Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
Headline for Deeplink -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್!
ಅನಾನಸ್ ಜಾಮ್ ರೆಸಿಪಿ: ಮಾಡುವುದು ಸುಲಭ, ತುಂಬಾ ಸಮಯದವರೆಗೆ ಬಳಸಬಹುದು
ಹಣ್ಣಿನ ರಸ ಆರೋಗ್ಯಕ್ಕೆ ಒಳ್ಳೆಯದು ಅಂತ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಎಲ್ಲರಿಗೂ ಗೊತ್ತಿರುವ ವಿಚಾರವೇ. ಈಗಂತೂ ಮಾರುಕಟ್ಟೆಯಲ್ಲಿ ನಾನಾ ವಿಧದ ಹಣ್ಣಿನ ರಸಗಳು ಬೇರೆ ಬೇರೆ ಪ್ಯಾಕ್ನಲ್ಲಿ ಸಿಗುತ್ತವೆ. ಅದನ್ನು ನಾವು ಸೇವಿಸುತ್ತೇವೆ. ಆದರೆ ಹೀಗೆ ಪ್ರಿಸರ್ವೇಟಿವ್ಸ್ ಬಳಸಿದ ಹಣ್ಣಿನ ರಸ ಅಥವಾ ಜ್ಯಾಮ್ ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ. ಹಾಗಾಗಿ ನಾವು ಮನೆಯಲ್ಲಿಯೇ ಹಣ್ಣಿನ ಜ್ಯಾಮ್ ತಯಾರಿಸಿಕೊಂಡರೆ ಸಾಕಷ್ಟು ಸಮಯ ಫ್ರಿಡ್ಜ್ನಲ್ಲಿ ಇಟ್ಟು ಬಳಸಬಹುದು. ಜೊತೆಗೆ ಇದರಿಂದ ಆರೋಗ್ಯಕ್ಕೆ ಯಾವ ಅಪಾಯವೂ ಆಗುವುದಿಲ್ಲ.

ಸಾಮಾನ್ಯವಾಗಿ ಅನಾನಸ್ ಅಥವಾ ಪೈನಾಪಲ್ ಹಣ್ಣಿನ ಜ್ಯಾಮ್ ಬಹಳ ರುಚಿಕರವಾಗಿರುತ್ತದೆ. ಈ ಹಣ್ಣಿನ ಜ್ಯಾಮ್ ಅನ್ನು ನೀವು ಒಮ್ಮೆ ಮಾಡಿ ಸಂಗ್ರಹಿಸಿಟ್ಟುಕೊಂಡರೆ, ದಿನವು ದೋಸೆ, ಚಪಾತಿ ಒಟ್ಟಿಗೆ ಸವಿಯಬಹುದು. ಇದು ಆರೋಗ್ಯಕರವೂ ಹೌದು. ಕೆಮ್ಮು ನೆಗಡೀ ಸಮಯದಲ್ಲಿ ಈ ಜ್ಯಾಮ್ ಸೇವಿಸುವುದು ಉತ್ತಮ.
ಇವತ್ತು ನಾವು ಅನಾನಸ್ ಹಣ್ಣಿನ ಜಾಮ್ ಅನ್ನು ಸುಲಭವಾಗಿ ಮನೆಯಲ್ಲಿಯೇ
ಹೇಗೆ ತಯಾರಿಸಿಕೊಳ್ಳುವುದು ಎನ್ನುವುದನ್ನು ನೋಡೋಣ.
