Just In
Don't Miss
- Education
BEL Recruitment 2021: 22 ಸರಂಕ್ಷಣೆ ಅಧಿಕಾರಿ, ಕಿರಿಯ ಮೇಲ್ವಿಚಾರಕರು ಮತ್ತು ಹವಿಲ್ದಾರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Sports
ICC ODI ranking: ಅಗ್ರ ಸ್ಥಾನದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ
- Automobiles
ಅನಾವರಣವಾಯ್ತು 2021ರ ಹ್ಯುಂಡೈ ಟ್ಯುಸಾನ್ ಎನ್ ಲೈನ್ ಎಸ್ಯುವಿ
- News
ಭಾರತದಲ್ಲಿ 23 ಲಕ್ಷಕ್ಕೂ ಅಧಿಕ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ
- Finance
ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ಕಾಫೀ ಜ. 27ರ ದರ
- Movies
ಚಿತ್ರಮಂದಿರ: 100% ಸೀಟು ಭರ್ತಿಗೆ ಕೇಂದ್ರ ಸರ್ಕಾರ ಅಸ್ತು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ರೆಸಿಪಿ: ಸವಿ ರುಚಿಯ ಲಾಲಿಪಾಪ್
ಆಲೂಗಡ್ಡೆಯಿಂದ ನೀವು ಎಂದಾದರೂ ಆಲೂಗಡ್ಡೆಯಿಂದ ಲಾಲಿಪಾಪ್ ಟ್ರೈ ಮಾಡಿದ್ದೀರಾ? ಈ ಲಾಲಿಪಾಪ್ ತುಂಬಾ ರುಚಿಯಾಗಿರುವುದರಿಂದ ಮಕ್ಕಳಿಗಂತೂ ತುಂಬಾನೇ ಇಷ್ಟವಾಗುವುದು. ಇದನ್ನು ಮಾಡುವ ವಿಧಾನ ಕೂಡ ಕಷ್ಟವಾಗಿಲ್ಲ. ಮನೆಗೆ ಯಾರಾದರೂ ಅತಿಥಿಗಳು ಬಂದಾಗ ಸಂಜೆ ಟೀಗೆ ಮಾಡಿ ಕೊಡಬಹುದಾದ ಸ್ನ್ಯಾಕ್ಸ್ ಇದಾಗಿದೆ.
ಬನ್ನಿ ಆಲೂ ಲಾಲಿಪಾಪ್ ತಯಾರಿಸುವುದು ಹೇಗೆ ಎಂದು ನೋಡೋಣ:
Recipe By: Reena TK
Recipe Type: snacks
Serves: 5
-
ಬೇಕಾಗುವ ಸಾಮಗ್ರಿ
2-3 ಬೇಯಿಸಿದ ಆಲೂಗಡ್ಡೆ
1/2 ಕಪ್ ಈರುಳ್ಳಿ
2-3 ಚಮಚ ಕೊತ್ತಂಬರಿ ಸೊಪ್ಪು
2 ಹಸಿ ಮೆಣಸಿನಕಾಯಿ
1/4 ಚಮಚ ಖಾರದ ಪುಡಿ
1 ಚಮಚ ಚಾಟ್ ಮಸಾಲ
1 ಚಮಚ ನಿಂಬೆ ರಸ
ರುಚಿಗೆ ತಕ್ಕ ಉಪ್ಪು
ಇತರ ಸಾಮಗ್ರಿ
2 ಚಮಚ ಮೈದಾ ಹಿಟ್ಟು
1 ಚಮಚ ಜೋಳದ ಹಿಟ್ಟು
1/2 ಕಪ್ ಬ್ರೆಡ್ ಚೂರುಗಳು
1 ಚಮಚ ಇಟಾಲಿಯನ್ ಸೀಸನಿಂಗ್
1 ಚಮಚ ಚಿಲ್ಲಿ ಫ್ಲೇಕ್ಸ್
ಎಣ್ಣೆ (1 ಕಪ್)
-
ಮಾಡುವ ವಿಧಾನ:1
* ಬೌಲ್‌ಗೆ ಬೇಯಿಸಿದ ಆಲೂಗಡ್ಡೆ ಹಾಕಿ ಮ್ಯಾಶ್ ಮಾಡಿ, ಅದರಲ್ಲಿ ಈರುಳ್ಳಿ, ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಉಪ್ಪು, ಖಾರದ ಪುಡಿ, ಚಾಟ್ ಮಸಾಲ, ನಿಂಬೆ ರಸ ಹಾಕಿ ಮಿಶ್ರ ಮಾಡಿ. ಈಗ ಅವುಗಳಿಂದ ಸಾಧಾರಣ ಗಾತ್ರದ ಉಂಡೆ ಕಟ್ಟಿ,
* ಈಗ ಮೈದಾ ಹಿಟ್ಟು ಹಾಗೂ ಜೋಳದ ಹಿಟ್ಟನ್ನು ಒಂದು ಬೌಲ್‌ನಲ್ಲಿ ಹಾಕಿ, ರುಚಿಗೆ ತಕ್ಕ ಉಪ್ಪು ಹಾಕಿ ಮಿಶ್ರ ಮಾಡಿ. ಮಿಶ್ರಣ ತುಂಬಾ ಗಟ್ಟಿಯಾಗಬಾರದು.
