Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಪಾಲಕ್ ಎಲೆಯ ಪಕೋಡಾ ಪಾಕವಿಧಾನ
ಮಳೆಗಾಲದಲ್ಲಿ ಬಿಸಿ-ಬಿಸಿ ಪಕೋಡಾ ತಿನ್ನುವುದು ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಪಕೋಡಾ ಆಳವಾಗಿ ಎಣ್ಣೆಯಲ್ಲಿ ಕರಿಯುವುದರಿಂದ ಎಣ್ಣೆಯುಕ್ತವಾಗಿದ್ದು, ಡಯೆಟ್‍ಗಳಲ್ಲಿ ಇರುವವರಿಗೆ ಸೂಕ್ತ ತಿಂಡಿಯಾಗಿರುವುದಿಲ್ಲ. ಆದರೆ ಪಾಲಕ್ ಸೊಪ್ಪಿನ ಪಕೋಡಾ ಈ ಅಪವಾದದಿಂದ ದೂರ ಎನ್ನಬಹುದು. ಪಾಲಕ್ ಸೊಪ್ಪು ಬಹುಬೇಗ ಬೇಯುವುದರಿಂದ ಇದನ್ನು ಎಣ್ಣೆಯಲ್ಲಿ ದೀರ್ಘಕಾಲದ ವರೆಗೆ ಬೇಯಿಸಬೇಕಾಗುವುದಿಲ್ಲ. ಅಲ್ಲದೆ ಪಾಲಕ್ ಎಲೆಯಲ್ಲಿ ಆರೋಗ್ಯಕ್ಕೆ ಅಗತ್ಯವಾದ ಖನಿಜಗಳು ಹಾಗೂ ವಿಟಮಿನ್‍ಗಳು ಇರುತ್ತವೆ. ಇದು ಮೆದುಳಿಗೆ ಉತ್ತಮ ಪೋಷಣೆ ನೀಡುವುದು.
ಕಡ್ಲೇ ಹಿಟ್ಟು, ಅಕ್ಕಿ ಹಿಟ್ಟು, ಮಸಾಲೆ ಪದಾರ್ಥ ಹಾಗೂ ಪಾಲಕ್ ಎಲೆಯ ಸಂಯೋಜನೆಯಲ್ಲಿ ಬಹು ರುಚಿಕರವಾದ ಪಕೋಡವನ್ನು ತಯಾರಿಸಬಹುದು. ಬಲು ಸುಲಭ ಹಾಗೂ ಸರಳ ವಿಧಾನದಲ್ಲಿ ತಯಾರಿಸಬಹುದಾದ ಇದನ್ನು ಸಾಯಂಕಾಲದ ಟೀ-ಕಾಫಿಯೊಂದಿಗೆ ಹಾಗೂ ನಿಮ್ಮ ಮನಸ್ಸು ಬಯಸಿದಾಗಲೆಲ್ಲಾ ತಯಾರಿಸಿ ಸವಿಯಬಹುದು. ಈ ರುಚಿಕರವಾದ ತಿಂಡಿಯನ್ನು ನೀವು ಸಹ ತಯಾರಿಸಬೇಕು ಎನ್ನುವ ಹಂಬಲವನ್ನು ಹೊಂದಿದ್ದರೆ ಈ ಮುಂದೆ ವಿವರಿಸಲಾದ ವಿಡಿಯೋ ಚಿತ್ರಣ ಹಾಗೂ ಹಂತ ಹಂತವಾದ ಚಿತ್ರವಿವರಣೆಯನ್ನು ಪರಿಶೀಲಿಸಿ.

