For Quick Alerts
ALLOW NOTIFICATIONS  
For Daily Alerts

ರೆಸಿಪಿ: ಈ ಪಾಲಾಕ್ ಪರೋಟಾ ಆರೋಗ್ಯಕ್ಕೂ ಒಳ್ಳೆಯದು, ರುಚಿಯೂ ಸೂಪರ್

Posted By:
|

ಅನೇಕ ವಿಧವಿಧವಾದ ಪರೋಟಾವನ್ನು ತಯಾರಿಸಬಹುದು, ಆಲೂ ಪರೋಟಾ, ಗೋಭಿ ಪರೋಟಾ, ಕ್ಯಾರೇಟ್ ಪರೋಟಾ, ಪಾಲಾಕ್ ಪರೋಟಾ ಹೀಗೆ .. ಎಲ್ಲವೂ ವಿಭಿನ್ನ ರುಚಿಯನ್ನ ಕೊಡುವಂಥದ್ದು.

ಇವುಗಳಲ್ಲಿ ಅತ್ಯಂತ ಆಪ್ತಕರ ಆಗುವಂಥ ಹಾಗೂ ಸುಲಭವಾಗಿ ಮಾಡಿಕೊಳ್ಳಬಹುದಾದಂಥ ಪಾಲಾಕ್ ಪರೋಟಾ ರೆಸಿಪಿಯನ್ನ ನಾವಿಂದು ಹೇಳುತ್ತಿದ್ದೇವೆ.

palak parota recipe, ಪಾಲಾಕ್ ಪರೋಟಾ ರೆಸಿಪಿ
palak parota recipe, ಪಾಲಾಕ್ ಪರೋಟಾ ರೆಸಿಪಿ
Prep Time
10 Mins
Cook Time
30M
Total Time
40 Mins

Recipe By: Poornima Hegde

Recipe Type: Breakfast

Serves: 3

Ingredients
  • ತಯಾರಿಸಲು ಬೇಕಾಗುವ ಸಾಮಗ್ರಿಗಳು:

    ಪಾಲಾಕ್ ಕಟ್ಟು - ಒಂದು

    ಹಸಿಮೆಣಸು - ಒಂದರಿಂದ ಎರಡು

    ಶುಂಠಿ - ಸ್ವಲ್ಪ

    ಉಪ್ಪು - ರುಚಿಗೆ ತಕ್ಕಷ್ಟು

    ಎಣ್ಣೆ - ಸ್ವಲ್ಪ (ತುಪ್ಪವನ್ನು ಕೂಡ ಬಳಸಬಹುದು)

    ಅಜ್ವೈನ್- ಒಂದು ಚಿಟಿಕೆ

    ಗೋಧಿ ಹಿಟ್ಟು - ಒಂದು ಮಧ್ಯಮ ಗಾತ್ರದ ಕಪ್ ನಷ್ಟು (ಇದರಲ್ಲಿ ಮೂರರಿಂದ ನಾಲ್ಕು ಪರೋಟಾ ಮಾಡಬಹುದು)

Red Rice Kanda Poha
How to Prepare
  • ಪರೋಟಾ ತಯಾರಿಸುವ ವಿಧಾನ:

    ಹಂತ 1:

    ಮೊದಲಿಗೆ ಒಂದು ಕಟ್ ಪಾಲಾಕ್ ಸೊಪ್ಪನ್ನು ಚೆನ್ನಾಗಿ ತೊಳೆದು ಹೆಚ್ಚಿಕೊಳ್ಳಿ. ಪಾಲಾಕ್ ನ್ನು ಚಿಕ್ಕದಾಗಿ ಹೆಚ್ಚಿಕೊಳ್ಳುವ ಅಗತ್ಯವಿಲ್ಲ. ಅದನ್ನು ರುಬ್ಬಲು ಅಗತ್ಯವಿದ್ದಷ್ಟು ಅಂದರೆ ಎರಡರಿಮ್ದ ಮೂರು ಪೀಸ್ ಮಾಡಿಕೊಂಡ್ರೆ ಸಾಕು.

    ಹಂತ 2:

    ಗ್ಯಾಸ್ ಮೇಲೆ ಪಾತ್ರೆಯೊಂದನ್ನು ಇಟ್ಟು ಅದಕ್ಕೆ ನೀರು ಹಾಕಿ, ಹೆಚ್ಚಿಟ್ಟುಕೊಂಡ ಪಾಲಾಕ್ ಸೊಪ್ಪನ್ನು ಹಾಕಿ ಕುದಿಸಿ. ಸೊಪ್ಪು ಸ್ವಲ್ವ ಬಾಡಿದ ನಂತರ ಅದನ್ನು ಒಂದು ಮಿಕ್ಸರ್ ಜಾರ್ ಗೆ ಹಾಕಿಕೊಳ್ಳಿ.

    ಹಂತ 3:

    ಬೆಂದ ಸೊಪ್ಪು ಸ್ವಲ್ಪ ಆರಿದ ಮೇಲೆ ಅದಕ್ಕೆ ಹಸಿಮೆಣಸು ಹಾಗೂ ಶುಂಠಿಯನ್ನು ಹಾಗೆಯೇ ಸ್ವಲ್ಪ ಸೀರನ್ನು ಬೆರೆಸಿ ನುಣುಪಾಗಿ ರುಬ್ಬಿಕೊಳ್ಳಿ.

    ಹಂತ 4:

    ಒಂದು ಅಗಲವಾದ ಪಾತ್ರೆಗೆ ಒಂದು ಕಪ್ ಗೋಧಿ ಹಿಟ್ಟನ್ನು ಹಾಕಿ. ಅದಕ್ಕೆ ಚಿಟಿಕೆ ಅಜ್ವಾನ, ಉಪ್ಪು ಹಾಗೂ ಸ್ವಲ್ಪ ಎಣ್ಣೆಯನ್ನು ಹಾಕಿ. ಈಗ ರುಬ್ಬಿಟ್ಟುಕೊಂಡ ಪಾಲಾಕ್ ಸೊಪ್ಪಿನ ಮಿಶ್ರಣ ಹಾಗೂ ಸ್ವಲ್ಪ ನೀರನ್ನು ಹಾಕಿ ಹಿಟ್ಟನ್ನು ನಾದಿ. ಹಿಟ್ಟನ್ನು ಸ್ವಲ್ಪ ಮೆತ್ತಗೆ ನಾದಿಕೊಳ್ಳಿ. ನಾದಿಕೊಂಡ ಹಿಟ್ಟಿಗೆ ಸ್ವಲ್ಪ ಎಣ್ಣೆಯನ್ನು ಹಾಕಿ. ಅದನ್ನು ಐದರಿಂದ ಹತ್ತು ನಿಮಿಷಗಳ ಕಾಲ ನೆನೆಯಲು ಬಿಡಿ.

    ಹಂತ 5:

    ಇದೀಗ ತವಾವನ್ನು ಬಿಸಿಗೆ ಇಡಿ. ನಾದಿಕೊಂಡ ಹಿಟ್ಟಿನಿಂದ ಮಧ್ಯಮ ಗಾತ್ರದ ಉಂಡೆಗಳನ್ನು ಮಾಡಿಕೊಂಡು ಸ್ವಲ್ವ ಗೋಧಿಹಿಟ್ಟಿನಲ್ಲಿ ಅದ್ದಿ ಲಟ್ಟಿಸಿಕೊಳ್ಳಿ. ಪರೋಟಾ ಮಾಡುವಾಗ ಸ್ವಲ್ಪ ದಪ್ಪಗೆ ಲಟ್ಟಿಸಿಕೊಳ್ಳಬೇಕು. ಲಟ್ಟಿಸಿಕೊಂಡ ಪರೋಟಾವನ್ನು ತವಾಗೆ ಹಾಕಿ ಎರಡೂ ಕಡೆ ತಿರುವಿ ಹಾಕಿ ಚೆನ್ನಾಗಿ ಬೇಯಿಸಿ.

    ಯಾವುದಾದರೂ ತೆಂಗಿನ ಕಾಯಿ ಚಟ್ನಿ ಜೊತೆ ಈ ಪರೋಟಾವನ್ನು ಬಿಸಿ ಬಿಸಿಯಾಗಿ ಸವಿಯಲು ಕೊಡಿ.

Instructions
  • ಸೊಪ್ಪನ್ನು ಬೇಕಿದ್ದರೆ ಎಣ್ನೆಯಲ್ಲಿ ಫ್ರೈ ಮಾಡಿ ಬೇಯಿಸಿ ಪೇಸ್ಟ್ ಮಾಡಬಹುದು.
Nutritional Information

ಪರೋಟಾ ತಯಾರಿಸುವ ವಿಧಾನ:

ಹಂತ 1:

ಮೊದಲಿಗೆ ಒಂದು ಕಟ್ ಪಾಲಾಕ್ ಸೊಪ್ಪನ್ನು ಚೆನ್ನಾಗಿ ತೊಳೆದು ಹೆಚ್ಚಿಕೊಳ್ಳಿ. ಪಾಲಾಕ್ ನ್ನು ಚಿಕ್ಕದಾಗಿ ಹೆಚ್ಚಿಕೊಳ್ಳುವ ಅಗತ್ಯವಿಲ್ಲ. ಅದನ್ನು ರುಬ್ಬಲು ಅಗತ್ಯವಿದ್ದಷ್ಟು ಅಂದರೆ ಎರಡರಿಮ್ದ ಮೂರು ಪೀಸ್ ಮಾಡಿಕೊಂಡ್ರೆ ಸಾಕು.

