Just In
- 2 hrs ago ಹೋಟೆಲ್ ರುಚಿಯ ಪನೀರ್ ಪೆಪ್ಪರ್ ಫ್ರೈ ಮನೆಯಲ್ಲೇ ಮಾಡಿ..! 10 ನಿಮಿಷದಲ್ಲಿ ರೆಡಿ..!
- 11 hrs ago ಮೀನ ರಾಶಿಯಲ್ಲಿ ರಾಹು-ಮಂಗಳ ಯುತಿಯಿಂದ ಅಂಗಾರಕ ಯೋಗ: 12 ರಾಶಿಗಳ ಮೇಲಿರಲಿದೆ ಈ ನಕರಾತ್ಮಕ ಪರಿಣಾ
- 11 hrs ago ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- 12 hrs ago ಪುರುಷರಲ್ಲಿ ಹೆಚ್ಚಾಗುತ್ತಿದೆ ಬಂಜೆತನ: ಪುರುಷರು ಈ ಆಹಾರ ಸೇವಿಸಿದರೆ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುವುದು
Don't Miss
- News Lok Sabha Elections 2024: ಮತದಾನದ ದಿನ ಏನಿರುತ್ತೆ...ಏನಿರಲ್ಲ..?
- Automobiles ಕ್ರ್ಯಾಶ್ಟೆಸ್ಟ್ನಲ್ಲಿ ಈ ಹೋಂಡಾ ಕಾರಿಗೆ ಕೇವಲ 2 ಸ್ಟಾರ್: ಆದರೂ ಭಾರತೀಯರಿಗೆ ಈ ಕಾರು ಅಚ್ಚುಮೆಚ್ಚು!
- Sports ಟಿ20 ವಿಶ್ವಕಪ್ಗಾಗಿ ಭಾರತದ ಟಾಪ್ 3 ಆಯ್ಕೆ ಮಾಡಿದ ಇರ್ಫಾನ್ ಪಠಾಣ್; ವಿರಾಟ್ ಕೊಹ್ಲಿ ಸ್ಥಾನವೇನು?
- Finance April 24 Gold Rate: ಚಿನ್ನದ ಬೆಲೆ ಇಳಿಕೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Technology Infinix: ನಾಳೆ ಇನ್ಫಿನಿಕ್ಸ್ ನೋಟ್ 40 ಪ್ರೊ+ 5G ಫೋನ್ ಖರೀದಿಗೆ ಲಭ್ಯ..108ಎಂಪಿ ಕ್ಯಾಮೆರಾ!
- Movies 'KGF-2' ಚಿತ್ರದಿಂದ ಸಿಕ್ಕಿದ್ದು 200 ಕೋಟಿ ರೂ.; 'ಟಾಕ್ಸಿಕ್', 'ರಾಮಾಯಣ'ಕ್ಕೆ ಯಶ್ 50-50 ಡೀಲ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗಣೇಶ ಚತುರ್ಥಿ ವಿಶೇಷ: ಆಲೂ ಬಜ್ಜಿ ಪಾಕವಿಧಾನ
ಉತ್ತರ ಭಾರತದಲ್ಲಿ ಆಲೂ ಪಕೋರಾ ಎಂದು ಪ್ರಸಿದ್ಧಿ ಪಡೆದಿರುವ ಆಲು ಬಜ್ಜಿ ಕರ್ನಾಟಕದಲ್ಲೂ ಹೆಚ್ಚು ಪ್ರಸಿದ್ಧಿ ಪಡೆದಿದೆ. ಸಾಮಾನ್ಯವಾಗಿ ಮನೆಯಲ್ಲಿ ತಯಾರಿಸುವ ಈ ತಿಂಡಿಯನ್ನು ಆಲೂ ಮತ್ತು ಮಸಾಲೆ ಪದಾರ್ಥಗಳ ಮಿಶ್ರಣದಿಂದ ತಯಾರಿಸಲಾಗುತ್ತದೆ. ಎಣ್ಣೆ ಮತ್ತು ಬೆಣ್ಣೆಯಲ್ಲಿ ಕರಿಯುವ ಈ ತಿನಿಸನ್ನು ಒಂದು ಕಪ್ ಕಾಫಿ ಅಥವಾ ಟೀ ಜೊತೆ ಸವಿದರೆ ಹೆಚ್ಚು ಆಹ್ಲಾದ ಕೊಡುವುದು.
