Latest Updates
-
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
Headline for Deeplink
ಮನೆಯಲ್ಲೇ ತಯಾರಿಸಿ ಟೇಸ್ಟಿ ಸ್ನಿಕ್ಕರ್ ಚಾಕೋಲೆಟ್
ಅಂಗಡಿಯಲ್ಲಿ ಸಿಗುವ ಚಾಕೋಲೆಟ್ ಬಾರ್ ಸ್ನಿಕ್ಕರ್ ಯಾರಿಗೆ ತಾನೆ
ಇಷ್ಟವಿಲ್ಲ ಹೇಳಿ. ಆದರೆ ಇದನ್ನು ಮನೆಯಲ್ಲೇ ತಯಾರಿಸಿದರೆ?, ಬೇಕೆನಿಸಿದಾಗ
ತಿನ್ನುವ ಅವಕಾಶ ಇದ್ದರೆ ಎಷ್ಟು ಚೆಂದ ಅಲ್ಲವೆ.
ಅದರಲ್ಲೂ ಎಂದೋ ತಯಾರಿಸಿದ ಅಂಗಡಿಯ ಚಾಕೋಲೆಟ್ಗಳಿಗಿಂತ ಮನೆಯಲ್ಲೇ ತಯಾರಿಸಿದರೆ
ಮಕ್ಕಳಿಗೂ ಧೈರ್ಯವಾಗಿ ನೀಡಬಹುದು, ಅವರಿಗೂ ಖುಷಿ ಎನಿಸುತ್ತದೆ. ಹಲವು
ದಿನಗಳವರೆಗೆ ಫ್ರೀಜರ್ನಲ್ಲಿ ಸಹ ಇಟ್ಟು ಸೇವಿಸಬಹುದು.

ನಾವಿಂದು ಮನೆಯಲ್ಲೇ ಕಡಲೆಬೀಜದ ಚಾಕೋಲೆಟ್ ಅಥವಾ ಸ್ನಿಕ್ಕರ್ ಬಾರ್ ಅನ್ನು
ಹೇಗೆ ತಯಾರಿಸಬಹುದು ಹಂತ ಹಂತದ ರೆಸಿಪಿಯನ್ನು ತಿಳಿಸಲಿದ್ದೇವೆ:
ಮನೆಯಲ್ಲಿ ತಯಾರಿಸಿದ ಸ್ನಿಕ್ಕರ್ ಬಾರ್ಗಳನ್ನು ಸಂಸ್ಕರಿಸಿದ ಸಕ್ಕರೆಯ ಬದಲು
ನೈಸರ್ಗಿಕ ಸಕ್ಕರೆ, ಶುಗರ್ ಫ್ರೀಗಳನ್ನು ಬಳಸಿ. ನಾವಿಲ್ಲಿ ವಿಶೇಷವಾಗಿ ಖರ್ಜೂರ
ಹಾಕಿ ಚಾಕೋಲೆಟ್ ತಯಾರಿಸುತ್ತಿದ್ದೇವೆ, ತಯಾರಿಸುವ ವಿಧಾನ ಹೇಗೆ ಮುಂದೆ
ನೋಡಿ:
Recipe By: Boldsky
Recipe Type: Chocolate
Serves: 10
-
ಬೇಕಾದ ಪದಾರ್ಥಗಳು
ಖರ್ಜೂರ 1 1/4 ಕಪ್
ವೆನಿಲ್ಲಾ ಸಾರ 1 ಚಮಚ
ಓಟ್ಸ್ 1 ಕಪ್
ಕರಗಿದ ಡಾರ್ಕ್ ಚಾಕೊಲೇಟ್ 175 ಗ್ರಾಂ
ಕಡಲೆಬೀಜದ ಬೆಣ್ಣೆ (ಪೀನಟ್ ಬಟರ್) 2 ಚಮಚ
ಉಪ್ಪು 1/4 ಚಮಚ
ಹುರಿದ ಕಡಲೆಕಾಯಿ 1/3 ಕಪ್ ಅರ್ಧ ಹೋಳಾಗಿರಬೇಕು
-
ಹಂತ 1
ಸ್ನಿಕ್ಕರ್ ಬಾರ್ಗಳನ್ನು ತಯಾರಿಸಲು, ಮೊದಲು ಒಂದು ಬಟ್ಟಲಿನಲ್ಲಿ ಖರ್ಜೂರಗಳನ್ನು ಹಾಕಿ ನಂತರ ಅದಕ್ಕೆ ಕುದಿಯುವ ಬಿಸಿ ನೀರನ್ನು ಸೇರಿಸಿ 15-20 ನಿಮಿಷಗಳ ಕಾಲ ಬಿಡಿ. ಈಗ, ಮಿಕ್ಸಿ ಜಾರ್ಗೆ ನೀರನ್ನು ಶೋಧಿಸಿದ ಖರ್ಜೂರ ಕಡಲೆಬೀಜದ ಬೆಣ್ಣೆ, ವೆನಿಲ್ಲಾ ಸಾರ ಮತ್ತು ಉಪ್ಪು ಸೇರಿಸಿ ಮಿಕ್ಸಿ ಮಾಡಿ. ಈಗ ದಪ್ಪ ಮತ್ತು ನಯವಾದ ಕ್ಯಾರಮೆಲ್ ಮಾಡಲು ಮಿಶ್ರಣ ಸಿದ್ಧ.
