುದಿಯಲು ಬಿಡಿ.

38. ಇದನ್ನು ಒಂದು ಬೌಲ್ಗೆ ವರ್ಗಾಯಿಸಿ.

39. 10 ನಿಮಿಷಗಳ ಕಾಲ ಆರಲು ಬಿಡಿ.

40. ಕಡಿಮೆ ಎಂದರೂ 2 ಗಂಟೆಗಳ ಕಾಲ ಫ್ರಿಜ್ನಲ್ಲಿ ಇಡಿ.

41. ತಂಪು ತಂಪಾಗಿರುವಾಗಲೇ ಸವಿಯಲು ನೀಡಿ.

Click it and Unblock the Notifications