Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಆನಿಯನ್ ರಿಂಗ್ ಮಾಡಿದರೆ ಪರ್ಫೆಕ್ಟ್ ಆಗಿ ಬರುತ್ತೆ ನೋಡಿ, ರುಚಿ ಸೂಪರ್
ಆನಿಯನ್ ರಿಂಗ್ ಸಂಜೆ ಟೀ ಜೊತೆ ಸವಿಯಲು ಸೂಪರ್ ಸ್ನ್ಯಾಕ್ಸ್. ಇದನ್ನು ರುಚಿಯಾಗಿ, ಕ್ರಿಸ್ಪಿಯಾಗಿ ಮಾಡಲು ಇಲ್ಲಿ ಕೆಲವೊಂದು ಟಿಪ್ಸ್ ನೀಡಿದ್ದೇವೆ, ಬನ್ನಿ ಈ ಸ್ನ್ಯಾಕ್ಸ್ ರೆಸಿಪಿ ನೋಡೋಣ:

ಬೇಕಾಗುವ ಸಾಮಗ್ರಿ
2 ದೊಡ್ಡ ಗಾತ್ರದ ಈರುಳ್ಳಿ
1ಕಪ್ ಅಡುಗೆ ಎಣ್ಣೆ
1 ಕಪ್ ಮಜ್ಜಿಗೆ
ಕಲ್ಲುಪ್ಪು
ಕಾಳು ಮೆಣಸಿನ ಪುಡಿ 1/ 2 ಚಮಚ
1 ಕಪ್ ಮೈದಾ
1/2 ಚಮಚ ಖಾರದ ಪುಡಿ
ಮಾಡುವ ವಿಧಾನ
- ಒಂದು ಬೌಲ್ಗೆ ಮಜ್ಜಿಗೆ ಹಾಕಿ ಅದರಲ್ಲಿ ಕತ್ತರಿಸಿದ ಈರುಳ್ಳಿ ಹಾಕಿ, ಈಗ ಮೈದಾ, ಕಲ್ಲುಪ್ಪು, ಮೆಣಸಿನ ಪುಡಿ ಹಾಕಿ, ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಿ ಪೇಸ್ಟ್ ರೀತಿ ಹಿಟ್ಟನ್ನು ಮಾಡಿ.
- ಈಗ ಈರುಳ್ಳಿಯನ್ನು ರೌಂಡಾಗಿ ಕತ್ತರಿಸಿ, ರಿಂಗ್ಗಳನ್ನು ಪ್ರತ್ಯೇಕಿಸಿ
- ಈಗ ಈರುಳ್ಳಿಯನ್ನುಕಲಿಸಿದ ಹಿಟ್ಟಿಗೆ ಹಾಕಿ ಮಿಕ್ಸ್ ಮಾಡಿ
- ಎಣ್ಣೆಯನ್ನು ಕಾಯಿಸಿ
- ನಂತರ ಈರುಳ್ಳಿ ರಿಂಗ್ಗಳನ್ನು ಎಣ್ಣೆಯಲ್ಲಿ ಹಾಕಿ ಕಂದು ಬಣ್ಣ ಬರುವಾಗ ತೆಗೆಯಿರಿ
ರುಚಿ ರುಚಿಯಾದ ಆನಿಯನ್ ರಿಂಗ್ ರೆಡಿ.
ಟಿಪ್ಸ್
- ಆನಿಯನ್ ಚಿಪ್ಸ್ ಮಾಡಲು ಸ್ವಲ್ಪ ಹಳದಿ ಬಣ್ಣದಲ್ಲಿಇರುತ್ತದೆ ಅಲ್ಲಾ ಆ ಈರುಳ್ಳಿ ಒಳ್ಳೆಯದು, ಏಕೆಂದರೆ ಈ ಈರುಳ್ಳಿ ಖಾರ ಕಮ್ಮಿ(ಪೀನಟ್ ಆಯಿಲ್) ಬಳಸಿ ಫ್ರೈ ಮಾಡಿ
- ಈರುಳ್ಳಿ ಚೆನ್ನಾಗಿ ಕ್ರಿಸ್ಪಿ ಆದ ಮೇಲೆ ತೆಗೆಯಿರಿ
- ಕತ್ತರಿಸುವಾಗ ಕೂಡ ಸ್ವಲ್ಪ ದಪ್ಪದಲ್ಲಿ ರೌಂಡಾಗಿ ಕತ್ತರಿಸಿ.
- ಇದಕ್ಕೆ ದೊಡ್ಡ ರಿಂಗ್ ಮಾತ್ರ ಬಳಸಿದರೆ ಚೆನ್ನಾಗಿರುತ್ತದೆ. ಚಿಕ್ಕ ರಿಂಗ್ಗಳನ್ನು ಬೇರೆ ಅಡುಗೆಗೆ ಬಳಸಬಹುದು ಅಥವಾ ಪ್ರತ್ಯೇಕ ಫ್ರೈ ಮಾಡಿ,ಎಲ್ಲಾ ಒಟ್ಟಿಗೆ ಎಣ್ಣೆಗೆ ಹಾಕಿದರೆ ಚಿಕ್ಕ ರಿಂಗ್ಗೆ ಕಡಿಮೆ ಸಮಯ ಸಾಕಾಗುವುದರಿಂದ ದೊಡ್ಡ ರಿಂಗ್ ಕ್ರಿಸ್ಪಿ ಆಗುವಾಗ ಚಿಕ್ಕ ರಿಂಗ್ಗಳು ಕರಕಲಾಗಿರುತ್ತದೆ, ಆದ್ದರಿಂದ ಈ ಬಗ್ಗೆ ಜಾಗ್ರತೆವಹಿಸಿ.
