Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಪನ್ನೀರ್- ಕ್ಯಾಪ್ಸಿಕಮ್ ಪಲ್ಯ ರೆಸಿಪಿ

ಪನ್ನೀರ್ ಮತ್ತು ಕ್ಯಾಪ್ಸಿಕಮ್ ನಿಂದ ತಯಾರಿಸುವ ಪಲ್ಯ ಉತ್ತರ ಭಾರತೀಯರ ನಿತ್ಯದ ಖಾದ್ಯ ಎಂದು ಹೇಳಬಹುದು. ಪನ್ನೀರ್, ದಪ್ಪದ ಕ್ಯಾಪ್ಸಿಕಮ್, ಈರುಳ್ಳಿ, ಟೊಮ್ಯಾಟೋಗಳ ಮಿಶ್ರಣದಿಂದ ತಯಾರಿಸಲಾಗುವುದು. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ ಪನ್ನೀರ್ ಎಂದರೆ ಪ್ರಿಯವಾದ ತಿನಿಸು ಎನ್ನಬಹುದು. ಇದರಿಂದ ತಯಾರಿಸಲಾದ ಪನ್ನೀರ್ ಕ್ಯಾಪ್ಸಿಕಮ್ ಸಬ್ಜಿಯು ಎಲ್ಲರ ಬಾಯಲ್ಲೂ ನೀರನ್ನು ತರಿಸುವುದು.
ಆಕರ್ಷಕ ಹಾಗೂ ರುಚಿಕರವಾದ ಈ ಸಬ್ಜಿಯನ್ನು ರೋಟ್ಟಿ, ನಾನ್ ಮತ್ತು ಅನ್ನದ ಜೊತೆಯೂ ಸೇವಿಸಬಹುದು. ನಿತ್ಯದ ಅಡುಗೆಯಲ್ಲಿ ಬಲು ಸುಲಭ ಹಾಗೂ ಸರಳ ವಿಧಾನದಿಂದ ಪನ್ನೀರ್ ಮತ್ತು ಕ್ಯಾಪ್ಸಿಕಮ್ ಸಬ್ಜಿಯನ್ನು ತಯಾರಿಸಬಹುದು. ನಿಮಗೂ ನಿಮ್ಮವರಿಗೆ ಹೊಸ ರುಚಿಯನ್ನು ಮಾಡಿ ಬಡಿಸಬೇಕು ಎನ್ನುವ ಹಂಬಲವಾಗುತ್ತಿದ್ದರೆ ಈ ಪಾಕವಿಧಾನವನ್ನು ಮಾಡಿ. ಇದರ ಸಂಪೂರ್ಣ ವಿವರಣೆ ಹಾಗೂ ಮಾಹಿತಿಗಾಗಿ ಬೋಲ್ಡ್ ಸ್ಕೈ ಈ ಮುಂದೆ ಹಂತ ಹಂತವಾದ ಚಿತ್ರವಿವರಣೆಯನ್ನು ನೀಡಿದೆ.

