Latest Updates
-
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು?
ರೆಸಿಪಿ ಟಿಪ್ಸ್: ಪತ್ರೊಡೆ ಸ್ನ್ಯಾಕ್ಸ್ ಹೀಗೆ ಮಾಡಿ ನೋಡಿ, ಬಾಯಿ ತುರಿಸಲ್ಲ, ರುಚಿ ಸೂಪರ್
ಮಳೆಗಾಲದ ಪ್ರಮುಖ ಆಹಾರಗಳಲ್ಲೊಂದು ಪತ್ರೊಡೆ, ಇದನ್ನು ಹಲವು ರುಚಿಯಲ್ಲಿ ಮಾಡಲಾಗುವುದು. ಪತ್ರೊಡೆಗೆ ಕೆಸುವಿನ ಎಲೆ ಬಳಸಿ ಮಾಡುತ್ತಾರೆ, ಕೆಸುವಿನ ಎಲೆಯಿಂದ ಮಾಡುವ ಪತ್ರೊಡೆ ತುಂಬಾ ರುಚಿಯಾಗಿರುತ್ತದೆ, ಆದರೆ ಈ ಪತ್ರೊಡೆ ಮಾಡುವಾಗ ಅದಕ್ಕೆ ಬಳಸುವ ಮಸಾಲೆಯಾಗಲಿ ಹುಣಸೆ ಹಣ್ಣಾಗಲಿ ಸರಿಯಾದ ಪ್ರಮಾಣದಲ್ಲಿ ಬಳಸಬೇಕು, ಆವಾಗ ಓವ್! ಪತ್ರೊಡೆ ಅಂತ ನಮ್ಮ ಬಾಯಲ್ಲಿ ನೀರೂರುವುದು, ಇಲ್ಲದಿದ್ದರೆ ಪತ್ರೊಡೆ ಅಷ್ಟೊಂದು ರುಚಿಕರವಾಗಿರುವುದಿಲ್ಲ.

ನೀವು ಪತ್ರೊಡೆ ಅದರಲ್ಲಿಯೂ ಅದನ್ನು ಸ್ನ್ಯಾಕ್ಸ್ ರೀತಿ ಮಾಡಿ ಸವಿಯುವುದಾದರೆ ನಾವು ನೀಡುವ ಈ ಟಿಪ್ಸ್ ತುಂಬಾನೇ ಸಹಕಾರಿಯಾಗುವುದು.
ಸುರುಳಿ-ಸುರುಳಿಯಾದ ಪತ್ರೊಡೆ ಸ್ನ್ಯಾಕ್ಸ್
ನೀವು ಮಸಾಲೆ ಮಾಡುವಾಗ ಮಸಾಲೆ ಸ್ವಲ್ಪ ಹೆಚ್ಚಿರಲಿ, ಏಕೆಂದರೆ ಎಲೆಯ ಮೇಲೆ ಎಷ್ಟು ಮಸಾಲೆ ಮೆತ್ತುತ್ತೀರೋ ಅದನ್ನು ತಿನ್ನಲು ಕೂಡ ಅಷ್ಟೇ ರುಚಿಯಾಗಿರುತ್ತದೆ. ಹಾಗಾಗಿ ಮಸಾಲೆ ಕಡಿಮೆಯಾಗಬಾರದು, ಹಾಗಾಗಿ ಮಸಾಲೆಯನ್ನು ತುಸು ಹೆಚ್ಚೇ ರುಬ್ಬಿ, ಕಡಿಮೆ ರುಬ್ಬಬೇಡಿ.
ಹುಣಸೆ ಹಣ್ಣು ಹಚ್ಚಿರಲಿ
ದೊಡ್ಡ ನಿಂಬೆಹಣ್ಣು ಗಾತ್ರದಷ್ಟು ಹುಣಸೆ ಹಣ್ಣು ಬಳಸಿ, ಹುಣಸೆ ಹಣ್ಣು ಕಡಿಮೆ ಹಾಕಿದರೆ ಪತ್ರೊಡೆ ತಿಂದ ಬಳಿಕ ಗಂಟಲು ತುರಿಸುವುದು, ಹಾಗಾಗಿ ಪತ್ರೊಡೆ ಸ್ನ್ಯಾಕ್ಸ್‌ಗೆ ನೀವು ಹುಣಸೆ ಹಣ್ಣು ಒಂದು ನಿಂಬೆ ಹಣ್ಣು ಗಾತ್ರದಷ್ಟು ಬಳಸಿ (1 ಕಪ್ ಅಕ್ಕಿಗೆ)
ಇಂಗು: ಪುಡಿಗಿಂತ ಗಟ್ಟಿ ಇಂಗು ಒಳ್ಳೆಯದು
ಪತ್ರೊಡೆಗೆ ಮತ್ತೊಂದು ಪ್ರಮುಖವಾದ ವಸ್ತುವೆಂದರೆ ಇಂಗು, ಇಂಗು ಪುಡಿ ಬಳಸುವ ಬದಲಿಗೆ ಗಟ್ಟಿ ಇಂಗು ಬಳಸುವುದು ಒಳ್ಳೆಯದು.
