Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಪತ್ರೊಡೆಯನ್ನು ಔಷಧೀಯ ಗುಣವಿರುವ ಆಹಾರ ಎಂದ ಆಯುಷ್: ಮಾಡುವುದು ಹೇಗೆ?
ಪತ್ರೊಡೆ ಪ್ರಿಯರಿಗೆ ಸಿಹಿ ಸುದ್ದಿ, ಪತ್ರೊಡೆಯನ್ನು ಔಷಧೀಯ ಗುಣವಿರುವ ಸಾಂಪ್ರದಾಯಿಕ ಆಹಾರವಾಗಿ ಆಯುಷ್ ಇಲಾಖೆ ಗುರುತಿಸಿದೆ. ಆಯುಷ್ ಇಲಾಖೆ ಗುರುತಿಸಿರುವ ಒಟ್ಟು 26 ಆಹಾರಗಳನ್ನು ಇದೂ ಒಂದಾಗಿದೆ.
ಆ ಆಹಾರದಲ್ಲಿ ಕ್ಯಾಲ್ಸಿಯಂ ಅಧಿಕವಿದೆ, ಇದರಿಂದ ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚುವುದು. ಇದರಲ್ಲಿ ಫೀನಾನ್‌ಗಳು, ಟ್ಯಾನಿನ್ಸ್, ಪ್ಲೇವೋನಾಯ್ಡ್ಸ್, ಗ್ಲೈಸೋಸೈಡ್ಸ್, ಸ್ಟೀರೋಲ್ಸ್ ಅಂಶವಿರುವುದರಿಂದ ಸಂಧಿವಾತ ನಿವಾರಿಸುತ್ತದೆ. ಕೆಸುವಿನ ಎಲೆಯಲ್ಲಿ ವಿಟಮಿನ್ ಸಿ ಹಾಗೂ ಬೀಟಾ ಕೆರೋಟಿನ್ ಅಧಿಕವಿದೆ ಎಂದು ಆಯುಷ್ ಇಲಾಖೆ ಹೇಳಿದೆ.
ಮಳೆಗಾಲದ ವಿಶೇಷ ಅಡುಗೆಯಲ್ಲಿ ಒಂದು ಪತ್ರೊಡೆ. ಅದರಲ್ಲೂ ಕರಾವಳಿ, ಮಲೆನಾಡು, ಕೊಡಗು ಈ ಕಡೆಗಳಲ್ಲಿ ಪತ್ರೊಡೆ ತುಂಬಾನೇ ಫೇಮಸ್. ಇನ್ನು ತುಳುಕೂಟ ಮುಂತಾದ ಊರ ಹಬ್ಬದಲ್ಲಿ ಪತ್ರೊಡೆಯದ್ದೇ ಮೇಲುಗೈ.

ಈ ಪತ್ರೊಡೆಯನ್ನು ಹಲವಾರು ರುಚಿಯಲ್ಲಿ ತಯಾರಿಸುತ್ತಾರೆ. ಇಲ್ಲಿ ನಾವು ಹಿಟ್ಟನ್ನು ಬೇಯಿಸಿ, ಪತ್ರೊಡೆ ಪುಡಿ-ಪುಡಿ ಮಾಡಿ ಮಾಡುವ ರೆಸಿಪಿ ನೀಡಿದ್ದೇವೆ.
ಆಹಾ ಬೆಳಗ್ಗಿನ ಬ್ರೇಕ್‌ಫಾಸ್ಟ್‌ಗೆ ಪತ್ರೊಡೆ ಇದ್ದರೆ ಮತ್ತೇನು ಬೇಕು ಅಲ್ವಾ? ಈ ಪತ್ರೊಡೆ ರೆಸಿಪಿ ಮಾಡುವುದು ಹೇಗೆ ಎಂದು ಇಲ್ಲಿ ವೀಡಿಯೋ ಸಹಿತ ವಿವರಿಸಿದ್ದೇವೆ ನೋಡಿ.
