Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ನವರಾತ್ರಿ ಸ್ಪೆಷಲ್: ರಸಗುಲ್ಲಾ ರೆಸಿಪಿ
ನವರಾತ್ರಿ ಹಬ್ಬದ ಶುಭಾಶಯಗಳು...
ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಇಷ್ಟ ಪಡುವಂತಹ ಜನಪ್ರಿಯ ಸಿಹಿ ತಿಂಡಿಯೆಂದರೆ ರಸಗುಲ್ಲಾ. ಒಮ್ಮೆ ಒಂದು ರಸಗುಲ್ಲವನ್ನು ಬಾಯಲ್ಲಿ ಇಟ್ಟುಕೊಂಡರೆ, ಬಾಯಿತುಂಬಾ ಸಿಹಿಯಾದ ರಸವು ತುಂಬಿಕೊಳ್ಳುತ್ತದೆ. ಜೊತೆಗೆ ಮತ್ತೆ ಮತ್ತೆ ತಿನ್ನಬೇಕು ಎನ್ನುವ ಬಯಕೆ ಕಾಡುತ್ತದೆ. ರಸಗುಲ್ಲಾ ಎಂಬುದು ಬೆಂಗಾಲಿಯ ಸಾಂಪ್ರದಾಯಿಕ ಸಿಹಿ ತಿಂಡಿ. ಇದನ್ನು ಭಾರತದಾದ್ಯಂತ ಬಹುತೇಕ ಮನೆಗಳಲ್ಲಿ ಹಾಗೂ ಅಂಗಡಿಗಳಲ್ಲೂ ತಯಾರಿಸುತ್ತಾರೆ. ಇದು ನೋಡಲು ಸಕ್ಕರೆ ಪಾಕದಲ್ಲಿ ಅದ್ದಿರುವ ಸ್ಪಂಜಿನ ಉಂಡೆಯಂತೆ ಕಾಣುತ್ತದೆ.
ಮದೃದುವಾದ ಹಾಗೂ ತಿನ್ನಲು ಹೆಚ್ಚು ಖುಷಿಯನ್ನು ನೀಡುವ ಈ ಸಿಹಿ ತಿಂಡಿಯನ್ನು ತಯಾರಿಸುವುದು ಸುಲಭ. ಆದರೆ ಇದರ ಸ್ಥಿರತೆ ಮತ್ತು ಗುಣಮಟ್ಟವನ್ನು ಕಾಯ್ದುಕೊಂಡು ತಯಾರಿಸಬೇಕಾಗುವುದು. ಇದನ್ನು ತಯಾರಿಸಲು ಸ್ವಲ್ಪ ಪರಿಣಿತಿಯ ಅಗತ್ಯವಿರುತ್ತದೆ ಎಂದು ಹೇಳಬಹುದು. ಹಬ್ಬದ ಸಂದರ್ಭದಲ್ಲಿ ಈ ಸಿಹಿಯನ್ನು ನೀವು ತಯಾರಿಸಬೇಕು ಎನ್ನುವ ಉತ್ಸಾಹದಲ್ಲಿದ್ದರೆ ಈ ಕೆಳಗೆ ನೀಡಿರುವ ಅಧಿಕೃತವಾದ ವೀಡಿಯೋ ಹಾಗೂ ಹಂತ ಹಂತವಾದ ಚಿತ್ರವಿವರಣೆಯನ್ನು ಅನುಸರಿಸಬಹುದು.

