Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಪ್ರೋಟೀನ್ ಕೊರತೆಯಾ? ಈ ದೇಸಿ ಚಟ್ನಿಗಳು ನಿಮ್ಮ ಆರೋಗ್ಯಕ್ಕೆ ವರದಾನ! ಮಾಡೋದು ಹೇಗೆ?
ಪ್ರೋಟೀನ್ ಕೊರತೆಯಾ? ಈ ದೇಸಿ ಚಟ್ನಿ ಪ್ರೋಟೀನ್ ಸಪ್ಲಿಮೆಂಟ್‌ಗೆ ಪರ್ಯಾಯ. ಮನೆಯಲ್ಲಿ ತಯಾರಿಸಿದ ಈ ಪ್ರೋಟೀನ್ ಭರಿತ ಚಟ್ನಿಗಳು ನಿಮ್ಮ ಆರೋಗ್ಯಕ್ಕೆ ವರದಾನ. ಹೌದು, ಭಾರತೀಯ (ದೇಸಿ) ಮನೆಗಳಲ್ಲಿ ತಯಾರಿಸಲಾಗುವ ಚಟ್ನಿಗಳು (Chutney) ರುಚಿಕರ ಮಾತ್ರವಲ್ಲ, ಆರೋಗ್ಯಕ್ಕೂ ಉತ್ತಮ. ಇವು ಪ್ರೋಟೀನ್ ಪೂರಕಗಳಾಗಿಯೂ ಕೆಲಸ ಮಾಡಬಲ್ಲವು. ಹಾಗದ್ರೆ, ಪ್ರೋಟೀನ್ ಪೂರಕ ಚಟ್ನಿಗಳು (protein supplements chutneys) ಯಾವುವು ಎಂಬುದನ್ನು ತಿಳಿಯೋಣ ಬನ್ನಿ.
ಚಟ್ನಿ ಇಲ್ಲದೆ ನಮ್ಮ ತಿಂಡಿ ಅಥವಾ ಊಟವನ್ನು ಊಹಿಸಿಕೊಳ್ಳುವುದು ಕಷ್ಟ. ಏಕೆಂದರೆ, ಚಟ್ನಿಗಳು ನಮ್ಮ (ಭಾರತೀಯ) ಆಹಾರದ ಅವಿಭಾಜ್ಯ ಅಂಗ. ಅಲ್ಲದೆ, ಪ್ರತಿ ಚಟ್ನಿಯನ್ನು ಆಯಾ ಋತುವಿನ ಪೌಷ್ಟಿಕಾಂಶದ (Protein Rich Chutney) ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ತಯಾರಿಸಲಾಗುತ್ತದೆ. ಚಟ್ನಿಯನ್ನು ಕೇವಲ ಒಂದು ಖಾದ್ಯವೆಂದು ಪರಿಗಣಿಸದೆ, ಅದರಲ್ಲಿರುವ ವಿಶೇಷತೆಗಳನ್ನು ತಿಳಿದುಕೊಳ್ಳುವುದು ಮುಖ್ಯ. ಆರೋಗ್ಯಕರವಾಗಿ ತಿನ್ನಲು ಅಥವಾ ನಿಮ್ಮ ಪ್ರೋಟೀನ್ ಸೇವನೆಯನ್ನು ಹೆಚ್ಚಿಸಲು ನೀವು ಬಯಸಿದರೆ, ನಿಮ್ಮ ಮನೆಯಲ್ಲಿ ತಯಾರಿಸುವ ಚಟ್ನಿಗಳಿಗೆ ಕೆಲವು ಆರೋಗ್ಯಕರ ಬದಲಾವಣೆಗಳನ್ನು ಮಾಡಬಹುದು.

