Latest Updates
-
ರಕ್ಷಾಬಂಧನ ವಿಶೇಷ: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ; ಪ್ರಯಾಣಕ್ಕೂ ಮುನ್ನ ಈ ನಿಯಮಗಳನ್ನು ಮಿಸ್ ಮಾಡ್ಬೇಡಿ! -
ಖೇಲೋ ಇಂಡಿಯಾ ಸಂವಾದ ವೀಕ್ಷಿಸುವಾಗ ಜಡತ್ವ ಬೇಡ: 12 ನಿಮಿಷಗಳ ಈ ಸಿಂಪಲ್ ವರ್ಕೌಟ್ ಟ್ರೈ ಮಾಡಿ! -
ಆಗಸ್ಟ್ 27 ಅಥವಾ 28? ರಾಖಿ ಹಬ್ಬದ ಗೊಂದಲಕ್ಕೆ ಇಲ್ಲಿದೆ ಬೆಸ್ಟ್ ಪ್ಲಾನ್! -
ಗುಡುಗು-ಸಿಡಿಲು ಮಳೆ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು 15 ನಿಮಿಷಗಳ ತುರ್ತು ಕ್ರಮಗಳು -
ರಕ್ಷಾಬಂಧನಕ್ಕೆ ಸಿಹಿ ಖರೀದಿಸ್ತಿದ್ದೀರಾ? ಈ ತಪ್ಪು ಮಾಡಿದ್ರೆ ಆರೋಗ್ಯಕ್ಕೆ ಕುತ್ತು, ನಕಲಿ ಸ್ವೀಟ್ಸ್ ಪತ್ತೆ! -
ರಕ್ಷಾಬಂಧನಕ್ಕೆ ಚಿನ್ನ ಖರೀದಿಸುವ ಮುನ್ನ ಎಚ್ಚರ! ಇಂದಿನ ದರ ಮತ್ತು ಲಾಭದಾಯಕ ಟಿಪ್ಸ್ ಇಲ್ಲಿದೆ -
ರಾಷ್ಟ್ರೀಯ ಕ್ರೀಡಾ ದಿನ: 29 ನಿಮಿಷಗಳ ಸರಳ ವರ್ಕೌಟ್ ಮೂಲಕ ಫಿಟ್ ಆಗಿ! -
ಕುಟುಂಬದಲ್ಲಿ ಉಡುಪಿನ ಬಗ್ಗೆ ಟೀಕೆಗಳೇ? ಈ 7 ವಾಕ್ಯಗಳ ಮೂಲಕ ಗೌರವಯುತವಾಗಿ ಉತ್ತರಿಸಿ! -
ಈರುಳ್ಳಿ ಬೆಲೆ ಏರಿಕೆ: ಅಡುಗೆಮನೆಯ ಬಜೆಟ್ ಉಳಿಸಲು ಸರಳ ಟಿಪ್ಸ್ ಮತ್ತು ಪರ್ಯಾಯಗಳು! -
ಪ್ಯಾಕೆಟ್ ಆಹಾರದ ಮೇಲೆ ಕಡ್ಡಾಯ ಎಚ್ಚರಿಕೆ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಅಂತಿಮ ಗಡುವು!
ಪ್ರಾನ್ ಮಲೈ ಕರಿ: ಇದರ ರುಚಿ ಬೊಂಬಾಟ್ ಆಗಿರುತ್ತೆ
ಸೀಗಡಿ ಅಥವ ಪ್ರಾನ್ಸ್ ಪ್ರಿಯರಾಗಿದ್ದರೆ ನಿಮಗೆ ಈ ರೆಸಿಪಿ ಖಂಡಿತ ಮಾಡಬೇಕೆನಿಸುವುದು, ಅದರಲ್ಲಿ ತೆಂಗಿನಕಾಯಿ ಹಾಕಿ ಹಾಲು ಹಾಕಿ ತಯಾರಿಸುವ ಈ ಸೀಗಡಿ ರುಚಿ ಒಮ್ಮೆ ನೋಡಿದರೆ ಮತ್ತೆ ಮತ್ತೆ ಆ ಅಡುಗೆಯ ರುಚಿ ಸವಿಯ ಬೇಕೆನಿಸುವುದು.

