For Quick Alerts
ALLOW NOTIFICATIONS  
For Daily Alerts

ರಂಜಾನ್‌ ಸ್ಪೆಷಲ್ ನಾನ್‌ವೆಜ್ ರೆಸಿಪಿ: ಲ್ಯಾಂಬ್‌ವಿಥ್‌ ಡೇಟ್ಸ್

Posted By:
|

ೀದ್ ಉಲ್ ಫಿತ್ತರ್ ಶುಭಾಶಯಗಳು... ಲ್ಯಾಂಬ್‌ ವಿಥ್‌ ಡೇಟ್ಸ್‌ ಟೇಸ್ಟ್‌ ಮಾಡಿ ನೋಡಿದ್ದೀರಾ, ಕುರಿ ಮಾಂಸ ಪ್ರಿಯರಾಗಿದ್ದರೆ ಈ ರುಚಿ ನಿಮಗೆ ತುಂಬಾ ಇಷ್ಟವಾಗುವುದು. ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು.

ದಿನವಿಡೀ ಉಪವಾಸವಿದ್ದು ಒಂದು ಹೊತ್ತು ಇಂಥ ಪೋಷಕಾಂಶದ ಆಹಾರ ಸೇವಿಸಿದರೆ ದೇಹಕ್ಕೆ ಶಕ್ತಿ ದೊರೆಯುತ್ತದೆ, ಆದ್ದರಿಂದ ಇಂಥ ಆರೋಗ್ಯಕರ ಹಾಗೂ ರುಚಿಕರವಾದ ಆಹಾರವನ್ನು ರಂಜಾನ್‌ ಸ್ಪೆಷಲ್ ಅಡುಗೆಯಲ್ಲಿ ತಯಾರಿಸಲಾಗುವುದು.

ಲ್ಯಾಂಬ್‌ ವಿಥ್‌ ಡೇಟ್ಸ್‌ ತುಂಬಾ ಸರಳವಾದ ರೆಸಿಪಿಯಾದರೂ, ಹೈಫೈ ರೆಸ್ಟೋರೆಂಟ್‌ಗಳಲ್ಲಿ ಸಿಗುವಷ್ಟು ರುಚಿಕರವಾಗಿರುತ್ತದೆ. ಇದನ್ನು ಅರ್ಧ ಗಂಟೆಯಲ್ಲಿ ತಯಾರಿಸಬಹುದು ಹಾಗೂ ಹೆಚ್ಚಿನ ಶ್ರಮವೂ ಪಡಬೇಕಾಗಿಲ್ಲ. ಬನ್ನಿ ನಿಮ್ಮ ಬಾಯಿಯ ರುಚಿ ಹೆಚ್ಚಿಸುವ ಲ್ಯಾಂಬ್‌ ವಿಥ್‌ ಡೇಟ್ಸ್ ಮಾಡುವುದು ಹೇಗೆ ಎಂದು ನೋಡೋಣ:

Ramadan Special Lamb With Dates Recipe,ಲ್ಯಾಂಬ್ ವಿಥ್‌ ಡೇಟ್ಸ್ ರೆಸಿಪಿ
Ramadan Special Lamb With Dates Recipe,ಲ್ಯಾಂಬ್ ವಿಥ್‌ ಡೇಟ್ಸ್ ರೆಸಿಪಿ
Prep Time
5 Mins
Cook Time
15M
Total Time
20 Mins

Recipe By: Reena T K

Recipe Type: Non veg

Serves: 4

Ingredients
  • ಬೇಕಾಗುವ ಸಾಮಗ್ರಿ

    * 1 ಚಮಚ ಆಲೀವ್‌ ಎಣ್ಣೆ(ನೀವು ಯಾವುದೇ ಅಡುಗೆ ಎಣ್ಣೆ ಬಳಸಬಹುದು)

    * ಈರುಳ್ಳಿ, ತೆಳುವಾಗಿ ಕತ್ತರಿಸಿ

    * ಬೋನ್‌ಲೆಸ್‌ ಕುರಿ ಮಾಂಸ, ಅದರಲ್ಲೂ ಕಾಲಿನ ಭಾಗದ ಮಾಂಸ ಒಳ್ಳೆಯದು

    *250ಗ್ರಾಂ ಸಿಹಿ ಗೆಣಸು(ಚಿಕ್ಕದಾಗಿ ಕತ್ತರಿಸಿ)

    * 2 ಚಮಚ ಕೊತ್ತಂಬರಿ ಪುಡಿ

    * 1 ಚಮಚ ಟೊಮೆಟೊ ಪೇಸ್ಟ್

    * 2 ಚಮಚ ಚಕ್ಕೆ ಪುಡಿ

    * 50ಗ್ರಾಂ ಒಣ ಖರ್ಜೂರ

    * 2 ಚಮಚ ಕೊತ್ತಂಬರಿ ಸೊಪ್ಪು

Red Rice Kanda Poha
How to Prepare
  • ಮಾಡುವ ವಿಧಾನ

    1. ದಪ್ಪ ತಳವಿರುವ ಪ್ಯಾನ್‌ಗೆ ಎಣ್ಣೆ ಹಾಕಿ ಬಿಸಿ ಮಾಡಿ, ಈಗ ಈರುಳ್ಳಿ, ಕುರಿ ಮಾಂಸ ಹಾಕಿ ಫ್ರೈ ಮಾಡಿ, ಈರುಳ್ಳಿ ಸ್ವಲ್ಪ ಕಂದು ಬಣ್ಣ ಬರುವಷ್ಟು ಫ್ರೈ ಮಾಡಿ.

    2. ನಂತರ ಸಿಹಿ ಗೆಣಸು ಹಾಗೂ ಹಾಕಿ ಮಿಶ್ರ ಮಾಡಿ. ಈಗ ಅರ್ಧ ಲೀಟರ್‌ ಕುದಿಯುವ ನೀರು ಹಾಕಿ, ಟೊಮೆಟೊ ಪೇಸ್ಟ್ ಹಾಕಿ ಕುದಿಸಿ.

    3. ಈಗ ಪಾತ್ರೆಯ ಬಾಯಿ ಮುಚ್ಚಿ 15ನಿಮಿಷ ಬೇಯಿಸಿ. ಸಿಹಿ ಗೆಣಸು, ಕುರಿ ಮಾಂಸ ಚೆನ್ನಾಗಿ ಬೇಯಲಿ. ಸಿಹಿ ಗೆಣಸು ಮುಕ್ಕಾಲು ಬೆಂದಾಗ ಒಣ ಖರ್ಜೂರ ಹಾಕಿ ಬೇಯಿಸಿ, ನಂತರ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಸರ್ವ್ ಮಾಡಿ.

Instructions
  • ಇದು ರುಚಿಯ ಜೊತೆಗೆ ಪೌಷ್ಠಿಕ ಆಹಾರವಾಗಿದೆ. ಇದನ್ನು ಇಫ್ತಾರ್ ಕೂಟದಲ್ಲಿ ಮಾಡಿ ಸವಿಯಿರಿ.
Nutritional Information
  • ಸರ್ವ್‌ - 4
  • ಕ್ಯಾಲೋರಿ - 343
  • ಕೊಬ್ಬು - 145ಗ್ರಾಂ
  • ಪ್ರೊಟೀನ್ - 38ಗ್ರಾಂ
  • ಕಾರ್ಬ್ಸ್ - 30ಗ್ರಾಂ
  • ನಾರಿನಂಶ - 3ಗ್ರಾಂ
[ 4 of 5 - 91 Users]
X
Desktop Bottom Promotion