ತೆಂಗಿನಕಾಯಿ ಬೇಳೆ ಚಟ್ನಿ
ಬೇಳೆಕಾಳುಗಳು ಪ್ರೋಟೀನ್‌ನ ಉತ್ತಮ ಮೂಲ. ತೆಂಗಿನಕಾಯಿಯನ್ನು ಬಳಸುವುದರಿಂದ ಅಥವಾ ಸೇರಿಸಿದಾಗ, ಅದು ರುಚಿಕರವಾದ ಮತ್ತು ಪೌಷ್ಟಿಕ ಚಟ್ನಿಯನ್ನು ಮಾಡುತ್ತದೆ. ಈ ಚಟ್ನಿ ತಯಾರಿಸಲು, ಉದ್ದಿನ ಬೇಳೆ ಅಥವಾ ತೊಗರಿ ಬೇಳೆಯನ್ನು ಹುರಿದು, ನಂತರ ಅದನ್ನು ತಾಜಾ ತೆಂಗಿನಕಾಯಿ, ಹಸಿರು ಮೆಣಸಿನಕಾಯಿ, ಶುಂಠಿ ಮತ್ತು ಸ್ವಲ್ಪ ಹುಣಸೆಹಣ್ಣಿನೊಂದಿಗೆ ರುಬ್ಬಿಕೊಳ್ಳಿ. ಬೇಳೆಕಾಳುಗಳು ಮತ್ತು ತೆಂಗಿನಕಾಯಿ ಪ್ರೋಟೀನ್ ಅನ್ನು ನೀಡುವುದಲ್ಲದೆ, ಖಾರ, ಹುಳಿ ಮತ್ತು ಸುವಾಸನೆಯ ಪರಿಮಳವನ್ನು ನೀಡುತ್ತದೆ. ಈ ಚಟ್ನಿಯನ್ನು ಇಡ್ಲಿ, ದೋಸೆ ಅಥವಾ ಅನ್ನದೊಂದಿಗೆ ಸೈಡ್ ಡಿಶ್ ಆಗಿ ಸಹ ಬಳಸಬಹುದು.
ಕಡಲೆ ಬೇಳೆ ಚಟ್ನಿ
ಕಡಲೆ ಬೇಳೆಯಲ್ಲಿ ಪ್ರೋಟೀನ್ ಮತ್ತು ಫೈಬರ್ ಅಧಿಕವಾಗಿದೆ. ಇದು ಆರೋಗ್ಯಕರ ಚಟ್ನಿಗೆ ಅತ್ಯುತ್ತಮ ಆಯ್ಕೆಯಾಗಿದೆ. ಕಡಲೆ ಬೇಳೆ ಚಟ್ನಿ ತಯಾರಿಸಲು, ನೆನೆಸಿದ ಕಡಲೆ ಬೇಳೆಯನ್ನು ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿ ಮತ್ತು ಸಾಸಿವೆ ಬೀಜಗಳೊಂದಿಗೆ ಹುರಿಯಿರಿ. ನಂತರ ಹುಣಸೆಹಣ್ಣು ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ರುಬ್ಬಿಕೊಳ್ಳಿ. ಈ ಚಟ್ನಿಯನ್ನು ಅನ್ನ, ಚಪಾತಿ ಅಥವಾ ಪರಾಠದೊಂದಿಗೆ (ಪರೋಟ) ನೀವು ಸವಿಯಬಹುದು.
ಎಳ್ಳಿನ ಚಟ್ನಿ
ಎಳ್ಳು ಪ್ರೋಟೀನ್, ಆರೋಗ್ಯಕರ ಕೊಬ್ಬುಗಳು ಮತ್ತು ಅಗತ್ಯ ಖನಿಜಗಳಿಂದ ತುಂಬಿರುತ್ತದೆ. ಹೀಗಾಗಿ, ಎಳ್ಳು ಚಟ್ನಿ ನಿಮ್ಮ ಊಟಕ್ಕೆ ಪೌಷ್ಟಿಕಾಂಶವನ್ನು ನೀಡುತ್ತದೆ. ಎಳ್ಳು ಚಟ್ನಿ ಮಾಡಲು, ಎಳ್ಳನ್ನು ಹುರಿದು, ಒಣ ಕೆಂಪು ಮೆಣಸಿನಕಾಯಿ, ಬೆಳ್ಳುಳ್ಳಿ ಮತ್ತು ಉಪ್ಪಿನೊಂದಿಗೆ ರುಬ್ಬಿಕೊಳ್ಳಿ. ರುಚಿಯನ್ನು ಹೆಚ್ಚಿಸಲು ಹುಣಸೆಹಣ್ಣು ಅಥವಾ ಬೆಲ್ಲವನ್ನು ಸೇರಿಸಬಹುದು. ಈ ಚಟ್ನಿಯನ್ನು ಸಾಮಾನ್ಯವಾಗಿ ಉಪ್ಪಿಟ್ಟು ಅಥವಾ ಪೊಂಗಲ್, ರೊಟ್ಟಿ ಮತ್ತು ಪರೋಟದಂತಹ (ಪರಾಠ) ಸಾಂಪ್ರದಾಯಿಕ ದೇಸಿ ಉಪಹಾರಗಳೊಂದಿಗೆ ಸವಿಯಬಹುದು.