ಸೀಗಡಿ ಹಲವಾರು ರೀತಿಯಲ್ಲಿ ಮಾಡಬಹುದು. ಇಲ್ಲಿ ದೊಡ್ಡ ಸೀಗಡಿ ಬಳಸಿ ತಯಾರಿಸಲಾಗಿದೆ. ನೀವು ಬೇಕಾದರೆ ಚಿಕ್ಕ ಗಾತ್ರದ ಸೀಗಡಿಯಿಂದಲೂ ತಯಾರಿಸಬಹುದು. ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:
Recipe By: Reena TK
Recipe Type: Fish Fry
Serves: 4
-
ಬೇಕಾಗುವ ಸಾಮಗ್ರಿ
* 500 ಗ್ರಾಂ ಸೀಗಡಿ
* 2 ಚಕ್ಕೆ
* 4 ಹಸಿರು ಏಲಕ್ಕಿ
* 1 ಚಮಚ ಶುಂಠಿ ಪೇಸ್ಟ್
* 1/2 ಚಮಚ ಖಾರದ ಪುಡಿ
* ಒಂದೂವರೆ ಕಪ್ ತೆಂಗಿನಕಾಯಿ ಹಾಲು
* ರುಚಿಗೆ ತಕ್ಕ ಉಪ್ಪು
* 3 ಚಮಚ ಎಣ್ಣೆ
* 6 ಎಸಳು ಬೆಳ್ಳುಳ್ಳಿ
* 4 ಪಲಾವ್ ಎಲೆ
* 4-6 ಹಸಿ ಮೆಣಸಿನಕಾಯಿ(ಖಾರಕ್ಕೆ ತಕ್ಕಂತೆ)
* 1 ಚಮಚ ಸಕ್ಕರೆ
* 3 ಚಮಚ ಸೋಯಾಬೀನ್ ಎಣ್ಣೆ
ಮಸಾಲೆಗೆ ಬೇಕಾಗುವ ಸಾಮಗ್ರಿ
5 ಚಮಚ ಈರುಳ್ಳಿ ಪೇಸ್ಟ್
1 ಚಮಚ ಅರಿಶಿಣ
1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್
-
ಸೀಗಡಿ ಮಲೈ ಕರಿ ಮಾಡುವುದು ಹೇಗೆ?
* ಸೀಗಡಿಯನ್ನು ಸ್ವಚ್ಛ ಮಾಡಿ ಅದನ್ನು ಈರುಳ್ಳಿ ಪೇಸ್ಟ್, ಅರಿಶಿಣ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಅರ್ಧ ಗಂಟೆ ಇಡಿ.
* ನಂತರ ಪಾತ್ರೆಗೆ ಎಣ್ಣೆ ಹಾಕಿ ಬಿಸಿ ಮಾಡಿ ಅದಕ್ಕೆ ಸೀಗಡಿ ಹಾಕಿ ಫ್ರೈ ಮಾಡಿ, ಎರಡೂ ಬದಿ ಸ್ವಲ್ಪ ಕಂದು ಬಣ್ಣಕ್ಕೆ ಬಂದಾಗ ತೆಗೆದು ಇಡಿ. ಅದೇ ಎಣ್ಣೆಯಲ್ಲಿ ಕತ್ತರಿಸಿ ಬೆಳ್ಳುಳ್ಳಿ ಹಾಕಿ ಫ್ರೈ ಮಾಡಿ ತೆಗೆಯಿರಿ. ಈಗ ಆ ಎಣ್ಣೆ ಬೆಳ್ಳುಳ್ಳಿ ವಾಸನೆ ಬಿರುತ್ತಿರುತ್ತದೆ.
* ಈಗ ಅದೇ ಎಣ್ಣೆಗೆ ಏಲಕ್ಕಿ, ಚಕ್ಕೆ, ಲವಂಗ ಹಾಕಿ, ಈಗ ಈರುಳ್ಳಿ ಪೇಸ್ಟ್ ಹಾಕಿ, ಸಕ್ಕರೆ ಹಾಕಿ ಈರುಳ್ಳಿ ಪೇಸ್ಟ್ ಸ್ವಲ್ಪ ಕಂಡು ಬಣ್ಣಕ್ಕೆ ಬರುವವರೆಗೆ ಫ್ರೈ ಮಾಡಿ.
* ಈಗ ಶುಂಠಿ ಪೇಸ್ಟ್ ಹಾಕಿ ಫ್ರೈ ಮಾಡಿ ನಂತರ ತೆಂಗಿನಕಾಯಿ ಹಾಲು ಹಾಕಿ, ನಂತರ ಸ್ವಲ್ಪ ನೀರಿ ಸೇರಿಸಿ, ರುಚಿಗೆ ತಕ್ಕ ಉಪ್ಪು ಸೇರಿಸಿ, ಖಾರದ ಪುಡಿ, ಅರಿಶಿಣ ಪುಡಿ ಹಸಿ ಮೆಣಸಿನ ಕಾಯಿ ಹಾಕಿ ಮಿಕ್ಸ್ ಮಾಡಿ ಕುದಿಸಿ.
* ಗ್ರೇವಿ ಮೇಲ್ಭಾಗದಲ್ಲಿ ಎಣ್ಣೆ ತೇಲಲಾರಂಭಿಸಿದಾಗ ಅದಕ್ಕೆ ಫ್ರೈ ಮಾಡಿದ ಸೀಗಡಿ, ಫ್ರೈ ಮಾಡಿದ ಬೆಳ್ಳುಳ್ಳಿ ಹಾಕಿ, ಕಡಿಮೆ ಉರಿಯಲ್ಲಿ 3-4 ನಿಮಿಷ ಬೇಯಿಸಿದರೆ ರುಚಿ-ರುಚಿಯಾದ ಸೀಗಡಿ ಕರಿ ರೆಡಿ.
- ರೆಡಿಮೇಡ್ ತೆಂಗಿನಕಾಯಿ ಹಾಲಿನ ಬದಲಿಗೆ ನೀವೇ ತೆಂಗಿನಕಾಯಿ ಹಾಲು ತೆಗೆದು ಮಾಡಿದರೆ ಹಾಲು ಫ್ರೆಷ್ ಇರುವುದರಿಂದ ಇನ್ನೂ ರುಚಿ



Click it and Unblock the Notifications