Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಬಿಳಿ ಇಡ್ಲಿ ಬೋರ್ ಆಗಿದ್ಯಾ? ಈ ರೀತಿ 'ರೇನ್ಬೋ ಇಡ್ಲಿ' ಟ್ರೈ ಮಾಡಿ..! ಕಣ್ಣಿಗೆ ಹಬ್ಬ, ಹೊಟ್ಟೆಗೆ ತೃಪ್ತಿ
ದಿನಾ ಒಂದೇ ರೀತಿಯ ಬ್ರೇಕ್ಫಾಸ್ಟ್ ಬೇಡ ಅನ್ಸುತ್ತಾ? ಹಾಗಾದ್ರೆ ಈ 'ರೇನ್ಬೋ ಇಡ್ಲಿ' ಟ್ರೈ ಮಾಡಿ.. ಅತಿ ಸುಲಭವಾದ ರೆಸಿಪಿ ಇಲ್ಲಿದೆ. ಹೌದು, ನಿಮ್ಮ ಮಕ್ಕಳಿಗೆ ದಿನನಿತ್ಯದ ಬಿಳಿ ಇಡ್ಲಿ (Idli) ಬೇಸರ ತಂದಿದೆಯೇ, ಅಥವಾ ತರಕಾರಿ ತಿನ್ನಲು ಹಠ ಮಾಡುತ್ತಿದ್ದಾರೆಯೇ? ಹಾಗಿದ್ದರೆ, ನಿಮ್ಮ ಮನೆಯಲ್ಲಿ ಈ ಆಕರ್ಷಕ 'ರೇನ್ಬೋ ಇಡ್ಲಿ' (Rainbow Idli) ಒಮ್ಮೆ ಪ್ರಯತ್ನಿಸಿ. ಇದು ಕೇವಲ ಕಣ್ಣಿಗೆ ಹಬ್ಬ ಮಾತ್ರವಲ್ಲ, ಹೊಟ್ಟೆಯನ್ನು ತೃಪ್ತಿಪಡಿಸುವ ಹೆಲ್ದಿ ತಿಂಡಿ.
ರೇನ್ಬೋ ಇಡ್ಲಿಯು ಸಾಂಪ್ರದಾಯಿಕ ಇಡ್ಲಿಗೆ ಒಂದು ಕಲರ್ ಫುಲ್ ರೂಪವಾಗಿದೆ. ಇದರಲ್ಲಿ ಯಾವುದೇ ಕೃತಕ ಬಣ್ಣಗಳ ಬದಲು, ಸಂಪೂರ್ಣವಾಗಿ ನೈಸರ್ಗಿಕ ತರಕಾರಿಗಳನ್ನು ಬಳಸಿ ಇಡ್ಲಿಗೆ ಕಾಮನಬಿಲ್ಲಿನ ಸುಂದರ ಬಣ್ಣ ನೀಡಲಾಗುತ್ತದೆ. ಇದರ ಆಕರ್ಷಕ ವಿನ್ಯಾಸದಿಂದ ಮಕ್ಕಳು ಯಾವುದೇ ಹಠ ಮಾಡದೆ ಸಂತೋಷದಿಂದ ಈ ಉಪಹಾರವನ್ನು ಸವಿಯುತ್ತಾರೆ.
ಈ ರೇನ್ಬೋ ಇಡ್ಲಿ (Rainbow Idli Recipe) ಕೇವಲ ಬಣ್ಣ ಬಣ್ಣವಾಗಿರದೆ, ಪೌಷ್ಟಿಕಾಂಶಗಳ ಗಣಿಯಾಗಿದೆ. ಬೀಟ್ರೂಟ್, ಪಾಲಕ್, ಕ್ಯಾರೆಟ್ಗಳಂತಹ ತರಕಾರಿಗಳಿಂದ ಇಡ್ಲಿಗೆ ಸ್ವಾಭಾವಿಕ ಬಣ್ಣ ಸಿಗುವುದರ ಜೊತೆಗೆ, ಅವುಗಳ ಆರೋಗ್ಯ ಮೌಲ್ಯವೂ ಹೆಚ್ಚುತ್ತದೆ. ಅಲ್ಲದೆ, ಇದು ಹಬೆಯಲ್ಲಿ ಬೆಯಿಸಲ್ಪಡುವುದರಿಂದ ಬಹಳ ಮೃದುವಾಗಿರುತ್ತದೆ ಮತ್ತು ಸುಲಭವಾಗಿ ಜೀರ್ಣವಾಗುತ್ತದೆ.
- ಬೀಟ್ರೂಟ್: ರಕ್ತಹೀನತೆಯನ್ನು ತಡೆಗಟ್ಟಲು ಮತ್ತು ದೇಹಕ್ಕೆ ಉತ್ತಮ ಬಣ್ಣ ನೀಡಲು ಸಹಕಾರಿ.
- ಪಾಲಕ್: ಕಬ್ಬಿಣದಂಶ ಮತ್ತು ಜೀವಸತ್ವಗಳಿಂದ ಸಮೃದ್ಧವಾಗಿದ್ದು, ಇಡ್ಲಿಗೆ ಹಸಿರು ಬಣ್ಣ ನೀಡುತ್ತದೆ.
- ಕ್ಯಾರೆಟ್: ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದಾದ ವಿಟಮಿನ್ 'ಎ' ಅನ್ನು ಒಳಗೊಂಡಿದೆ.
- ಅರಿಶಿನ: ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ನೈಸರ್ಗಿಕ ಔಷಧಿಯಾಗಿದೆ.
