Latest Updates
-
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
Headline for Deeplink -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್
Panaka Recipe : ರಾಮ ನವಮಿ ಪಾನಕ ಮಾಡುವುದು ಹೇಗೆ?
ಮಾರ್ಚ್ 30ಕ್ಕೆ ರಾಮ ನವಮಿ. ರಾಮ ನವಮಿಯಲ್ಲಿ ಪಾನಕ ಇರಲೇಬೇಕು. ದೇವರಿಗೆ ನೈವೇದ್ಯವನ್ನಾಗಿ ಪಾನಕ ಕಡ್ಡಾಯವಾಗಿ ಮಾಡಲಾಗುವುದು.
ಈ ದಿನ ದೇವಾಲಯಗಳಲ್ಲಿ ಪಾನಕ ತಯಾರಿಸಿ ಹಂಚಲಾಗುವುದು, ಅದರಂತೆ ಬೀದಿಗಳಲ್ಲಿಯೂ ಕೂಡ ಪಾನಕ ತಯಾರಿಸಿಟ್ಟು ಆ ದಾರಿಯಲ್ಲಿ ಓಡಾಡುವವರಿಗೆ ನೀಡಲಾಗುವುದು. ಈ ಪಾನಕ ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು.

ಬೇಸಿಗೆಯಲ್ಲಿ ಈ ಪಾನಕ ಕುಡಿಯುವುದರಿಂದ ದೇಹಕ್ಕೆ ಶಕ್ತಿ ದೊರೆಯುವುದು ಅಲ್ಲದೆ ಸನ್‌ಸ್ಟ್ರೋಕ್ ತಡೆಗಟ್ಟಲು ಸಹಕಾರಿಯಾಗುವುದು.
Recipe By: Reena TK
Recipe Type: Drinks
Serves: 4
-
ಬೇಕಾಗುವ ಸಾಮಗ್ರಿ
ಬೆಲ್ಲ
ನಿಂಬೆ ಹಣ್ಣು
ಶುಂಠಿ ಪುಡಿ
ಕಾಳು ಮೆಣಸಿನ ಪುಡಿ
ಚಿಟಿಕೆಯಷ್ಟು ಉಪ್ಪು
ತಿನ್ನುವ ಕರ್ಪೂರ
-
ಮಾಡುವ ವಿಧಾನ
ಒಂದು ಬೌಲ್‌ನಲ್ಲಿ 1/2 ಕಪ್ ಬೆಲ್ಲವನ್ನು 2 ಕಪ್ ನೀರಿನಲ್ಲಿ ಹಾಕಿಡಿ. ನೀರು ಬೇಕಿದ್ದರೆ ಅಧಿಕ ಕೂಡ ನೀರು ಸೇರಿಸಬಹುದು. ಒಂದು ಅರ್ಧ ಗಂಟೆ ಹಾಗೇ ಬಿಡಿ
* ಬೆಲ್ಲ ಸಂಪೂರ್ಣ ಕರಗಿದ ಮೇಲೆ ಸೋಸಿ.
*ಈಗ ಸೋಸಿದ ನೀರಿಗೆ ಒಂದು ದೊಡ್ಡ ನಿಂಬೆ ಹಣ್ಣಿನ ರಸ ಸೇರಿಸಿ.
* ಈಗ 1/4 ಚಮಚ ಶುಂಠಿ ಪುಡಿ ಸೇರಿಸಿ
* ನಂತರ ಚಿಟಿಕೆಯಷ್ಟು ಏಲಕ್ಕಿ ಪುಡಿ ಸೇರಿಸಿ.
* ಇದಕ್ಕೆ ಚಿಟಿಕೆಯಷ್ಟು ತಿನ್ನುವ ಕರ್ಪೂರ ಬಳಸಿ. ಇದನ್ನು ಬೇಕಿದ್ದರೆ ಬಳಸಬಹುದು, ಬಳಸದಿದ್ದರೂ ಆಗುತ್ತೆ.
* ನಂತರ ಸ್ವಲ್ಪ ಕಾಳು ಮೆಣಸಿನ ಪುಡಿ ಸೇರಿಸಿ
* ಚಿಟಿಕೆಯಷ್ಟು ಉಪ್ಪು ಸೇರಿಸಿ.
*ನಂತರ ಎಲ್ಲವನ್ನು ಮಿಕ್ಸ್ ಮಾಡಿ.
ನಂತರ ಪಾನಕಕ್ಕೆ ನೈವೇದ್ಯ ಅರ್ಪಿಸಿ.
ನೀವು ಬೇಕಿದ್ದರೆ ಸರ್ವ್ ಮಾಡುವಾಗ ಐಸ್ ಸೇರಿಸಿ ಸರ್ವ್ ಮಾಡಬಹುದು.
- ಟಿಪ್ಸ್: * ನೀವು ನಿಮಗೆ ಬೇಕಾದಷ್ಟು ಪಾನಕ ತಯಾರಿಸುವಾಗ ಈ ಸಾಮಗ್ರಿಗಳ ಅಳತೆ ಹೆಚ್ಚು ಮಾಡುವುದು, ಕಡಿಮೆ ಮಾಡುವುದು ಮಾಡಬಹುದು. * ನೀವು ತುಳಸಿ ಎಲೆ ಬೇಕಿದ್ದರೆ ಸೇರಿಸಬಹುದು. * ನೀವು ನಿಂಬೆ ಬದಲು ಹುಣಸೆಹಣ್ಣಿನ ರಸ ಬೇಕಾದರೆ ಸೇರಿಸಬಹುದು.



Click it and Unblock the Notifications