Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಪಾನಿ ಪುರಿ ಹೀಗೆ ಮಾಡಿದರೆ ರುಚಿ ಸೂಪರ್ ಆಗಿರುತ್ತೆ, ಯಾವುದೇ ಭಯವಿಲ್ಲದೆ ಮನೆ ಮಂದಿ ಸವಿಯಬಹುದು
ಪಾನಿ ಪುರಿ ನಿಮಗೆ ತುಂಬಾ ಇಷ್ಟ, ಆದರೆ ಹೊರಗಡೆ ತಿಂದಾಗ ಹೊಟ್ಟೆ ನೋವು, ಬೇಧಿ ಈ ಬಗೆಯ ಸಮಸ್ಯೆ ಕಾಣಿಸುತ್ತಿದ್ದರೆ ನೀವು ಪಾನಿಪುರಿಯನ್ನು ಸುಲಭವಾಗಿ ಮನೆಯಲ್ಲಿಯೇ ಮಾಡಬಹುದು ನೋಡಿ:
ಸೂಚನೆ: ನೀವು ಕಡ್ಲೆ ಚೆನ್ನಾ ಅಥವಾ ಕಪ್ಪು ಕಡ್ಲೆ ಬಳಸಬಹುದು

ಬೇಕಾಗುವ ಸಾಮಗ್ರಿ
ಪೂರಿ (ರೆಡಿಮೇಡ್ ಅಥವಾ ಹೋಮ್ ಮೇಡ್)
1 ಈರುಳ್ಳಿ(ಚಿಕ್ಕದಾಗಿ ಕತ್ತರಿಸಿದ್ದು)
1/2 ಕಪ್ ಸೇವ್
1/4 ಕಪ್ ಹುಣಸೆಹಣ್ಣಿನ ಚಟ್ನಿ(ಬೇಕಿದ್ದರೆ ಬಳಸಬಹುದು)
ಮಾಡುವ ವಿಧಾನ
1/2 ಕಪ್ ಪುದೀನಾ ಎಲೆ
1/2 ಕಪ್ ಕೊತ್ತಂಬರಿ ಸೊಪ್ಪು
1-2 ಹಸಿ ಮೆಣಸು
1/2 ಇಂಚಿನ ಶುಂಠಿ
ಒಂದು ನಿಂಬೆ
3 ಚಮಚ ಸಕ್ಕರೆ
1 ಚಮಚ ಚಾಟ್ ಮಸಾಲ ಪುಡಿ
1/4 ಚಮಚ ಬ್ಲ್ಯಾಕ್ ಸಾಲ್ಟ್
4 ಚಮಚ ಬೂಂದಿ
ರುಚಿಗೆ ತಕ್ಕ ಉಪ್ಪು
4 ಕಪ್ ನೀರು
ಮಸಾಲೆಗೆ
2-3 ಆಲೂಗಡ್ಡೆ
1/2 ಕಪ್ ಕಪ್ಪು ಕಡ್ಲೆ
1/2 ಚಮಚ ಖಾರದ ಪುಡಿ
1/2 ಚಮಚ ಜೀರಿಗೆ ಪುಡಿ
1/4 ಚಮಚ ಚಾಟ್ ಮಸಾಲ ಪುಡಿ
ಸ್ವಲ್ಪ ಕೊತ್ತಂಬರಿ ಸೊಪ್ಪು
ರುಚಿಗೆ ತಕ್ಕ ಉಪ್ಪು