ಮಳೆಗಾಲದ ಚಳಿಯಲ್ಲಿ ಏನನ್ನಾದರೂ ಬಿಸಿ ಬಿಸಿಯಾದ ತಿಂಡಿ ಸವಿಯಬೇಕು ಎಂದು ಬಯಸಿದಾಗ ನೆನಪಾಗುವುದು ಆಲೂ ಬಜ್ಜಿ. ವಿಶೇಷ ಸಮಾರಂಭಗಳಲ್ಲಿ, ಅತಿಥಿಗಳ ಆಗಮನಕ್ಕೆ ಮತ್ತು ಏನಾದರೂ ಬಿಸಿ ತಿಂಡಿ ಸವಿಯಬೇಕೆಂದು ಮನಸ್ಸು ಬಯಸಿದರೆ ತಕ್ಷಣದಲ್ಲಿಯೇ ತಯಾರಿಸಿ ಸವಿಯಬಹುದಾದ ತಿಂಡಿ ಇದು. ಇದನ್ನು ತೆಂಗಿನಕಾಯಿ ಚಟ್ನಿ ಅಥವಾ ಕೆಚಪ್ ಜೊತೆಯೂ ಸವಿಯಬಹುದು. ಕಡಿಮೆ ಸಮಯದಲ್ಲಿ ಹಾಗೂ ಸರಳ ವಿಧಾನದಲ್ಲಿ ತಯಾರಿಸಬಹುದಾದ ಈ ತಿಂಡಿಯನ್ನು ನೀವೂ ತಯಾರಿಸಬೇಕೆನ್ನುವ ಬಯಕೆಯಾದರೆ ಈ ಕೆಳಗೆ ನೀಡಿರುವ ವಿಡಿಯೋ ಪಾಕವಿಧಾನ ಮತ್ತು ಹಂತ ಹಂತವಾದ ಚಿತ್ರ ವಿವರಣೆಯನ್ನು ನೋಡಿ...
Recipe By: ಸುಮಾ ಜಯಂತ್
Recipe Type: ಸ್ನ್ಯಾಕ್ಸ್
Serves: 6 ಬಜ್ಜಿ
-
ತೊಳೆದ ಆಲೂಗಡ್ಡೆ - 1
ರುಚಿಗೆ ತಕ್ಕಷ್ಟು ಉಪ್ಪು
ಕಡಲೇ ಹಿಟ್ಟು - 1 ಕಪ್
ಅಕ್ಕಿ ಹಿಟ್ಟು - 2 ಟೇಬಲ್ ಚಮಚ
ಜೀರಿಗೆ 1 ಟೀ ಚಮಚ
ಖಾರದ ಪುಡಿ - 3 ಟೀ ಚಮಚ
ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪು - 2 ಟೀ ಚಮಚ
ಎಣ್ಣೆ - 4 ಟೇಬಲ್ ಚಮಚ+ ಕರಿಯಲು
ನೀರು 2 1/4 ಕಪ್
-
1. ಆಲೂಗಡ್ಡೆಯ ಸಿಪ್ಪೆಯನ್ನು ತೆಗೆದುಕೊಳ್ಳಬೇಕು.
2. ನಂತರ ಆಲೂಗಡ್ಡೆಯನ್ನು ಸ್ಲೈಸ್ ಆಗಿ ಕತ್ತರಿಸಿಕೊಳ್ಳಿ.
3. ಒಂದು ಬೌಲ್ನಲ್ಲಿ ಕಡಲೇ ಹಿಟ್ಟನ್ನು ತೆಗೆದುಕೊಂಡು ಅದಕ್ಕೆ ಅಕ್ಕಿ ಹಿಟ್ಟನ್ನು ಸೇರಿಸಿ.
4. ಜೀರಿಗೆ ಮತ್ತು ಖಾರದ ಪುಡಿಯನ್ನು ಸೇರಿಸಿ.
5. ರುಚಿಗೆ ತಕ್ಕಷ್ಟು ಉಪ್ಪನ್ನು ಬೆರೆಸಿ.