ಹಂತ 2
ಈಗ ಕ್ಯಾರಮೆಲ್ ಹಾಗೂ ಓಟ್ಸ್ ಅನ್ನು ಬಟ್ಟಲಿಗೆ ಹಾಕಿ 1/3 ಶೇಕಡಾದಲ್ಲಿ ಎರಡನ್ನೂ ಸಂಯೋಜಿಸಿ. ದಪ್ಪ ಮತ್ತು ನಯವಾದ ಹಿಟ್ಟಾಗುವವರೆಗೆ ಮಿಶ್ರಣ ಮಾಡಿ.
ಹಂತ 3
9'5 ಇಂಚಿನ ಲೋಹದ ಪಾತ್ರೆಯನ್ನು ತೆಗೆದುಕೊಂಡು ಅದರ ಮೇಲೆ ಬೇಕಿಂಗ್ ಪೇಪರ್ ಅನ್ನು ಹಾಕಿ, ಮೊದಲು ಅದರ ಮೇಲೆ ಓಟ್ಸ್ ಮಿಶ್ರಣವನ್ನು ಹರಡಿ ಅದನ್ನು ಲಘುವಾಗಿ ಒತ್ತಿ ನಂತರ ಉಳಿದ ಕ್ಯಾರಮೆಲ್ ಅನ್ನು ಅದರ ಮೇಲೆ ಸುರಿಯಿರಿ. ಈಗ ಅದನ್ನು ಸಮವಾಗಿ ಹರಡಿ. ಕೊನೆಯದಾಗಿ, ಮಿಶ್ರಣದ ಮೇಲೆ ಕತ್ತರಿಸಿದ ಕಡಲೆಕಾಯಿಯನ್ನು ಸೇರಿಸಿ. ಕನಿಷ್ಠ 2-3 ಗಂಟೆಗಳ ಕಾಲ ಅದನ್ನು ಫ್ರೀಜ್ ಮಾಡಿ.
ಹಂತ 4
ಫ್ರೀಜ್ನಲ್ಲಿ ಇಟ್ಟಿದ್ದ ಮಿಶ್ರ ಹೆಪ್ಪುಗಟ್ಟಿದ ನಂತರ ಅದನ್ನು ಹೋಳುಗಳಾಗಿ ಕತ್ತರಿಸಿ. ಈಗ ಬಾರ್ಗಳನ್ನು ಕರಗಿದ ಚಾಕೊಲೇಟ್ನಲ್ಲಿ ಅದ್ದಿ. ಅವುಗಳನ್ನು ಬಟರ್ ಶೀಟ್ಗೆ ವರ್ಗಾಯಿಸಿ ಮತ್ತು ಸುಮಾರು ಅರ್ಧ ಘಂಟೆಯವರೆಗೆ ಹೆಪ್ಪುಗಟ್ಟಲು ಬಿಡಿ.
ಹಂತ 5
ಈಗ ಮನೆಯಲ್ಲೇ ತಯಾರಿಸಿದ ಸ್ನಿಕ್ಕರ್ ಬಾರ್ಗಳು ಸಿದ್ಧವಾಗಿವೆ ಸುಮಾರು 30 ನಿಮಿಷಗಳ ನಂತರ ಬಟರ್ ಶೀಟ್ನಿಂದ ಕಡಲೆಬೀಜದ ಚಾಕೊಲೆಟ್ ಅನ್ನು ತೆಗೆದು. ಸವಿಯಬಹುದು.
- ಚಾಕೋಲೆಟ್ನ ರುಚಿಯನ್ನು ಇನ್ನಷ್ಟು ಹೆಚ್ಚಿಸಲು ಡಾರ್ಕ್ ಚಾಕೊಲೆಟ್ ನಂತೆ ಮಿಲ್ಕ್ ಚಾಕೊಲೆಟ್ ಅನ್ನು ಸಹ ಒಂದು ಪದರಕ್ಕೆ ಬಳಸಬಹುದು.



Click it and Unblock the Notifications