ಶೇಂಗಾ ಚಟ್ನಿ
ಇದು ಎಲ್ಲರ ನೆಚ್ಚಿನ ಚಟ್ನಿ. ಶೇಂಗಾ ಮತ್ತು ಮಸಾಲೆಗಳ ಸಂಯೋಜನೆಯು ಪ್ರೋಟೀನ್ ಅನ್ನು ಹೆಚ್ಚಿಸುತ್ತದೆ. ಶೇಂಗಾ ಚಟ್ನಿ ತಯಾರಿಸಲು, ಹುರಿದ ಶೇಂಗಾವನ್ನು ಹಸಿರು ಮೆಣಸಿನಕಾಯಿ, ಬೆಳ್ಳುಳ್ಳಿ, ಹುಣಸೆಹಣ್ಣು ಮತ್ತು ರುಚಿಗೆ ತಕ್ಕಷ್ಟು ಉಪ್ಪಿ ಹಾಕಿ ರುಬ್ಬಿಕೊಳ್ಳಿ. ಇನ್ನೂ ರುಚಿಗಾಗಿ ತೆಂಗಿನಕಾಯಿ ಅಥವಾ ಮೊಸರನ್ನು ಸೇರಿಸಬಹುದು. ಈ ಚಟ್ನಿಯನ್ನು ದೋಸೆ, ಇಡ್ಲಿ ಅಥವಾ ಹುರಿದ ತರಕಾರಿಗಳೊಂದಿಗೆ ಸವಿಯಬಹುದು.
ಹೆಸರು ಬೇಳೆ ಚಟ್ನಿ
ಹೆಸರು ಬೇಳೆಯು ಪ್ರೋಟೀನ್ ಭರಿತ ಪದಾರ್ಥವಾಗಿದೆ. ಇದರಿಂದ ರುಚಿಕರವಾದ ಚಟ್ನಿಯನ್ನು ತಯಾರಿಸಬಹುದು. ಇದು ಹೊಟ್ಟೆಗೆ ಹಗುರವಾಗಿರುತ್ತದೆ ಮತ್ತು ಸೌಮ್ಯವಾದ ರುಚಿಯನ್ನು ನೀಡುತ್ತದೆ. ಹೆಸರು ಬೇಳೆ ಚಟ್ನಿ ಮಾಡಲು, ಬೇಳೆಯನ್ನು ಸ್ವಲ್ಪ ಅರಿಶಿನದೊಂದಿಗೆ ಬೇಯಿಸಿ ಮತ್ತು ಹಸಿರು ಮೆಣಸಿನಕಾಯಿ, ಶುಂಠಿ ಮತ್ತು ನಿಂಬೆ ರಸದೊಂದಿಗೆ ರುಬ್ಬಿಕೊಳ್ಳಿ. ಹೆಚ್ಚುವರಿ ಪರಿಮಳಕ್ಕಾಗಿ ಸಾಸಿವೆ, ಕರಿಬೇವು ಮತ್ತು ಇಂಗು ಸೇರಿಸಿ ಒಗ್ಗರಣೆ ಹಾಕಬಹುದು.
ಒಟ್ಟಾರೆಯಾಗಿ, ಈ ಮೇಲಿನ ಚಟ್ನಿಗಳು ರುಚಿಕರವಾಗಿರುವುದರ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು. ಇವುಗಳನ್ನು ತಯಾರಿಸುವುದು ಸುಲಭ ಮತ್ತು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದು ಕೂಡಾ ತುಂಬಾ ಸರಳ.



Click it and Unblock the Notifications