Recipe By: ಮೀನಾ ಭಂಡಾರಿ
Recipe Type: ಹೆಚ್ಚುವರಿ ತಿನಿಸು/ಪಲ್ಯ
Serves: 2
-
ಕ್ಯಾಪ್ಸಿಕಮ್-1
ಈರುಳ್ಳಿ -1
ಟೊಮ್ಯಾಟೋ-3
ನೀರು-1,1/2 ಕಪ್
ಎಣ್ಣೆ-3 ಟೇಬಲ್ ಚಮಚ
ಜೀರಿಗೆ - 1 ಟೀ ಚಮಚ
ಉಪ್ಪು- ರುಚಿಗೆ ತಕ್ಕಷ್ಟು
ಖಾರದ ಪುಡಿ- 1 ಟೇಬಲ್ ಚಮಚ
ಪನ್ನೀರ್ ತುಣುಕು -1 ಕಪ್
ಕಸೂರಿ ಮೇಥಿ- 1 ಟೇಬಲ್ ಚಮಚ+ ಅಲಂಕಾರಕ್ಕೆ.
-
1. ಒಂದು ದೊಡ್ಡ ಕ್ಯಾಪ್ಸಿಕಮ್ ತೆಗೆದುಕೊಂಡು ಎರಡು ಹೋಳಾಗಿ ಕತ್ತರಿಸಿ.
2. ಅದರ ಒಳಗಿರುವ ಬಿಳಿ ಬೀಜದ ಭಾಗವನ್ನು ತೆಗೆಯಿರಿ.
3. ಅತಿಯಾಗಿ ತೆಳ್ಳಗಾಗದಂತೆ 2 ಇಂಚ್ ಪಟ್ಟಿಯಷ್ಟು ದಪ್ಪಗೆ ಕತ್ತರಿಸಿಕೊಳ್ಳಿ.
4. ಒಂದು ದೊಡ್ಡ ಗಾತ್ರದ ಈರುಳ್ಳಿಯನ್ನು ತೆಗೆದುಕೊಂಡು ಮೇಲ್ಭಾಗ ಮತ್ತು ಕೆಳಭಾಗವನ್ನು ಕತ್ತರಿಸಿ ತಗೆಯಿರಿ.
5. ಅದರ ಸಿಪ್ಪೆಯನ್ನು ತೆಗೆಯಿರಿ. ಒರಟಾಗಿದ್ದರೆ ಮೊದಲ ಸುತ್ತನ್ನು ಬಿಡಿಸಿಕೊಳ್ಳಿ.
6. ಈರುಳ್ಳಿಯನ್ನು ಮೊದಲು ಎರಡು ಭಾಗ ಮಾಡಿ ಕತ್ತರಿಸಿ, ನಂತರ ಉದ್ದುದ್ದವಾಗಿ ಹೆಚ್ಚಿಕೊಳ್ಳಿ.
7. ಪದರಗಳನ್ನು ಬೇರ್ಪಡಿಸಿ, ಮಧ್ಯಮ ಗಾತ್ರಕ್ಕೆ ಹೆಚ್ಚಿಕೊಳ್ಳಿ.
8. ಕುಕ್ಕರ್ ಅಲ್ಲಿ ನೀರನ್ನು ಹಾಕಿ.
9. ಅದಕ್ಕೆ ಟೊಮ್ಯಾಟೋ ಹಾಕಿ, ಒಂದು ಸೀಟಿ ಕೂಗಿಸಿಕೊಳ್ಳಿ.
10. ಕುಕ್ಕರ್‍ನ ಪ್ರೆಶರ್ ಇಳಿಯುವಂತೆ ಸ್ವಲ್ಪ ಮುಚ್ಚಳವನ್ನು ಸಡಿಲಗೊಳಿಸಿ.
11. ಬಳಿಕ ಟೊಮ್ಯಾಟೋವನ್ನು ಒಂದು ಪ್ಲೇಟ್‍ಗೆ ವರ್ಗಾಯಿಸಿ, 15ನಿಮಿಷಗಳಕಾಲ ಆರಲು ಬಿಡಿ.
12. ಬೆಂದ ಟೊಮ್ಯಾಟೋವಿನ ಸಿಪ್ಪೆಯನ್ನು ತೆಗೆಯಿರಿ.
13. ಟೊಮ್ಯಾಟೋಅನ್ನು ಮಿಕ್ಸರ್ ಜಾರ್‍ಗೆ ವರ್ಗಾಯಿಸಿ.
14. ಬೆಳ್ಳುಳ್ಳಿ ಎಸಳನ್ನು ಸೇರಿಸಿ, ನುಣ್ಣಗೆ ರುಬ್ಬಿಕೊಳ್ಳಿ.
15. ಬಿಸಿಯಾದ ಪಾತ್ರೆಗೆ ಎಣ್ಣೆಯನ್ನು ಸೇರಿಸಿ.
16. ಜೀರಿಗೆಯನ್ನು ಚಟ-ಪಟ ಎನ್ನುವವರೆಗೆ ಹುರಿಯಿರಿ.