Recipe By: ಮೀನಾ ಭಂಡಾರಿ
Recipe Type: ಸಿಹಿ ತಿಂಡಿ
Serves: 7 ರಸಗುಲ್ಲಾ
-
ಹಾಲು - 1 ಲೀಟರ್
ವಿನೆಗರ್ - 1/4 ಕಪ್
ನೀರು - 8 ಕಪ್
ಐಸ್ ನೀರು - 1 ಕಪ್
ಕಾರ್ನ್ ಹಿಟ್ಟು - 1/4 ಟೀ ಚಮಚ
ಸಕ್ಕರೆ - 1 ಕಪ್
ರೋಸ್(ಗುಲಾಬಿ) ನೀರು - 1 ಟೀ ಚಮಚ
-
1. ಒಂದು ಪಾತ್ರೆಯಲ್ಲಿ ಹಾಲನ್ನು ಹಾಕಿ ಬಿಸಿ ಮಾಡಿ.
2. ಚೆನ್ನಾಗಿ ಕುದಿಯಲು ಬಿಡಿ.
3. ನಂತರ ಒಂದು ಟೇಬಲ್ ಚಮಚ ವಿನೆಗರ್ ಮತ್ತು ಒಂದು ಟೇಬಲ್ ಚಮಚ ನೀರನ್ನು ಸೇರಿಸಿ.
4. ಹಾಲು ಒಡೆದಂತಾಗುವವರೆಗೂ ವಿನೆಗರ್ ಮತ್ತು ನೀರನ್ನು ಸೇರಿಸುವ ವಿಧಾನವನ್ನು ಮುಂದುವರಿಸಿ.
5. ಒಮ್ಮೆ ಹಾಲು ಒಡೆದು ಮೊಸರಾದಂತೆ ಆದ ತಕ್ಷಣ ಉರಿಯನ್ನು ಆರಿಸಿ, ಐಸ್ ನೀರನ್ನು ಸೇರಿಸಿ.
6. ನಂತರ ಪುನಃ 1,1/2 ಕಪ್ ನೀರನ್ನು ಸೇರಿಸಿ ಅವು ಒಂದೆಡೆ ನಿಲ್ಲುವಂತೆ ಮಾಡಿ.
7. ನೀರನ್ನು ಬೇರ್ಪಡಿಸಿ ಹಾಗೂ ಸಂಪೂರ್ಣವಾಗಿ ನೀರು ಹೋಗಲು ಅರ್ಧ ಗಂಟೆಗಳ ಕಾಲ ಬಿಡಿ.
8. ಸಂಪೂರ್ಣವಾಗಿ ನೀರಿನಿಂದ ಬೇರ್ಪಟ್ಟ ಹೂರಣವನ್ನು ಮಿಕ್ಸರ್ ಪಾತ್ರೆಗೆ ಹಾಕಿ.
9. ಕಾನ್ ಹಿಟ್ಟನ್ನು ಸೇರಿಸಿ ಕಾಳು ಕಾಳಾಗುವಂತೆ ರುಬ್ಬಿಕೊಳ್ಳಿ.
10. ಇದನ್ನು ಒಂದು ಪ್ಲೇಟಿಗೆ ವರ್ಗಾಯಿಸಿ.
11. ಗಂಟುಗಳಿಲ್ಲದಂತೆ ಕೈಗಳಲ್ಲಿ ಚೆನ್ನಾಗಿ ನಾದಿ.
12. ಇದೊಂದು ಮೃದುವಾದ ಮಿಶ್ರಣವಾಗುವಂತೆ ನಾದಿಕೊಳ್ಳಬೇಕು.
13. ಒಂದೇ ಪ್ರಮಾಣದಲ್ಲಿ ಮಿಶ್ರಣವನ್ನು ತೆಗೆದುಕೊಳ್ಳಿ.
14. ಅವುಗಳನ್ನು ಚಿಕ್ಕ ಚಿಕ್ಕ ಉಂಡೆಯನ್ನಾಗಿ ಮಾಡಿ.
