Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಮಕ್ಕಳು ಸೂಪರ್ ಅಮ್ಮಾ ನೀನು ಅಂತ ಸವಿಯುತ್ತಾರೆ ಈ ಪನ್ನೀರ್ ರೋಲ್
Recipes
oi-Reena TK
Posted By: Reena TK
ಮಕ್ಕಳ ಸಂಜೆ ಶಾಲೆ ಮುಗಿಸಿ ಬರುವಾಗ ಅಮ್ಮ ಏನು ಸ್ನ್ಯಾಕ್ಸ್ ಮಾಡಿದ್ದಾರೆ ಎಂದು ಹುಡುಕುತ್ತಾರೆ, ಸಂಜೆ ನೀವು ಅವರಿಗಿಷ್ಟವಾದ ಸ್ನ್ಯಾಕ್ಸ್ ಮಾಡಿಕೊಟ್ಟರೆ ತುಂಬಾ ಖುಷಿಯಾಗಿ ಸವಿಯುತ್ತಾರೆ. ಪನ್ನೀರ್ ರೋಲ್ ಸುಲಭವಾಗಿ ಮಾಡುವ ರೆಸಿಪಿ ಇಲ್ಲಿದೆ:

ಬೇಕಾಗುವ ಸಾಮಗ್ರಿ
ಎಣ್ಣೆ 2 ಚಮಚ
ಬೆಣ್ಣೆ
ಪನ್ನೀರ್ 200ಗ್ರಾಂ
ಜೀರಿಗೆ 1/4 ಚಮಚ
ಹಸಿ ಮೆಣಸು 2
ಈರುಳ್ಳಿ 1-2
ಶುಂಠಿ-ಬೆಳ್ಳುಳ್ಳಿ ಪೇಸ್ಟ್ 1 ಚಮಚ
ಕ್ಯಾಪ್ಸಿಕಂ 1
ಟೊಮೆಟೊ 2
ಖಾರದ ಪುಡಿ 1/4 ಚಮಚ
ಜೀರಿಗೆ ಪುಡಿ 1/2 ಚಮಚ
ಕೊತ್ತಂಬರಿ ಪುಡಿ 1 ಚಮಚ
ಚಾಟ್ ಮಸಾಲ 1/4 ಚಮಚ
ರುಚಿಗೆ ತಕ್ಕ ಉಪ್ಪು (1/2 ಚಮಚ)
ಮಯೋನೈಸ್ 1 ಚಮಚ
ಟೊಮೆಎಟೊ ಸಾಸ್ 1 ಚಮಚ
ಸ್ವಲ್ಪ ಕೊತ್ತಂಬರಿ ಸೊಪ್ಪು
ರೋಲ್ ಮಾಡಲು
1 /2 ಕಪ್ ಗೋಧಿ ಹಹಿಟ್ಟು
ಮೈದಾ ಹಿಟ್ಟು 1/2 ಕಪ್ (ಇದು ಬೇಡ ಎಂದರೆ ಬಳಸಬೇಡಿ, ಮಕ್ಕಳಿಗೆ ಮೈದಾ
ಒಳ್ಳೆಯದಲ್ಲ)
ಸ್ವಲ್ಪ ಉಪ್ಪು
ಎಣ್ಣೆ 3-4 ಚಮಚ
ಮಾಡುವ ವಿಧಾನ
- ಈರುಳ್ಳಿ ಚಿಕ್ಕದಾಗಿ ಕತ್ತರಿಸಿ
- ಟೊಮಟೊ, ಕ್ಯಾಲ್ಸಿಯಂ ಚಿಕ್ಕದಾಗಿ ಕತ್ತರಿಸಿ
- ತವಾ ಬಿಸಿ ಮಾಡಿ ಎಣ್ಣೆ ಹಾಕಿ, ಬೆಣ್ಣೆ ಸೇರಿಸಿ, ಬೆಣ್ಣೆ ಕರಗಿಸಿದ ಮೇಲೆ ಜೀರಿಗೆ ಹಾಕಿ, ಜೀರಿಗೆ ಚಟ್ಪಟ್ ಶಬ್ದ ಮಾಡುವಾಗ ಹಸಿ ಮೆಣಸು ಆಕಿ, ನಂತರ ಈರುಳ್ಳಿ ಹಾಕಿ, ಈರುಳ್ಳಿ ಸ್ವಲ್ಪ ಕಂದು ಬಣ್ಣಕ್ಕೆ ತಿರುಗುವಾಗ ಶುಂಠಿ- ಬೆಳ್ಳುಳ್ಳಿ ಪೇಸ್ಟ್ ಸೇರಿಸಿ, ಕ್ಯಾಪ್ಸಿಕಂ ಸೇರಿಸಿ. ಜೀರಿಗೆ ಪುಡಿ, ಗರಂ ಮಸಾಲೆ ಪುಡಿ, ಖಾರದ ಪುಡಿ, ಕೊತ್ತಂಬರಿ ಪುಡಿ, ಉಪ್ಪು ಸೇರಿಸಿ, ಟೊಮೆಟೊ ಹಾಕಿ.
- ಈಗ ಪನ್ನೀರ್ ಸೇರಿಸಿ, ನಂತರ ಕೊತ್ತಂಬರಿ ಸೊಪ್ಪು ಸೇರಿಸಿ ಮಿಕ್ಸ್ ಮಾಡಿ. ಈಗ ಪನ್ನೀರ್ ಗೊಜ್ಜು ರೆಡಿ.
- ಈಗ ಗೋಧಿ ಅಥವಾ ಗೋಧಿ-ಮೈದಾ ಹಿಟ್ಟು, ಸ್ವಲ್ಪ ಉಪ್ಪು 1 ಚಮಚ ಎಣ್ಣೆ ಹಾಗೂ ಕಲೆಸಲು ಬೇಕಾದ ನೀರು ಸೇರಿಸಿ ಮಿಕ್ಸ್ ಮಾಡಿ. ಚಪಾತಿಗೆ ಮಿಕ್ಸ್ ಮಾಡುವ ರೀತಿ ಮಾಡಬೇಕು.
- ನಂತರ ತಟ್ಟಿ ತವಾದಲ್ಲಿ ಬೇಯಿಸಿ, ಎರಡೂ ಬದಿ ಬೆಂದ ಮೇಲೆ ಅದರ ಒಂದು ಬದಿಯಲ್ಲಿ ಟೊಮೆಟೊ ಸಾಸ್, ಮಯೋನೈಸ್ ಹಾಕಿ ಹರಡಿ ಬಳಿಕ ಅದರಲ್ಲಿ ಪನ್ನೀರ್ ಗೊಜ್ಜು ಹಾಕಿ ರೋಲ್ ರೀತಿ ಮಾಡಿದರೆ ಪನ್ನೀರ್ ರೋಲ್ ರೆಡಿ. ನಂತರ ಅದರ ಮೇಲೆ ಬೆಣ್ಣೆ ಸವರಿ ತವಾದಲ್ಲಿ ಸ್ವಲ್ಪ ಬಿಸಿ ಟೊಮೆಟೊ ಸಾಸ್ ಜೊತೆ ಸರ್ವ್ ಮಾಡಿ.
Comments
[ of 5 - Users]



Click it and Unblock the Notifications