17. ಹೆಚ್ಚಿಕೊಂಡ ಈರುಳ್ಳಿಯನ್ನು ಸೇರಿಸಿ, ದೊಡ್ಡ ಉರಿಯಲ್ಲಿ 2-3 ನಿಮಿಷಗಳ ಕಾಲ ಹೊಂಬಣ್ಣ ಬರುವ ತನಕ ಹುರಿಯಿರಿ.
18. ಹೆಚ್ಚಿಕೊಂಡ ಕ್ಯಾಪ್ಸಿಕಮ್‍ಅನ್ನು ಸೇರಿಸಿ, ಹುರಿಯಿರಿ.
19. 2 ನಿಮಿಷಗಳ ಕಾಲ ಚೆನ್ನಾಗಿ ಬೇಯಲು ಬಿಡಿ.
20. ರುಬ್ಬಿಕೊಂಡ ಟೊಮ್ಯಾಟೋ ಪೇಸ್ಟ್ ಅನ್ನು ಸೇರಿಸಿ.
21. ಒಂದು ನಿಮಿಷ ಬೇಯಲು ಬಿಡಿ.
22. ಉಪ್ಪು ಮತ್ತು ಖಾರದ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ.
23. ಪನ್ನೀರ್ ಪೀಸ್‍ಗಳನ್ನು ಸೇರಿಸಿ.
24. ಕಸೂರಿ ಮೇಥಿಯನ್ನು ಸೇರಿಸಿ, ಮಿಶ್ರಗೊಳಿಸಿ.
25. ಮುಚ್ಚಳವನ್ನು ಮುಚ್ಚಿ ಒಂದು ನಿಮಿಷಗಳ ಕಾಲ ಬೇಯಲು ಬಿಡಿ.
26. ಒಮ್ಮೆ ಬೆಂದಮೇಲೆ ಒಂದು ಬೌಲ್‍ಗೆ ವರ್ಗಾಯಿಸಿ.
27. ಕಸೂರಿ ಮೇಥಿಯಿಂದ ಅಲಂಕಾರ ಮಾಡಿ.
28. ಬಿಸಿ ಬಿಸಿ ಇರುವಾಗಲೇ ಸವಿಯಲು ನೀಡಿ.
- 1. ಕಾಪ್ಸಿಕಮ್ ಅನ್ನು ಅತಿ ತೆಳುವಾಗಿ ಹೆಚ್ಚಿಕೊಳ್ಳಬಾರದು. ತಿನ್ನುವಾಗ ಅದು ಬಾಯಿಗೆ ಸಿಗುವಂತೆ ಇರಬೇಕು.
- 2. ಪಾಕ ತಯಾರಿಸಿ ಮುಗಿಸುವ ತನಕವು ಉರಿಯನ್ನು ಹೆಚ್ಚಾಗಿಯೇ ಇಟ್ಟುಕೊಂಡು ಬೇಯಿಸಬೇಕು.
- 3. ಕ್ಯಾಪ್ಸಿಕಮ್ ಅನ್ನು ಅತಿಯಾಗಿ ಬೇಯಿಸಬಾರದು. ಅತಿಯಾಗಿ ಬೆಂದರೆ ಗರಿಗರಿಯಾಗಿ ಇರದು.
- 4. ನೀವು ಅಂಗಡಿಯಲ್ಲಿ ಸಿಗುವ ಪನ್ನೀರ್ ಅಥವಾ ಮನೆಯಲ್ಲಿಯೇ ತಯಾರಿಸಿರುವ ಪನ್ನೀರ್ ಯಾವುದನ್ನಾದರೂ ಬಳಸಬಹುದು.
- ಬಡಿಸುವ ಪ್ರಮಾಣ - 1 ಕಪ್
- ಕ್ಯಾಲೋರಿ - 130 ಕ್ಯಾಲ್
- ಕೊಬ್ಬು - 8 ಗ್ರಾಂ.
- ಪ್ರೋಟೀನ್ - 3 ಗ್ರಾಂ.
- ಕಾಬ್ರ್ಸ್ - 13 ಗ್ರಾಂ.
- ಸಕ್ಕರೆ - 5 ಗ್ರಾಂ.
- ಫೈಬರ್ - 3 ಗ್ರಾಂ.
ತಯಾರಿಸುವ ವಿಧಾನ
1. ಒಂದು ದೊಡ್ಡ ಕ್ಯಾಪ್ಸಿಕಮ್ ತೆಗೆದುಕೊಂಡು ಎರಡು ಹೋಳಾಗಿ ಕತ್ತರಿಸಿ.