Recipe By: Reena TK
Recipe Type: Veg
Serves: 6
-
ಬೇಕಾಗುವ ಸಾಮಗ್ರಿ
ಕೆಸುವಿನ ಎಲೆ 5-6
ಅಕ್ಕಿ 2 ಲೋಟ
1 ತೆಂಗಿನಕಾಯಿ
ಖಾರದ ಪುಡಿ (ಖಾರಕ್ಕೆ ತಕ್ಕಷ್ಟು)
ಕೊತ್ತಂಬರಿ ಪುಡಿ 2 ಚಮಚ
ಅರಿಶಿಣ ಪುಡಿ 1/2 ಚಮಚ
ಜೀರಿಗೆ 1/4 ಚಮಚ
ಹುಣಸೆ ಹಣ್ಣು (1 ನಿಂಬೆ ಹಣ್ಣು ಗಾತ್ರದಷ್ಟು)
2 ಟೊಮೆಟೊ
2 ಈರುಳ್ಳಿ
ಹಸಿ ಮೆಣಸಿನಕಾಯಿ 2-3
ರುಚಿಗೆ ತಕ್ಕ ಉಪ್ಪು
ಬಾಳೆಲೆ 2-3
-
ಮಾಡುವ ವಿಧಾನ
* ಕೆಸುವಿನ ಸೊಪ್ಪಿನ ನಾರು ಬಿಡಿಸಿ ಕತ್ತರಿಸಿಕೊಳ್ಳಿ
* ಅಕ್ಕಿಯನ್ನು ರಾತ್ರಿ ನೆನೆಹಾಕಿ ಬೆಳಗ್ಗೆ ಸ್ವಲ್ಪ ಉಪ್ಪು ಹಾಕಿ ರುಬ್ಬಿಕೊಳ್ಳಬೇಕು ( ಸ್ವಲ್ಪ ಗಟ್ಟಿಯಾಗಿ ದೋಸೆ ರುಬ್ಬುವ ಹಾಗೆ ರುಬ್ಬಬೇಕು).
* ಈಗ ಕೆಸುವಿನ ಎಲೆ ಜೊತೆ ಮಿಶ್ರ ಮಾಡಿ.
* ಬಾಳೆಲೆ ಒಲೆ ಬೆಂಕಿಯಲ್ಲಿ ಅಥವಾ ಗ್ಯಾಸ್‌ನಲ್ಲಿ ಬಾಡಿಸಿ.
* ಅದಕ್ಕೆ ಅಕ್ಕಿ ಹಿಟ್ಟು ಹಾಕಿ ಮಡಚಿ ಹಬೆಯಲ್ಲಿ ಬೇಯಿಸಿ.
* ಇದೇ ಸಮಯಕ್ಕೆ ತೆಂಗಿನ ಕಾಯಿ ತುರಿದು ಅದಕ್ಕೆ ಮಸಾಲೆ ಸಾಮಗ್ರಿ ಹಾಗೂ ಹುಣಸೆಹಣ್ಣು ಹಾಕಿ ರುಬ್ಬಿಕೊಳ್ಳಬೇಕು.
* ಟೊಮೆಟೊ, ಈರುಳ್ಳಿ, ಹಸಿ ಮೆಣಸಿನಕಾಯಿ ಕತ್ತರಿಸಿ ಹಾಕಿ ಅದಕ್ಕೆ ರುಬ್ಬಿದ ಮಸಾಲೆ ಹಾಕಿ ಕುದಿಸಿ.
* ಈಗ ಬೆಂದ ಹಿಟ್ಟನ್ನು ಎಲೆಯಿಂದ ಬಿಡಿಸಿ ಚಿಕ್ಕದಾಗಿ ಕತ್ತರಿಸಿ, ಕುದಿಸಿದ ಮಿಶ್ರಣದಲ್ಲಿ ಹಾಕಿ ಮಿಶ್ರ ಮಾಡಿ 2 ಗಂಟೆ ಇಡಿ. ಹಿಟ್ಟು ಚೆನ್ನಾಗಿ ಮಸಾಲೆ ಹೀರಿಕೊಳ್ಳುತ್ತದೆ.
* ನಂತರ ಅದನ್ನು ಮತ್ತೊಮ್ಮೆ ಪುಡಿ-ಪುಡಿ ಮಾಡಿ ಮಿಶ್ರ ಮಾಡಿದರೆ ಸವಿಯಲು ರುಚಿಯಾದ ಪತ್ರೊಡೆ ರೆಡಿ.
- ಕೆಸುವಿನ ಎಲೆಯಿಂದ ತುರಿಕೆ ಉಂಟಾಗದಿರಲು ಎಲೆ ಕಿತ್ತು ನಾರು ತೆಗೆದು ಒಂದು ದಿನ ಇಡಿ. ಇನ್ನು ಇದನ್ನು ಹುಣಸೆಹಣ್ಣು ಸ್ವಲ್ಪ ಅಧಿಕ ಬಳಸುವುದರಿಂದ ತುರಿಕೆ ಉಂಟಾಗುವುದಿಲ್ಲ, ಪತ್ರೊಡೆ ರುಚಿಯೂ ಹೆಚ್ಚುವುದು
- ಸರ್ವ್ - 100ಗ್ರಾಂ ಪತ್ರೊಡೆ
- ಕ್ಯಾಲೋರಿ - 100ಕ್ಯಾ
- ಫ್ಯಾಟ್ - 0.1 ಗ್ರಾಂ ಲಿಪಿಡ್ ಫ್ಯಾಟ್
- ಪ್ರೊಟೀನ್ - 2.2ಗ್ರಾಂ
- ಕಾರ್ಬೋಹೈಡ್ರೇಟ್ಸ್ - 23ಗ್ರಾಂ
- ಫೈಬರ್ - 1.9 ಗ್ರಾಂ ಡಯಟರಿ ಫೈಬರ್



Click it and Unblock the Notifications
