For Quick Alerts
ALLOW NOTIFICATIONS  
For Daily Alerts

ಆಹಾಃ ಸವಿರುಚಿಯ ರಾಗಿ ಮಣ್ಣಿ: ಇದನ್ನು ಮಾಡುವುದು ಬಲು ಸುಲಭ

Posted By:
|

ರಾಗಿ ಎಷ್ಟೊಂದು ಆರೋಗ್ಯಕರ ಎಂಬುವುದನ್ನು ವಿವರಿಸಬೇಕಾಗಿಲ್ಲ, ಇದರಿಂದ ಮುದ್ದೆ, ರೊಟ್ಟಿ ಜೊತೆಗೆ ರುಚಿಯಾದ ಸ್ವೀಟ್‌ ಕೂಡ ತಯಾರಿಸಬಹುದು. ನಾವಿಲ್ಲಿ ನೀಡಿರುವುದು ರಾಗಿ ಮಣ್ಣಿನ ರೆಸಿಪಿಯಾಗಿದೆ. ಇದನ್ನು ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಸವಿಯಬಹುದು, ಹಲ್ವಾ ತರ ಮೆದುವಾಗಿ ತುಂಬಾನೇ ರುಚಿಯಾಗಿರುತ್ತೆ. ಇದನ್ನು ಮಾಡುವುದು ತುಂಬಾನೇ ಸ್ವಲ್ಪ.

ragi manni recipe

ಇದನ್ನು ಮಾಡಿ ಕೊಡುವುದರಿಂದ ಮಕ್ಕಳ ಆರೋಗ್ಯಕ್ಕೆ ಪೌಷ್ಠಿಕಾಂಶವಿರುವ ಆಹಾರ ಕೂಡ ಸಿಗುವುದು. ಅಲ್ಲದೆ ಇದನ್ನು ಮಾಡಿಟ್ಟು ಒಂದೊಂದು ದುಂಡು ಬಾಯಿಗೆ ಹಾಕಿದರೆ ಆಗಾಗ ತಿನ್ನುವ ಬಾಯಿ ಚಪಲ ಕೂಡ ನಿಯಂತ್ರಿಸಬಹುದು. ಇದನ್ನು ಮಾಡುವುದು ಹೇಗೆ ಎಂದು ನೋಡೋಣ:
Ragi Manni Recipe, ರಾಗಿ ಮಣ್ಣಿ ರೆಸಿಪಿ
Ragi Manni Recipe, ರಾಗಿ ಮಣ್ಣಿ ರೆಸಿಪಿ
Prep Time
10 Mins
Cook Time
25M
Total Time
35 Mins

Recipe By: Reena TK

Recipe Type: sweet

Serves: 5

Ingredients
  • ಬೇಕಾಗುವ ಸಾಮಗ್ರಿ

    * ರಾಗಿ /ರಾಗಿ ಹಿಟ್ಟು 2 ಕಪ್

    * ಹಾಲು 1 ಕಪ್‌

    * ಬೆಲ್ಲ 1 ಕಪ್

    * ತುಪ್ಪ 2 ಚಮಚ

    * ನೀರು 2 ಕಪ್‌

    * ಏಲಕ್ಕಿ 1

    * ಡ್ರೈ ಫ್ರೂಟ್ಸ್

Red Rice Kanda Poha
How to Prepare
  • ಮಾಡುವ ವಿಧಾನ

    * ರಾಗಿ ಬಳಸುವುದಾದರೆ ಅದನ್ನು 65-6 ಗಂಟೆ ನೆನೆ ಹಾಕಿ ಹಾಕಿ ನಂತರ ಗ್ರೈಂಡ್ ಮಾಡಿ ಅದರ ರಸ ಸೋಸಿ ತೆಗೆಯಿರಿ, ಹಟ್ಟು ಆದರೆ ದಕ್ಕೆ ನೀರು ಹಾಕಿ ಕಲೆಸಿ ರಾಗಿ ನೀರು ಸೋಸಿ ಪಾತ್ರೆಗೆ ಹಾಕಿ.

    * ಈಗ ಸೋಸಿದ ರಾಗಿ ನೀರಿಗೆ ಬೆಲ್ಲದ ಪುಡಿ, ಹಾಲು ಸೇರಿಸಿ ಮಿಕ್ಸ್ ಮಾಡಿ, ಏಲಕ್ಕಿ ಸೇರಿಸಿ.

    * ಈಗ ಆಡಿಸುತ್ತಾ ಕಡಿಮೆ ಉರಿಯಲ್ಲಿ ಬೇಯಿಸಿ. 2 ಚಮಚ ತುಪ್ಪ ಸೇರಿಸಿ ತಿರುಗಿಸಿ. 20-25 ತಿರುಗಿಸುತ್ತಲೇ ಬೇಯಿಸುತ್ತಿದ್ದರೆ ಗಟ್ಟಿಯಾಗುವುದು.

    * ಹಿಟ್ಟು ಗಟ್ಟಿಯಾದ ಬಳಿಕ ತಟ್ಟೆಗೆ ತುಪ್ಪ ಸವರಿ ಅದರಲ್ಲಿ ಸುರಿಯಿರಿ ನಂತರ ಒಂದು ಸ್ಪೂನ್‌ನಿಂದ ಅದರ ಮೇಲೆ ತಟ್ಟಿ, ನಂತರ ಡ್ರೈ ಫ್ರೂಟ್ಸ್ ನಿಂದ ಅಲಂಕರಿಸಿ, ತಣ್ಣಗಾಗಲು ಬಿಡಿ.

    * ನಂತರ ಬೇಕಾದ ಶೇಪ್‌ಗೆ ಕತ್ತರಿಸಿ ಸವಿಯಿರಿ.

Instructions
  • ಇದಕ್ಕೆ ಬೇಕಿದ್ದರೆ ತೆಂಗಿನ ಹೋಳು ಕೂಡ ಸೇರಿಸಬಹುದು, ಇದನ್ನು ಮಾಡಿದರೆ ಎರಡು ದಿನ ಇಟ್ಟು ಬಳಸಬಹುದು.
Nutritional Information
  • ಸರ್ವ್ - 1/2 ಕೆಜಿ ರಾಗಿ ಮಣ್ಣಿ
  • ಕೊಬ್ಬು - ಶೇ.7
  • ಪ್ರೊಟೀನ್ - 10ಗ್ರಾಂ
  • ಕಾರ್ಬ್ಸ್ - ಶೇ.25
  • ನಾರಿನಂಶ - ಶೇ.14
[ 4 of 5 - 81 Users]
X
Desktop Bottom Promotion