Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
Paneer Fried Rice: 10 ನಿಮಿಷ ಸಾಕು! ರೆಸ್ಟೋರೆಂಟ್ ಸ್ಟೈಲ್ ಪನ್ನೀರ್ ಫ್ರೈಡ್ ರೈಸ್ ರೆಡಿ.. ಮಾಡೋದು ಹೇಗೆ?
ಅಬ್ಬಬ್ಬಾ..! ಎಂತಾ ರುಚಿ ಈ ಪನ್ನೀರ್ ಫ್ರೈಡ್ ರೈಸ್. ಹೀಗೆ ಮಾಡಿದ್ರೆ ಎಲ್ಲಾ ಖಾಲಿ, ಮಕ್ಕಳು ಜಾಲಿ! ಹೌದು, ಎಷ್ಟು ದಿನ ಅಂತ ನೀವು ಹೊರಗಿನ ತಿಂಡಿಗಳನ್ನು ಮಾಡ್ತೀರಾ? ತಿಂತೀರಾ? ಮನೆಯಲ್ಲಿಯೇ ಸುಲಭವಾಗಿ ಮಾಡ್ಬೋದು ಈ ಸ್ಪೆಷಲ್ ಪನ್ನೀರ್ ಫ್ರೈಡ್ ರೈಸ್ (Paneer Fried Rice). ವಿಶೇಷವೆಂದರೆ, ನಿಮಿಷಗಳಲ್ಲಿ ಸುಲಭ ಮತ್ತು ರುಚಿಕರವಾದ ಪನೀರ್ ಫ್ರೈಡ್ ರೈಸ್ ತಯಾರಾಗುತ್ತೆ. ಇದು ಮಕ್ಕಳಿಗೂ ಇಷ್ಟವಾಗುವ ತಿಂಡಿ. ಹಾಗಿದ್ರೆ, ಬನ್ನಿ ಮನೆಯಲ್ಲೇ ಈ ಸಖತ್ ಆಗಿರುವ ರೆಸಿಪಿ (Paneer Fried Rice Recipe) ಮಾಡೋದು ಹೇಗೆ ತಿಳಿಯೋಣ.
ಫ್ರೈಡ್ ರೈಸ್ ಎಂದರೆ ಅದೆಷ್ಟೋ ಜನರಿಗೆ ತುಂಬಾ ಇಷ್ಟ. ಆದರೆ, ಹೊರಗಡೆ ಹೋಗಿ ತಿನ್ನೋರಾ ಸಂಖ್ಯೆಯೇ ಅಧಿಕ. ಕೆಲವರಿಗೆ ಸುಲಭವಾಗಿ ಈ ತಿಂಡಿ ಮಾಡೋದು ಗೊತ್ತಿಲ್ಲ. ನೀವು ನಿಮಿಷದಲ್ಲಿ ಮತ್ತು ಸುಲಭವಾಗಿ ಉಪಹಾರ ಮಾಡಲು ಬಯಸಿದರೆ, ಪನ್ನೀರ್ ಫ್ರೈಡ್ ರೈಸ್ ಬೆಸ್ಟ್ ಚಾಯ್ಸ್. ಇದು ತುಂಬಾ ರುಚಿಕರವಾಗಿದೆ. ಮತ್ತು ಪೌಷ್ಟಿಕಾಂಶದಿಂದ ಕೂಡಿದೆ. ನೀವು ಕೆಲಸದಿಂದ ಸುಸ್ತಾಗಿ ಮನೆಗೆ ಬಂದರೂ, ಅತಿಥಿಗಳು ಇದ್ದಕ್ಕಿದ್ದಂತೆ ಬಂದರೂ, ನಿಮಿಷಗಳಲ್ಲಿ ಇದನ್ನು ರೆಡಿ ಮಾಡಬಹುದು. ಈ ಮೂಲಕ ಅತಿಥಿಗಳ ಹೃದಯ ಗೆಲ್ಲಬಹುದು. ಈ ರೀತಿ ಫ್ರೈಡ್ ರೈಸ್ ಮಾಡಿ ಕೊಟ್ರೆ ಅವರು ನಿಮ್ಮ ಅಭಿಮಾನಿ ಆಗ್ತಾರೆ.

