Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅವಲಕ್ಕಿ ಪಾಕವಿಧಾನ
ಅವಲಕ್ಕಿ ಜನಪ್ರಿಯ ಉಪಾರ. ಇದನ್ನು ಉತ್ತರ ಭಾರತ ಮತ್ತು ದಕ್ಷಿಣ ಭಾರತದೆಲ್ಲೆಡೆಯೂ ತಯಾರಿಸುತ್ತಾರೆ. ಅವಲಕ್ಕಿಯಲ್ಲಿ ಎರಡು ಮೂರು ಬಗೆಗಳಿರುವುದನ್ನು ಸಹ ನಾವು ಕಾಣಬಹುದು. ಒಂದೊಂದು ಪ್ರದೇಶದಲ್ಲಿ ಒಂದೊಂದು ಬಗೆಯ ಅವಲಕ್ಕಿಯನ್ನು ಹೆಚ್ಚಾಗಿ ಉಪಯೋಗಿಸುತ್ತಾರೆ. ಅವಲಕ್ಕಿಯನ್ನು ಪವಿತ್ರ ಆಹಾರ ಎಂತಲೂ ಕರೆಯುತ್ತಾರೆ. ಕೆಲವು ದೇವರಿಗೆ, ವಿಶೇಷವಾಗಿ ಇದರಿಂದಲೇ ಪ್ರಸಾದವನ್ನೂ ಸಹ ತಯಾರಿಸುತ್ತಾರೆ. ಕೆಲವು ವಿಶೇಷ ಸಂದರ್ಭಗಳಲ್ಲಿ ಉಪವಾಸ ಗೈಯುವಾಗಲೂ ಅವಲಕ್ಕಿಯನ್ನು ಸೇವಿಸುತ್ತಾರೆ.
ಅವಲಕ್ಕಿಯು ಪೋಷಕಾಂಶ ಭರಿತವಾದ ಉಪಹಾರ. ಇದರ ಸೇವನೆಯು ಪರಿಪೂರ್ಣತೆಯನ್ನು ನೀಡುತ್ತದೆ. ತೆಂಗಿನ ತುರಿ, ಈರುಳ್ಳಿ, ಟೊಮ್ಯಾಟೋ ಹಾಗೂ ಸೂಕ್ತ ಪ್ರಮಾಣದ ಉಪ್ಪು, ಹುಳಿ ಮತ್ತು ಖಾರವನ್ನು ಬೆರೆಸಿದರೆ ರುಚಿಕರವಾದ ತಿಂಡಿಯಾಗುತ್ತದೆ. ಇದನ್ನು ನಿತ್ಯದ ರೀತಿಯಲ್ಲಿ ಸೇವಿಸದರೂ ಯಾವುದೇ ಬಗೆಯ ಬೇಸರ ಉಂಟಾಗದು. ಇದರಲ್ಲಿ ಸೇರಿಸಲಾಗುವ ಕೆಲವು ಒಗ್ಗರಣೆ ಪದಾರ್ಥಗಳು ಹಾಗೂ ತರಕಾರಿಗಳು ನಾಲಿಗೆಗೆ ಇನ್ನಷ್ಟು ರುಚಿಯನ್ನು ನೀಡುತ್ತವೆ.
ಸುಲಭ ಹಾಗೂ ಸರಳ ವಿಧಾನದಲ್ಲಿ ತಯಾರಿಸಬಹುದಾದ ಈ ಉಪಹಾರವನ್ನು ಮುಂಜಾನೆಯ ಉಪಹಾರ, ಮಧ್ಯಾಹ್ನದ ಊಟದ ಸಲುವಾಗಿ, ಸಂಜೆ ಟೀ ಸಮಯದಲ್ಲಿ ಮತ್ತು ರಾತ್ರಿಯ ಊಟಕ್ಕಾಗಿಯೂ ಸಹ ಸವಿಯಬಹುದು. ನಿಮಗೂ ಈ ಉಪಹಾರದ ಪಾಕವಿಧಾನವನ್ನು ತಿಳಿದುಕೊಳ್ಳಬೇಕು ಎಂಬ ಬಯಕೆಯಾದರೆ ಈ ಮುಂದೆ ನೀಡಿರುವ ವೀಡಿಯೋ ಮತ್ತು ಹಂತ ಹಂತವಾದ ಚಿತ್ರವಿವರಣೆಯನ್ನು ಪರಿಶೀಲಿಸಿ.