15. ಒಂದು ಪಾತ್ರೆಯಲ್ಲಿ ಸಕ್ಕರೆಯನ್ನು ಹಾಕಿ ಬಿಸಿ ಮಾಡಿ.
16. ತಕ್ಷಣವೇ 6 ಕಪ್ ನೀರನ್ನು ಸೇರಿಸಿ.
17. ಸಕ್ಕರೆ ಕರಗಲು ಮುಚ್ಚಳವನ್ನು ಮುಚ್ಚಿ, ದೊಡ್ಡ ಉರಿಯಲ್ಲಿ ಇಡಿ.
18. ಕುದಿಯಲು ಆರಂಭಿಸಿದ ಸಕ್ಕರೆ ಪಾಕಕ್ಕೆ ಮಿಶ್ರಣದ ಉಂಡೆಯನ್ನು ಸೇರಿಸಿ.
19. ಪುನಃ ಮುಚ್ಚಳವನ್ನು ಮುಚ್ಚಿ 10-15 ನಿಮಿಷಗಳ ಕಾಲ ಕುದಿಯಲು ಬಿಡಿ.
20. ಮುಚ್ಚಳವನ್ನು ತೆಗೆದು, ಉರಿಯನ್ನು ಆರಿಸಿ.
21. ಗುಲಾಬಿ/ರೋಸ್ ವಾಟರ್‍ಅನ್ನು ಸೇರಿಸಿ ಮುಚ್ಚಳವನ್ನು ಮುಚ್ಚಿ, ಆರಲು ಬಿಡಿ.
22. ಫ್ರಿಜ್‍ನಲ್ಲಿ 3-4 ಗಂಟೆಗಳ ಕಾಲ ಇಟ್ಟು ತಣ್ಣಗಾಗಿಸಿ ನಂತರ ಸವಿಯಲು ನೀಡಿ.
- 1. ನಿಂಬೆ ರಸ, ಮೊಸರು ಅಥವಾ ಸಿಟ್ರಿಕ್ ಆಸಿಟ್ ಸ್ಫಟಿಕದೊಂದಿಗೆ ಹಾಲನ್ನು ಒಡೆಯುವಂತೆ ಮಾಡಬಹುದು. ಹಾಲು ಒಡೆದ ತಕ್ಷಣ ಉರಿಯನ್ನು ಆರಿಸಬೇಕು.
- 2. ರಸಗುಲ್ಲಾದ ಉಂಡೆ ಮಾಡುವಾಗ ಯಾವುದೇ ಬಿರುಕುಗಳಿಲ್ಲದಂತೆ ನೋಡಿಕೊಳ್ಳಬೇಕು. ಅವು ಒಡೆಯುವ ಸಾಧ್ಯತೆ ಇರುತ್ತದೆ.
- 3. ಅಗಲವಾದ ಹಾಗೂ ದೊಡ್ಡ ಪಾತ್ರೆಯಲ್ಲಿ ಸಕ್ಕರೆ ಪಾಕವನ್ನು ಮಾಡಿಕೊಳ್ಳಿ. ಅದರಲ್ಲಿ ರಸಗುಲ್ಲಾ ಉಂಡೆಯನ್ನು ಹಾಕಿ ಬೇಯಿಸಲು ಸುಲಭವಗುತ್ತದೆ.
- ಸರ್ವಿಂಗ್ ಸೈಜ್ - 1 ರಸಗುಲ್ಲಾ
- ಕ್ಯಾಲೋರಿ - 120 ಕ್ಯಾಲ್
- ಫ್ಯಾಟ್ - 1.8 ಗ್ರಾಂ.
- ಪ್ರೋಟೀನ್ - 1.7 ಗ್ರಾಂ.
- ಕಾರ್ಬೋಹೈಡ್ರೇಟ್ - 25 ಗ್ರಾಂ.
- ಸಕ್ಕರೆ - 25 ಗ್ರಾಂ
ಹಂತ ಹಂತವಾದ ಚಿತ್ರ ವಿವರಣೆ:
1. ಒಂದು ಪಾತ್ರೆಯಲ್ಲಿ ಹಾಲನ್ನು ಹಾಕಿ ಬಿಸಿ ಮಾಡಿ.