* ಈಗ ಮತ್ತೊಂದು ಬೌಲ್‌ನಲ್ಲಿ ಬ್ರೆಡ್ ಚೂರುಗಳನ್ನು ಹಾಕಿ, ಚಿಲ್ಲಿ ಪ್ಲೇಕ್ಸ್ ಹಾಗೂ ಇಟಾಲಿಯನ್ ಸೀಸನಿಂಗ್ ಹಾಕಿ ಮಿಶ್ರ ಮಾಡಿ ಇಡಿ.
ಮಾಡುವ ವಿಧಾನ: 2
* ಒಂದು ಬಾಣಲೆಗೆ ಎಣ್ಣೆ ಹಾಕಿ ಕಾಯಿಸಿ.
* ಎಣ್ಣೆ ಕುದಿ ಬರಲು ಪ್ರಾರಂಭಿಸಿದಾಗ ಉಂಡೆ ಕಟ್ಟಿದ ಉಂಡೆಯನ್ನು ಮೈದಾ ಹಾಗೂ ಜೋಳ ಹಿಟ್ಟಿನಲ್ಲಿ ಅದ್ದಿ, ನಂತರ ಅದನ್ನು ಬ್ರೆಡ್ ಚೂರ್‌ಗಳನ್ನು ಹೊರಳಾಡಿಸಿ ಎಣ್ಣೆಯಲ್ಲಿ ಕರಿಯಿರಿ.
* ಈಗ ಕರಿದ ಆಲೂ ಲಾಲಿಪಪ್‌ಗೆ ಸ್ಟಿಕ್‌ನಿಂದ ಚುಚ್ಚಿ.
* ನಂತರ ಟೊಮೆಟೊ ಕೆಚಪ್‌ನೊಂದಿಗೆ ಸರ್ವ್ ಮಾಡಿ.
- ಸೂಚನೆ: * ಆಲೂಗಡ್ಡೆಯನ್ನು ಬೇಯಿಸಿ ತಣ್ಣಗಾದ ಮೇಲೆ ಮ್ಯಾಶ್ ಮಾಡಿ. * ಕೈಯಲ್ಲಿ ಮ್ಯಾಶ್ ಮಾಡುವ ಬದಲಿಗೆ ತುರಿಯಿರಿ. * ಮೊದಲಿಗೆ ಒಂದು ಆಲೂ ಉಂಡೆಯನ್ನು ಎಣ್ಣೆಯಲ್ಲಿ ಕರಿಯಿರಿ. ಅದು ಒಡೆದು ಹೋದರೆ ಇನ್ನು ಸ್ವಲ್ಪ ಬ್ರೆಡ್ ಚೂರ್‌ನಲ್ಲಿ ಹೊರಳಾಡಿಸಿ, ನಂತರ ಎಣ್ಣೆಯಲ್ಲಿ ಕರಿಯಿರಿ. * ಚಾಟ್ ಮಸಾಲ ಬದಲಿಗೆ ಒಣ ಮಾವಿನಕಾಯಿ ಪುಡಿ ಸೇರಿಸಬಹುದು.