Recipe By: ಕಾವ್ಯಶ್ರೀ ಎಸ್.
Recipe Type: ಪ್ರಮುಖ ತಿಂಡಿ
Serves: 2-3 ಮಂದಿಗೆ
-
ಎಣ್ಣೆ - 6 ಟೇಬಲ್ ಚಮಚ
ಸಾಸಿವೆ- 3/4 ಟೀ ಚಮಚ
ಉದ್ದಿನ ಬೇಳೆ- 3/4 ಟೀ ಚಮಚ
ಕಡ್ಲೆ ಬೇಳೆ -3/4 ಟೀ ಚಮಚ
ಶೇಂಗಾ - 3/4 ಟೀ ಚಮಚ
ಹಸಿ ಮೆಣಸಿನಕಾಯಿ - 5-6
ಕರಿಬೇವಿನ ಎಲೆ -6-8
ಅರಿಶಿನ ಪುಡಿ -1/2 ಟೇಬಲ್ ಚಮಚ
ಹೆಚ್ಚಿಕೊಂಡ ಈರುಳ್ಳಿ -1 ಕಪ್
ಹೆಚ್ಚಿಕೊಂಡ ಕ್ಯಾಪ್ಸಿಕಮ್ - 3/4 ಕಪ್
ಹೆಚ್ಚಿಕೊಂಡ ಗಜರಿ - 1 ಕಪ್
ತೆಂಗಿನ ತುರಿ - 2 ಟೇಬಲ್ ಚಮಚ + ಅಲಂಕಾರಕ್ಕೆ
ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪು- 2 ಟೇಬಲ್ ಚಮಚ + ಅಲಂಕಾರಕ್ಕೆ
ನಿಂಬೆ ರಸ -2 ಟೇಬಲ್ ಚಮಚ
ಸಾಮಾನ್ಯ ದಪ್ಪದ ಅವಲಕ್ಕಿ -1 ಬೌಲ್
ಉಪ್ಪು -1/2 ಟೀಚಮಚ + 1/2 ಟೇಬಲ್ ಚಮಚ
-
1. ಒಂದು ದೊಡ್ಡ ಬೌಲ್‍ನಲ್ಲಿ ಅವಲಕ್ಕಿಯನ್ನು ಹಾಕಿ, ಅವಲಕ್ಕಿಯನ್ನು ಸಂಪೂರ್ಣವಾಗಿ ಮುಳುಗುವಷ್ಟು ನೀರನ್ನು ಸೇರಿಸಿ, ನೆನೆಯಲು ಬಿಡಿ.
2. ಮಧ್ಯಮ ಪ್ರಮಾಣದಲ್ಲಿ ನೆನೆಯಬೇಕು.
3. ನೆನೆದ ನಂತರ ಜರಡಿಯ ಸಹಾಯದಿಂದ ನೀರನ್ನು ಸಂಪೂರ್ಣವಾಗಿ ಬೇರ್ಪಡಿಸಿ.
4. ನೆನೆದ ಅವಲಕ್ಕಿಯನ್ನು ಒಂದು ಬೌಲ್‍ಗೆ ವರ್ಗಾಯಿಸಿ.
5. ಒಂದು ಬೌಲ್ ನೀರನ್ನು ಸೇರಿಸಿ ಪಕ್ಕಕ್ಕೆ ಇಡಿ.
6. 10 ನಿಮಿಷಗಳ ಕಾಲ ನೆನೆಯಲು ಬಿಡಿ.
7. ದಪ್ಪ ತಳದ ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ.
8. ಎಣ್ಣೆ ಬಿಸಿಯಾದ ನಂತರ ಸಾಸಿವೆ ಕಾಳನ್ನು ಹಾಕಿ, ಹುರಿಯಲು ಬಿಡಿ.
9. ನಂತರ ಉದ್ದಿನ ಬೇಳೆ ಮತ್ತು ಕಡ್ಲೆ ಬೇಳೆ ಸೇರಿಸಿ.
10. ಕರಿ ಬೇವಿನ ಎಲೆ ಮತ್ತು ಸೀಳಿಕೊಂಡ ಹಸಿ ಮೆಣಸಿನಕಾಯನ್ನು ಸೇರಿಸಿ.
11. ನಂತರ ಅರಿಶಿನ ಪುಡಿಯನ್ನು ಸೇರಿಸಿ, ಚೆನ್ನಾಗಿ ತಿರುವಿ.
12. ಕಡಲೆಕಾಯನ್ನು ಸೇರಿಸಿ ಚೆನ್ನಾಗಿ ತಿರುವಿ.
13. ಕಡಲೆಕಾಯಿ ಬಣ್ಣ ಬದಲಾಗಿ ಹುರಿಯುವವರೆಗೆ 2 ನಿಮಿಷಗಳ ಕಾಲ ಬೇಯಿಸಿ.