palak parota recipe
palak parota recipe

ಹಂತ 2:

ಗ್ಯಾಸ್ ಮೇಲೆ ಪಾತ್ರೆಯೊಂದನ್ನು ಇಟ್ಟು ಅದಕ್ಕೆ ನೀರು ಹಾಕಿ, ಹೆಚ್ಚಿಟ್ಟುಕೊಂಡ ಪಾಲಾಕ್ ಸೊಪ್ಪನ್ನು ಹಾಕಿ ಕುದಿಸಿ. ಸೊಪ್ಪು ಸ್ವಲ್ವ ಬಾಡಿದ ನಂತರ ಅದನ್ನು ಒಂದು ಮಿಕ್ಸರ್ ಜಾರ್ ಗೆ ಹಾಕಿಕೊಳ್ಳಿ.

palak parota recipe
palak parota recipe

ಹಂತ 3:

ಬೆಂದ ಸೊಪ್ಪು ಸ್ವಲ್ಪ ಆರಿದ ಮೇಲೆ ಅದಕ್ಕೆ ಹಸಿಮೆಣಸು ಹಾಗೂ ಶುಂಠಿಯನ್ನು ಹಾಗೆಯೇ ಸ್ವಲ್ಪ ಸೀರನ್ನು ಬೆರೆಸಿ ನುಣುಪಾಗಿ ರುಬ್ಬಿಕೊಳ್ಳಿ.

palak parota recipe

ಹಂತ 4:

ಒಂದು ಅಗಲವಾದ ಪಾತ್ರೆಗೆ ಒಂದು ಕಪ್ ಗೋಧಿ ಹಿಟ್ಟನ್ನು ಹಾಕಿ. ಅದಕ್ಕೆ ಚಿಟಿಕೆ ಅಜ್ವಾನ, ಉಪ್ಪು ಹಾಗೂ ಸ್ವಲ್ಪ ಎಣ್ಣೆಯನ್ನು ಹಾಕಿ. ಈಗ ರುಬ್ಬಿಟ್ಟುಕೊಂಡ ಪಾಲಾಕ್ ಸೊಪ್ಪಿನ ಮಿಶ್ರಣ ಹಾಗೂ ಸ್ವಲ್ಪ ನೀರನ್ನು ಹಾಕಿ ಹಿಟ್ಟನ್ನು ನಾದಿ. ಹಿಟ್ಟನ್ನು ಸ್ವಲ್ಪ ಮೆತ್ತಗೆ ನಾದಿಕೊಳ್ಳಿ. ನಾದಿಕೊಂಡ ಹಿಟ್ಟಿಗೆ ಸ್ವಲ್ಪ ಎಣ್ಣೆಯನ್ನು ಹಾಕಿ. ಅದನ್ನು ಐದರಿಂದ ಹತ್ತು ನಿಮಿಷಗಳ ಕಾಲ ನೆನೆಯಲು ಬಿಡಿ.

palak parota recipe

ಹಂತ 5:

ಇದೀಗ ತವಾವನ್ನು ಬಿಸಿಗೆ ಇಡಿ. ನಾದಿಕೊಂಡ ಹಿಟ್ಟಿನಿಂದ ಮಧ್ಯಮ ಗಾತ್ರದ ಉಂಡೆಗಳನ್ನು ಮಾಡಿಕೊಂಡು ಸ್ವಲ್ವ ಗೋದಿಹಿಟ್ಟಿನಲ್ಲಿ ಅದ್ದಿ ಲಟ್ಟಿಸಿಕೊಳ್ಳಿ. ಪರೋಟಾ ಮಾಡುವಾಗ ಸ್ವಲ್ಪ ದಪ್ಪಗೆ ಲಟ್ಟಿಸಿಕೊಳ್ಳಬೇಕು. ಲಟ್ಟಿಸಿಕೊಂಡ ಪರೋಟಾವನ್ನು ತವಾಗೆ ಹಾಕಿ ಎರಡೂ ಕಡೆ ತಿರುವಿ ಹಾಕಿ ಚೆನ್ನಾಗಿ ಬೇಯಿಸಿ.

ಯಾವುದಾದರೂ ತೆಂಗಿನ ಕಾಯಿ ಚಟ್ನಿ ಜೊತೆ ಈ ಪರೋಟಾವನ್ನು ಬಿಸಿ ಬಿಸಿಯಾಗಿ ಸವಿಯಲು ಕೊಡಿ.

[ 5 of 5 - 88 Users]
X
Desktop Bottom Promotion