2. ಚೆನ್ನಾಗಿ ಕುದಿಯಲು ಬಿಡಿ.

3. ನಂತರ ಒಂದು ಟೇಬಲ್ ಚಮಚ ವಿನೆಗರ್ ಮತ್ತು ಒಂದು ಟೇಬಲ್ ಚಮಚ ನೀರನ್ನು ಸೇರಿಸಿ.

4. ಹಾಲು ಒಡೆದಂತಾಗುವವರೆಗೂ ವಿನೆಗರ್ ಮತ್ತು ನೀರನ್ನು ಸೇರಿಸುವ ವಿಧಾನವನ್ನು ಮುಂದುವರಿಸಿ.

5. ಒಮ್ಮೆ ಹಾಲು ಒಡೆದು ಮೊಸರಾದಂತೆ ಆದ ತಕ್ಷಣ ಉರಿಯನ್ನು ಆರಿಸಿ, ಐಸ್ ನೀರನ್ನು ಸೇರಿಸಿ.

6. ನಂತರ ಪುನಃ 1,1/2 ಕಪ್ ನೀರನ್ನು ಸೇರಿಸಿ ಅವು ಒಂದೆಡೆ ನಿಲ್ಲುವಂತೆ ಮಾಡಿ.

7. ನೀರನ್ನು ಬೇರ್ಪಡಿಸಿ ಹಾಗೂ ಸಂಪೂರ್ಣವಾಗಿ ನೀರು ಹೋಗಲು ಅರ್ಧ ಗಂಟೆಗಳ ಕಾಲ ಬಿಡಿ.

8. ಸಂಪೂರ್ಣವಾಗಿ ನೀರಿನಿಂದ ಬೇರ್ಪಟ್ಟ ಹೂರಣವನ್ನು ಮಿಕ್ಸರ್ ಪಾತ್ರೆಗೆ ಹಾಕಿ.

9. ಕಾನ್ ಹಿಟ್ಟನ್ನು ಸೇರಿಸಿ ಕಾಳು ಕಾಳಾಗುವಂತೆ ರುಬ್ಬಿಕೊಳ್ಳಿ.

10. ಇದನ್ನು ಒಂದು ಪ್ಲೇಟಿಗೆ ವರ್ಗಾಯಿಸಿ.

11. ಗಂಟುಗಳಿಲ್ಲದಂತೆ ಕೈಗಳಲ್ಲಿ ಚೆನ್ನಾಗಿ ನಾದಿ.

12. ಇದೊಂದು ಮೃದುವಾದ ಮಿಶ್ರಣವಾಗುವಂತೆ ನಾದಿಕೊಳ್ಳಬೇಕು.

13. ಒಂದೇ ಪ್ರಮಾಣದಲ್ಲಿ ಮಿಶ್ರಣವನ್ನು ತೆಗೆದುಕೊಳ್ಳಿ.

14. ಅವುಗಳನ್ನು ಚಿಕ್ಕ ಚಿಕ್ಕ ಉಂಡೆಯನ್ನಾಗಿ ಮಾಡಿ.

15. ಒಂದು ಪಾತ್ರೆಯಲ್ಲಿ ಸಕ್ಕರೆಯನ್ನು ಹಾಕಿ ಬಿಸಿ ಮಾಡಿ.

16. ತಕ್ಷಣವೇ 6 ಕಪ್ ನೀರನ್ನು ಸೇರಿಸಿ.

17. ಸಕ್ಕರೆ ಕರಗಲು ಮುಚ್ಚಳವನ್ನು ಮುಚ್ಚಿ, ದೊಡ್ಡ ಉರಿಯಲ್ಲಿ ಇಡಿ.

18. ಕುದಿಯಲು ಆರಂಭಿಸಿದ ಸಕ್ಕರೆ ಪಾಕಕ್ಕೆ ಮಿಶ್ರಣದ ಉಂಡೆಯನ್ನು ಸೇರಿಸಿ.

19. ಪುನಃ ಮುಚ್ಚಳವನ್ನು ಮುಚ್ಚಿ 10-15 ನಿಮಿಷಗಳ ಕಾಲ ಕುದಿಯಲು ಬಿಡಿ.

20. ಮುಚ್ಚಳವನ್ನು ತೆಗೆದು, ಉರಿಯನ್ನು ಆರಿಸಿ.

21. ಗುಲಾಬಿ/ರೋಸ್ ವಾಟರ್‍ಅನ್ನು ಸೇರಿಸಿ ಮುಚ್ಚಳವನ್ನು ಮುಚ್ಚಿ, ಆರಲು ಬಿಡಿ.

22. ಫ್ರಿಜ್‍ನಲ್ಲಿ 3-4 ಗಂಟೆಗಳ ಕಾಲ ಇಟ್ಟು ತಣ್ಣಗಾಗಿಸಿ ನಂತರ ಸವಿಯಲು ನೀಡಿ.

Click it and Unblock the Notifications