Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಪೊಟೆಟೊ ಬೈಟ್ಸ್: ಈ ರುಚಿಕರ ಸ್ನ್ಯಾಕ್ಸ್ ರೆಡಿ ಮಾಡಲು ಜಸ್ಟ್ 30 ಮಿನಿಟ್ ಸಾಕು
ಪೊಟೆಟೊ ಬೈಟ್ಸ್ ಹೆಸರು ಕೇಳಲು ಸೂಪರ್ ಅಲ್ವಾ, ಅದನ್ನು ನಮ್ಮ ಕರ್ನಾಟಕ ಶೈಲಿಯಲ್ಲಿಯೇ ಅದ್ಭುತವಾಗಿ ಮಾಡಬಹುದು. ಇದರ ರುಚಿ ತುಂಬಾ ಚೆನ್ನಾಗಿರುವುದರಿಂದ ಮಕ್ಕಳು ಸೂಪರ್ ಅಂದ್ರೆ ದೊಡ್ಡವರು ಕೂಡ ಮಕ್ಕಳಂತೆಯೇ ಇಷ್ಟಪಟ್ಟು ಸವಿಯುತ್ತಾರೆ.
ಇನ್ನು ಈ ಸ್ನ್ಯಾಕ್ಸ್ ಮಾಡುವುದು ಕೂಡ ಅಷ್ಟೇ ಸುಲಭವಾಗಿದೆ. ಅಲ್ಪ-ಸ್ವಲ್ಪ ಅಡುಗೆ ಮಾಡುವ ಮಕ್ಕಳು ಕೂಡ ಇದನ್ನು ಟ್ರೈ ಮಾಡಬಹುದು ಅಷ್ಟು ಸರಳವಾಗಿದೆ ಈ ರೆಸಿಪಿ.
ಅಲ್ಲದೆ ಇದು ಆರೋಗ್ಯಕ್ಕೂ ಒಳ್ಳೆಯದು, ಮಕ್ಕಳಿಗೆ ಈ ಸ್ನ್ಯಾಕ್ಸ್ ಒಳ್ಳೆಯದು. ಎಣ್ಣೆಯಲ್ಲಿ ಫ್ರೈ ಮಾಡಲು ಇಷ್ಟಪಡದಿದ್ದರೆ ತುಪ್ಪ ಹಾಕಿ ತವಾ ಫ್ರೈ ಕೂಡ ಮಾಡಬಹುದು. ಬನ್ನಿ ಪೊಟೆಟೊ ಬೈಟ್ಸ್ ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
ಮೂರು ಆಲೂಗಡ್ಡೆ
ಸ್ವಲ್ಪ ಜೀರಿಗೆ
ಕರಿಬೇವು
ಜಜ್ಜಿದ ಶುಂಠಿ
1ಕಪ್ ಅವಲಕ್ಕಿ
ಕೊತ್ತಂಬರಿ ಸೊಪ್ಪು
ಹಸಿಮೆಣಸಿನಕಾಯಿ
2 ಚಮಚ ಎಣ್ಣೆ ಅಥವಾ ತುಪ್ಪ
ಮಾಡುವ ವಿಧಾನ
ಸ್ಟೆಪ್ 1
ಈಗ ತವಾ ಬಿಸಿ ಮಾಡಿ ಅದಕ್ಕೆ ಜೀರಿಗೆ ಹಾಕಿ, ಜೀರಿಗೆ ಚಟ್ಪಟ್ ಶಬ್ದ ಮಾಡುವಾಗ
ಕರಿಬೇವು ಹಾಕಿ.
ಈಗ ಹಸಿಮೆಣಸಿನಕಾಯಿ, ಜಜ್ಜಿದ ಶುಂಠಿ ಹಾಕಿ ಒಂದೆರಡು ನಿಮಿಷ ಫ್ರೈ ಮಾಡಿ, ಈಗ
ಅರ್ಧ ಕಪ್ ನೀರು ಸೇರಿಸಿ
ನೀರು ಕುದಿ ಬರುವಾಗ ಅದರಲ್ಲಿ ಸ್ವಲ್ಪ ಉಪ್ಪು ಹಾಕಿ
ಸ್ಟೆಪ್ 2
ಈಗ ಒಂದು ಬೌಲ್ನಲ್ಲಿ ಅವಲಕ್ಕಿ ಹಾಕಿ , ಈಗ ಒಗ್ಗರಣೆ ಇರುವ ನೀರಿನ ಮಿಶ್ರಣ
ಅವಲಕ್ಕಿಗೆ ಹಾಕಿ, ಔಟ್ನಿಂದ ಮಿಕ್ಸ್ ಮಾಡಿ ಆ ಬೌಲ್ ಮುಚ್ಚಿ 10 ನಿಮಿಷ ಇಡಿ.