ರೇನ್ಬೋ ಇಡ್ಲಿ ತಯಾರಿಸಲು ಅಗತ್ಯವಿರುವ ಸಾಮಗ್ರಿಗಳು
• ಇಡ್ಲಿ ಹಿಟ್ಟು
• ಬೀಟ್ರೂಟ್ ಪೇಸ್ಟ್ (ಗುಲಾಬಿ / ಕೆಂಪು)
• ಪಾಲಕ್ ಪೇಸ್ಟ್ (ಹಸಿರು)
• ಕ್ಯಾರೆಟ್ ಪೇಸ್ಟ್ (ಕಿತ್ತಳೆ)
• ಹರಿಶಿನ (ಹಳದಿ)
• ರುಚಿಗೆ ತಕ್ಕಷ್ಟು ಉಪ್ಪು
• ಎಣ್ಣೆ (ಇಡ್ಲಿ ತಟ್ಟೆಗಳಿಗೆ ಸವರಲು)
ರೇನ್ಬೋ ಇಡ್ಲಿ ತಯಾರಿಸುವ ವಿಧಾನ
- ಮೊದಲು ಇಡ್ಲಿ ಹಿಟ್ಟನ್ನು 4 ರಿಂದ 5 ಸಮಾನ ಭಾಗಗಳಾಗಿ ವಿಂಗಡಿಸಿ.
- ಪ್ರತಿ ಭಾಗಕ್ಕೆ ಪ್ರತ್ಯೇಕವಾಗಿ ಬೀಟ್ರೂಟ್ ಪೇಸ್ಟ್, ಪಾಲಕ್ ಪೇಸ್ಟ್, ಕ್ಯಾರೆಟ್ ಪೇಸ್ಟ್ ಮತ್ತು ಅರಿಶಿನವನ್ನು ಸೇರಿಸಿ ಚೆನ್ನಾಗಿ ಬೆರೆಸಿ. ವಿಭಿನ್ನ ಬಣ್ಣಗಳ ಹಿಟ್ಟನ್ನು ತಯಾರಿಸಿಕೊಳ್ಳಿ.
- ಈಗ ಇಡ್ಲಿ ತಟ್ಟೆಗಳಿಗೆ ಎಣ್ಣೆ ಸವರಿ. ನಂತರ ನಿಮ್ಮ ಸೃಜನಶೀಲತೆಗೆ ತಕ್ಕಂತೆ ಒಂದರ ಮೇಲೆ ಒಂದರಂತೆ ಬೇರೆ ಬೇರೆ ಬಣ್ಣದ ಹಿಟ್ಟನ್ನು ಹಾಕಿ ಪದರಗಳನ್ನು ಸೃಷ್ಟಿಸಿ. ಅಥವಾ ನಿಮಗೆ ಇಷ್ಟವಾದ ಯಾವುದೇ ವಿನ್ಯಾಸದಲ್ಲಿ ತಟ್ಟೆಗೆ ಹಾಕಿ.
- ಇದಾದ ಬಳಿಕ ಇಡ್ಲಿ ಪಾತ್ರೆಯಲ್ಲಿ ಅಥವಾ ಸ್ಟೀಮರ್ನಲ್ಲಿ ಸುಮಾರು 10 ರಿಂದ 12 ನಿಮಿಷಗಳ ಕಾಲ ಹಬೆಯಲ್ಲಿ ಬೇಯಿಸಿ.
- ಇಡ್ಲಿ ಬೆಂದಿದೆಯೇ ಎಂದು ಪರೀಕ್ಷಿಸಲು, ಒಂದು ಟೂತ್ಪಿಕ್ ಅಥವಾ ಚಾಕುವನ್ನು ಇಡ್ಲಿಯ ಮಧ್ಯಕ್ಕೆ ಚುಚ್ಚಿ ನೋಡಿ. ಹಿಟ್ಟು ಅದಕ್ಕೆ ಅಂಟಿಕೊಳ್ಳದಿದ್ದರೆ ಇಡ್ಲಿ ಸಿದ್ಧವಾಗಿದೆ. ಅಂಟಿಕೊಂಡರೆ, ಇನ್ನೊಂದು ಕೆಲವು ನಿಮಿಷ ಬೇಯಿಸಿ.
- ಬಿಸಿಬಿಸಿಯಾದ ಈ ರೇನ್ಬೋ ಇಡ್ಲಿಯನ್ನು ತೆಂಗಿನಕಾಯಿ ಚಟ್ನಿ ಅಥವಾ ರುಚಿಕರ ಸಾಂಬಾರ್ ಜೊತೆ ಸವಿಯುವುದು ಉತ್ತಮ. ಇದು ಮಕ್ಕಳ ಟಿಫಿನ್ ಬಾಕ್ಸ್ಗೆ, ಜನ್ಮದಿನದ ಪಾರ್ಟಿಗಳಿಗೆ ಅಥವಾ ಯಾವುದೇ ವಿಶೇಷ ಉಪಹಾರಕ್ಕೂ ಅತ್ಯುತ್ತಮ ಆಯ್ಕೆಯಾಗಿದೆ.
ರುಚಿ ಹಾಗೂ ಆರೋಗ್ಯ ಎರಡನ್ನೂ ಸಮಾನವಾಗಿ ಕಾಪಾಡುವ ಈ ಹೊಸ ರೇನ್ಬೋ ಇಡ್ಲಿಯನ್ನು ನಿಮ್ಮ ಮನೆಯಲ್ಲಿ ಇಂದೇ ಪ್ರಯತ್ನಿಸಿ. ಇದರ ಅದ್ಭುತ ರುಚಿಯೊಂದಿಗೆ ಇದು ನಿಮ್ಮ ಮಕ್ಕಳ ಮುಖದಲ್ಲಿ ಖಂಡಿತವಾಗಿಯೂ ಮಂದಹಾಸ ಮೂಡಿಸಿಸುತ್ತದೆ.



Click it and Unblock the Notifications

