Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ರೆಸಿಪಿ: ಯಮ್ಮೀ...ಯಮ್ಮೀ ಸ್ನ್ಯಾಕ್ಸ್ ಪನ್ನೀರ್ ನಗೆಟ್ಸ್
ಪನ್ನೀರ್‌ನಿಂದ ನೀವು ಸ್ನ್ಯಾಕ್ಸ್ ಮಾಡ ಬಯಸುವುದಾದರೆ ಹಲವಾರು ರುಚಿಯಲ್ಲಿ ಮಾಡಬಹುದು. ಅದರಲ್ಲೊಂದು ಪನ್ನೀರ್ ನಗಟ್ಸ್. ಇದು ತುಂಬಾ ಸರಳವಾಗಿ ಮಾಡಬಹುದಾದ ಸ್ನ್ಯಾಕ್ಸ್ ಆಗಿದ್ದು ರುಚಿ ಸೂಪರ್ ಆಗಿರುತ್ತದೆ.
ನೀವು ತೂಕ ಇಳಿಕೆಗೆ ಯಾವುದೇ ಡಯಟ್ ಮಾಡುತ್ತಿಲ್ಲ ಅಂದ್ರೆ ಇದನ್ನು ಮಾಡಿ ಸವಿಯಲು ಅಡ್ಡಿಯಿಲ್ಲ, ತೂಕ ಇಳಿಕೆಯ ಡಯಟ್ ಮಾಡುತ್ತಿದ್ದರೆ ನಿಮ್ಮ ಚೀಟಿಂಗ್ ದಿನಗಳಲ್ಲಿ ಇದನ್ನು ಟ್ರೈ ಮಾಡಬಹುದು.

ಸಂಜೆ ಟೀ ಜೊತೆ ಸವಿಯಲು ರೆಸ್ಟೋರೆಂಟ್ ಸ್ಟೈಲ್‌ನ ರೆಸಿಪಿ ಇದಾಗಿದ್ದು ಬನ್ನಿ ಇದನ್ನು ಮಾಡುವ ವಿಧಾನ ತಿಳಿಯೋಣ:
Recipe By: Reena TK
Recipe Type: Snacks
Serves: 2
-
ಬೇಕಾಗುವ ಸಾಮಗ್ರಿ
10 ದೊಡ್ಡ ಕ್ಯೂಬ್‌ನ ಪನ್ನೀರ್
1/2 ಚಮಚ ಶುಂಠಿ ಪೇಸ್ಟ್
1 ಚಮಚ ಬೆಳ್ಳುಳ್ಳಿ ಪೇಸ್ಟ್
1/2 ಚಮಚ ಗರಂ ಮಸಾಲ
1/2 ಚಮಚ ಚಾಟ್ ಮಸಾಲ
1 ಚಮಚ ಖಾರದ ಪುಡಿ
1 ಚಮಚ ನಿಂಬೆ ರಸ
1 ಚಮಚ ಚಿಕ್ಕದಾಗಿಕತ್ತರಿಸಿದ ಕೊತ್ತಂಬರಿ ಸೊಪ್ಪು
ರುಚಿಗೆ ತಕ್ಕ ಉಪ್ಪು
ಬ್ರೆಡ್ ಚೂರುಗಳು (ಅರ್ಧ ಕಪ್)
ಎಣ್ಣೆ (ಫ್ರೈ ಮಾಡಲು)
ಪನ್ನೀರ್ ಮಿಕ್ಸ್ ಮಾಡಲು
1/4 ಕಪ್ ಮೈದಾ
3 ಚಮಚ ಜೋಳದ ಹಿಟ್ಟು
ಚಿಟಿಕೆಯಷ್ಟು ಉಪ್ಪು
ಸರ್ವ್ ಮಾಡಲು
ಟೊಮೊಟೊ ಕೆಚಪ್
-
ಮಾಡುವ ವಿಧಾನ
1. ಒಂದು ಬೌಲ್‌ನಲ್ಲಿ ಶುಂಠಿ ಪೇಸ್ಟ್, ಬೆಳ್ಳುಳ್ಳಿ ಪೇಸ್ಟ್, ಗರಂ ಮಸಾಲ, ಚಾಟ್ ಮಸಾಲ, ಖಾರದ ಪುಡಿ, ನಿಂಬೆ ರಸ, ಕೊತ್ತಂಬಿ ಸೊಪ್ಪು, ರುಚಿಗೆ ತಕ್ಕ ಉಪ್ಪು ಹಾಕಿ ಮಿಶ್ರ ಮಾಡಿ.
2. ಈಗ ತಯಾರಿ ಮಾಡಿದ ಮಸಾಲೆಯನ್ನು ಪ್ರತಿಯೊಂದು ಪನ್ನೀರ್ ಕ್ಯೂಬ್ಸ್ ಮೇಲೆ ಚೆನ್ನಾಗಿ ಹಚ್ಚಿ 15 ನಿಮಿಷ ಇಡಿ.
3. ಈಗ ಪನ್ನೀರ್ ಕ್ಯೂಬ್ ತೆಗೆದು ಪೇಸ್ಟ್ ರೀತಿ ಮಾಡಿಟ್ಟ ಹಿಟ್ಟಿನಲ್ಲಿ ಅದ್ದಿ, ಬ್ರೆಡ್ ಚೂರ್‌ನಲ್ಲಿ ಹೊರಳಾಡಿಸಿ ಒಂದು ತಟ್ಟೆಯಲ್ಲಿ ಹಾಕಿಡಿ.
4. ಎಣ್ಣೆಯನ್ನು ಬಾಣಲಿಗೆ ಹಾಕಿ ಕಾಯಿಸಿ. ಎಣ್ಣೆ ಕುದಿಯಲು ಪ್ರಾರಂಭಿಸಿದಾಗ ಪನ್ನೀರ್ ಹಾಕಿ ಫ್ರೈ ಮಾಡಿ ಅದು ಸ್ವಲ್ಪ ಕಂದು ಬಣ್ಣಕ್ಕೆ ಬರುವಾಗ ಎಣ್ಣೆಯಿಂದ ತೆಗೆಯಿರಿ.
5. ಈಗ ರೆಡಿಯಾದ ಪನ್ನೀರ್ ನಗೆಟ್ಸ್ ಅನ್ನು ಟೊಮೆಟೊ ಕೆಚಪ್ ಜೊತೆ ಸರ್ವ್ ಮಾಡಿ.
- ಪನ್ನೀರ್ ನಗೆಟ್ಸ್ ನೀವು ಬೇಕಾದರೆ ತವಾ ಫ್ರೈ ಕೂಡ ಮಾಡಬಹುದು
- ಸರ್ವ್ : - 1 ಪನ್ನೀರ್ ನಗೆಟ್ಸ್
- ಕ್ಯಾಲೋರಿ: - 104 ಕ್ಯಾ
- ಕೊಬ್ಬು: - 7.4 ಗ್ರಾಂ
- ಕಾರ್ಬ್ಸ್: - 7.5ಗ್ರಾಂ



Click it and Unblock the Notifications