ನಂತರ ಕೈಯಿಂದ ಅದನ್ನು ಪುಡಿ ಪುಡಿ ಮಾಡಿ, ನೀರು ಸ್ವಲ್ಪ ಹೆಚ್ಚು ಆಗಿದೆ
ಎಂದನಿಸಿದರೆ ನೀವು ಒಂದು ಚಮಚ ಗೋಧಿ ಹಿಟ್ಟು ಅಥವಾ ಜೋಳದ ಹಿಟ್ಟು ಸೇರಿಸಿ.
ಈಗ ಮ್ಯಾಶ್ ಮಾಡಿ ಆಲೂಗಡ್ಡೆ ಹಾಕಿ ಮಿಕ್ಸ್ ಮಾಡಿ
ಬಳಿಕ ಸ್ವಲ್ಪ ಕೊತ್ತಂಬರಿ ಪುಡಿ
ಅರಿಶಿಣ ಪುಡಿ, ಜೀರಿಗೆ ಪುಡಿ ಹಾಕಿ ಮಿಕ್ಸ್ ಮಾಡಿ , ಉಪ್ಪು ಬೇಕಿದ್ದರೆ ಸೇರಿಸಿ ಅಷ್ಟೇ.
ಸ್ಟೆಪ್ 3
ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ, ಕಡ್ಲೆಹಿಟ್ಟು ಸೇರಿಸಿ ಮಿಕ್ಸ್
ಮಾಡಿ. ನಂತರ ನಿಮ್ಮ ಅಂಗೈಗೆ 1 ಚಮಚ ಎಣ್ಣೆ ಹಾಕಿ ಕಲೆಸಿ.
ಮಿಶ್ರಣವನ್ನು ಎರಡು ಸಮಭಾಗವನ್ನಾಗಿ ಮಾಡಿ ಪಚ್ಚೆ ಬಾಳೆಹಣ್ಣು ಗಾತ್ರದಲ್ಲಿ ರೋಲ್
ಮಾಡಿ, ನಂತರ ಅದನ್ನು 2 ಇಂಚಿನಷ್ಟು ಕತ್ತರಿಸಿ,
ಬಾಣಲೆಯಲ್ಲಿ ಒಂದು ಕಪ್ ಎಣ್ಣೆ ಹಾಕಿ ಕಾಯಿಸಿ, ಅದರಲ್ಲಿ ಆಲೂಗಡ್ಡೆ ಬೈಟ್ಸ್
ಹಾಕಿ ಫ್ರೈ ಮಾಡಿ, ಬೈಟ್ಸ್ ಬೆಂದ ಮೇಲೆ ಅದನ್ನು ಎಣ್ಣೆಯಿಂದ ತೆಗೆದು ತಟ್ಟೆಗೆ
ಹಾಕಿ.
ರೆಡಿಯಾದ ಪೊಟೆಟೊ ಬೈಟ್ಸ್ ಅನ್ನು ಟೊಮೆಟೊ ಕೆಚಪ್ ಅಥವಾ ಚಟ್ನಿ ಜೊತೆ ಸವಿಯಲು
ನೀಡಿ.
ಮಕ್ಕಳು ಸಂಜೆ ಶಾಲೆಯಿಂದ ಬರುವಾಗ ಏನಾದರೂ ವಿಶೇಷ ಸ್ನ್ಯಾಕ್ಸ್ ಮಾಡಿಟ್ಟರೆ ಅವರ ಖುಷಿ ಹೇಳ ತೀರದು, ಅದರಲ್ಲಿಯೂ ಮಾಲ್ನ ರೆಸ್ಟೋರೆಂಟ್ಗಳಲ್ಲಿ ಸಿಗುವಂತೆ ಸ್ವಲ್ಪ ಫ್ಯಾನ್ಸಿ ಕಾಣುವ ಸ್ನ್ಯಾಕ್ಸ್ ಮಾಡಿಟ್ಟರೆ ಇನ್ನೂ ಖುಷಿಯಿಂದ ಸವಿಯುತ್ತಾರೆ. ಅಂಥ ಒಂದು ರೆಸಿಪಿ ಪೊಟೆಟೊ ಬೈಟ್ಸ್.
ಸಲಹೆ : ಇದಕ್ಕೆ ನೀವು ಸಹಿ ಗೆಣಸು ಸೇರಿಸಬಹುದು
ನೀವು ಹಸಿ ಬಟಾಣಿ ಸೇರಿಸಬಹುದು, ಇವೆಲ್ಲಾ ಈ ಪೊಟೆಟೊ ಬೈಟ್ಸ್ ರುಚಿ ಹೆಚ್ಚಿಸುತ್ತದೆ, ಟ್ರೈ ಮಾಡಿ ನೋಡಿ ಖಂಡಿತ ಇಷ್ಟವಾಗುತ್ತೆ.



Click it and Unblock the Notifications