ಕೆಸದ ಎಲೆ
ಎರಡು ಬಗೆಯ ಕೆಸದ ಎಲೆಯಿಂದ ಇದನ್ನು ಮಾಡುತ್ತಾರೆ, ಮರ ಕೆಸದ ಎಲೆ (ಅಂದರೆ ಈ ಎಲೆ ಮರದಲ್ಲಿ ಬೆಳೆಯುವುದು) ಇನ್ನು ನೆಲದಲ್ಲಿಯೇ ಬರುವ ಕೆಸದ ಎಲೆ ಅದಕ್ಕೆ ಗಡ್ಡೆ ಇರಲ್ಲ. ನಿಮಗೆ ಮರ ಕೆಸವಾದರೆ 12-20 ಸಾಕು , ಏಕೆಂದರೆ ಈ ಎಲೆ ಗಟ್ಟಿರುತ್ತದೆ, ಅದೇ ತೋಡು ಕೆಸವಾದರೆ 50-60 ಎಲೆ ಬೇಕು, ಒಂದು ರೋಲ್‌ಗೆ ಒಂದು 20 ಎಲೆ ಹಾಕಬೇಕು.
ಈ ಪತ್ರೊಡೆ ಸ್ನ್ಯಾಕ್ಸ್ ರೆಸಿಪಿ
ಕೆಸುವಿನ ಎಲೆ
1 ಕಪ್ ಅಕ್ಕಿ (3-4 ಗಂಟೆ ಗಾಲ ನೆನೆಹಾಕಿ)
10 ಬ್ಯಾಡಗಿ ಮೆಣಸು
1 ಕಪ್ ಅವಲಕ್ಕಿ
1 ಕಪ್ ತೆಂಗಿನ ತುರಿ
1 ಚಮಚ ಸೋಂಪು
ತುಪ್ಪ 3-4 ಚಮಚ
ಉಪ್ಪು 1 ಚಮಚ
ಮಾಡುವುದು ಹೇಗೆ?
ಬ್ಯಾಡಗಿ ಮೆಣಸು ಹುರಿಯಿರಿ
ನಂತರ ಅವಲಕ್ಕಿ, ಮೆಣಸು, ಉಪ್ಪು, ಹುಣಸೆಹಣ್ಣು, ಸೋಂಪು ಹಾಕಿ ನುಣ್ಣನೆ ರುಬ್ಬಿ,
ಅಕ್ಕಿಯನ್ನು ತರಿತರಿಯಾಗಿ ರುಬ್ಬಿ ಆ ಮಸಾಲೆ ಜೊತೆ ಮಿಕ್ಸ್ ಮಾಡಿ.
ದೊಡ್ಡ ಎಲೆಯನ್ನು ಮೊದಲು ಉಲ್ಟಾ ಇಟ್ಟು ಅದರ ಮೇಲೆ ಮಸಾಲೆ, ಲೇಪಿ, ನಂತರ ನಂತರ
ಇನ್ನೊಂದು ಎಲೆ ಹೀಗೆ ಮಸಾಲೆ ಲೇಬಿಸಿ ಒಂದು 10-12 ಎಲೆ ಇಡಿ, ಬಳಿಕ ಸುತ್ತಿ ದಾರ
ಅಥವಾ ಬಾಳೆಗಿಡದ ನಾರಿನಿಂದ ಸುತ್ತಿ, ಈ ರೀತಿ ಅಷ್ಟೂ ಎಲೆಯನ್ನು ಮಾಡಬೇಕು, 3-4
ರೊಲ್ ಮಾಡಬಹುದು, ನಂತರ ಇದನ್ನು ಹಬೆಯಲ್ಲಿ ಬೇಯಿಸಿ.
ಬಳಿಕ ಹರಿತವಾದ ಚಾಕುವಿನಿಂದ ರೌಂಡ್ ರೌಂಡಾಗಿ ಕತ್ತರಿಸಿ, ತವಾಗೆ ತುಪ್ಪ ಹಾಕಿ ಇದನ್ನು ತವಾದಲ್ಲಿ ಹಾಕಿ ಎರಡೂ ಬದಿ ರೋಸ್ಟ್ ಮಾಡಿ ತೆಗೆದರೆ ಸೂಪರ್ ರುಚಿಯ ಪತ್ರೊಡೆ ಸ್ನಾಕ್ಸ್ ರೆಡಿ.



Click it and Unblock the Notifications
