Latest Updates
-
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ! -
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು
ಕೇವಲ ಹತ್ತೇ ನಿಮಿಷದಲ್ಲಿ ಮಾಡಿ ಹೊಸ ತಿಂಡಿ: ಬೆಳಗ್ಗೆ ಗಡಿಬಿಡಿಯಲ್ಲೂ ಇದೇ ಬೆಸ್ಟ್!
ನಿತ್ಯ ಬೆಳಗ್ಗೆ ಯಾವ ತಿಂಡಿ ಮಾಡಬೇಕು ಎಂಬ ಚಿಂತೆ ಎಲ್ಲರಲ್ಲೂ ಕಾಡುವುದು ಕಾಮನ್. ಬೆಳಗ್ಗೆ ಎಲ್ಲರು ಗಡಿಬಿಡಿಯಲ್ಲಿರುತ್ತಾರೆ. ಅದ್ರಲ್ಲೂ ಮಕ್ಕಳಿದ್ದರಂತು ಅವರನ್ನು ಶಾಲೆ ಇಲ್ಲವೆ ಕಾಲೇಜಿಗೆ ಬಹುಬೇಗ ಕಳುಹಿಸಬೇಕು. ಹಾಗೆ ನೀವು ಕೂಡ ಕೆಲಸ ಮಾಡುವ ಮಂದಿಯಾದರೆ ಬೇಗ ತಯಾರಾಗಬೇಕಾಗುತ್ತದೆ. ಈ ಸಮಯದಲ್ಲಿ ಅಡುಗೆ ಮನೆಯಲ್ಲೇ ಗಂಟೆಗಳ ಕಾಲ ವ್ಯಯಿಸಲು ಆಗೋದಿಲ್ಲ.
ಹೀಗಿರುವಾಗ ಸುಲಭವಾಗಿ 10ರಿಂದ 15 ನಿಮಿಷದ ಒಳಗೆ ಯಾವುದಾದರು ಖಾದ್ಯ ಮಾಡಿ ಸವಿಯುವ ಕುರಿಯಾಗಿಯೆ ನೀವು ಆಲೋಚಿಸಬಹುದು. ಆದ್ರೆ ಈ ಇಷ್ಟು ಕಡಿಮೆ ಸಮಯದಲ್ಲಿ ಚಿತ್ರಾನ್ನ, ಪುಳಿಯೋಗರೆ, ಅವಲಕ್ಕಿಯಂತಹ ಸುಲಭದ ತಿಂಡಿ ಮಾಡಬಹುದು. ಆದ್ರೆ ಇದನ್ನೇ ದಿನಾಲು ಸವಿಯಲು ಮಾಡಿದರೆ ಬೇಸರ ಬರುವ ಜೊತೆಗೆ ನಾಲಗೆ ರುಚಿಯೂ ಕೆಡಲಿದೆ.

ಆದ್ರೆ ನಾವಿಂದು ಸುಲಭವಾಗಿ 10 ನಿಮಿಷದ ಒಳಗೆ ರುಚಿ ರುಚಿಯಾಗಿ ಹೊಸ ರುಚಿಯ ಖಾದ್ಯವೊಂದನ್ನು ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಅದ್ರಲ್ಲೂ ಕೆಲವೇ ವಸ್ತುಗಳ ಬಳಸಿಕೊಂಡು ಇದನ್ನು ಮಾಡಿ ಮುಗಿಸಬಹುದು. ಹಾಗಾದ್ರೆ ಯಾವ ತಿಂಡಿ ಅನ್ನೋದನ್ನು ನೀವು ಕೂಡ ತಿಳಿದುಕೊಳ್ಳಿ. ಟೊಮೆಟೋ ಬಳಸಿ ಮಾಡುವ ಹೊಸ ತಿಂಡಿಗೆ ಏನೆಲ್ಲಾ ಹಾಕಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಟೊಮೆಟೋ ಬಳಸಿ ಹೊಸ ರೀತಿ ತಿಂಡಿ ಮಾಡಲು ಬೇಕಾಗುವ ವಸ್ತುಗಳು
- ಅಕ್ಕಿ
- ಟೊಮೆಟೋ
- ಉಪ್ಪು
- ಎಣ್ಣೆ
- ತುಪ್ಪ
- ಪಲಾವ್ ಎಲೆ
- ಚಕ್ಕೆ
- ಲವಂಗ
- ಜೀರಿಗೆ
- ಖಾರದ ಪುಡಿ
- ಗರಂ ಮಸಾಲ
- ಅರಶಿಣ ಪುಡಿ
ಟೊಮೆಟೋ ಬಳಸಿ ಹೊಸ ರೀತಿ ತಿಂಡಿ ಮಾಡುವುದು ಹೇಗೆ?