2. ಅದರ ಒಳಗಿರುವ ಬಿಳಿ ಬೀಜದ ಭಾಗವನ್ನು ತೆಗೆಯಿರಿ.

3. ಅತಿಯಾಗಿ ತೆಳ್ಳಗಾಗದಂತೆ 2 ಇಂಚ್ ಪಟ್ಟಿಯಷ್ಟು ದಪ್ಪಗೆ ಕತ್ತರಿಸಿಕೊಳ್ಳಿ.

4. ಒಂದು ದೊಡ್ಡ ಗಾತ್ರದ ಈರುಳ್ಳಿಯನ್ನು ತೆಗೆದುಕೊಂಡು ಮೇಲ್ಭಾಗ ಮತ್ತು ಕೆಳಭಾಗವನ್ನು ಕತ್ತರಿಸಿ ತಗೆಯಿರಿ.

5. ಅದರ ಸಿಪ್ಪೆಯನ್ನು ತೆಗೆಯಿರಿ. ಒರಟಾಗಿದ್ದರೆ ಮೊದಲ ಸುತ್ತನ್ನು ಬಿಡಿಸಿಕೊಳ್ಳಿ.

6. ಈರುಳ್ಳಿಯನ್ನು ಮೊದಲು ಎರಡು ಭಾಗ ಮಾಡಿ ಕತ್ತರಿಸಿ, ನಂತರ ಉದ್ದುದ್ದವಾಗಿ ಹೆಚ್ಚಿಕೊಳ್ಳಿ.

7. ಪದರಗಳನ್ನು ಬೇರ್ಪಡಿಸಿ, ಮಧ್ಯಮ ಗಾತ್ರಕ್ಕೆ ಹೆಚ್ಚಿಕೊಳ್ಳಿ.

8. ಕುಕ್ಕರ್ ಅಲ್ಲಿ ನೀರನ್ನು ಹಾಕಿ.

9. ಅದಕ್ಕೆ ಟೊಮ್ಯಾಟೋ ಹಾಕಿ, ಒಂದು ಸೀಟಿ ಕೂಗಿಸಿಕೊಳ್ಳಿ.

10. ಕುಕ್ಕರ್‍ನ ಪ್ರೆಶರ್ ಇಳಿಯುವಂತೆ ಸ್ವಲ್ಪ ಮುಚ್ಚಳವನ್ನು ಸಡಿಲಗೊಳಿಸಿ.

11. ಬಳಿಕ ಟೊಮ್ಯಾಟೋವನ್ನು ಒಂದು ಪ್ಲೇಟ್‍ಗೆ ವರ್ಗಾಯಿಸಿ, 15ನಿಮಿಷಗಳಕಾಲ ಆರಲು ಬಿಡಿ.

12. ಬೆಂದ ಟೊಮ್ಯಾಟೋವಿನ ಸಿಪ್ಪೆಯನ್ನು ತೆಗೆಯಿರಿ.

13. ಟೊಮ್ಯಾಟೋಅನ್ನು ಮಿಕ್ಸರ್ ಜಾರ್‍ಗೆ ವರ್ಗಾಯಿಸಿ.

14. ಬೆಳ್ಳುಳ್ಳಿ ಎಸಳನ್ನು ಸೇರಿಸಿ, ನುಣ್ಣಗೆ ರುಬ್ಬಿಕೊಳ್ಳಿ.

15. ಬಿಸಿಯಾದ ಪಾತ್ರೆಗೆ ಎಣ್ಣೆಯನ್ನು ಸೇರಿಸಿ.

16. ಜೀರಿಗೆಯನ್ನು ಚಟ-ಪಟ ಎನ್ನುವವರೆಗೆ ಹುರಿಯಿರಿ.

17. ಹೆಚ್ಚಿಕೊಂಡ ಈರುಳ್ಳಿಯನ್ನು ಸೇರಿಸಿ, ದೊಡ್ಡ ಉರಿಯಲ್ಲಿ 2-3 ನಿಮಿಷಗಳ ಕಾಲ ಹೊಂಬಣ್ಣ ಬರುವ ತನಕ ಹುರಿಯಿರಿ.

18. ಹೆಚ್ಚಿಕೊಂಡ ಕ್ಯಾಪ್ಸಿಕಮ್‍ಅನ್ನು ಸೇರಿಸಿ, ಹುರಿಯಿರಿ.

19. 2 ನಿಮಿಷಗಳ ಕಾಲ ಚೆನ್ನಾಗಿ ಬೇಯಲು ಬಿಡಿ.

20. ರುಬ್ಬಿಕೊಂಡ ಟೊಮ್ಯಾಟೋ ಪೇಸ್ಟ್ ಅನ್ನು ಸೇರಿಸಿ.

21. ಒಂದು ನಿಮಿಷ ಬೇಯಲು ಬಿಡಿ.

22. ಉಪ್ಪು ಮತ್ತು ಖಾರದ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ.

23. ಪನ್ನೀರ್ ಪೀಸ್‍ಗಳನ್ನು ಸೇರಿಸಿ.

24. ಕಸೂರಿ ಮೇಥಿಯನ್ನು ಸೇರಿಸಿ, ಮಿಶ್ರಗೊಳಿಸಿ.

25. ಮುಚ್ಚಳವನ್ನು ಮುಚ್ಚಿ ಒಂದು ನಿಮಿಷಗಳ ಕಾಲ ಬೇಯಲು ಬಿಡಿ.

26. ಒಮ್ಮೆ ಬೆಂದಮೇಲೆ ಒಂದು ಬೌಲ್‍ಗೆ ವರ್ಗಾಯಿಸಿ.

27. ಕಸೂರಿ ಮೇಥಿಯಿಂದ ಅಲಂಕಾರ ಮಾಡಿ.

28. ಬಿಸಿ ಬಿಸಿ ಇರುವಾಗಲೇ ಸವಿಯಲು ನೀಡಿ.

Click it and Unblock the Notifications