ಪನ್ನೀರ್ ಫ್ರೈಡ್ ರೈಸ್ ಮಾಡಲು ಬೇಕಾಗುವ ಪದಾರ್ಥಗಳು
ಅಕ್ಕಿ: 1 ಕಪ್ (200 ಗ್ರಾಂ) ಅಥವಾ 3 ರಿಂದ 3.5
ಕಪ್
ನೀರು: 1.75 ಕಪ್
ಅಡುಗೆ ಎಣ್ಣೆ: 2 ಸ್ಪೂನ್
ಉಪ್ಪು: ರುಚಿಗೆ ತಕ್ಕಷ್ಟು (¼ ಸ್ಪೂನ್)
ಜೀರಿಗೆ (ಶಾಹಿ ಜೀರಿಗೆ): ½ ಸ್ಪೂನ್
ಈರುಳ್ಳಿ: 1 ಈರುಳ್ಳಿ (ಸಣ್ಣಗೆ ಕತ್ತರಿಸಿದ್ದು)
ಶುಂಠಿ-ಬೆಳ್ಳುಳ್ಳಿ ಪೇಸ್ಟ್: 1 ಚಮಚ
ಟೊಮೆಟೊ: ½ ಕಪ್ (ಸಣ್ಣಗೆ ಕತ್ತರಿಸಿದ್ದು)
ಕ್ಯಾರೆಟ್: ⅓ ಕಪ್ (ಸಣ್ಣಗೆ ತುರಿದ)
ಫ್ರೆಂಚ್ ಬೀನ್ಸ್: ⅓ ಕಪ್ (ಸಣ್ಣಗೆ ಕತ್ತರಿಸಿದ್ದು)
ಕ್ಯಾಪ್ಸಿಕಂ: ⅓ ಕಪ್ (ಸಣ್ಣಗೆ ಕತ್ತರಿಸಿದ್ದು)
ಪನ್ನೀರ್: 250 ಗ್ರಾಂ (ಕತ್ತರಿಸಿದ್ದು)
ಕರಿಮೆಣಸು: ½ ಚಮಚ (ಪುಡಿಮಾಡಿ)
ಕೆಂಪು ಮೆಣಸಿನ ಪುಡಿ: ¼ ಸ್ಪೂನ್
ಗರಂ ಮಸಾಲ: ½ ಚಮಚ
ಪನ್ನೀರ್ ಫ್ರೈಡ್ ರೈಸ್ ಮಾಡುವ ವಿಧಾನ
ಮೊದಲು ಅಕ್ಕಿಯನ್ನು 2 ರಿಂದ 3 ಬಾರಿ ತೊಳೆದು 20 ರಿಂದ 30 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಿ. ಬಳಿಕ ಉಪ್ಪು, ಅಡುಗೆ ಎಣ್ಣೆ ಮತ್ತು ನೀರು ಸೇರಿಸಿ ಕುಕ್ಕರ್ನಲ್ಲಿ 2 ವಿಜಲ್ ಬರುವವರೆಗೆ ಬೇಯಿಸಿ. ಬಳಿಕ ಮುಚ್ಚಳವನ್ನು ತೆರೆದು ಅನ್ನವನ್ನು ನಿಧಾನವಾಗಿ ಉಬ್ಬಿಸಿ. ಒಂದು ತಟ್ಟೆಯಲ್ಲಿ ಅನ್ನವನ್ನು ತೆಗೆದು ತಣ್ಣಗಾಗಲು ಬಿಡಿ. ಈಗ ಬಾಣಲೆಯಲ್ಲಿ ಅಡುಗೆ ಎಣ್ಣೆ ಬಿಸಿ ಮಾಡಿ. ಅದಕ್ಕೆ ಜೀರಿಗೆ ಹಾಕಿ ಹುರಿಯಬೇಕು. ಇದಾದ ಬಳಿಕ ಈರುಳ್ಳಿ ಹಾಕಿ, ಗೋಲ್ಡ್ ಬಣ್ಣ ಬರುವವರೆಗೆ ಚೆನ್ನಾಗಿ ಹುರಿಯಿರಿ. ಹಾಗೆಯೇ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ, ಕೆಲವು ಸೆಕೆಂಡುಗಳ ಕಾಲ ಹುರಿಯಿರಿ.
ಈಗ ಟೊಮೊಟೊ ಹಾಕಿ ಮೃದುವಾಗುವವರೆಗೆ ಬೇಯಿಸಿ. ಬಳಿಕ ಫ್ರೆಂಚ್ ಬೀನ್ಸ್ ಹಾಕಿ 3 ರಿಂದ 4 ನಿಮಿಷ ಹುರಿಯಿರಿ. ಇದಾದ ನಂತರ ಕ್ಯಾರೆಟ್ ಮತ್ತು ಕ್ಯಾಪ್ಸಿಕಂ ಹಾಕಿ 4 ರಿಂದ 5 ನಿಮಿಷ ಬೇಯಿಸಿ. ಈಗ ಪನ್ನೀರ್ ತುಂಡುಗಳನ್ನು ಹಾಕಿ. ಜೊತೆಗೆ ಕರಿಮೆಣಸು, ಕೆಂಪು ಮೆಣಸಿನಕಾಯಿ, ಗರಂ ಮಸಾಲ ಹಾಕಬೇಕು. ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಈಗ ಅನ್ನ ಸುರಿಯಿರಿ. ಉಪ್ಪು ಸೇರಿಸಿ ನಿಧಾನವಾಗಿ ಎಲ್ಲವನ್ನೂ ಮಿಶ್ರಣ ಮಾಡಿ. ಹಾಗೆಯೇ 2 ರಿಂದ 3 ನಿಮಿಷ ಬೇಯಿಸಿ. ಇಷ್ಟು ಮಾಡಿದ್ರೆ, ಬಿಸಿಬಿಸಿಯಾದ ಪನ್ನೀರ್ ಫ್ರೈಡ್ ರೈಸ್ ಸವಿಯಲು ಸಿದ್ಧ.



Click it and Unblock the Notifications