ಮೊದಲು ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ತುಪ್ಪ ಹಾಗೂ ಎಣ್ಣೆಯನ್ನು ಹಾಕಿ. ಬಳಿಕ ಜೀರಿಗೆ, ಚಕ್ಕೆ, ಲವಂಗ, ಪಲಾವ್ ಎಲೆ ಹಾಕಿ ಬಿಸಿ ಮಾಡಿಕೊಂಡು ಬಳಿಕ ಇದಕ್ಕೆ ಈರುಳ್ಳಿ ಹಾಕಿಕೊಂಡು 1 ನಿಮಿಷ ಫ್ರೈ ಮಾಡಿ ಬಳಿಕ ಹಸಿ ಮೆಣಸು ಕೂಡ ಹಾಕಿಕಂಡು ಈರುಳ್ಳಿ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿಕೊಳ್ಳಿ.
ಹೀಗೆ ಸಣ್ಣ ಉರಿಯಲ್ಲಿ ಇಟ್ಟು ಈಗ 2 ದೊಡ್ಡ ಟೊಮೆಟೋವನ್ನು ಮಿಕ್ಸಿಯಲ್ಲಿ ಹಾಕಿ ಪೇಸ್ಟ್ ಮಾಡಿಕೊಂಡು ಒಲೆ ಮೇಲಿರುವ ಬಾಣಲೆಗೆ ಹಾಕಿ ಮಿಕ್ಸ್ ಮಾಡಿಕೊಳ್ಳುತ್ತಾ ಹುರಿದುಕೊಳ್ಳಿ. ಟೊಮೆಟೋ ಹಸಿ ವಾಸನೆ ಹೋಗುವವರೆಗೂ ಹುರಿದುಕೊಳ್ಳಬೇಕು. ನಂತರ ಅರಶಿಣ ಪುಡಿ, ಖಾರದ ಪುಡಿ, ಗರಂ, ಗರಂ ಮಸಾಲ, ಉಪ್ಪು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ.
1 ನಿಮಿಷದ ಬಿಟ್ಟು ಈಗ ಗಟ್ಟಿಯಾದ ಈ ಗೊಜ್ಜಿಗೆ ಕೊನೆಯಲ್ಲಿ ಒಂದು ಟೊಮೆಟೋ ಕತ್ತರಿಸಿ ಇದಕ್ಕೆ ಹಾಕಿಕೊಳ್ಳಿ. ಮತ್ತೆ 1 ನಿಮಿಷ ಬಿಟ್ಟು ಇದಕ್ಕೆ ಮೊದಲೇ ಮಾಡಿರುವ ಹುಡಿ ಹುಡಿಯಾದ ಅನ್ನವನ್ನು ಹಾಕಿಕೊಳ್ಳಿ. ಉಳಿದ ಅನ್ನವಿದ್ದರೂ ಕೂಡ ಈಗ ಬಳಸಿಕೊಳ್ಳಬಹುದು. ಅನ್ನ ಹಾಕಿದ ಬಳಿಕ ಮತ್ತೆ ಮಿಕ್ಸ್ ಮಾಡಿಕೊಳ್ಳುತ್ತಾ ಇರಿ.
ಮಸಾಲೆಗಳು ಚೆನ್ನಾಗಿ ಅನ್ನಕ್ಕೆ ಹಿಡಿಯಬೇಕು. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿಕೊಂಡು ಸವಿಯಲು ನೀಡಬಹುದು. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ತಿಂಡಿ ಕೇವಲ 10 ನಿಮಿಷದೊಳಗೆ ಸಿದ್ದವಾಗುತ್ತೆ. ಇದನ್ನು ನೀವು ಬೆಳಗ್ಗೆ ಗಡಿ ಬಿಡಿಯಲ್ಲಿದ್ದಾಗ ಹಾಗೆ ಕೆಲಸಕ್ಕೆ ತಡವಾದಾಗ ಮಾಡಿಕೊಳ್ಳಬಹುದು. ಮಧ್ಯಾಹ್ನದ ಬಾಕ್ಸ್ಗೂ ಹಾಕಿ ಸವಿಯಲು ಇದು ಬಹಳ ರುಚಿ ನೀಡಲಿದೆ. ನೀವು ಸಹ ಒಮ್ಮೆ ಮನೆಯಲ್ಲಿ ಇದನ್ನು ಟ್ರೈ ಮಾಡಿ ನೋಡಿ.



Click it and Unblock the Notifications