6. ಹೆಚ್ಚಿಕ್ಕೊಂಡ 2 ಟೀ ಚಮಚ ಕೊತ್ತಂಬರಿ ಸೊಪ್ಪನ್ನು ಸೇರಿಸಿ.
7. ನಂತರ ಒಂದು ಸಣ್ಣ ಪಾತ್ರೆಯಲ್ಲಿ 4 ಟೇಬಲ್ ಚಮಚ ಎಣ್ಣೆಯನ್ನು ಹಾಕಿ.
8. ಎಣ್ಣೆಯನ್ನು ಬಿಸಿ ಮಾಡಿ ಮಿಶ್ರಣಕ್ಕೆ ಸೇರಿಸಿ.
9. ಸ್ವಲ್ಪ ಸ್ವಲ್ಪ ನೀರನ್ನು ಸೇರಿಸುತ್ತ ಮೃದುವಾದ ಬೆಣ್ಣೆಯ ಹದಕ್ಕೆ ಕದಡಿ.
10. ಕರಿಯಲು ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿ ಮಾಡಿ.
11. ಆಲೂಗಡ್ಡೆಯ ಸ್ಲೈಸ್ ಅನ್ನು ಕಡಲೇ ಹಿಟ್ಟಿನ ಮಿಶ್ರಣದಲ್ಲಿ ಅದ್ದಿ.
12. ಅದ್ದಿಕೊಂಡ ಆಲೂ ಸ್ಲೈಸ್ ಅನ್ನು ಒಂದಾದ ಮೇಲೊಂದರಂತೆ ಎಣ್ಣೆಯಲ್ಲಿ ಬಿಡಿ.
13. ಒಂದು ಕಡೆ ಬೆಂದಿದೆ ಎಂದಾದ ಮೇಲೆ ತಿರುವಿ ಇನ್ನೊಂದು ಕಡೆಯೂ ಬೇಯಿಸಿ.
14. ಇವು ಹೊಂಬಣ್ಣಕ್ಕೆ ತಿರುಗಿ ಗರಿ ಗರಿಯಾಗುವವರೆಗೆ ಬೇಯಿಸಿ.
15. ನಂತರ ಎಣ್ಣೆಯಿಂದ ತೆಗೆದು ಒಂದು ಬೌಲ್ನಲ್ಲಿ ಹಾಕಿ.
16. ಬಿಸಿ ಇರುವಾಗಲೇ ಚೆಟ್ನಿ ಅಥವಾ ಕೆಚಪ್ ಜೊತೆ ಸವಿಯಲು ನೀಡಿ.
- 1. ಬಜ್ಜಿ ಹೆಚ್ಚು ಗರಿಗರಿಯಾಗಲು ಅಕ್ಕಿ ಹಿಟ್ಟನ್ನು ಸೇರಿಸಲಾಗುವುದು.
- 2. ನಿಮಗೆ ಅನುಕೂಲಕ್ಕೆ ತಕ್ಕಂತಹ ಸ್ಲೈಸರ್ ಬಳಸಿ ಕತ್ತರಿಸಬಹುದು.
- 3. ನಿಮಗೆ ಬೇಕಿದ್ದರೆ ಅಜ್ವೈನ್ ಅನ್ನು ಮಿಶ್ರಣಕ್ಕೆ ಸೇರಿಸಬಹುದು. ಇದು ಬೇರೆ ರುಚಿಯನ್ನು ನೀಡುತ್ತದೆ.
- ಸರ್ವಿಂಗ್ ಸೈಜ್ - 4 ಬಜ್ಜಿ
- ಕ್ಯಾಲೋರಿ - 651 ಕ್ಯಾಲ್
- ಫ್ಯಾಟ್ - 56 ಗ್ರಾಂ
- ಪ್ರೋಟೀನ್ - 6 ಗ್ರಾಂ
- ಕಾರ್ಬೋಹೈಡ್ರೇಟ್ - 38 ಗ್ರಾಂ
- ಸಕ್ಕರೆ - 1 ಗ್ರಾಂ
- ಫೈಬರ್ - 6 ಗ್ರಾಂ
ಸ್ಟೆಪ್ ಬೈ ಸ್ಟೆಪ್ ಆಲೂ ಬಜ್ಜಿ ರೆಸಿಪಿ ಮಾಡುವ ವಿಧಾನ: