Latest Updates
-
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ
ಬೆಳಗ್ಗೆ ಈ ಗಂಜಿ ಕುಡಿಯಿರಿ.. ಊಟ ಮಾಡಿದ್ರೂ ತೂಕ ಇಳಿಯುತ್ತೆ! ಹೊಟ್ಟೆಗೆ ತಂಪು, ದೇಹಕ್ಕೆ ಶಕ್ತಿ
ಬಿಸಿಲಿಗೆ ದೇಹ ತಂಪಾಗಿಸುವ ಮ್ಯಾಜಿಕ್ ಗಂಜಿ! ಇದನ್ನು ಬೆಳಗ್ಗೆ ಕುಡಿದ್ರೆ ದಿನವಿಡೀ ಎನರ್ಜಿ ಖಚಿತ. ಹೌದು, ಅಕ್ಕಿ ಗಂಜಿ (Ganji) ಬೇಸಿಗೆ ಕಾಲಕ್ಕೆ ಅತ್ಯುತ್ತಮ ಉಪಹಾರ. ದಕ್ಷಿಣ ಭಾರತದಲ್ಲಿ ಸಾಂಪ್ರದಾಯಿಕವಾಗಿ ತಯಾರಿಸುವ ಅಕ್ಕಿ ಗಂಜಿ, ಬರೀ ರುಚಿಕರವಾದ ತಿಂಡಿಯಲ್ಲ. ಬದಲಿಗೆ ಆರೋಗ್ಯಕರ ಪ್ರಯೋಜನಗಳಿಂದ ಕೂಡಿದ ನೈಸರ್ಗಿಕ ಔಷಧಿಯಾಗಿದೆ. ಇದನ್ನು ಸಾಮಾನ್ಯವಾಗಿ ಹಳೆ ಅನ್ನದ ಗಂಜಿ (Kanji) ಅಥವಾ ಪಳಂಗಂಜಿ ಎಂದೂ ಕರೆಯುತ್ತಾರೆ.
ಬೇಸಿಗೆಯ ದಿನಗಳಲ್ಲಿ ದೇಹವನ್ನು ತಂಪಾಗಿ ಮತ್ತು ಶಕ್ತಿಯುತವಾಗಿಡಲು ಈ ಗಂಜಿ ಅತ್ಯಂತ ಸಹಕಾರಿ. ಬೇಯಿಸಿದ ಅನ್ನ, ಮೊಸರು ಮತ್ತು ಪರಿಮಳಯುಕ್ತ ಒಗ್ಗರಣೆಯಿಂದ ತಯಾರಾಗುವ ಈ ಅಕ್ಕಿ ಗಂಜಿ (Rice Ganji), ಜೀರ್ಣಾಂಗ ವ್ಯವಸ್ಥೆಗೆ ಉತ್ತಮವಾಗಿದೆ. ಊಟ ಮಾಡಿದ್ರೂ ತೂಕ ಇಳಿಸಿಕೊಳ್ಳಬಹುದು. ಇದನ್ನು ತಯಾರಿಸುವುದು ಕೂಡ ತುಂಬಾ ಸುಲಭ. ಬನ್ನಿ, ಈ ಗಂಜಿ ತಯಾರಿಸಲು ಬೇಕಾದ ಸಾಮಗ್ರಿಗಳು ಮತ್ತು ವಿಧಾನವನ್ನು ಈ ಲೇಖನದಲ್ಲಿ ತಿಳಿಯೋಣ.

ಹುದುಗಿಸಿದ ಅನ್ನದ ಪ್ರಯೋಜನಗಳು
ಹುದುಗಿಸಿದ ಅನ್ನವು ಪೌಷ್ಟಿಕಾಂಶದ ನಿಧಿಯಾಗಿದೆ. ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ. ರಾತ್ರಿಯಿಡೀ ನೀರಿನಲ್ಲಿ ನೆನೆಸಿ, ಕೋಣೆಯ ಉಷ್ಣಾಂಶದಲ್ಲಿ ಹುದುಗಿಸಿದ ಅನ್ನವು ನೈಸರ್ಗಿಕ ಪ್ರೋಬಯಾಟಿಕ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ದೇಹದ ವಿವಿಧ ಕಾರ್ಯಗಳಿಗೆ ನೆರವಾಗುತ್ತದೆ.
• ಹುದುಗಿಸಿದ ಅನ್ನವು ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ.
• ಇದು ಕರುಳಿನಲ್ಲಿ ಪ್ರಯೋಜನಕಾರಿ ಸೂಕ್ಷ್ಮಜೀವಿಗಳ ಬೆಳವಣಿಗೆಗೆ ಸಹಕಾರಿ.
• ಕರುಳಿನ ಆರೋಗ್ಯ ಉತ್ತಮಗೊಂಡಾಗ, ದೇಹದ ರೋಗನಿರೋಧಕ ಶಕ್ತಿಯೂ
ಬಲಗೊಳ್ಳುತ್ತದೆ.