14. ಹೆಚ್ಚಿಕೊಂಡ ಈರುಳ್ಳಿಯನ್ನು ಸೇರಿಸಿ, ಚೆನ್ನಾಗಿ ತಿರುವಿ.
15. ಅರ್ಧ ಟೀ ಚಮಚ ಉಪ್ಪನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.
16. ಹೆಚ್ಚಿಕೊಂಡ ಕ್ಯಾರೆಟ್ ಮತ್ತು ಕ್ಯಾಪ್ಸಿಕಮ್ ಸೇರಿಸಿ.
17. 2 ನಿಮಿಷಗಳ ಕಾಲ ಬೇಯಲು ಬಿಡಿ.
18. ನೀರನ್ನು ಬೇರ್ಪಡಿಸಿ, ಅವಲಕ್ಕಿಯನ್ನು ಸೇರಿಸಿ.
19. ಎಲ್ಲಾ ಸಾಮಾಗ್ರಿಗಳೊಂದಿಗೆ ಸೂಕ್ತವಾಗಿ ಹೊಂದಿಕೊಳ್ಳುವಂತೆ, ಚೆನ್ನಾಗಿ ತಿರುವಿ.
20. ಅರ್ಧ ಟೇಬಲ್ ಚಮಚ ಉಪ್ಪನ್ನು ಸೇರಿಸಿ.
21. 2 ಟೇಬಲ್ ಚಮಚ ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪು, 2 ಟೇಬಲ್ ಚಮಚ ತೆಂಗಿನ ತುರಿಯನ್ನು ಸೇರಿಸಿ, ಮಿಶ್ರಗೊಳಿಸಿ. ಉರಿಯನ್ನು ಆರಿಸಿ.
22. ಉತ್ತಮ ರುಚಿ ಹಾಗೂ ಪರಿಮಳಕ್ಕಾಗಿ ನಿಂಬೆ ರಸವನ್ನು ಸೇರಿಸಿ.
23. ನಂತರ ಒಂದು ಬೌಲ್‍ಗೆ ವರ್ಗಾಯಿಸಿ.
24. ತೆಂಗಿನ ತುರಿ ಮತ್ತು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.
25. ಬಿಸಿ ಇರುವಾಗಲೇ ಸವಿಯಲು ನೀಡಿ.
- 1. ಅಧಿಕ ಸಮಯದ ತನಕ ಅವಲಕ್ಕಿಯನ್ನು ನೆನೆಸದಿರಿ. ಅತಿಯಾಗಿ ನೆನೆದರೆ ಬಹಳ ಮೃದುವಾಗಿಬಿಡುತ್ತದೆ.
- 2. ಅವಲಕ್ಕಿಗೆ ತರಕಾರಿಯನ್ನು ಸೇರಿಸುವುದು ನಿಮ್ಮ ಆಯ್ಕೆಗೆ ಬಿಟ್ಟಿದ್ದು.
- '3. ನಿಂಬೆ ರಸ ಸೇರಿಸುವ ಮುಂಚೆ ಅವಲಕ್ಕಿ ಕೊಂಚ ತಣಿದಿರಬೇಕು.
- 4. ಅವಲಕ್ಕಿಯನ್ನು ಒಗ್ಗರಣೆಗೆ ಸೇರಿಸುವಾಗ ಸಂಪೂರ್ಣವಾಗಿ ನೀರಿನಿಂದ ಬೇರ್ಪಟ್ಟಿರಬೇಕು.
- ಬಡಿಸುವ ಪ್ರಮಾಣ - 1 ಬೌಲ್
- ಕ್ಯಾಲೋರಿ - 250.2 ಕ್ಯಾಲ್
- ಕೊಬ್ಬು - 5.6 ಗ್ರಾಂ.
- ಪ್ರೋಟೀನ್ - 4.9 ಗ್ರಾಂ.
- ಕಾರ್ಬೋಹೈಡ್ರೇಟ್ - 44.9 ಗ್ರಾಂ.
- ಫೈಬರ್ - 2.4 ಗ್ರಾಂ.
ಹಂತ ಹಂತವಾದ ಚಿತ್ರವಿವರಣೆ:
1. ಒಂದು ದೊಡ್ಡ ಬೌಲ್‍ನಲ್ಲಿ ಅವಲಕ್ಕಿಯನ್ನು ಹಾಕಿ, ಅವಲಕ್ಕಿಯನ್ನು ಸಂಪೂರ್ಣವಾಗಿ ಮುಳುಗುವಷ್ಟು ನೀರನ್ನು ಸೇರಿಸಿ, ನೆನೆಯಲು ಬಿಡಿ.

