Latest Updates
-
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ
ಪನ್ನೀರ್ ಸ್ಯಾಂಡ್ವಿಚ್ ರೆಸಿಪಿ: ಮಕ್ಕಳಿಗೆ ಆರೋಗ್ಯಕರವಾದ ತಿನಿಸು
ಸ್ಯಾಂಡ್ವಿಚ್ ನೂರಕ್ಕೂ ಅಧಿಕ ಬಗೆಯಲ್ಲಿ ನೀವು ತಯಾರಿಸಬಹುದು. ಬೆಳಗ್ಗೆ ಬ್ರೇಕ್ಫಾಸ್ಟ್ಗೆ ಪಟ್ ಅಂತ ತಯಾರಿಸಲು, ಸಂಜೆ ಸ್ನ್ಯಾಕ್ಸ್ ಆಗಿ ಸವಿಯಲು ಆರೋಗ್ಯಕರವಾದ ಆಯ್ಕೆ ಇದಾಗಿದೆ.

ನೂಡಲ್ಸ್, ಮ್ಯಾಗಿ ಈ ರೀತಿಯ ಆಯ್ಕೆಗಳ ಬದಲಿಗೆ ಸ್ಯಾಂಡ್ವಿಚ್ ಆಯ್ಕೆ ಅತ್ಯುತ್ತಮ, ಏಕೆಂದರೆ ಇದು ಆರೋಗ್ಯಕರ. ಸ್ಯಾಂಡ್ವಿಚ್ ನೀವು ವ್ಹೀಟ್ ಬ್ರೆಡ್ ಬಳಸಿ ತಯಾರಿಸಿದರೆ ಮತ್ತಷ್ಟೂ ಒಳ್ಳೆಯದು, ಇಲ್ಲಿ ಪನ್ನೀರ್ ಸ್ಯಾಂಡ್ವಿಚ್ ರೆಸಿಪಿ ನೀಡಲಾಗಿದ್ದು, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:
Recipe By: Reena TK
Recipe Type: breakfast
Serves: 3
-
ಬೇಕಾಗುವ ಸಾಮಗ್ರಿ
ಸ್ಯಾಂಡ್ವಿಚ್ ಬ್ರೆಡ್ ಥವಾ ಸಾದಾ ಬ್ರೆಡ್ 8 ಪೀಸ್
ಪನ್ನೀರ್ ಅರ್ಧ ಕಪ್
1/4 ಕಪ್ ಕ್ಯಾರೆಟ್ (ಚಿಕ್ಕದಾಗಿ ಕತ್ತರಿಸಿದ್ದು)
2 ಚಮಚ ಸೌತೆಕಾಯಿ (ಚಿಕ್ಕದಾಗಿ ಕತ್ತರಿಸಿದ್ದು)
2 ಚಮಚ ಟೊಮೆಟೊ
3 ಚಮಚ ಸ್ವೀಟ್ ಕಾರ್ನ್
2 ಚಮಚ ಕೊತ್ತಂಬರಿ ಸೊಪ್ಪು
1 ಹಸಿ ಮೆಣಸಿನ ಕಾಯಿ
1 ಚಮಚ ಸಾಸ್ (ಸಾಸ್ ಅಥವಾ ಚಟ್ನಿ ಬಳಸಬಹುದು)
1/2 ಚಮಚ ಚಾಟ್ ಮಸಾಲ (ಅಥವಾ 1ಚಮಚ ನಿಂಬೆ ರಸ)
(ಇಲ್ಲಿ ಈರುಳ್ಳಿ ಬಳಸಿಲ್ಲ, ನೀವು ಬೇಕಾದರೆ ಸೇರಿಸಬಹುದು, ತರಕಾರಿ ಕೂಡ ನಿಮಗೆ ಇಷ್ಟವಾಗಿದ್ದನ್ನು ಬಳಸಬಹುದು)
-
ತಯಾರಿಸುವ ವಿಧಾನ:
* ಬ್ರೆಡ್ ಬಿಟ್ಟು ಎಲ್ಲಾ ಸಾಮಗ್ರಿ ಒಂದು ಬೌಲ್ನಲ್ಲಿ ಹಾಕಿ ಮಿಶ್ರ ಮಾಡಿ.
* ಈಗ ಸ್ಯಾಂಡ್ ವಿಚ್ ಬ್ರೆಡ್ಗಳನ್ನು ಸ್ಯಾಂಡ್ವಿಷ್ ಗ್ರಿಲ್ಡ್ನಲ್ಲಿ ಅಥವಾ ತವಾದಲ್ಲಿ ಸ್ವಲ್ಪ ಹೊತ್ತು ರೋಸ್ಟ್ ಮಾಡಿ. ನಂತರ ಅದರ ಒಂದು ಬದಿಗೆ ಪನ್ನೀರ್ ಮಿಶ್ರಣ ಹಾಕಿ, ಮತ್ತೊಂದು ಸ್ಯಾಂಡ್ವಿಚ್ಗೆ ಮಯೋನೈಸ್ ಅಥವಾ ಗಟ್ಟಿ ಮೊಸರು ಅಥವಾ ಚೀಸ್ ಹಾಕಿ.
* ಈಗ ಎರಡು ಸ್ಯಾಂಡ್ವಿಚ್ ಕವರ್ ಮಾಡಿ, ಒಂದು ನಿಮಿಷ ತವಾದಲ್ಲಿ ಬಿಸಿ ಮಾಡಿ ನಂತರ ಪ್ಲೇಟ್ಗೆ ಹಾಕಿ ಸರ್ವ್ ಮಾಡಿ.
- ಟಿಪ್ಸ್ * ಮಕ್ಕಳಿಗೆ ಮಾಡುವಾಗ ಖಾರ ಸ್ವಲ್ಪ ಕಡಿಮೆ ಬಳಸಿ. * ಹಾಲಿಗೆ ನಿಂಬೆರಸ ಹಿಂಡಿ, ಒಡೆದ ಹಾಲಿನಿಂದ ಪನ್ನೀರ್ ನೀವೇ ತಯಾರಿಸಬಹುದು. * ಇದರಲ್ಲಿ ತರಕಾರಿ, ಪನ್ನೀರ್, ಚೀಸ್ ಎಲ್ಲಾ ಬಳಸಿರುವುದರಿಂದ ಆರೋಗ್ಯಕರ ಹಾಗೂ ಇದನ್ನು ಬೆಳಗ್ಗಿನ ಬ್ರೇಕ್ಫಾಸ್ಟ್ಗೆ ನೀಡಿದರೆ ಅವರ ಹೊಟ್ಟೆ ತುಂಬಾ ಹೊತ್ತು ತುಂಬಿರುತ್ತದೆ.
- ಸರ್ವ್ - 1 ಸ್ಯಾಂಡ್ವಿಚ್
- ಕ್ಯಾಲೋರಿ - 158ಕ್ಯಾ
- ಕೊಬ್ಬು - 4ಗ್ರಾಂ
- ಪ್ರೊಟೀನ್ - 4.5ಗ್ರಾಂ
- ಕಾರ್ಬ್ಸ್ - 25ಗ್ರಾಂ
- ನಾರಿನಂಶ - 2ಗ್ರಾಂ



Click it and Unblock the Notifications