• ಇದು ಸೋಂಕುಗಳಿಂದ ದೇಹವನ್ನು ರಕ್ಷಿಸಲು ಸಹಾಯ ಮಾಡುತ್ತದೆ.
• ಇದರ ಸೇವನೆಯಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ.
ಹುದುಗಿಸಿದ ಅನ್ನವು ಜೀರ್ಣಾಂಗವ್ಯೂಹದ ಮೇಲೆ ಕಡಿಮೆ ಒತ್ತಡ ಹೇರುವುದರಿಂದ, ಸುಲಭವಾಗಿ ಜೀರ್ಣವಾಗುತ್ತದೆ. ಇದಲ್ಲದೆ, ಈ ಆಹಾರವು ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಕಾಪಾಡುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ.
ಮೊಸರು ಮತ್ತು ಗಂಜಿಯ ಸಂಗಮ
ಮೊಸರು ಸಹ ಪ್ರೋಬಯಾಟಿಕ್ಗಳನ್ನು ಒಳಗೊಂಡಿದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುವುದಲ್ಲದೆ, ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಮೊಸರಿನ ನಿಯಮಿತ ಸೇವನೆಯಿಂದ ಚರ್ಮವು ಆರೋಗ್ಯಕರವಾಗಿ ಮತ್ತು ಕಾಂತಿಯುತವಾಗಿ ಕಾಣಿಸುತ್ತದೆ. ಈ ಗಂಜಿ ದೇಹದ ಉಷ್ಣಾಂಶವನ್ನು ಕಡಿಮೆ ಮಾಡಿ, ಬೇಸಿಗೆಯ ಬಿಸಿಲಿನಿಂದ ಉಂಟಾಗುವ ಆಯಾಸವನ್ನು ದೂರ ಮಾಡುತ್ತದೆ.
ಗಂಜಿ ತಯಾರಿಸಲು ಬೇಕಾದ ಸಾಮಗ್ರಿಗಳು
• ಬೇಯಿಸಿದ ಅನ್ನ - 1 ಕಪ್
• ಮೊಸರು - 2 ಕಪ್
• ಈರುಳ್ಳಿ - 1
• ಕೊತ್ತಂಬರಿ ಸೊಪ್ಪು - 2 ಚಮಚ
• ಎಣ್ಣೆ - 2 ಚಮಚ (ತೆಂಗಿನ ಎಣ್ಣೆ)
• ಸಾಸಿವೆ - 1 ಚಮಚ
• ಕರಿಬೇವಿನ ಎಲೆಗಳು - 2 ಎಸಳು
• ಉಪ್ಪು - ರುಚಿಗೆ ತಕ್ಕಷ್ಟು
• ಜೀರಿಗೆ - 1 ಚಮಚ
• ಉದ್ದಿನಬೇಳೆ - 1 ಚಮಚ
• ಇಂಗು - ಒಂದು ಚಿಟಿಕೆ
• ನೀರು - 2 ಕಪ್
ಗಂಜಿ ತಯಾರಿಸುವ ವಿಧಾನ
- ಮೊದಲು ಬೇಯಿಸಿದ ಅನ್ನವನ್ನು ರಾತ್ರಿ ಪೂರ್ತಿ ನೀರಿನಲ್ಲಿ ನೆನೆಸಿ, ಕೋಣೆಯ ಉಷ್ಣಾಂಶದಲ್ಲಿ ಇಡಿ.
- ಮರುದಿನ ಬೆಳಗ್ಗೆ, ನೆನೆಸಿದ ಹುದುಗಿದ ಅನ್ನಕ್ಕೆ ಮೊಸರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
- ಸಣ್ಣದಾಗಿ ಹೆಚ್ಚಿದ ಈರುಳ್ಳಿ, ಹಸಿಮೆಣಸು ಮತ್ತು ಕೊತ್ತಂಬರಿ ಸೊಪ್ಪನ್ನು ಈ ಅನ್ನ-ಮೊಸರು ಮಿಶ್ರಣಕ್ಕೆ ಸೇರಿಸಿ.
- ಒಂದು ಬಾಣಲೆಯಲ್ಲಿ ತೆಂಗಿನ ಎಣ್ಣೆ ಹಾಕಿ, ಕಾದ ನಂತರ ಸಾಸಿವೆ, ಕರಿಬೇವಿನ ಎಲೆಗಳು, ಇಂಗು, ಜೀರಿಗೆ ಮತ್ತು ಉದ್ದಿನಬೇಳೆ ಸೇರಿಸಿ ಒಗ್ಗರಣೆ ತಯಾರಿಸಿ.
- ತಯಾರಾದ ಒಗ್ಗರಣೆಯನ್ನು ಅನ್ನ-ಮೊಸರು ಮಿಶ್ರಣಕ್ಕೆ ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ ಸೇವಿಸಿ.



Click it and Unblock the Notifications