2. ಮಧ್ಯಮ ಪ್ರಮಾಣದಲ್ಲಿ ನೆನೆಯಬೇಕು.

3. ನೆನೆದ ನಂತರ ಜರಡಿಯ ಸಹಾಯದಿಂದ ನೀರನ್ನು ಸಂಪೂರ್ಣವಾಗಿ ಬೇರ್ಪಡಿಸಿ.

4. ನೆನೆದ ಅವಲಕ್ಕಿಯನ್ನು ಒಂದು ಬೌಲ್‍ಗೆ ವರ್ಗಾಯಿಸಿ.

5. ಒಂದು ಬೌಲ್ ನೀರನ್ನು ಸೇರಿಸಿ ಪಕ್ಕಕ್ಕೆ ಇಡಿ.

6. 10 ನಿಮಿಷಗಳ ಕಾಲ ನೆನೆಯಲು ಬಿಡಿ.

7. ದಪ್ಪ ತಳದ ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ.

8. ಎಣ್ಣೆ ಬಿಸಿಯಾದ ನಂತರ ಸಾಸಿವೆ ಕಾಳನ್ನು ಹಾಕಿ, ಹುರಿಯಲು ಬಿಡಿ.

9. ನಂತರ ಉದ್ದಿನ ಬೇಳೆ ಮತ್ತು ಕಡ್ಲೆ ಬೇಳೆ ಸೇರಿಸಿ.

10. ಕರಿ ಬೇವಿನ ಎಲೆ ಮತ್ತು ಸೀಳಿಕೊಂಡ ಹಸಿ ಮೆಣಸಿನಕಾಯನ್ನು ಸೇರಿಸಿ.

11. ನಂತರ ಅರಿಶಿನ ಪುಡಿಯನ್ನು ಸೇರಿಸಿ, ಚೆನ್ನಾಗಿ ತಿರುವಿ.

12. ಕಡಲೆಕಾಯನ್ನು ಸೇರಿಸಿ ಚೆನ್ನಾಗಿ ತಿರುವಿ.

13. ಕಡಲೆಕಾಯಿ ಬಣ್ಣ ಬದಲಾಗಿ ಹುರಿಯುವವರೆಗೆ 2 ನಿಮಿಷಗಳ ಕಾಲ ಬೇಯಿಸಿ.

14. ಹೆಚ್ಚಿಕೊಂಡ ಈರುಳ್ಳಿಯನ್ನು ಸೇರಿಸಿ, ಚೆನ್ನಾಗಿ ತಿರುವಿ.

15. ಅರ್ಧ ಟೀ ಚಮಚ ಉಪ್ಪನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.

16. ಹೆಚ್ಚಿಕೊಂಡ ಕ್ಯಾರೆಟ್ ಮತ್ತು ಕ್ಯಾಪ್ಸಿಕಮ್ ಸೇರಿಸಿ.

17. 2 ನಿಮಿಷಗಳ ಕಾಲ ಬೇಯಲು ಬಿಡಿ.

18. ನೀರನ್ನು ಬೇರ್ಪಡಿಸಿ, ಅವಲಕ್ಕಿಯನ್ನು ಸೇರಿಸಿ.

19. ಎಲ್ಲಾ ಸಾಮಾಗ್ರಿಗಳೊಂದಿಗೆ ಸೂಕ್ತವಾಗಿ ಹೊಂದಿಕೊಳ್ಳುವಂತೆ, ಚೆನ್ನಾಗಿ ತಿರುವಿ.

20. ಅರ್ಧ ಟೇಬಲ್ ಚಮಚ ಉಪ್ಪನ್ನು ಸೇರಿಸಿ.

21. 2 ಟೇಬಲ್ ಚಮಚ ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪು, 2 ಟೇಬಲ್ ಚಮಚ ತೆಂಗಿನ ತುರಿಯನ್ನು ಸೇರಿಸಿ, ಮಿಶ್ರಗೊಳಿಸಿ. ಉರಿಯನ್ನು ಆರಿಸಿ.

22. ಉತ್ತಮ ರುಚಿ ಹಾಗೂ ಪರಿಮಳಕ್ಕಾಗಿ ನಿಂಬೆ ರಸವನ್ನು ಸೇರಿಸಿ.

23. ನಂತರ ಒಂದು ಬೌಲ್‍ಗೆ ವರ್ಗಾಯಿಸಿ.

24. ತೆಂಗಿನ ತುರಿ ಮತ್ತು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.

25. ಬಿಸಿ ಇರುವಾಗಲೇ ಸವಿಯಲು ನೀಡಿ.

Click it and Unblock the Notifications