Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ರೆಸಿಪಿ: ಸೀಗಡಿ ಮಸಾಲ ಸುಕ್ಕಾ ಮಾಡುವುದು ಹೇಗೆ?
ಇಲ್ಲಿ ನಾವು ಸೀಗಡಿ ಮೀನಿನ ಸುಕ್ಕಾ ರೆಸಿಪಿ ನೀಡಿದ್ದೇವೆ, ಇದನ್ನು ಮಾಡುವಾಗ ಸಾಸಿವೆಯೆಣ್ಣೆ ಅಥವಾ ತೆಂಗಿನೆಣ್ಣೆ ಹಾಕಿ ಮಾಡಿ. ಇದಕ್ಕೆ ನೀವು ಬೇಕಾದರೆ ಚೆಟ್ಟಿನಾಡ್ ಮಸಾಲೆ ಸಿಕ್ಕಿದರೆ ಅದನ್ನು ಹಾಕಿದರೆ ತುಂಬಾ ರುಚಿಯಾಗಿರುತ್ತೆ.

ಬನ್ನಿ ಸೀಗಡಿ ಮೀನಿನ ಸುಕ್ಕಾ ಮಾಡುವುದು ಹೇಗೆ ಎಂದು ನೋಡೋಣ:
Recipe By: Reena TK
Recipe Type: Dry
Serves: 2
-
ಬೇಕಾಗುವ ಸಾಮಗ್ರಿ
2 ಚಮಚ ಸಾಸಿವೆಯೆಣ್ಣೆ/ ತೆಂಗಿನೆಣ್ಬೆ
2 ಲವಂಗ
1 ಚಮಚ ಸೋಂಪು
ಸ್ವಲ್ಪ ಕರಿಬೇವು
2 ಟೊಮೆಟೊ (ಕತ್ತರಿಸಿದ್ದು)
2 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್
1 ಚಮಚ ಉಪ್ಪು
25 ಗ್ರಾಂ ಸೀಗಡಿ
ಸ್ವಲ್ಪ ಕೊತ್ತಂಬರಿ ಸೊಪ್ಪು
ಮಸಾಲೆಗೆ
1 ಚಮಚ ಕಾಳು ಮೆಣಸಿನ ಪುಡಿ
1 ಚಮಚ ಖಾರದ ಪುಡಿ
1/2 ಚಮಚ ಅರಿಶಿಣ ಪುಡಿ
1 ಚಮಚ ಕೊತ್ತಂಬರಿ ಪುಡಿ
-
ಮಾಡುವುದು ಹೇಗೆ?
* ಪ್ಯಾನ್ಗೆ ಎಣ್ಣೆ ಹಾಕಿ ಬಿಸಿ ಮಾಡಿ, ಎಣ್ಣೆ ಬಿಸಿಯಾದಾಗ ಸೋಂಪು, ಏಲಕ್ಕಿ, ಕರಿಬೇವು ಹಾಕಿ. ಅದು ಚಟ್ಪಟ್ ಶಬ್ದ ಮಾಡುವಾಗ ಈರುಳ್ಳಿ ಹಾಕಿ 5-6 ನಿಮಿಷ ಫ್ರೈ ಮಾಡಿ.
* ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ, ನಂತರ ಟೊಮೆಟೊ ಹಾಕಿ ಮೆತ್ತಗಾಗುವರೆಗೆ ಸೌಟ್ನಿಂದ ಆಡಿಸುತ್ತಾ ಬೇಯಿಸಬೇಕು, ನಂತರ ಮಸಾಲೆ ಪುಡಿ ಉಪ್ಪು ಹಾಕಿ 5-6 ನಿಮಿಷ ಬೇಯಿಸಿ.
* ಈಗ ಸ್ವಚ್ಛ ಮಾಡಿದ ಸೀಗಡಿ ಹಾಕಿ ಮಿಕ್ಸ್ ಮಾಡಿ 4-5 ನಿಮಿಷ ಬೇಯಿಸಿ. ಸೀಗಡಿ ಬೇಗನೆ ಬೇಯುತ್ತದೆ. ನಂತರ ಗ್ಯಾಸ್ ಆಫ್ ಮಾಡಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಸೀಗಡಿ ಸುಕ್ಕಾ ರೆಡಿ.
- ಸೀಗಡಿ ಬೇಗನೆ ಬೇಯುವುದರಿಂದ 4-5 ನಿಮಿಷ ಬೇಯಿಸಿದರೆ ಸಾಕು. * ಇದಕ್ಕೆ ಬೇಕಿದ್ದರೆ ಸ್ವಲ್ಪ ತೆಂಗಿನಕಾಯಿ ತರಿ-ತರಿ ರುಬ್ಬಿ ಹಾಕಿದರೆ ಮತ್ತಷ್ಟು ರುಚಿಕರವಾಗಿರುತ್ತದೆ.
- ಕ್ಯಾಲೋರಿ - 203 ಕ್ಯಾ
- ಕೊಬ್ಬು - 10 ಗ್ರಾಂ
- ಪ್ರೊಟೀನ್ - 13ಗ್ರಾಂ
- ಕಾರ್ಬ್ಸ್ - 15 ಗ್ರಾಂ



Click it and Unblock the Notifications
