Latest Updates
-
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ?
ಬ್ರೇಕ್ಫಾಸ್ಟ್ಗೆ ಪಟಾಪಟ್ ಮಾಡಬಹುದು ಈ ಗಾರ್ಲಿಕ್ ರೈಸ್, ಘೀರೈಸ್ಗಿಂತಲೂ ಟೇಸ್ಟಿ ಕೂಡ
Recipes
oi-Reena TK
Posted By: Reena TK
ಬೆಳಗ್ಗೆ ಬ್ರೇಕ್ಫಾಸ್ಟ್ಗೆ ಗಾರ್ಲಿಕ್ ರೈಸ್ ಮಾಡಿ ನೋಡಿ, ಸೂಪರ್ ಟೇಸ್ಟ್, ಆರೋಗ್ಯಕ್ಕೂ ಒಳ್ಳೆಯದು, ಅಲ್ಲದೆ ಇದನ್ನು ಮಾಡಲು ಚಿತ್ರಾನ್ನಕ್ಕಿಂತಲೂ ಸುಲಭ, ಘೀ ರೈಸ್ ಮಾಡಿದಷ್ಟು ಸುಲಭ, ರುಚಿಯೂ ಅಷ್ಟೇ ಘೀರೈಸ್ನಂತೆಯೇ ಸೂಪರ್, ಪಟಾಪಟ್ ಮಾಡಬಹುದಾದ ಗಾರ್ಲಿಕ್ ರೈಸ್ ರೆಸಿಪಿ ನೋಡೋಣ:

ಬೇಕಾಗುವ ಸಾಮಗ್ರಿ
6-8 ಬೆಳ್ಳುಳ್ಳಿ (25-30 ಎಸಳು)
1 ಚಮಚ ಎಣ್ಣೆ
2-3 ಚಮಚ ತುಪ್ಪ
ಒಂದು ಚಮಚ ಜಜ್ಜಿದ ಬೆಳ್ಳುಳ್ಳಿ
1 ಕಪ್ ಅಕ್ಕಿ
1 ಈರುಳ್ಳಿ
ಚಕ್ಕೆ
ಲವಂಗ
ಸ್ವಲ್ಪ ಜೀರಿಗೆ
1 ಏಲಕ್ಕಿ
1 ಪಲಾವ್ ಎಲೆ
ಹಸಿ ಮೆಣಸು 2-3 (ನಿಮ್ಮ ಖಾರಕ್ಕೆ ತಕ್ಕಷ್ಟು)
ರುಚಿಗೆ ತಕ್ಕ ಉಪ್ಪು
2 ಕಪ್ ನೀರು
ಗಾರ್ಲಿಕ್ ರೈಸ್ ಮಾಡುವ ವಿಧಾನ
- ನೀವು ಕುಕ್ಕರ್ ಬಿಸಿ ಮಾಡಿ 1 ಚಮಚ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ 2-3 ಚಮಚ ತುಪ್ಪ ಹಾಕಿ
- ತುಪ್ಪ ಬಿಸಿಯಾದಾಗ ಸ್ವಲ್ಪ ಜೀರಿಗೆ ಹಾಕಿ, ಜೀರಿಗೆ ಚಟ್ ಪಟ್ ಶಬ್ದ ಮಾಡುವಾಗ ಸೋಂಪು ಇದ್ದರೆ ಸ್ವಲ್ಪ ಸೋಂಪು ಕೂಡ ಹಾಕಬಹುದು
- ನಂತರ ಚಕ್ಕೆ, ಲವಂಗ ಸೇರಿಸಿ, ಪಲಾವ್ ಎಲೆ, ಏಲಕ್ಕಿ ಹಾಕಿ
- ಜಜ್ಜಿದ ಬೆಳ್ಳುಳ್ಳಿ ಹಾಕಿ 1-2 ನಿಮಿಷ ಫ್ರೈ ಮಾಡಿ, ನಂತರ ಬೆಳ್ಳುಳ್ಳಿ ಹಾಕಿ ಬೆಳ್ಳುಳ್ಳಿ ಗೋಲ್ಡನ್ ಕಲರ್ ಬರುವಷ್ಟು ಹೊತ್ತು ಫ್ರೈ ಮಾಡಿ, ಅದಾದ ಬಳಿಕ ಕತ್ತರಿಸಿದ ಈರುಳ್ಳಿ-ಹಸಿ ಮೆಣಸು ಹಾಕಿ ಸ್ವಲ್ಪ ಬಣ್ಣ ಬದಲಾಗುವವರೆ ಫ್ರೈ ಮಾಡಿ
- ಈಗ ತೊಳೆದಿಟ್ಟ ಅಕ್ಕಿ ಸೇರಿಸಿ ಮಿಕ್ಸ್ ಮಾಡಿ
- ರುಚಿಗೆ ತಕ್ಕ ತುಪ್ಪ ಸೇರಿಸಿ
- ನಂತರ 2 ಕಪ್ ನೀರು ಸೇರಿಸಿ ಮಿಕ್ಸ್ ಮಾಡಿ ಕುಕ್ಕರ್ ಮುಚ್ಚಿ ಒಂದು ಅಥವಾ 2 ವಿಶಲ್ ಬರುವವರೆಗೆ ಬೇಯಿಸಿ. (ಕೆಲವೊಂದು ಅಕ್ಕಿಗೆ ಒಂದು ವಿಶಲ್ ಸಾಕಾಗುತ್ತೆ, ಇನ್ನು ಕೆಲ ಅಕ್ಕಿಗೆ ಬೇಯಲು 2 ವಿಶಲ್ ಬೇಕಾಗುತ್ತೆ, ನೀವು ಯಾವ ಅಕ್ಕಿ ಬಳಸುತ್ತೀರೋ ಅದರಂತೆ ಬೇಯಿಸಿ).
ಇಷ್ಟು ಮಾಡಿದರೆ ಗಾರ್ಲಿಕ್ ರೈಸ್ ರೆಡಿ
ಇದನ್ನು ಸೌತೆ ಹಾಕಿದ ಮೊಸರು ಬಜ್ಜಿ ಜೊತೆ ಸರ್ವ್ ಮಾಡಿ
- ಮೊಸರು ಬಜ್ಜಿ ಹೀಗೆ ಮಾಡಿ ನೋಡಿ ಟೇಸ್ಟಿ ಅನಿಸುತ್ತೆ
- ಸೌತೆಕಾಯಿ ಸಿಪ್ಪೆ ಸುಲಿದು ಚಿಕ್ಕದಾಗಿ ಕತ್ತರಿಸಿ
- ಸ್ವಲ್ಪ ತೆಂಗಿನ ತುರಿ,ಅದಕ್ಕೆ ಹಸಿ ಮೆಣಸು, ಉಪ್ಪು ಸೇರಿಸಿ ನುಣ್ಣನೆ ರುಬ್ಬಿಕೊಳ್ಳಿ
- ಈಗ ಈ ಮಿಶ್ರಣಕ್ಕೆ ಮೊಸರು ಸೇರಿಸಿ, ಸೌತೆಕಾಯಿ ಸೇರಿಸಿದರೆ ಈ ಮೊಸರು ಬಜ್ಜಿ ಗಾರ್ಲಿಕ್ ರೈಸ್ಗೆ ಪರ್ಫೆಕ್ಟ್ ಕಾಂಬಿನೇಷನ್ ನೋಡಿ.
Comments
[ of 5 - Users]
Story first published: Monday, February 24, 2025, 7:04 [IST]
Other articles published on Feb 24, 2025



Click it and Unblock the Notifications