ತಯಾರಿಸಲು ಬೇಕಾಗುವ ಸಮಯ : ಇಪ್ಪತ್ತು ನಿಮಿಷ
ಅನಾನಸ್ ಹಣ್ಣಿನ ಜಾಮ್ ಮಾಡಲು ಬೇಕಾಗುವ ಸಾಮಗ್ರಿಗಳು:
ಅನಾನಸ್ - ಒಂದು (ಚೆನ್ನಾಗಿ ಹಣ್ಣಾಗಿರಬೇಕು. ಇಲ್ಲವಾದರೆ ಜಾಸ್ತಿ ಹುಳಿ
ಇರುತ್ತದೆ)
ಸಕ್ಕರೆ - ಒಂದು ದೊಡ್ದ ಬೌಲ್
ಕಾಳು ಮೆಣಸು - 10-12 ಕಾಳುಗಳು
ಅನಾನಸ್ ಜಾಮ್ ಮಾಡುವ ವಿಧಾನ
ಮೊದಲಿಗೆ ಅನಾನಸ್ ಹಣ್ಣಿನ ಮೇಲ್ಭಾಗವನ್ನು ಅಂದರೆ ಸಿಪ್ಪೆಯನ್ನು ತೆಗೆದು
ಚಿಕ್ಕದಾಗಿ ಹೆಚ್ಚಿಕೊಳ್ಳಬೇಕು. ನಂತರ ಒಂದು ದಪ್ಪ ತಳದ ಪಾತ್ರೆಯಲ್ಲಿ ಹೆಚ್ಚಿದ
ಅನಾನಸ್ ಚೂರುಗಳನ್ನು ಹಾಕಿ ಬೇಯಲು ಇಡಬೇಕು. ಹೋಳುಗಳು ಪೂರ್ತಿಯಾಗಿ ಬೆಂದ ನಂತರ
ಅದಕ್ಕೆ ಸಕ್ಕರೆ ಹಾಕಿ ಮಿಕ್ಸ್ ಮಾಡಿ. ತಳ ಹಿಡಿಯದಂತೆ ನೋಡಿಕೊಳ್ಳಿ. ಸಕ್ಕರೆ
ಕರಗಿದ ನಂತರ ಅದಕ್ಕೆ ಪುಡಿ ಮಾಡಿಟ್ಟುಕೊಂಡ ಕಾಳುಮೆಣಸನ್ನು ಸೇರಿಸಬೇಕು.
ಈಗ ಸಕ್ಕರೆ ಕರಗಿ ಚೆನ್ನಾಗಿ ಕುದಿದು ಒಂದೆಳೆ ಪಾಕ ಬರಬೇಕು. (ಎರಡು ಬೆರಳುಗಳಲ್ಲಿ
ಪಾಕವನ್ನು ಹಿಡಿದು ನೋಡಿದಾಗ ಒಂದು ಸ್ಟಿಂಗ್/ ಎಳೆ ಕಾಣಿಸಿದರೆ ಒಂದೆಳೆ ಪಾಕ
ಬಂದಿದೆ ಎಂದು ಅರ್ಥ)
ಒಂದೆಳೆ ಪಾಕ ತರಿಸಿದ ನಂತರ ಗ್ಯಾಸ್ ಆಫ್ ಮಾಡಿ ಜಾಮ್ ನ್ನು ಆರಲು ಬಿಡಿ. ಆರಿದ
ನಂತರ ಒಂದು ಗಾಜಿನ ಡಬ್ಬದಲ್ಲಿ ಹಾಕಿಟ್ಟರೆ ಬಹಳ ದಿನಗಳವರೆಗೆ ಕೆಡದೆ ಹಾಗೆ
ಉಳಿಯುತ್ತದೆ. ಇದನ್ನು ಫ್ರೀಡ್ಜ್ ನಲ್ಲಿ ಇಡಬಹುದು. ಈ ಅನಾನಸ್ ಹಣ್ಣಿನ ಜಾಮ್
ದೋಸೆ ,ಚಪಾತಿ, ಮಕ್ಕಳಿಗೆ ಬ್ರೆಡ್ ಗೂ ಸಹ ಹಾಕಿ ಕೊಡಬಹುದು. ಬಹಳ
ರುಚಿಕರವಾಗಿರುತ್ತದೆ ಟ್ರೈ ಮಾಡಿ.



Click it and Unblock the Notifications