Recipe By: ಕಾವ್ಯಾ
Recipe Type: ಕುರುಕಲು ತಿಂಡಿ
Serves: 3-4 ಮಂದಿಗೆ
-
ಉಪ್ಪು -ರುಚಿಗೆ ತಕ್ಕಷ್ಟು.
ಎಣ್ಣೆ - ಕರಿಯಲು
ಖಾರದ ಪುಡಿ -1,1/2 ಟೇಬಲ್ ಚಮಚ
ಕಡ್ಲೇ ಹಿಟ್ಟು - 1 ಕಪ್
ಪಾಲಕ್ ಎಲೆ- 10-12 ಎಲೆಗಳು
ಜೀರಿಗೆ -1 ಟೇಬಲ್ ಚಮಚ
ಅಕ್ಕಿ ಹಿಟ್ಟು-2 ಟೇಬಲ್ ಚಮಚ
ನೀರು - 1 ಕಪ್.
-
ಪಾಲಕ್ ಎಲೆಯನ್ನು ಬಿಡಿಸಿಕೊಳ್ಳಿ.
ಒಂದು ಬೌಲ್‍ಅಲ್ಲಿ ಕಡ್ಲೇ ಹಿಟ್ಟು, ಜೀರಿಗೆ, ಅಕ್ಕಿ ಹಿಟ್ಟು, ಖಾರದ ಪುಡಿ ಮತ್ತು ಉಪ್ಪನ್ನು ಸೇರಿಸಿ.
ಎಲ್ಲವನ್ನು ಚೆನ್ನಾಗಿ ಮಿಶ್ರಗೊಳಿಸಿ.
ಬಿಸಿ ಎಣ್ಣೆಯನ್ನು ತೆಗೆದುಕೊಳ್ಳಿ.
ತಯಾರಿಸಿಕೊಂಡ ಮಿಶ್ರಣಕ್ಕೆ ಅಗತ್ಯವಿದ್ದರೆ ಸ್ವಲ್ಪ ಸ್ವಲ್ಪವಾಗಿ ನೀರನ್ನು ಸೇರಿಸಿ, ಮೃದುವಾದ ಬೆಣ್ಣೆಯ ಹದಕ್ಕೆ ತಂದುಕೊಳ್ಳಿ.
ಮಿಶ್ರಣ ಸಿದ್ಧವಾದ ಬಳಿಕ ಪಾಲಕ್ ಎಲೆಯನ್ನು ಅದರಲ್ಲಿ ಅದ್ದಿ ಖಾದಿರುವ ಎಣ್ಣೆಯಲ್ಲಿ ಬಿಡಿ.
ಪಕೋಡದ ಎರಡು ಮಗ್ಗುಲಲ್ಲಿ ಚೆನ್ನಾಗಿ ಬೇಯುವಂತೆ ತಿರುವಿ.
ಬಳಿಕ ಪಕೋಡವನ್ನು ಒಂದು ಪ್ಲೇಟ್‍ಗೆ ವರ್ಗಾಯಿಸಿ.
- ಮಿಶ್ರಣಕ್ಕೆ ಸ್ವಲ್ಪ ಬಿಸಿ ಎಣ್ಣೆ ಮತ್ತು ಅಕ್ಕಿ ಹಿಟ್ಟು ಸೇರಿಸಿದರೆ ಗರಿಗರಿಯಾಗುವುದು ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು.
- ಬಡಿಸುವ ಪ್ರಮಾಣ - 1 ಪಕೋಡಾ
- ಕ್ಯಾಲೋರಿ - 60 ಕ್ಯಾಲ್
- ಕೊಬ್ಬು - 1 ಗ್ರಾಂ.
- ಪ್ರೋಟೀನ್ - 3 ಗ್ರಾಂ.
- ಕಾರ್ಬೋಹೈಡ್ರೇಟ್ - 9 ಗ್ರಾಂ.
ಹಂತ ಹಂತವಾದ ಚಿತ್ರವಿವರಣೆ
ಪಾಲಕ್ ಎಲೆಯನ್ನು ಬಿಡಿಸಿಕೊಳ್ಳಿ.

ಒಂದು ಬೌಲ್‍ಅಲ್ಲಿ ಕಡ್ಲೇ ಹಿಟ್ಟು, ಜೀರಿಗೆ, ಅಕ್ಕಿ ಹಿಟ್ಟು, ಖಾರದ ಪುಡಿ ಮತ್ತು ಉಪ್ಪನ್ನು ಸೇರಿಸಿ.




ಎಲ್ಲವನ್ನು ಚೆನ್ನಾಗಿ ಮಿಶ್ರಗೊಳಿಸಿ.

ಬಿಸಿ ಎಣ್ಣೆಯನ್ನು ತೆಗೆದುಕೊಳ್ಳಿ.

ತಯಾರಿಸಿಕೊಂಡ ಮಿಶ್ರಣಕ್ಕೆ ಅಗತ್ಯವಿದ್ದರೆ ಸ್ವಲ್ಪ ಸ್ವಲ್ಪವಾಗಿ ನೀರನ್ನು ಸೇರಿಸಿ, ಮೃದುವಾದ ಬೆಣ್ಣೆಯ ಹದಕ್ಕೆ ತಂದುಕೊಳ್ಳಿ.

ಮಿಶ್ರಣ ಸಿದ್ಧವಾದ ಬಳಿಕ ಪಾಲಕ್ ಎಲೆಯನ್ನು ಅದರಲ್ಲಿ ಅದ್ದಿ ಖಾದಿರುವ ಎಣ್ಣೆಯಲ್ಲಿ ಬಿಡಿ.

ಪಕೋಡದ ಎರಡು ಮಗ್ಗುಲಲ್ಲಿ ಚೆನ್ನಾಗಿ ಬೇಯುವಂತೆ ತಿರುವಿ.

ಬಳಿಕ ಪಕೋಡವನ್ನು ಒಂದು ಪ್ಲೇಟ್‍ಗೆ ವರ್ಗಾಯಿಸಿ.




Click it and Unblock the Notifications