ಆಲೂಗಡ್ಡೆ ಚೆನ್ನಾಗಿ ತೊಳೆದರೆ ಕಡ್ಲೆ ಜೊತೆಯೇ ಬೇಯಿಸಬಹುದು, ನಂತರ ಸಿಪ್ಪೆ ಸುಲಿಯಬೇಕು.
ಮಾಡುವ ವಿಧಾನ'
ನೀವು ಒಂದು ಹಿಡಿ ಪುದೀನಾ, ಒಂದು ಹಿಡಿ ಕೊತ್ತಂಬರಿಯನ್ನು ತೊಳೆದು ಸ್ವಚ್ಛಗೊಳಿಸಿ, ಈಗ ಅದಕ್ಕೆ ಶುಂಠಿ, ಹಸಿ ಮೆಣಸು ಹಾಕಿ ರುಬ್ಬಿ, ನಂತರ ನಿಂಬು ರಸ ಸೇರಿಸಿ. ಪೇಸ್ಟ್ ನುಣ್ಣನೆ ಇರಬೇಕು, ಬೇಕಿದ್ದರೆ ಸ್ವಲ್ಪ ನೀರು ಹಾಕಿ ರುಬ್ಬಿ.
ಈಗ ಈ ಚಟ್ನಿಯನ್ನು ಒಂದು ಬೌಲ್ಗೆ ಹಾಕಿ ಅದಕ್ಕೆ ಸಕ್ಕರೆ, ಚಾಟ್ ಮಸಾಲ
ಪುಡಿ, ಬ್ಲ್ಯಾಕ್ ಸಾಲ್ಟ್ ( ಬ್ಲ್ಯಾಕ್ ಸಾಲ್ಟ್ ಇಲ್ಲದಿದ್ದರೆ ಕಲ್ಲುಪ್ಪು
ಬೇಕಿದ್ದರೆ ಹಾಕಬಹುದು)
ಹಾಕಿ ಮಿಕ್ಸ್ ಮಾಡಿದರೆ ಪಾನಿ ರೆಡಿ.
ಈ ಪಾನಿ ಫ್ರಿಡ್ಜ್ನಲ್ಲಿಟ್ಟು ಸರ್ವ್ ಮಾಡುವಾಗ ಬಳಸಿದರೆ ತಣ್ಣಗೆ ರುಚಿ
ಅನಿಸುವುದು, ರೂಮ್ ಉಷ್ಣತೆಯಲ್ಲಿಯೂ ಬಳಸಬಹುದು.
ಈಗ ಮತ್ತೊಂದು ಬೌಲ್ನಲ್ಲಿ ಆಲೂಗಡ್ಡೆಯನ್ನು ಸಿಪ್ಪೆ ಸುಲಿದು ಹಾಕಿ, ಕಡ್ಲೆ ಹಾಕಿ, ಅದಕ್ಕೆ ಖಾರದ ಪುಡಿ, ಜೀರಿಗೆ ಪುಡಿ, ಚಾಟ್ ಮಸಾಲ, ಸ್ವಲ್ಪ ಕೊತ್ತಂಬರಿ ಸೊಪ್ಪು, ಉಪ್ಪು ಸೇರಿಸಿ ಮಿಕ್ಸ್ ಮಾಡಿ.
ಈಗ ನೀವು ಪಾನಿ ಪುಡಿ ಸೆಟ್ ಮಾಡಿ
ಒಂದು ಪ್ಲೇಟ್ಗೆ ಪಾನಿ ಪುರಿಯನ್ನು ಕೈಯಿಂದ ಸ್ವಲ್ಪ ಒಡೆದು, ಅದರೊಳಗಡೆ
ಆಲೂಗಡ್ಡೆ ಮಸಾಲೆ ತುಂಬಿ, ಮೇಲ್ ಸೇವ್ ಉದುರಿಸಿ, ಸ್ವಲ್ಪ ಹುಣಸೆ ಚಟ್ನಿ ಹಾಕಿ ,
ನಂತರ ಒಂದು ಕಪ್ನಲ್ಲಿ ಮಸಾಲೆ ಪಾನಿ ಇಟ್ಟು ಸರ್ವ್ ಮಾಡಿ.
ಸಲಹೆ
ಪಾನಿಪುರಿ ಬಹುತೇಕ ಜನರ ಮೆಚ್ಚಿನ ಬೀದಿ ಬದಿಯ ಆಹಾರ. ಆದರೆ ಬೀದಿ ಬದಿಯ ಆಹಾರ
ಸೇವಿಸುವಾಗ ಅವರು ಎಷ್ಟರ ಮಟ್ಟಿಗೆ ಶುಚಿತ್ವದ ಕಡೆಗೆ ಗಮನಹರಿಸಿದ್ದಾರೆ, ಅದಕ್ಕೆ
ಯಾವ ನೀರು ಬಳಸಿದ್ದಾರೆ ಎಂಬುವುದು ಕಷ್ಟ.
ಇನ್ನು ಮಳೆಗಾಲದಲ್ಲಿ ಅಂತೂ ನಾವು ಬೀದಿ ಬದಿಯ ಆಹಾರದಿಂದ ದೂರವಿದ್ದಷ್ಟೂ ಕಾಯಿಲೆ
ಬೀಳುವುದನ್ನುತಡೆಗಟ್ಟಬಹುದು.
ಹಾಗಾಗಿ ಮನೆ ಮಂದಿಗೆಲ್ಲಾ ಪಾನಿಪುರಿ ಸವಿಯಬೇಕೆಂದು ಅನಿಸಿದಾಗ ಪೂರಿ ಖರೀದಿಸಲು
ಸಿಗುತ್ತೆ ತಂದು ಸುಲಭದಲ್ಲಿ ಮನೆಯಲ್ಲಿಯೇ ಮಾಡಿ ಸವಿಯಬಹುದು.
ಕೆಲವರು ಪೂರಿಯನ್ನು ಕೂಡ ಮನೆಯಲ್ಲಿಯೇ ತಯಾರಿಸುತ್ತಾರೆ. ಅದು ಇನ್ನೂ
ಒಳ್ಳೆಯದು.



Click it and Unblock the Notifications