ಬೀರ್ ಸೇರಿಸಿದರೆ ಬಣ್ಣ, ರುಚಿ ಚೆನ್ನಾಗಿರುತ್ತದೆ
ಹೌದು ಆನಿಯನ್ ರಿಂಗ್ಗೆ ಮಜ್ಜಿಗೆ ಬದಲಿಗೆ ಬೀರ್ ಬಳಸಬಹುದು, ಬೀರ್ನಲ್ಲಿ
ನೆನೆಹಾಕ ನಂತರ ಮೈದಾ, ಇತರ ಸಾಮಗ್ರಿ ಮಿಕ್ಸ್ ಮಾಡಿರುವ ಹಿಟ್ಟಿನಲ್ಲಿ ಹಾಕಿ ಫ್ರೈ
ಮಾಡಬಹುದು, ಹೀಗೆ ಫ್ರೈ ಮಾಡಿದರೆ ಆನಿಯನ್ ರಿಂಗ್ ನೋಡಲು ಆಕರ್ಷಕವಾಗಿರುತ್ತದೆ,
ರುಚಿಯೂ ಚೆನ್ನಾಗಿರುತ್ತದೆ. ಇನ್ನು ಕಿಕ್ ಆಗುತ್ತದೆ ಎಂದು ಭಯಪಡಬೇಡಿ, ಕಿಕ್
ಏನೂ ಆಗಲ್ಲ. ವ್ಹೀಟ್ ಬೀರ್ ಒಳ್ಳೆಯದು.
ಮೊಸರು ಇಲ್ಲದಿದ್ದರೆ ಹಾಲಿಗೆ ಸ್ವಲ್ಪ ನಿಂಬೆರಸ ಹಿಂಡಿ ಅದರಲ್ಲಿ ಆನಿಯನ್ ರಿಂಗ್ ಹಾಕಿಡಬಹುದು.
ಆನಿಯನ್ ರಿಂಗ್ ಸ್ಟೋರ್ ಮಾಡುವುದು ಹೇಗೆ?
ಆನಿಯನ್ ರಿಂಗ್ ಅನ್ನು ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟರೆ ನೀವು ವಾರದವರೆಗೆ
ಬಳಸಬಹುದು.
ಇನ್ನು ನೀವು ಇದನ್ನು ಬಿಸಿ ಮಾಡಲು ಬಯಸುವುದಾದರೆ ಮೈಕ್ರೋವೇವ್ ಬಳಸಬೇಡಿ, ಓವನ್
ಅಥವಾ ಏರ್ಫ್ರೈಯರ್ ಬಳಸಿ.
ಇನ್ನು ಒಂದುಕ್ಕಿಂತ ಹೆಚ್ಚು ದಿನ ಇಡಲು ಬಯಸದಿದ್ದರೆ ಈ ರೀತಿ
ಮಾಡಿ
ಒಂದು ಮೊಟ್ಟೆ
ಬ್ರೆಡ್ ಪುಡಿ
ನೀವು ಹಿಟ್ಟಿನಿಂದ ತೆಗೆದು ಮೊಟ್ಟೆಯಲ್ಲಿ ಅದ್ದಿ ಬ್ರೆಡ್ ಚೂರ್ನಲ್ಲಿ
ಹೊರಳಾಡಿಸಿ ಎಣ್ಣೆಯಲ್ಲಿ ಹಾಕಿದರೆ ಆನಿಯನ್ ರಿಂಗ್ ಇನ್ನೂ
ಗರಿಗರಿಯಾಗಿರುತ್ತದೆ.
ಆನಿಯನ್ ರಿಂಗ್ ಅನ್ನು ಬಿಸಿ ಬಿಸಿ ಇರುವಾಗ ನೀವು ಟೊಮೆಟೊ ಕೆಚಪ್ ಜೊತೆ ಟೇಸ್ಟ್ ಮಾಡಿ.
ಈ ಆನಿಯನ್ ರಿಂಗ್ನ ಇತಿಹಾಸವೇನು?
ಆನಿಯನ್ ರಿಂಗ್ ಬಗ್ಗೆ 1933ರಲ್ಲಿ ಕ್ರಿಸ್ಕೋ ಜಾಹೀರಾತಿನಲ್ಲಿ ಬಂದಿತ್ತು, ಆವಾಗ
ಅದನ್ನು ಫ್ರೆಂಚ್ ಫ್ರೈಡ್ ಆನಿಯನ್ ಎಂದು ಕರೆಯಲಾಗಿತ್ತು, ಆದರೆ ಅದನ್ನು ಈಗ
ಆನಿಯನ್ ರಿಂಗ್ ಎಂದು ಕರೆಯಲಾಗುವುದು. ಇದು ಮೊದಲಿಗೆ ಸಾಂಪ್ರದಾಯಕ ಸ್ನ್ಯಾಕ್ಸ್
ಆಗಿರಬಹುದು, ಆದರೆ ಅದು ರಿಂಗ್ ರೀತಿ ಇರುವುದರಿಂದ ಆನಿಯನ್ ರಿಂಗ್ ಅಂತ
ಆಗಿರಬಹುದು.



Click it and Unblock the Notifications
