Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಬ್ರೇಕ್ಫಾಸ್ಟ್ ರೆಸಿಪಿ: ತುಂಬಾ ರುಚಿಯಾಗಿರುತ್ತೆ ಈ ಪತ್ತರಿ
ಪೂರಿ ಬದಲಿಗೆ ನಿಮಗೆ ಬ್ರೇಕ್ಫಾಸ್ಟ್ಗೆ ಟ್ರೈ ಮಾಡಲು ಇಲ್ಲಿದೆ ಪತ್ತರಿ/ಪತ್ತಲ್ ರೆಸಿಪಿ. ಡಯಟ್ನಲ್ಲಿರುವವರಿಗೆ ಈ ಬ್ರೇಕ್ಫಾಸ್ಟ್ ಸೂಕ್ತವಲ್ಲ, ಚೀಟಿಂಗ್ ಡೇಯಲ್ಲಿ ತಿನ್ನಬಹುದು. ಇನ್ನು ಅಪರೂಪಕ್ಕೆ ಇಂಥ ರುಚಿಕರ ತಿನಿಸು ಟೇಸ್ಟ್ ಮಾಡುವುದರಲ್ಲಿ ಏನು ತಪ್ಪಿದೆ ಅಲ್ವಾ?

ಈ ಪತ್ತಲ್ ಅಥವಾ ಪತ್ತರಿ ಬ್ರೇಕ್ಪಾಸ್ಟ್ಗೆ ತುಂಬಾ ರುಚಿಕರವಾದ ತಿನಿಸಾಗಿದೆ. ಇದನ್ನು ಮಾಡುವ ವಿಧಾನ ಹೆಚ್ಚೇನು ಶ್ರಮದಾಯಕವಲ್ಲ. ಮೊಟ್ಟೆ ಅಥವಾ ಮಶ್ರೂಮ್ ಗ್ರೇವಿ, ಕಡ್ಲೆ ಗ್ರೇವಿ ಇವುಗಳ ಜೊತೆ ತಿನ್ನಲು ತುಂಬಾನೇ ರುಚಿಯಾಗಿರುತ್ತೆ. ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:
Recipe By: Reena TK
Recipe Type: breakfast
Serves: 4
-
ಬೇಕಾಗುವ ಸಾಮಗ್ರಿ
1/2 ಕಪ್ ಕುಚಲಕ್ಕಿ
1/2 ಕಪ್ ಬೆಳ್ತಕ್ಕಿ
4 ಈರುಳ್ಳಿ
1/2 ಕಪ್ ಅನ್ನ (ಕುಚಲಕ್ಕಿಯ ಅನ್ನ ಆದರೆ ಒಳ್ಳೆಯದು)
1 ಚಮಚ ಸೋಂಪು
ರುಚಿಗೆ ತಕ್ಕ ಉಪ್ಪು
ಎಣ್ಣೆ
-
ಮಾಡುವುದು ಹೇಗೆ?
* ಅಕ್ಕಿಯನ್ನು ಎಂಟು ಗಂಟೆಗಳ ನೆನೆ ಹಾಕಿ, ನೀರು ಸೋಸಿ ಅದರ ಸಂಪೂರ್ಣ ನೀರು ಹೋಗಲು ಅರ್ಧ ಗಂಟೆ ನೀರು ಹೋಗುವಂಥ ತಟ್ಟೆ ಅಥವಾ ಮಾತ್ರೆಯಲ್ಲಿ ಹಾಕಿಡಿ.
* ನಂತರ ಅಕ್ಕಿಯನ್ನು ಮಿಕ್ಸಿಯಲ್ಲಿ ರುಬ್ಬಿ. ರುಬ್ಬಿವಾಗ ಸ್ವಲ್ಪ-ಸ್ವಲ್ಪ ಹಾಕಿ ರುಬ್ಬಿ ಇಲ್ಲದಿದ್ದರೆ ರುಬ್ಬಲು ಕಷ್ಟವಾಗಬಹುದು.
* ನಂತರ ಈರುಳ್ಳಿ ಅನ್ನ ರುಬ್ಬಿ.
* ಈಗ ಅಕ್ಕಿ ಪುಡಿಗೆ ರುಬ್ಬಿದ ಈರುಳ್ಳಿ-ಅನ್ನದ ಮಿಶ್ರಣ ಹಾಕಿ 1 ಚಮಚ ಉಪ್ಪು (ರುಚಿಗೆ ತಕ್ಕಷ್ಟು) ಹಾಕಿ, ಸೋಂಪು ಸೇರಿಸಿ ಮಿಕ್ಸ್ ಚೆನ್ನಾಗಿ ಕಲೆಸಿ ಮಿಕ್ಸ್ ಮಾಡಿ ಬಟ್ಟೆಯಲ್ಲಿ ಕವರ್ ಮಾಡಿ ಅರ್ಧ ಗಂಟೆ ಇಡಿ.
* ಈಗ ಒಂದು -ಒಂದೂವರೆ ಕಪ್ ಎಣ್ಣೆ ಬಾಣಲೆಯಲ್ಲಿ ಬಿಸಿ ಮಾಢಿ.
* ಎಣ್ಣೆ ಕುದಿಯುವಾಗ ಮಿಶ್ರಣ ಸ್ವಲ್ಪ-ಸ್ವಲ್ಪ ತೆಗೆದು ಉಂಡೆ ಕಟ್ಟಿ, ಪ್ಲಾಸ್ಟಿಕ್ಗೆ ಎಣ್ಣೆ ಸವರಿ ತಟ್ಟಿ ಎಣ್ಣೆಯಲ್ಲಿ ಬಿಡಿ. ಆಗ ಪತ್ತರಿ ಉಬ್ಬುವುದು. ಪತ್ತರಿ ಸ್ವಲ್ಪ ಕಂದು ಬಣ್ಣಕ್ಕೆ ಬರುವಾಗ ತೆಗೆಯಿರಿ.
ರೆಡಿಯಾದ ಪತ್ತರಿಯನ್ನು ತೆಂಗಿನಕಾಯಿ ಹುರಿದು ಮಾಡಿದ ಕಡಲೆ ಸಾರು ಅಥವಾ ಮೊಟ್ಟೆಯ ಸಾರಿನ ಜೊತೆ ಸವಿಯಿರಿ.
- ಇದನ್ನು ನೀವು ಚಿಕನ್ ಜೊತೆ ಸವಿಯಲೂ ತುಂಬಾನೇ ರುಚಿಯಾಗಿರುತ್ತೆ



Click it and Unblock the Notifications